ಫೈನಾನ್ಸ್ ವಿರುದ್ಧ ಕ್ರಮಕ್ಕೆ ಒತ್ತಾಯ
Team Udayavani, May 30, 2020, 12:12 PM IST
ಲಿಂಗಸುಗೂರು: ಶಾಸಕರ ಕಚೇರಿಗೆ ಆಗಮಿಸಿದ್ದ ಕಾಚಾಪುರ ಮಹಿಳೆಯರು.
ಲಿಂಗಸುಗೂರು: ಗುಂಪುಗಳಿಗೆ ನೀಡಿದ ಸಾಲದ ಕಂತು ಪಾವತಿಸುವಂತೆ ಮೈಕ್ರೋ ಫೈನಾನ್ಸ್ ಕಂಪನಿಗಳು ತೊಂದರೆ ನೀಡುತ್ತಿದೆ. ಫೈನಾನ್ಸ್ ಕಂಪನಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ತಾಲೂಕಿನ ಕಾಚಾಪುರ ಗ್ರಾಮದ ಮಹಿಳೆಯರು ಶಾಸಕರಲ್ಲಿ ಮನವಿ ಮಾಡಿದ್ದಾರೆ.
ಸರ್ವೋದಯ, ಗ್ರಾಮೀಣ ಕೂಟ, ಪಿನ್‌ಕೇರ್, ಸಮಸ್ತ, ಸ್ವಾತಂತ್ರ್ಯ ಸೇರಿ ಖಾಸಗಿ ಫೈನಾನ್ಸ್ ಕಂಪನಿಗಳು ಪಟ್ಟಣದ ಮಹಿಳೆಯರಿಗೆ ಗುಂಪು ಸಾಲ ನೀಡಿವೆ. ಲಾಕ್‌ಡೌನ್ ಮುಂಚೆ ಕಟ್ಟುನಿಟ್ಟಿನಿಂದ ಸಾಲದ ಕಂತನ್ನು ಪಾವತಿಸಲಾಗಿದೆ. ಆದರೆ ಲಾಕ್‌ಡೌನ್ ಜಾರಿಯಾಗಿದ್ದರಿಂದ ಕೆಲಸವಿಲ್ಲದೆ ಕೈಯಲ್ಲಿ ಹಣವಿಲ್ಲದೆ ಪರದಾಡುವಂತಾಗಿದೆ. ಇಂತಹ ಸಂಕಷ್ಟದಲ್ಲೂ ಸಾಲದ ಕಂತು ಪಾವತಿಸಲು ಮೂರು ತಿಂಗಳು ಕಾಲವಾಕಾಶ ನೀಡುವಂತೆ ಮನವಿ ಮಾಡಿದರೂ ಫೈನಾನ್ಸ್ ಸಿಬ್ಬಂದಿ ಸಾಲ ಮರುಪಾವತಿಸುವಂತೆ ಪ್ರತಿ ದಿನ ಮನೆಗೆ ಬಂದು ತೊಂದರೆ ನೀಡುತ್ತಿದ್ದಾರೆ. ಇದುಲ್ಲದೆ ಸಾಲದ ಕಂತು ಪಾವತಿಸಲು ಸರ್ಕಾರವೇ ವಿನಾಯಿತಿ ನೀಡಿದೆ. ಆದರೆ ಖಾಸಗಿ ಕಂಪನಿಗಳು ವಿನಾಕಾರಣ ತೊಂದರೆ ನೀಡುತ್ತಿರುವುದರಿಂದ ಕಂಪನಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಕಾಚಾಪುರ ಗ್ರಾಮದ ಲಕ್ಷ್ಮೀ ಮಳೆಯಪ್ಪ, ಬಸಮ್ಮ, ಗಂಗಮ್ಮ, ಲಕ್ಷ್ಮೀ ಅಮರೇಶ, ಶಂಕ್ರಮ್ಮ, ಮಂಜಮ್ಮ, ಅಕ್ಕಮ್ಮ ಒತ್ತಾಯಿಸಿದ್ದಾರೆ.
ತಮಗೆ ಆಗುತ್ತಿರುವ ತೊಂದರೆ ಸರಿಪಡಿಸುವಂತೆ ಕಾಚಾಪುರ ಗ್ರಾಮದ ಮಹಿಳೆಯರು ಶಾಸಕರ ಕಚೇರಿ ಆಗಮಿಸಿದ ವೇಳೆ ಶಾಸಕರು ಬೆಂಗಳೂರಿಗೆ ತೆರಳಿದ್ದರಿಂದ ಕಾಂಗ್ರೆಸ್ ಮುಖಂಡರಾದ ಶಿವಣ್ಣ ಕೋಠಾ, ದೇವರಾಜ ನಿಮ್ಮ ಸಮಸ್ಯೆಗಳನ್ನು ಶಾಸಕರು ಬಂದ್ ನಂತರ ಅವರ ಗಮನಕ್ಕೆ ತರಲಾಗುವುದು ಎಂದು ಮಹಿಳೆಯರಿಗೆ ಭರವಸೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Farmers: ವಂಚನೆ ದೂರು ನೀಡುವ ರೈತರಿಗೆ 1 ಲಕ್ಷ ರೂ.ನಗದು ಬಹುಮಾನ – ಸಚಿವ ಶಿವಾನಂದ ಪಾಟೀಲ
Hanuru: ಮಾದಪ್ಪನ ಬೆಟ್ಟದ ನಿಲ್ದಾಣಕ್ಕೆ ಬೇಕು ಮೂಲಸೌಕರ್ಯ
Karnataka; ಸಿಸೇರಿಯನ್ ಹೆರಿಗೆ ತಡೆಯಲು ಹೊಸ ಕಾರ್ಯಕ್ರಮ ಘೋಷಿಸುತ್ತೇವೆ
Amazon,Flipkart ವಿರುದ್ಧ ತನಿಖೆ: ಸುಪ್ರೀಂನಿಂದ ಎಲ್ಲಾ ಪ್ರಕರಣಗಳು ಕರ್ನಾಟಕ ಹೈಕೋರ್ಟ್‌ಗೆ
Waqf; ವಿಜಯೇಂದ್ರ ವಿರುದ್ಧ ಲಂಚ ಆರೋಪ: ಸಿಬಿಐ ತನಿಖೆಗೆ ಬಿಜೆಪಿ ಒತ್ತಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.