ಪಾಲಿಕೆ ಸದಸ್ಯ ಇಮ್ರಾನ್ ಪಾಷಾಗೆ Covid ಸೋಂಕು ; ಆಸ್ಪತ್ರೆಗೆ ದಾಖಲಾಗಲು ಹೈಡ್ರಾಮಾ
ತಾಯಿ ಕುರಾನ್ ಪಠಿಸಿದರೆ ಚಿಕಿತ್ಸೆಗೆ ಬರುವೆನೆಂದು ಸನ್ನಿವೇಶ ಸೃಷ್ಟಿ
Team Udayavani, May 31, 2020, 5:36 AM IST
ಬೆಂಗಳೂರು: ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಾದರಾಯನಪುರ ಪಾಲಿಕೆ ಸದಸ್ಯ ಇಮ್ರಾನ್ ಪಾಷಾಗೆ ಕೋವಿಡ್ 19 ಇರುವುದು ದೃಢಪಟ್ಟಿದ್ದು, ಆಸ್ಪತ್ರೆಗೆ ದಾಖಲಾಗುವುದಕ್ಕೆ ನಡೆಸಿದ ಹೈಡ್ರಾಮಾಗೆ ಪಾಲಿಕೆ ಆರೋಗ್ಯ ಸಿಬ್ಬಂದಿ ಹಾಗೂ ಪೊಲೀಸರು ಹೈರಾಣಾದರು.
ಪಾಲಿಕೆ ಸದಸ್ಯ ಇಮ್ರಾನ್‌ಪಾಷಾ ಅವರಿಗೆ ಶುಕ್ರವಾರ ಸಂಜೆ ವೇಳೆಗೆ ಸೋಂಕು ಇರುವುದು ದೃಢಪಟ್ಟಿದ್ದು, ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಜನಪ್ರತಿನಿಧಿಗೂ ಸೋಂಕು ಕಾಣಿಸಿಕೊಂಡಂತಾಗಿದೆ. ಶನಿವಾರ ಬೆಳಗ್ಗೆ ಆಸ್ಪತ್ರೆಗೆ ದಾಖಲಿಸಲು ಪಾಲಿಕೆಯ ಆರೋಗ್ಯ ಸಿಬ್ಬಂದಿ ಶನಿವಾರ ಬೆಳಗ್ಗೆ 10ಕ್ಕೆ ಅವರ ಮನೆ ಬಳಿಗೆ ಆ್ಯಂಬುಲೆನ್ಸ್ ಆಗಮಿಸಿದರೂ ಸತತ ಎರಡು ಗಂಟೆಗಳ ಕಾಲ ಮನೆಯಿಂದ ಪಾಷಾ ಅವರು ಹೊರಗೆ ಬರಲಿಲ್ಲ.
ನಮ್ಮ ತಾಯಿ ಬರುವವರೆಗೆ ನಾನು ಬರುವುದಿಲ್ಲ. ನನ್ನ ತಾಯಿ ಬಂದು ಕುರಾನ್ ಪಠಣ ಮಾಡಿದ ನಂತರ ಬರುತ್ತೇನೆ ಎಂದು ಪಟ್ಟು ಹಿಡಿದರು. ಹಾಗೆಯೇ ಆ್ಯಂಬುಲೆನ್ಸ್‌ಗೆ ಬರುವ ಮುನ್ನ ಮನೆಯಲ್ಲೇ ಪ್ರಾರ್ಥನೆ ಮಾಡಿಕೊಂಡು ಬಂದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಚಾಮರಾಜಪೇಟೆಯ ಶಾಸಕ ಜಮೀರ್ ಅಹ್ಮದ್ ಖಾನ್, ಇಮ್ರಾನ್ ಪಾಷ ತಂದೆ, ಆರೋಗ್ಯಾಧಿಕಾರಿಗಳು ಮನವೊಲಿಸಿದ ನಂತರ ಇಮ್ರಾನ್ ಆ್ಯಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಬರಲು ಒಪ್ಪಿದರು.
ಪೊಲೀಸರ ಎಚ್ಚರಿಕೆ: ಈ ಮಧ್ಯೆ ಅವರು ಆಸ್ಪತ್ರೆಗೆ ಬರಲು ನಿರಾಕರಿಸಿದ ಹಿನ್ನೆಲೆಯಲ್ಲಿ ಪೊಲೀಸರು ಕೊನೆಯ ಎಚ್ಚರಿಕೆ ನೀಡಿದರು. ಹೊರಗೆ ಬಾರದೇ ಇದ್ದಲ್ಲಿ ಬಂಧಿಸಿ ಕರೆದೊಯ್ಯ ಬೇಕಾ ಗುತ್ತದೆ. ಬಂಧನವಾದಲ್ಲಿ ನಿಮಗೆ ಜಾಮೀನು ಸಹ ಸಿಗುವುದಿಲ್ಲ ಎಂದು ಪೊಲೀಸರು ಎಚ್ಚರಿಸಿದರು. ಈ ಕರ್ತವ್ಯಕ್ಕೆ ತೊಂದರೆ ನೀಡಿದ್ದಾರೆಂದು ಬಿಬಿಎಂಪಿ ಅಧಿಕಾರಿಗಳು ಇಮ್ರಾನ್ ಪಾಶಾ ವಿರುದಟಛಿ ಜೆ.ಜೆ. ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಗ್ಯಾಧಿಕಾರಿ ಡಾ. ಮನೋರಂಜನ್ ಹೆಗ್ಡೆ ಮಾತನಾಡಿ, ಪಾಲಿಕೆ ಸದಸ್ಯರಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಇವರ ಪ್ರಾಥಮಿಕ ಸಂಪರ್ಕದಲ್ಲಿದ್ದ 18 ಜನ ಹಾಗೂ ದ್ವಿತೀಯ ಸಂಪರ್ಕ ದಲ್ಲಿದ್ದ 19ಜನರನ್ನು ಕ್ವಾರಂಟೈನ್ ಮಾಡಲಾಗಿದೆ ಎಂದರು.
ಜಮೀರ್‌ಗೆ ನೆಗೆಟಿವ್: ಇಮ್ರಾನ್ ಪಾಷ ಅವರಿಗೆ ಸೋಂಕು ತಗು ಲಿರುವ ವಿಷಯ ತಿಳಿದ ಕೂಡಲೇ ಶಾಸಕ ಜಮೀರ್ ಅಹ್ಮದ್ ಅವ ರಿಗೂ ಪರೀಕ್ಷೆ ನಡೆಸಿದ್ದು, ಪರೀಕ್ಷೆ ವರದಿ ನೆಗೆಟಿವ್ ಬಂದಿದೆ ಎಂದರು.
ಪಾದರಾಯನಪುರದಲ್ಲಿ ಆತಂಕ: ಪಾದರಾಯನಪುರದಲ್ಲಿ ಈಗಾಗಲೇ ಕೋವಿಡ್ 19 ಭೀತಿ ಹೆಚ್ಚಿದೆ. ರ್‍ಯಾಂಡಮ್ ಪರೀಕ್ಷೆ ನಂತರ ಈಗ ಸಾಮುದಾಯಿಕ ಸೋಂಕು ಪರೀಕ್ಷೆ ಯಲ್ಲೂ ಮೂವರಿಗೆ ಕೋವಿಡ್ 19 ದೃಢಪಟ್ಟಿದೆ. ಈ ಮಧ್ಯೆ ಪಾಲಿಕೆ ಸದಸ್ಯ ರಿಗೂ ಸೋಂಕು ದೃಢಪಟ್ಟಿರುವುದು ಆತಂಕ ಹೆಚ್ಚಾಗಲು ಕಾರಣವಾಗಿದೆ. ಇತ್ತೀಚೆಗೆ ರಂಜಾನ್ ವೇಳೆ ಸ್ಥಳೀಯರಿಗೆ ಸ್ವತಃ ತಾವೇ ಊಟ ಬಡಿಸಿದ್ದರು. ಅಲ್ಲದೆ, ಈ ಭಾಗದಲ್ಲಿನ ಸಾರ್ವಜನಿಕರಿಗೆ ಆಹಾರದ ಕಿಟ್ ನೀಡಿದ್ದರು ಎನ್ನಲಾಗಿದ್ದು, ಸೋಂಕು ವ್ಯಾಪಿಸಿರುವ ಅನುಮಾನ ಸೃಷ್ಟಿಯಾಗಿದೆ.
ಸಭೆ ನಡೆಸಿಲ್ಲ: ಇಮ್ರಾನ್‌ಪಾಷಾ ಮೇ 14ರಂದು ಕಂಟೈನ್ಮೆಂಟ್ ಝೊàನ್‌ನಲ್ಲಿ ಕಿಯೋಸ್ಕ್ ಉದ್ಘಾಟನೆ ವೇಳೆ ಭಾಗವಹಿಸಿದ್ದರು. ಇದಾದ ಮೇಲೆ ಸಭೆಗಳಲ್ಲಿ ಭಾಗವಹಿಸಿಲ್ಲ. ಹೀಗಾಗಿ, ಅಧಿಕಾರಿಗಳ ವಲಯದಲ್ಲಿ ಯಾರನ್ನು ಕ್ವಾರಂಟೈನ್ ಮಾಡುವ ಬಗ್ಗೆ ತೀರ್ಮಾನವಾಗಿಲ್ಲ. ಒಂದೊಮ್ಮೆ ಪಾಲಿಕೆ ಸದಸ್ಯರೊಂದಿಗೆ ಸಂಪರ್ಕವಿದ್ದಲ್ಲಿ ಅವರನ್ನು ಕ್ವಾರಂಟೈನ್ ಮಾಡಲಾಗುವುದು ಎಂದು ಮನೋರಂಜನ್ ಹೆಗ್ಡೆ ಮಾಹಿತಿ ನೀಡಿದರು.
ಸಾಮುದಾಯಿಕ ಪರೀಕ್ಷೆಯಲ್ಲಿ ಮತ್ತಿಬ್ಬರಿಗೆ ಸೋಂಕು: ಪಾದರಾಯನಪುರದಲ್ಲಿ ಪಾಲಿಕೆ ನಡೆಸುತ್ತಿರುವ ಸಾಮುದಾಯಿಕ ಸೋಂಕು ಪರೀಕ್ಷೆಯಲ್ಲಿ ಮತ್ತಿಬ್ಬರಿಗೆ ಕೋವಿಡ್ 19 ಸೋಂಕು ದೃಢಪಟ್ಟಿದೆ. ಮೇ 21ರಂದು ಸಾಮುದಾಯಿಕ ಸೋಂಕು ಪರೀಕ್ಷೆಗೆ ಒಳಪಟ್ಟ ಒಬ್ಬರಲ್ಲಿ ಹಾಗೂ ಸದ್ಯ ಮೇ 26ಕ್ಕೆ ಸಮುದಾಯ ಪರೀಕ್ಷೆಗೆ ಒಳಪಟ್ಟ ಇಬ್ಬರು ಪುರುಷರಲ್ಲಿ ಕೋವಿಡ್ 19 ದೃಢಪಟ್ಟಿದೆ ಎಂದು ಪಶ್ಚಿಮ ವಲಯದ ಆರೋಗ್ಯಾಧಿಕಾರಿ ಡಾ. ಮನೋರಂಜನ್ ಹೆಗ್ಡೆ ತಿಳಿಸಿದ್ದಾರೆ.
ಕಾರ್ಪೊರೇಟರ್ ಮೇಲೆ ಕ್ರಮ: ಕಾರ್ಪೊರೇಟರ್ ಇಮ್ರಾನ್ ಪಾಷಾ ಮೊದಲಿನಿಂದಲೂ ಇದೇ ರೀತಿ ತರಲೆ ಮಾಡುತ್ತಿದ್ದಾರೆ. ಸೋಂಕು ಪರೀಕ್ಷಾ ವರದಿ ಪಾಸಿಟಿವ್ ಬಂದ ನಂತರ ಕ್ವಾರಂಟೈನ್‌ಗೆ ಒಳಗಾಗಬೇಕು. ಅದನ್ನು ಬಿಟ್ಟು ವಾರ್ಡ್‌ನ ಎಲ್ಲೆಡೆ ಓಡಾಡಿದ್ದಾರೆ. ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಚಿವ ಅಶೋಕ್ ಹೇಳಿದರು.
ಇಮ್ರಾನ್ ಪಾಶಾ ಕಾರ್ಪೊರೇಟರ್ ಆದರೆ ಏನು ಬೇರೆ ಆದರೆ ಏನು? ಎಲ್ರೂ ಕಾನೂನಿಗೆ ಬೆಲೆ ಕೊಡಬೇಕು, ಪಾಲಿಸಬೇಕು. ಇಂಗ್ಲೆಂಡ್ ಪ್ರಧಾನಿಯೇ ಕ್ವಾರಂ ಟೈನ್ ಆಗಿದ್ರು. ಕಾರ್ಪೊರೇಟರ್ ಯಾವ ಲೆಕ್ಕ. ಕೋತಿ ತಾನು ಕೆಡ್ತು ಅಂತ ಹೊಲ ಎಲ್ಲ ಕೆಡಿಸಲು ಹೋಗಬಾರದು. ಇನ್ನೂ ಚಿಕ್ಕ ವಯಸ್ಸಿನ ಇಮ್ರಾನ್ ಪಾಶಾ ಕಾನೂನಿಗೆ ಬೆಲೆ ಕೊಡಲಿ.
-ವಿ.ಸೋಮಣ್ಣ, ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್ ಬಸ್ ನಿಲ್ದಾಣ!
Bengaluru: ಇವಿ ಬೈಕ್ ಶೋರೂಮ್‌ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್ ಬಂಧನ, ಬಿಡುಗಡೆ
Bengaluru: ನಗರದಲ್ಲಿ ನಿಷೇಧಿತ ಕಲರ್ ಕಾಟನ್ ಕ್ಯಾಂಡಿ ತಯಾರಿಕಾ ಘಟಕ ಬಂದ್
Shobha Karandlaje: ಶೋಭಾ ಲೋಕಸಭಾ ಸದಸ್ಯತ್ವ ರದ್ದು ಕೋರಿ ಅರ್ಜಿ: ಡಿ.6ಕ್ಕೆ ವಿಚಾರಣೆ
Arrested: ನಕಲಿ ದಾಖಲೆ ನೀಡಿ ಟಿಡಿಎಸ್ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ
MUST WATCH
ಹೊಸ ಸೇರ್ಪಡೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.