ನನ್ನ ಸಂಕಲ್ಪಕ್ಕೆ ಶಕ್ತಿಯ ಮೂಲವೇ ನೀವು; ನಿಮ್ಮ ಬೆಂಬಲ, ಆಶೀರ್ವಾದ, ಪ್ರೀತಿ

ಸಮಸ್ತ ಸ್ವಾಭಿ ಮಾನಿ ಭಾರತೀಯರಿಗೆ ಪ್ರಧಾನಿ ಮೋದಿ ಬಹಿರಂಗ ಪತ್ರ; 'ಏಕ ಭಾರತ, ಶ್ರೇಷ್ಠ ಭಾರತ' ಪರಿಕಲ್ಪನೆಯನ್ನು ಎತ್ತಿಹಿಡಿದಿದ್ದಕ್ಕೆ ಪ್ರಜೆಗಳಿಗೆ‌ ಶ್ಲಾಘನೆ

Team Udayavani, May 31, 2020, 7:57 AM IST

ನನ್ನ ಸಂಕಲ್ಪಕ್ಕೆ ಶಕ್ತಿಯ ಮೂಲವೇ ನೀವು; ನಿಮ್ಮ ಬೆಂಬಲ, ಆಶೀರ್ವಾದ, ಪ್ರೀತಿ

ಹೊಸದಿಲ್ಲಿ: ನಿತ್ಯ 16 – 18 ಗಂಟೆ ದೇಶಕ್ಕಾಗಿ ದುಡಿಮೆ. ವಿರಾಮದ ಜಪವಿಲ್ಲ. ಕೊಂಚವೂ ದಣಿಯದೆ ಪ್ರಚಂಡ ಉತ್ಸಾಹದಲ್ಲಿ 6 ವರ್ಷದಿಂದ ಭಾರತವನ್ನು ಮುನ್ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ 2.0 ಸರಕಾರದ ಮೊದಲ ವರ್ಷ ಎಂದಿನಂತೆ ಇರಲಿಲ್ಲ.

ಮುಟ್ಟಿದ್ದೆಲ್ಲ ಸಾಧನೆಗಳಾಗಿ, ಇಟ್ಟಿದ್ದೆಲ್ಲ ಐತಿಹಾಸಿಕ ಹೆಜ್ಜೆಗಳಾಗಿ ಮುನ್ನುಗ್ಗುವಾಗ ಸವಾಲುಗಳೂ ಧುತ್ತನೆ ಎದ್ದುಬಂದವು.

ಆದರೂ ಈ 1 ವರ್ಷದ ಕಿರು ಅವಧಿಯ ಪಥದುದ್ದಕ್ಕೂ ಮೋದಿ ಸರ್ಕಾರ ಮೈಲುಗಲ್ಲುಗಳನ್ನು ನೆಟ್ಟಿದೆ. ಅವುಗಳನ್ನೆಲ್ಲ ನೆನೆಯುತ್ತಾ, ಕೋವಿಡ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ದೇಶವಾಸಿಗಳಿಗೆ ಚೈತನ್ಯ ತುಂಬಲು ಪ್ರಧಾನಿ ಮೋದಿ ಶನಿವಾರ ದೇಶ ಬಾಂಧವರಿಗೆ ಅತ್ಯಾಪ್ತ ಪತ್ರ ಬರೆದಿದ್ದಾರೆ.

‘ಕಳೆದ ವರ್ಷ ಈ ದಿನ (ಮೇ 30, 2019) ಭಾರತೀಯ ಪ್ರಜಾ ಪ್ರಭುತ್ವದ ಇತಿಹಾಸದಲ್ಲಿ ಸುವರ್ಣ ಅಧ್ಯಾಯ ಆರಂಭವಾಯಿತು. ಸಾಮಾನ್ಯ ದಿನಗಳಲ್ಲಿ ನಾನು ನಿಮ್ಮ ನಡುವೆ ಇದ್ದು, ಸರ್ಕಾರದ ಈ ವಾರ್ಷಿಕೋತ್ಸವವನ್ನು ಸಂಭ್ರಮಿಸುತ್ತಿದ್ದೆ. ಆದರೆ, ಕೋವಿಡ್ ನ ಸಂದಿಗ್ಧತೆ ಅದಕ್ಕೀಗ ಅನುಮತಿಸುತ್ತಿಲ್ಲ. ಅದಕ್ಕಾಗಿ ಈ ಪತ್ರದ ಮೂಲಕ ನಿಮ್ಮ ಆಶೀರ್ವಾದ ಪಡೆಯುತ್ತಿದ್ದೇನೆ’ ಎಂದು ಆರಂಭದಲ್ಲೇ ಮೋದಿ, ತಾವು ಪತ್ರ ಬರೆಯಲು ಹಿಂದಿರುವ ಸಕಾರಣ ತಿಳಿಸಿದ್ದಾರೆ.

‘ಕೋವಿಡ್ ವೈರಾಣು ದೇಶಕ್ಕೆ ದಾಳಿಗೈದಾಗ ಭಾರತ ನಲುಗಿ ಹೋಗುತ್ತೆ ಅಂತಲೇ ಹಲವರು ಊಹಿಸಿದ್ದರು. ಆದರೆ, ವಿಶ್ವದ ಪ್ರಬಲ ಮತ್ತು ಸಮೃದ್ಧ ದೇಶಗಳಿಗೂ ಸಾಟಿ ಇಲ್ಲದಂತೆ,ಲಾಕ್‌ಡೌನ್‌ ನಿಯಮ ಪಾಲನೆಯಲ್ಲಿ “ಏಕ ಭಾರತ, ಶ್ರೇಷ್ಠ ಭಾರತ’ ಪರಿಕಲ್ಪನೆಯನ್ನು ಎತ್ತಿಹಿಡಿದಿದ್ದೀರಿ. ಚಪ್ಪಾಳೆ ತಟ್ಟಿ, ದೀಪಗಳನ್ನು ಬೆಳಗಿ ಕೋವಿಡ್ ಯೋಧರನ್ನು ಗೌರವಿಸಿದ್ದೀರಿ’ ಎಂದು ಶ್ಲಾಘಿಸಿ ದ್ದಾರೆ. ಪತ್ರದ ಇನ್ನುಳಿದ ಸಾರಾಂಶ ಅವರದೇ ಮಾತುಗಳಲ್ಲಿ ಹೀಗಿದೆ…

ಮಿಡಿತ-ತುಡಿತ: ಇಷ್ಟು ದೊಡ್ಡ ಪ್ರಮಾಣದ ಬಿಕ್ಕಟ್ಟು ಎದುರಿಸುವಾಗ ಅನನುಕೂಲ ಸಂಭವಿಸಿಲ್ಲ ಎಂದು ಖಡಾಖಂಡಿತವಾಗಿ ಹೇಳಲಾರೆ. ನಮ್ಮ ಕಾರ್ಮಿಕರು, ವಲಸೆ ಕಾರ್ಮಿಕರು, ಸಣ್ಣ ಪ್ರಮಾಣದ ಕೈಗಾರಿಕೆಗಳ ಕುಶಲಜೀವಿಗಳು, ವ್ಯಾಪಾರಿಗಳು, ಅಲ್ಲದೆ ಇತರೆ ದೇಶವಾಸಿಗಳು ಭಾರೀ ದುಃಖಕ್ಕೆ ಗುರಿಯಾಗಿದ್ದಕ್ಕೆ ಖೇದವಿದೆ. ನಾವೆಲ್ಲರೂ ದುಡಿದು ಅವರ ಕಣ್ಣೀರು ಒರೆಸೋಣ. ಅದರ ಜತೆಯಲ್ಲೇ, ಕೋವಿಡ್ ವಿಚಾರದಲ್ಲಿ ಅಚ್ಚರಿಯ ಗೆಲುವು ಸಾಧಿಸಿದ ಮಾದರಿಯಲ್ಲೇ, ಆರ್ಥಿಕ ಪುನರುಜ್ಜೀವನದಲ್ಲೂ ವಿಶ್ವದ ಮುಂದೆ ಸೂಕ್ತ ಉದಾಹರಣೆಯಾಗಿ ಭಾರತವನ್ನು ನಿಲ್ಲಿಸೋಣ.

ಸ್ವಾವಲಂಬಿ ಭಾರತ ಕಟ್ಟಬೇಕಿದೆ: ಈ ಸಂದಿಗ್ಧ ಕಾಲಾವಧಿಯಲ್ಲಿ ನಾವು ಸ್ವಾವಲಂಬಿಗಳಾಗಲು, ಆತ್ಮನಿರ್ಭರ ಭಾರತ ಕಟ್ಟಲು 20 ಲಕ್ಷ ಕೋಟಿ ರೂ. ಪ್ಯಾಕೇಜ್‌ ಅನ್ನು ಮೀಸಲಿಡಲಾಗಿದೆ. ಇದು ಪ್ರತಿ ಭಾರತೀಯನ ಮುಂದೆ ಅವಕಾಶಗಳನ್ನು ತೆರೆದಿಟ್ಟು, ಹೊಸಯುಗಕ್ಕೆ ನಾಂದಿ ಹಾಡಲಿದೆ. ರೈತರು, ಕಾರ್ಮಿಕರು, ಸಣ್ಣ ಉದ್ಯಮಿಗಳು ಅಥವಾ ಸ್ಟಾರ್ಟ್‌ಅಪ್‌ನ ಯುವಕರಿಗೂ ಇದರ ಪ್ರಯೋಜನ ದಕ್ಕಲಿದೆ. ಇದು ಆಮದು ತಗ್ಗಿಸಿ, ಸ್ವಾವಲಂಬಿ ಭಾರತವನ್ನು ಸೃಷ್ಟಿಸುತ್ತದೆ.

ಅನವರತ ದುಡಿಯುತ್ತಿರುವೆ: ‘ದೇಶದ ಸವಾಲುಗಳನ್ನು ಗೆಲ್ಲಲು ಹಗಲು- ರಾತ್ರಿ ದುಡಿಯುತ್ತಿದ್ದೇನೆ. ಒಂದು ಪಕ್ಷ ನನ್ನಲ್ಲಿ ನ್ಯೂನತೆಗಳು ಇರಬಹುದು; ಆದರೆ ದೇಶದಲ್ಲಿ ಯಾವುದೇ ಕೊರತೆಗಳೂ ಇಲ್ಲ. ನನ್ನ ಸಂಕಲ್ಪಕ್ಕೆ ಶಕ್ತಿಯ ಮೂಲವೆಂದರೆ ನೀವು, ನಿಮ್ಮ ಬೆಂಬಲ, ಆಶೀರ್ವಾದ ಮತ್ತು ನಿಮ್ಮ ಪ್ರೀತಿ’. “ಕೃತಂ ಮೆ ದಕ್ಷಿಣೆ ಹಸ್ತೆ, ಜಯೋ ಮೆ ಸತ್ಯ ಆಹಿತಃ’ ಎಂಬ ಮಾತುಂಟು. ಇದರರ್ಥ- “ನಾವು ಒಂದು ಕಡೆ ಕ್ರಿಯೆ, ಕರ್ತವ್ಯದಲ್ಲಿ ಮುಳುಗಿದರೆ, ಮತ್ತೂಂದೆಡೆ ಯಶಸ್ಸು ಖಚಿತವಾಗುತ್ತದೆ’ ಎಂದು. ನನ್ನ ದೇಶಕ್ಕಾಗಿ ಯಶಸ್ಸನ್ನು ಪ್ರಾರ್ಥಿಸುತ್ತಾ, ಮತ್ತೂಮ್ಮೆ ನಿಮಗೆ ನಮಸ್ಕರಿಸುತ್ತೇನೆ.

ನಿಮಗೆ, ನಿಮ್ಮ ಕುಟುಂಬಕ್ಕೆ ನನ್ನ ಹೃತ್ಪೂರ್ವಕ ಶುಭಾಶಯಗಳು’.

ನಿಮ್ಮ ಪ್ರಧಾನ ಸೇವಕ

– ನರೇಂದ್ರ ಮೋದಿ

(ಒಟ್ಟಾರೆ ಇಡೀ ಪತ್ರದಲ್ಲಿ ಭರವಸೆಯ ಬಿಂಬಗಳೇ ತುಂಬಿಕೊಂಡಿವೆ. ನಿನ್ನೆಯ ಭಾರತದ ಅವಲೋಕನ, ನಾಳೆಯ ಭಾರತದ ಚಿತ್ರಗಳು ಸ್ಪಷ್ಟವಾಗಿವೆ)

ಚಾರಿತ್ರಿಕ ಸಾಧನೆ ಉಲ್ಲೇಖ
– ಕಾಶ್ಮೀರದ 370ನೇ ವಿಧಿ ರಾಷ್ಟ್ರೀಯ ಏಕತೆ ಮತ್ತು ಏಕೀಕರಣದ ಮನೋಭಾವವನ್ನು ಹೆಚ್ಚಿಸಿದೆ.
– ಸುಪ್ರೀಂ ಕೋರ್ಟ್‌ನ ಗೌರವಾನ್ವಿತ ತೀರ್ಪು, ಶತಮಾನಗಳ ರಾಮಮಂದಿರ ಸಮಸ್ಯೆಗೆ ಸೌಹಾರ್ದ ಅಂತ್ಯ ಕಲ್ಪಿಸಿದೆ.
– ತ್ರಿವಳಿ ತಲಾಖ್‌ ಇತಿಹಾಸದ ಕಸದ ಬುಟ್ಟಿಗೆ ಸೇರಿದೆ.
– ಪೌರತ್ವ ಕಾಯ್ದೆ ತಿದ್ದುಪಡಿ, ಭಾರತದ ಕಾರುಣ್ಯ ಮತ್ತು ಅಂತರ್ಗತ ಮನೋಭಾವದ ಅಭಿವ್ಯಕ್ತಿಯಾಗಿದೆ.
– ರಕ್ಷಣಾ ಪಡೆಗಳ ಮುಖ್ಯಸ್ಥರ ಹುದ್ದೆ ರಚನೆ ಮೂರೂ ದಳಗಳೊಂದಿಗೆ ಸಮನ್ವಯತೆ ಸಾಧಿಸಿದೆ.

ನಾವು ಮಾಡಿದ್ದು, ನೀವು ಕಂಡಿದ್ದು
– ಪಿಎಂ ಕಿಸಾನ್‌ ಸಮ್ಮಾನ್‌ ನಿಧಿಯಡಿ ಒಂದು ವರ್ಷದಲ್ಲಿ 72 ಕೋಟಿ ರೂ.ಗಳಿಗೂ ಅಧಿಕ ಹಣ 9.50 ಕೋಟಿ ರೈತರ ಖಾತೆಗಳಿಗೆ ಜಮೆ.
– ಜಲಜೀವನ್‌ ಮಿಷನ್‌ ಯೋಜನೆಯಡಿ 15 ಕೋಟಿಗೂ ಅಧಿಕ ಗ್ರಾಮೀಣ ಕುಟುಂಬಗಳಿಗೆ ಪೈಪ್‌ ಮೂಲ ಕ ಶುದ್ಧ ಜಲ ವಿತರಣೆ ಗುರಿ.
– 50 ಕೋಟಿ ಜಾನುವಾರುಗಳ ಉತ್ತಮ ಆರೋಗ್ಯಕ್ಕಾಗಿ ಉಚಿತ ವ್ಯಾಕ್ಸಿನೇಷನ್‌ ನಡೆಸುವ ಬೃಹತ್‌ ಅಭಿಯಾನ ಚಾಲ್ತಿ.
– ರೈತರು, ಕೃಷಿ ಕಾರ್ಮಿಕರು ಸೇರಿದಂತೆ ಅಸಂಘಟಿತ ವಲಯದ 60 ವರ್ಷ ದಾಟಿದ ಹಿರಿಯರಿಗೆ ಮಾಸಿಕ 3 ಸಾವಿರ ರೂ.ಗಳ ಅನಿಯಮಿತ ಪಿಂಚಣಿಯ ಭರವಸೆ.
– ಮೀನುಗಾರರಿಗೆ ಬ್ಯಾಂಕ್‌ ಸಾಲ ಸೌಲಭ್ಯ ಪಡೆಯುವ ಜತೆಗೆ, ಪ್ರತ್ಯೇಕ ಇಲಾಖೆ ರಚನೆ.
– ವ್ಯಾಪಾರಿಗಳ ಸಮಸ್ಯೆಗಳನ್ನು ಪರಿಹರಿಸಲು ‘ವ್ಯಾಪಾರಿ ಕಲ್ಯಾಣ್‌ ಮಂಡಳಿ’ಯನ್ನು ಸ್ಥಾಪಿಸಲು ನಿರ್ಧಾರ.
– ಸ್ವಸಹಾಯ ಗುಂಪುಗಳ 7 ಕೋಟಿಗೂ ಅಧಿಕ ಮಹಿಳೆಯರಿಗೆ ಹೆಚ್ಚಿನ ಆರ್ಥಿಕ ನೆರವು. ಸ್ವಸಹಾಯ ಸಂಘಗಳಿಗೆ 10 ಲಕ್ಷ ರೂ. ಸಾಲದ ಮೊತ್ತ ಈಗ ಗ್ಯಾರಂಟಿ ಇಲ್ಲದೆ 20 ಲಕ್ಷ ರೂ.ಗೆ ಏರಿಕೆ.

ಟಾಪ್ ನ್ಯೂಸ್

Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?

Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?

Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ

Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ

ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ

Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ

ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್‌

ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್‌

Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ

Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ

Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 30 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು

Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?

Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?

Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ

Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ

ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.