ನ್ಯಾಸ್ಕಾಮ್ ಸಹಯೋಗದಲ್ಲಿ ದತ್ತಾಂಶ ವಿಶ್ಲೇ಼ಷಣೆ ಸಾಧನ
Team Udayavani, May 31, 2020, 5:17 AM IST
ಬೆಂಗಳೂರು: ಬೆಂಗಳೂರು: ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಕೊರೊನಾ ಪರಿಸ್ಥಿತಿ ನಿರ್ವಹಿಸಲು ನ್ಯಾಸ್ಕಾಮ್ ಸಹಯೋಗದಲ್ಲಿ ದತ್ತಾಂಶ ವಿಶ್ಲೇಷಣೆ ಸಾಧನವನ್ನು ಅಭಿವೃದ್ಧಿಪಡಿಸಲಾಗಿ ದೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.
ಐಟಿ-ಬಿಟಿ ವಲಯದ ಪ್ರಮುಖರ ಜತೆ ನಡೆಸಿದ ವಿಡಿಯೋ ಕಾನ್ಫರೆನ್ಸ್‌ನಲ್ಲಿ ನ್ಯಾಷನಲ್ ಅಸೋಸಿಯೇಷ ನ್ ಆಫ್ ಸಾಫ್ಟ್ವೇರ್ ಆ್ಯಂಡ್ ಸರ್ವೀಸಸ್ ಕಂಪನೀಸ್ (ನ್ಯಾಸ್ಕಾಮ್ ) ಅಭಿವೃದ್ಧಿ ಪಡಿಸಿದ ದತ್ತಾಂಶ ವಿಶ್ಲೇಷಣೆ ಸಾಧನವನ್ನು ಬಿಡುಗಡೆ ಮಾಡಿದ ಅವರು, ಕೊರೊನಾ ಸೋಂಕು ಹರಡುವ ಸಾಧ್ಯತೆ ವಿವರ, ಸೋಂಕಿನ ಮೂಲ, ಅದರ ವರ್ಗೀಕರಣ, ಸೋಂಕಿನ ಪ್ರಮಾಣ ಸೇರಿದಂತೆ ಮಾನವ ಸಂಪನ್ಮೂಲದ ರಿಯಲ್ ಟೈಮ್ ಮಾಹಿತಿ ಒದಗಿಸುವ ಕಾರ್ಯ ಈ ಸಾಧನ ಮಾಡಲಿದೆ ಎಂದು ಹೇಳಿದರು.
ಆರೋಗ್ಯ ಸೇವೆಯನ್ನು ಡಿಜಿಟಲೈಸ್ ಮಾಡು ವುದು ಬಹಳ ಮುಖ್ಯವಾಗಿದೆ. ಇದಕ್ಕೆ ಐಟಿ-ಬಿಟಿ ವಲ ಯದವರ ನೆರವು ಅಗತ್ಯವಿದೆ. ಲಭ್ಯ ಇರುವ ಎಲ್ಲ ಸಂಪನ್ಮೂಲ ಬಳಸಿ ನಗರದಲ್ಲಿ ದಿನದ 24 ಗಂಟೆಯೂಆರೋಗ್ಯ ಸೇವೆ ಒದಗಿಸಬೇಕು ಎಂದರು. ಜೈವಿಕ ತಂತ್ರಜ್ಞಾನ ವಿಷನ್ ಗ್ರೂಪ್ ಅಧ್ಯಕ್ಷೆ ಕಿರಣ್ ಮಜೂಂ ದಾರ್ ಷಾ, ಮಾಹಿತಿ ತಂತ್ರಜ್ಞಾನದ ವಿಷನ್ ಗ್ರೂಪ್ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣ, ನ್ಯಾಸ್ಕಾಮ್ ಅಧ್ಯಕ್ಷೆ ದೇಬಾjನಿ ಘೋಷ್, ನ್ಯಾಸ್ಕಾಮ್ ಉಪಾಧ್ಯಕ್ಷ ವಿಶ್ವ ನಾಥನ್, ಇಂಟೆಲ್ ಮುಖ್ಯಸ್ಥೆ ನಿವೃತ್ತಿ ರಾಯ, ಇನ್ಫೋಸಿಸ್ ಸಿಇಓ ಪ್ರವೀಣ್ ರಾವ್, ಫ್ರಾಕ್ಟಲ್ ಸಿಇಒ ಶ್ರೀಕಾಂತ್, ಮೈಕ್ರೊಸಾಫ್ಟ್ ರೋಹೀಣಿ ಶ್ರೀವತ್ಸ ವಿಡಿಯೋ ಕಾನ್ಫರೆನ್ಸ್ ನಲ್ಲಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.