ಕಾಲ್ನಡಿಗೆಯಿಂದ ರಾಯಘಡಕ್ಕೆ ಸೇರುವ ಸಾಹಸ
Team Udayavani, May 30, 2020, 6:05 PM IST
ಸಾಂದರ್ಭಿಕ ಚಿತ್ರ
ಅಫಜಲಪುರ: ಮಹಾರಾಷ್ಟ್ರ ರಾಜ್ಯದ ರಾಯಘಡ ಜಿಲ್ಲೆಯ ಕಾರ್ಮಿಕರು ಕರ್ನಾಟಕದ ರಾಯಚೂರಿನ ಮಾನ್ವಿ ಪಟ್ಟಣದಲ್ಲಿ ಕೂಲಿ ಕೆಲಸಕ್ಕೆಂದು ಬಂದಿದ್ದ 57 ಜನ ಮರಳಿ ತಮ್ಮ ಊರುಗಳಿಗೆ ತೆರಳಲು ವಾಹನ ಸೌಕರ್ಯವಿಲ್ಲದೆ ಕಳೆದ ಒಂಭತ್ತು ದಿನಗಳಿಂದ ಕಾಲ್ನಡಿಗೆಯಲ್ಲಿಯೇ ಹೋಗುತ್ತಿದ್ದಾರೆ.
ಸಣ್ಣ ಮಕ್ಕಳನ್ನು ಹೊತ್ತುಕೊಂಡು ನಿತ್ಯ ಮೈಲಿಗಟ್ಟಲೇ ನಡೆಯುವ ಇವರ ಕಷ್ಟ ದೇವರಿಗೆ ಪ್ರೀತಿ ಎನ್ನುವಂತಾಗಿದೆ. ದಾರಿಯುದ್ದಕ್ಕೂ ಸುಡು ಬಿಸಿಲನ್ನು ಲೆಕ್ಕಿಸದೇ ನಡೆದು ಸುಸ್ತಾಗಿ ನೆರಳು ಕಂಡಲ್ಲಿ ಕುಳಿತುಕೊಳ್ಳುತ್ತಿದ್ದಾರೆ. ಇವರಿಗೆ ಅನ್ನ-ನೀರಿಗೂ ಗತಿ ಇಲ್ಲದಂತಾಗಿದೆ. ಆದರೂ ಇನ್ನೂ ನೂರಾರು ಕಿಲೋ ಮೀಟರ್ ನಡೆದು ತಮ್ಮೂರಿಗೆ ಸೇರಲು ತವಕಿಸುತ್ತಿದ್ದಾರೆ. ಸದ್ಯ ಇವರೆಲ್ಲ ಬಳೂರ್ಗಿ ಗ್ರಾಮದ ಗಡಿ ಚೆಕ್‌ಪೋಸ್ಟ್ ಬಳಿ ಇದ್ದಾರೆ.
ಸಮಾಜ ಸೇವಕರು, ದಾನಿಗಳು, ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಇವರಿಗೆ ಅನ್ನ, ನೀರಿನ ವ್ಯವಸ್ಥೆ ಮಾಡಿ, ವಾಹನ ಸೌಕರ್ಯ ಕಲ್ಪಿಸಿಕೊಟ್ಟರೆ ನಿರಾತಂಕವಾಗಿ ಇವರೆಲ್ಲ ತಮ್ಮೂರಿಗೆ ತಲುಪಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
ಐತಿಹಾಸಿಕ ಮುಡಗೇರಿ ಗ್ರಾಮ ನಿರ್ಲಕ್ಷ್ಯ; ಸೋದೆ ಅರಸರ ಕೋಟೆ ಪಳೆಯುಳಿಕೆ
BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.