ತಂಬಾಕು ಬಳಕೆಯಿಂದ ಮಾರಣಾಂತಿಕ ಕಾಯಿಲೆ ; ಇರಲಿ ಎಚ್ಚರ
Team Udayavani, May 31, 2020, 8:20 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ವಿಶ್ವಾದ್ಯಂತ ಮೇ 31 ರಂದು ತಂಬಾಕು ರಹಿತ ದಿನ ಆಚರಿಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಯುವಕರೇ ಹೆಚ್ಚಾಗಿ ತಂಬಾಕು ಪದಾರ್ಥಗಳನ್ನು ಸೇವಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ತಂಬಾಕು ಸೇವನೆಯ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲು ಈ ದಿನವನ್ನು ಮೀಸಲಿಡಲಾಗಿದೆ.
1987ರಲ್ಲಿ ವಿಶ್ವ ಆರೋಗ್ಯ ಸಂಘಟನೆಯ ಸದಸ್ಯ ರಾಷ್ಟ್ರ ಗಳು ತಂಬಾಕು ಸೇವನೆಯಿಂದ ಬಾಧಿಸುವ ರೋಗ, ಸಾವು ನೋವುಗಳ ಬಗೆಗೆ ವಿಶ್ವಾ ದ್ಯಂತದ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಪ್ರತಿವರ್ಷದ ಮೇ 31 ರಂದು ವಿಶ್ವ ತಂಬಾಕು ರಹಿತ ದಿನವನ್ನು ಆಚರಿಸುವ ಘೋಷಣೆ ಮಾಡಿದವು. ಜತೆಗೆ ಅದೇ ವರ್ಷ ಮೊದಲ ಬಾರಿಗೆ WHO ತಂಬಾಕು ರಹಿತ ದಿನ ಆಚರಣೆಯ ಬಗ್ಗೆ ಅಧಿಸೂಚನೆ ಹೊರಡಿಸಿತು.
ಪ್ರತೀ ವರ್ಷ 80 ಲಕ್ಷ ಜನರ ಸಾವು
ತಂಬಾಕು ಮತ್ತದರ ಉತ್ಪನ್ನಗಳ ಪ್ರತ್ಯಕ್ಷ , ಪರೋಕ್ಷ ಸೇವನೆಯಿಂದಾಗಿ ಪ್ರತೀವರ್ಷ 8 ದಶಲಕ್ಷ ಜನರು ಸಾವಿಗೀಡಾಗುತ್ತಿದ್ದಾರೆ.
ತಂಬಾಕು ಸೇವನೆಯಿಂದ ಸಾವಿರಾರು ಮಂದಿ ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದಾರೆ. ವಿಶ್ವಾದ್ಯಂತ ತಂಬಾಕು ಸೇವಿಸುವ ಒಟ್ಟಾರೆ 1.3 ಶತಕೋಟಿ ಜನರ ಪೈಕಿ ಶೇ.80ರಷ್ಟು ಮಂದಿ ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳ ಪ್ರಜೆಗಳಾಗಿದ್ದಾರೆ.
ಈ ದೇಶಗಳಲ್ಲಿ ತಂಬಾಕು ಸೇವನೆಯಿಂದ ಎದುರಾಗುವ ರೋಗಗಳಿಗೆ ಚಿಕಿತ್ಸೆ ಪಡೆದುಕೊಳ್ಳಲು ಜನರು ಹೆಣಗಾಡುತ್ತಿದ್ದಾರೆ.
ಮಕ್ಕಳ ಪ್ರಾಣಕ್ಕೂ ಸಂಚಕಾರ!
ಧೂಮಪಾನಿಗಳು ಮಾತ್ರವಲ್ಲದೆ ಇವರು ಹೊರಬಿಡುವ ವಿಷಾನಿಲಕ್ಕೆ ಒಡ್ಡಿಕೊಳ್ಳುವ ಇತರರಿಗೂ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಇದರ ಪರಿಣಾಮವಾಗಿ ಪ್ರತಿವರ್ಷ 60 ಲಕ್ಷ ಮಂದಿ ಮರಣ ಹೊಂದುತ್ತಿದ್ದು, 5 ವರ್ಷಗಳಿಗಿಂತ ಕಡಿಮೆ ವಯಸ್ಸಿನ 60 ಸಾವಿರ ಮಕ್ಕಳು ಸಾವಿಗೀಡಾಗುತ್ತಿದ್ದಾರೆ. ಶೇ.40ಕ್ಕೂ ಹೆಚ್ಚು ಜನರು ಶ್ವಾಸಕೋಶ ಸಂಬಂಧಿ ಕಾಯಿಲೆಗಳಾದ ಕ್ಯಾನ್ಸರ್, ದೀರ್ಘಕಾಲದ ಉಸಿರಾಟದ ತೊಂದರೆ, ಕ್ಷಯ ರೋಗದಿಂದಾಗಿ ಸಾವನ್ನಪ್ಪುತ್ತಿದ್ದಾರೆ ಎಂದು WHO ತಿಳಿಸಿದೆ.
ದುಷ್ಪರಿಣಾಮಗಳು
ತಂಬಾಕು ವಸ್ತುಗಳಲ್ಲಿ 4,000ಕ್ಕೂ ಹೆಚ್ಚು ರಾಸಾಯನಿಕ ಅಂಶಗಳು ಒಳಗೊಂಡಿದ್ದು, 60ಕ್ಕೂ ಹೆಚ್ಚು ಅಂಶಗಳು ಕ್ಯಾನ್ಸರ್ ರೋಗಕ್ಕೆ ಕಾರಣವಾಗುತ್ತವೆ. ತಂಬಾಕು ಸೇವಿಸುವವರು ಬಂಜೆತನ, ನಾನಾ ರೀತಿಯ ಕ್ಯಾನ್ಸರ್ ಮತ್ತು ಡ್ರೈ ಗ್ಯಾಂಗ್ರಿನ್ ನಂಥ ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗುತ್ತಾರೆ. ಇಂದಿನ ಯುವಕರು ಕೌಟುಂಬಿಕ ಹಿನ್ನೆಲೆ, ಸ್ನೇಹಿತರ ಪ್ರಭಾವ, ಕೆಲಸದ ಒತ್ತಡ ಮತ್ತು ಮಾನಸಿಕ ಖನ್ನತೆಯಿಂದ ತಂಬಾಕು ಸೇವನೆಯ ದುಶ್ಚಟಕ್ಕೆ ಬಲಿಯಾಗುತ್ತಿದ್ದು, ಇದರಿಂದ ಬಾಯಿ ಕ್ಯಾನ್ಸರ್, ದಂತ ಕ್ಷಯ, ಗರ್ಭಪಾತ, ಗರ್ಭಧಾರಣೆಯಲ್ಲಿ ಕುಂಠಿತ, ಕಡಿಮೆ ತೂಕದ ಮಗುವಿನ ಜನನ ಮತ್ತಿತರ ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ.
ಈ ವರ್ಷದ ಧ್ಯೇಯ
ಯುವಕರನ್ನು ತಂಬಾಕು ಸೇವನೆ ಮತ್ತು ತಂಬಾಕು ಉತ್ಪನ್ನಗಳ ತಯಾರಿಕ ಕ್ಷೇತ್ರದಿಂದ ದೂರವಿಡುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
TTD Resolution: ಇನ್ನು ಹಿಂದೂಯೇತರರಿಂದ ತಿರುಮಲ ತಿರುಪತಿ ದೇವಸ್ಥಾನ ಮುಕ್ತ!
Order: ಬಾಕಿ ಹಣ ಕೊಡದ್ದಕ್ಕೆ ದಿಲ್ಲಿಯ ಹಿಮಾಚಲ ಭವನ ಹರಾಜು: ʼಕೈʼ ಸರಕಾರಕ್ಕೆ ಹಿನ್ನಡೆ
TTD: ತಿರುಪತಿ ದರ್ಶನ ಕಾಯುವಿಕೆ ಅವಧಿ ಇಳಿಕೆಗೆ ಕೃತಕ ಬುದ್ಧಿಮತ್ತೆ ಬಳಕೆ?
Pilot: ಕೆಲಸದ ಟೈಂ ಮುಗೀತು ಎಂದು ವಿಮಾನ ಹಾರಿಸದ ಏರ್ ಇಂಡಿಯಾ ಪೈಲಟ್!
Nanded: ಸಂಗಾತಿಯ ಅರಸುತ್ತಾ 300 ಕಿ.ಮೀ. ಸಂಚರಿಸಿದ “ಜಾನಿ’ ಎಂಬ ಹುಲಿ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.