ಮೀನುಗಾರಿಕಾ ಆಸಕ್ತರಿಗೆ “ಟ್ರೈನಿಂಗ್ ಸೆಂಟರ್’
ಸ್ಮಾರ್ಟ್ ಸಿಟಿ ಯೋಜನೆಯಡಿ ಹೊಗೆ ಬಜಾರ್‌ನಲ್ಲಿ ತರಬೇತಿ
Team Udayavani, May 30, 2020, 6:08 AM IST
ವಿಶೇಷ ವರದಿ-ಮಂಗಳೂರು: ಕರಾವಳಿಯಲ್ಲಿ ಲಕ್ಷಾಂತರ ಕುಟುಂಬಗಳಿಗೆ ಜೀವನಾಧಾರವಾಗಿರುವ ಮೀನುಗಾರಿಕೆಯಲ್ಲಿ ಹೊಸ ಉದ್ಯೋಗಾವಕಾಶ ಸೃಷ್ಟಿಸುವ ಉದ್ದೇಶದಿಂದ ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿ ಪ್ರತ್ಯೇಕ ಮೀನುಗಾರಿಕಾ ತರಬೇತಿ ಕೇಂದ್ರವೊಂದು ಸ್ಥಾಪನೆಯಾಗಲಿದೆ.
ಕರಾವಳಿಯ ಮೀನುಗಾರಿಕೆ ಇಲ್ಲಿನ ಆರ್ಥ ವ್ಯವಸ್ಥೆಯ ಆಧಾರಸ್ತಂಭ. ಪ್ರತೀ ವರ್ಷ ಸಾವಿರಾರು ಕೋಟಿ ರೂ.ಗಳ ಮೀನುಗಾರಿಕೆ ಉದ್ಯಮವು ಲಕ್ಷಾಂತರ ಜನರಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಉದ್ಯೋಗ ನೀಡಿದೆ. ಇಂತಹ ಕ್ಷೇತ್ರದಲ್ಲಿ ಮತ್ತಷ್ಟು ಉದ್ಯೋಗ ಸೃಷ್ಟಿಲು ನಿರ್ಧರಿಸಲಾಗಿದೆ.
2 ವರ್ಷ ಉಚಿತ ತರಬೇತಿ
ನಗರದ ಹೊಗೆಬಜಾರ್ ಮೀನು ಗಾರಿಕಾ ಕಾಲೇಜಿಗೆ ಸೇರಿದ ಭೂಮಿ ಯಲ್ಲಿ ನೂತನ ಸೆಂಟರ್ ನಿರ್ಮಾಣ ಗೊಳ್ಳಲಿದೆ. ಕಟ್ಟಡವನ್ನು ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ನಿರ್ಮಿಸಿ, 2 ವರ್ಷ ಮೀನುಗಾರಿಕೆ ಸಂಬಂಧಿತ ವಿಚಾರಗಳ ತರಬೇತಿಯನ್ನು ಮೀನುಗಾರಿಕಾ ಕಾಲೇಜಿನ ವತಿಯಿಂದ ಉಚಿತವಾಗಿ ನೀಡಲಾಗುತ್ತದೆ. ವಸತಿ ಹಾಗೂ ಊಟದ ವ್ಯವಸ್ಥೆಯೂ ದೊರೆಯಲಿದೆ. 2 ವರ್ಷ ಈ ತರಬೇತಿ ದೊರೆಯಲಿದೆ. ಒಬ್ಬ ಫಲಾನುಭವಿಗೆ 2 ವರ್ಷ ತರಬೇತಿಗೆ ಬೇಕಾಗುವ ಹಣವನ್ನು ಸ್ಮಾರ್ಟ್‌ಸಿಟಿ ಸಂಸ್ಥೆಯೇ ನೀಡಲಿದೆ. ಪ್ರತೀವರ್ಷ 180 ಸದಸ್ಯರಂತೆ ಎರಡು ವರ್ಷ 360 ಸದಸ್ಯರು ತರಬೇತಿ ಪಡೆಯಲು ಅವಕಾಶವಿರಲಿದೆ.
4.75 ಕೋಟಿ ರೂ. ವೆಚ್ಚ
ಒಟ್ಟು 4.75 ಕೋ.ರೂ. ವೆಚ್ಚದಲ್ಲಿ ಈ ಯೋಜನೆ ಜಾರಿಗೆ ಬರಲಿದ್ದು, 2.40 ಕೋ.ರೂ. ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣವಾಗಲಿದೆ. ಶುಕ್ರವಾರದಿಂದ ಕಟ್ಟಡದ ಕಾಮಗಾರಿ ಆರಂಭವಾಗಿದ್ದು, ವರ್ಷ ದೊಳಗೆ ಕಾಮಗಾರಿ ಪೂರ್ಣ ಗೊಳ್ಳುವ ನಿರೀಕ್ಷೆಯಿದೆ. ಉಳಿದಂತೆ 2.35 ಕೋ. ರೂ.ಗಳನ್ನು ತರಬೇತಿಗೆ ನಿಗದಿ ಮಾಡಲಾಗಿದೆ. ಮೀನುಗಾರರು, ನಿರುದ್ಯೋಗಿಗಳು, ಶಾಲೆ ಬಿಟ್ಟ ಯುವಕರಿಗೆ ತರಬೇತಿ ಸಿಗಲಿದೆ. ಬಂದರು, ಮೀನುಗಾರಿಕೆ ಕುರಿತಾದ ಕೆಲಸದ ಬಗ್ಗೆ ತರಬೇತಿ ನೀಡಲಾಗುತ್ತದೆ.
ಏನಿದು ತರಬೇತಿ?
ಮೀನುಗಾರಿಕೆಯ ಬಗ್ಗೆ ಆಸಕ್ತಿ ಇರುವವರಿಗೆ ಈ ತರಬೇತಿ ಉಪಯೋಗವಾಗಲಿದೆ. ಮೀನುಗಾರಿಕಾ ಬಲೆಗಳಲ್ಲಿ ಬಳಕೆಯಾಗುವ ನೆಟ್ಟಿಂಗ್, ಫಿಶ್ ಕಟ್ಟಿಂಗ್, ಬೋಟ್ ರಿಪೇರಿ, ಆಲಂಕಾರಿಕ ಮೀನು ಸೇರಿದಂತೆ ಸುಮಾರು 12 ವಿವಿಧ ತರಬೇತಿ ಇಲ್ಲಿ ದೊರೆಯಲಿದೆ. ಎಲ್ಲ ಫಲಾನುಭವಿಗಳಿಗೆ ಸ್ಮಾರ್ಟ್‌ಸಿಟಿ ವತಿಯಿಂದ ಉಚಿತ ತರಬೇತಿ ನೀಡಲಾಗುತ್ತದೆ. ಮೀನುಗಾರಿಕಾ ಕಾಲೇಜಿನ ತಜ್ಞರು ತರಬೇತಿ ನೀಡಲಿದ್ದಾರೆ.
ಕೇಂದ್ರ ನಿರ್ಮಾಣ ಆರಂಭ
ಕರಾವಳಿಯ ಮೀನುಗಾರಿಕಾ ಕ್ಷೇತ್ರದಲ್ಲಿ ಹೊಸಬರಿಗೂ ಅವಕಾಶ ದೊರೆಯಬೇಕು ಎಂಬ ನೆಲೆಯಲ್ಲಿ ಮೀನುಗಾರಿಕೆ ಸಂಬಂಧಿತ ವಿಚಾರಗಳಲ್ಲಿ ಯುವಕರಿಗೆ ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಉಚಿತ ತರಬೇತಿ ನೀಡುವ ಯೋಜನೆ ಜಾರಿಗೆ ತರಲಾಗುತ್ತಿದೆ. ಇದಕ್ಕಾಗಿ ನಗರದ ಹೊಗೆಬಜಾರ್‌ನಲ್ಲಿ “ಸ್ಕಿಲ್ ಡೆವೆಲಪ್‌ಮೆಂಟ್ ಆ್ಯಂಡ್ ಸೇಫ್ಟಿ ಟ್ರೈನಿಂಗ್ ಸೆಂಟರ್’ನ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭವಾಗಿದೆ.
– ಮೊಹಮ್ಮದ್ ನಝೀರ್
ವ್ಯವಸ್ಥಾಪಕ ನಿರ್ದೇಶಕ,
ಸ್ಮಾರ್ಟ್‌ಸಿಟಿ ಕಂಪೆನಿ, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ
Commonwealth ಸಂಸದೀಯ ಸಭೆ; ಸ್ಪೀಕರ್ ಯು.ಟಿ. ಖಾದರ್ ಭಾಗಿ
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ
Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ
MUST WATCH
ಹೊಸ ಸೇರ್ಪಡೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.