ಕುಂದಾಪುರ ತಾಲೂಕು: ವಾರ್ಷಿಕ 18,675 ಮೆ. ಟನ್ ಮೀನು ಸಂಗ್ರಹ
Team Udayavani, May 31, 2020, 6:20 AM IST
ಕುಂದಾಪುರ: ಈ ವರ್ಷದ ಮೀನುಗಾರಿಕಾ ಋತು ಕೆಲವೇ ದಿನಗಳಲ್ಲಿ ಮುಕ್ತಾಯಗೊಳ್ಳಲಿದ್ದು, ಆಳ ಸಮುದ್ರ ಮೀನುಗಾರಿಕೆಯನ್ನು ವಿಸ್ತರಿಸಿದರೂ ಕೆಲವರು ಈಗಾಗಲೇ ತಮ್ಮ ಈ ವರ್ಷದ ಮೀನುಗಾರಿಕೆಯನ್ನು ಮುಗಿಸಿದ್ದಾರೆ. ಕುಂದಾಪುರ ತಾಲೂಕಿನಲ್ಲಿ ಈ ವರ್ಷದಲ್ಲಿ ಒಟ್ಟು 18,675 ಮೆಟ್ರಿಕ್ ಟನ್ ಮೀನು ಸಂಗ್ರಹವಾಗಿದ್ದು, 29,855.18 ಲಕ್ಷ ರೂ. ಮೀನಿನ ವಹಿವಾಟು ನಡೆದಿದೆ.
ಕುಂದಾಪುರ ತಾಲೂಕು ಹಾಗೂ ಬೈಂದೂರು ತಾಲೂಕಿನ ಕೋಡಿ, ಗಂಗೊಳ್ಳಿ, ಕಂಚುಗೋಡು, ಮರವಂತೆ, ಕೊಡೇರಿ, ಮಡಿಕಲ್, ಶಿರೂರು, ಅಳ್ವೆಗದ್ದೆ ಸೇರಿದಂತೆ ಒಟ್ಟು 58 ಸಾವಿರಕ್ಕೂ ಅಧಿಕ ಮಂದಿ ಮೀನುಗಾರರಿದ್ದಾರೆ. 2,100 ನಾಡದೋಣಿಗಳು, 1,140 ಪಾತಿ ದೋಣಿ ಗಳು, 335 ಪರ್ಸಿನ್, ಟ್ರಾಲ್, ಗಿಲ್‌ನೆಟ್ ಬೋಟ್‌ಗಳು ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿವೆ.
ರಜಾ ಅವಧಿ
ಮೀನುಗಾರಿಕಾ ರಜಾ ಅವಧಿಯನ್ನು ಜೂ. 15ರ ವರೆಗೆ ವಿಸ್ತರಿಸಿದರೂ, ಗಂಗೊಳ್ಳಿ, ಮರವಂತೆ ಬಂದರು ಸೇರಿದಂತೆ ಬಹುತೇಕ ಹೆಚ್ಚಿನ ಕಡೆಗಳಲ್ಲಿ ಕಾರ್ಮಿಕರು ಊರಿಗೆ ತೆರಳಿದ್ದರಿಂದ, ಮೀನಿನ ಬರದಿಂದಾಗಿ ಈಗಾಗಲೇ ಮೀನುಗಾರಿಕೆಯನ್ನು ಮುಗಿಸಿದ್ದಾರೆ.
ಲಾಕ್‌ಡೌನ್ ಬಳಿಕ
ಕೋವಿಡ್-19 ದಿಂದಾಗಿ ಎಲ್ಲೆಡೆ ಲಾಕ್‌ಡೌನ್ ವಿಧಿಸಲಾಗಿದ್ದು, ಈ ವೇಳೆ ಮೀನುಗಾರಿಕೆಗೆ ಕೆಲ ದಿನಗಳ ಕಾಲ ನಿರ್ಬಂಧ ವಿಧಿಸಲಾಗಿತ್ತು. ಆ ಬಳಿಕ ಅಂದರೆ ಎಪ್ರಿಲ್‌ನಲ್ಲಿ 1,649 ಮೆಟ್ರಿಕ್ ಟನ್ ಮೀನು ಸಂಗ್ರಹವಾಗಿದ್ದು, 2,138 ಲಕ್ಷ ರೂ. ವಹಿವಾಟು ಆಗಿದ್ದರೆ, ಮೇ ತಿಂಗಳಿನಲ್ಲಿ 3,240 ಮೆಟ್ರಿಕ್ ಟನ್‌ನಷ್ಟು ಮೀನು ಸಂಗ್ರಹವಾಗಿದ್ದು, 3853 ಲಕ್ಷ ರೂ. ಮೀನಿನ ವ್ಯಾಪಾರ ವಹಿವಾಟು ನಡೆಸಲಾಗಿದೆ ಎಂದು ಅಂಕಿ-ಅಂಶಗಳು ಹೇಳುತ್ತವೆ.
ಯಾವ ತಿಂಗಳಲ್ಲಿ ಎಷ್ಟು?
ನಾಡದೋಣಿ, ಯಾಂತ್ರೀಕೃತ ಮೀನುಗಾರಿಕೆಯೆಲ್ಲ ಒಟ್ಟು ಸೇರಿ ಕಳೆದ ವರ್ಷದ ಜೂನ್‌ನಿಂದ ಆರಂಭಗೊಂಡು ಈ ವರ್ಷದ ಮೇವರೆಗೆ 1 ವರ್ಷದ ಅವಧಿಯಲ್ಲಿ ಮೀನುಗಾರಿಕೆ ಇಲಾಖೆ ನೀಡಿರುವ ಒಟ್ಟು ಲೆಕ್ಕಾRಚಾರದ ವಿವರ ಹೀಗಿದೆ. ಜೂನ್‌ನಲ್ಲಿ 63 ಮೆ. ಟನ್ ಮೀನು, 43.50 ಲಕ್ಷ ರೂ. ವಹಿವಾಟು, ಜುಲೈನಲ್ಲಿ 1,898 ಮೆ. ಟನ್ ಮೀನು, 4,685 ಲ.ರೂ., ಆಗಸ್ಟ್‌ನಲ್ಲಿ 2,080 ಮೆ. ಟನ್ ಮೀನು, 3,038 ಲಕ್ಷ ರೂ., ಸೆಪ್ಟrಂಬರ್‌ನಲ್ಲಿ 3,985 ಮೆ. ಟನ್ ಮೀನು, 6,956 ಲ. ರೂ., ಅಕ್ಟೋಬರ್‌ನಲ್ಲಿ 3,548 ಮೆ. ಟನ್ ಮೀನು, 2847 ಲ.ರೂ., ನವೆಂಬರ್‌ನಲ್ಲಿ 2,536 ಮೆ.ಟನ್ ಮೀನು, 2,042 ಲ.ರೂ., ಡಿಸೆಂಬರ್‌ನಲ್ಲಿ 2,055 ಮೆ. ಟನ್ ಮೀನು, 2,737 ಲ.ರೂ., ಜನವರಿಯಲ್ಲಿ 728 ಮೆ. ಟನ್ ಮೀನು, 305 ಲ.ರೂ., ಫೆಬ್ರವರಿಯಲ್ಲಿ 1,072 ಮೆ. ಟನ್ ಮೀನು, 795 ಲ.ರೂ. ಹಾಗೂ ಮಾರ್ಚ್‌ನಲ್ಲಿ 670 ಮೆ. ಟನ್ ಮೀನು, 421 ಲ.ರೂ. ವಹಿವಾಟು ಆಗಿದೆ.
ಲಾಕ್‌ಡೌನ್‌ನಿಂದ ಕಡಿಮೆ
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಒಟ್ಟು ಮೀನುಗಾರಿಕಾ ವಹಿವಾಟಿನಲ್ಲಿ ಹೆಚ್ಚಳವಾಗಿದ್ದರೂ, ಮೀನಿನ ಇಳುವರಿ ಕಡಿಮೆ ಇದ್ದುದರಿಂದ ದರ ಏರಿಕೆಯಾಗಿದೆ. ಲಾಕ್‌ಡೌನ್‌ನಿಂದಾಗಿ ಕೆಲ ಕಾಲ ಮೀನುಗಾರಿಕೆ ಸ್ಥಗಿತಗೊಂಡಿದ್ದರಿಂದ ಅದು ಸೀಸನ್‌ನಲ್ಲೇ ಅಡ್ಡಿಯಾಗಿದ್ದರಿಂದ ಮೀನುಗಾರರಿಗೆ ಸಮಸ್ಯೆಯಾಗಿದೆ.
– ಚಂದ್ರಶೇಖರ್, ಸಹಾಯಕ ನಿರ್ದೇಶಕರು, ಮೀನುಗಾರಿಕಾ ಇಲಾಖೆ ಉಡುಪಿ
ಮೀನಿನ ಲೆಕ್ಕಾಚಾರ ಹೀಗಿದೆ
2017- 2018:- 37,458 ಲಕ್ಷ ರೂ.
2018-19:- 16,307 ಲಕ್ಷ ರೂ.
2019-20:- 29,855 ಲಕ್ಷ ರೂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.