ಕ್ರಿಯಾ ಯೋಜನೆಗೆ ಅನುಮೋದನೆ
Team Udayavani, May 30, 2020, 5:30 AM IST
ಹುಣಸೂರು: ತಾಪಂ ವಿಶೇಷ ಸಾಮಾನ್ಯ ಸಭೆಯಲ್ಲಿ 15ನೇ ಹಣಕಾಸು ಯೋಜನೆಯ 1.93 ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳ ಕ್ರಿಯಾ ಯೋಜನೆಗೆ ಅನುಮೋದನೆ ಸಿಕ್ಕಿತು. ತಾಪಂ ಅಧ್ಯಕ್ಷೆ ಪದ್ಮಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸದಸ್ಯರು ಸರ್ವಾನು ಮತದಿಂದ ಕ್ರಿಯಾ ಯೋಜನೆಗೆ ಬೆಂಬಲ ವ್ಯಕ್ತಪಡಿಸಿದರು.
ತಾಪಂ ಇಒ ಗಿರೀಶ್ ಮಾತನಾಡಿ, ಹುಣಸೂರು ತಾಪಂಗೆ 1.93,60,337 ರೂ. ಅನುದಾನ ದೊರಕಿದೆ. ಒಟ್ಟು ಅನು ದಾನದ ಶೇ.25ರ ಪ್ರಮಾಣ ಎಸ್‌ಸಿ, ಎಸ್ ಟಿಗೆ, ಶೇ.5ರಷ್ಟನ್ನು ಅಂಗವಿಕಲರಿಗೆ ಮೀಸಲಿಡಬೇಕು. ಪ್ಲಾಸ್ಟಿಕ್ ತ್ಯಾಜ್ಯ ನಿರ್ವ ಹಣೆ, ಶೌಚಾಲಯಗಳ ದುರಸ್ತಿ, ಶಾಲೆ ಗಳು, ಅಂಗನವಾಡಿ ಕೇಂದ್ರಗಳಿಗೆ ನೀರು ಪೂರೈಕೆ ಯೋಜನೆ ಕೈಕೈಗೊಳ್ಳಬಹು ದಾಗಿದೆ ಎಂದರು.
ಜನತಂತ್ರ ವಿರೋಧ ನೇಮಕ: ಸರ್ಕಾರ ಗ್ರಾಪಂಗಳಿಗೆ ಚುನಾವಣೆ ನಡೆಸುವ ಬದಲು ನಾಮನಿರ್ದೇಶನ ಸದಸ್ಯರನ್ನು ನೇಮಿಸಲು ಹೊರಟಿರುವುದು ಜನತಂತ್ರ ವಿರೋಧಿ ಎಂದು ಸದಸ್ಯ ಪ್ರೇಮ್‌ಕುಮಾರ್, ಸರ್ಕಾರ ಈ ನಿರ್ಣಯವನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ದಾಗ ಎಲ್ಲ ಸದಸ್ಯರು ಬೆಂಬಲ ಸೂಚಿಸಿದರು. ಸಭೆಯಲ್ಲಿ ಉಪಾಧ್ಯಕ್ಷ ಪ್ರೇಮೇಗೌಡ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಪ್ರಭಾಕರ್, ಸದಸ್ಯರಾದ ಗಣಪತಿರಾವ್ ಇಂಡೋಲ್ಕರ್, ಪುಟ್ಟಮ್ಮ, ಕೆಂಗಯ್ಯ, ರವಿಪ್ರಸನ್ನ ಹಾಜರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.