ಇಟಲಿಯ ಲೊಂಬಾರ್ಡಿಗೆ ಕಂಟಕವಾದ ಕೋವಿಡ್!
Team Udayavani, May 31, 2020, 1:14 PM IST
ರೋಮ್: ಇಟಲಿಯ ಪ್ರಮುಖ, ಶ್ರೀಮಂತ ನಗರ ಲೊಂಬಾರ್ಡಿ. ಕೋವಿಡ್-19ನಿಂದಾಗಿ ಜಗತ್ತಿನಲ್ಲೇ ಅತ್ಯಧಿಕ ಮಂದಿ ಪ್ರಜೆಗಳನ್ನು ಕಳೆದುಕೊಂಡಿದೆ. ಅದರಲ್ಲೂ ಈ ಶ್ರೀಮಂತ ನಗರದಲ್ಲಂತೂ ವೈರಸ್ ಜನರನ್ನು ಹಿಂಡಿ ಹಿಪ್ಪೆ ಮಾಡಿದೆ.
ಲೊಂಬಾರ್ಡಿಗೆ ಕೋವಿಡ್ ಇಷ್ಟೊಂದು ಹಾನಿಮಾಡಲು ಏನು ಕಾರಣ ಎಂಬ ಪ್ರಶ್ನೆ ಎಲ್ಲರ ತಲೆಯಲ್ಲೂ ತಿರುಗುತ್ತಿದೆ. ಅದಕ್ಕೆ ನಿರ್ದಿಷ್ಟ ಕಾರಣಗಳು ಇನ್ನೂ ಸಿಕ್ಕಿಲ್ಲದವಾದರೂ ಹಲವು ವಿಚಾರಗಳು ವೈರಸ್ ವ್ಯಾಪಕವಾಗಿ ಹರಡಲು ಅಂಶಗಳ ಬಗ್ಗೆ ಹೇಳುತ್ತವೆ.
ಹಾಗೆ ನೋಡಿದರೆ ಕೋವಿಡ್-19 ರೋಗ ಲಕ್ಷಣವನ್ನು ಲೊಂಬಾರ್ಡಿಯ ವೈದ್ಯರು ಕಂಡದ್ದು ನಿನ್ನೆ ಮೊನ್ನೆಯಲ್ಲ! ಜನವರಿ 20ರ ವೇಳೆಗೇ ಅವರು ಅದನ್ನು ಕಂಡಿದ್ದರು. ಅಂದು ಇರ್ವಾನ್ ಮುಸ್ಸಿ ಎಂಬ ವೈದ್ಯರಲ್ಲಿಗೆ 64 ವರ್ಷದ ಮಹಿಳೆ ಕೋವಿಡ್-19 ರೀತಿಯ ರೋಗ ಲಕ್ಷಣದೊಂದಿಗೆ ಭೇಟಿ ಯಾಗಿದ್ದರು. ಅಲ್ಲದೆ ಆ ವೈದ್ಯರು ಇದೇ ರೀತಿಯ ರೋಗ ಲಕ್ಷಣ ಕೆಲವರಲ್ಲಿ ಇದ್ದುದಾಗಿ ಬೇರೆ ವೈದ್ಯ ಸ್ನೇಹಿತರು ಹೇಳಿದ್ದನ್ನೂ ದಾಖಲಿಸಿದ್ದಾರೆ. ಈ ಘಟನೆ ವರದಿಯಾಗಿದ್ದು, ಚೀನದಿಂದ ಬಂದ ಪ್ರವಾಸಿಗರೊಬ್ಬರಿಗೆ ಕೋವಿಡ್-19 ಖಚಿತ ಪಡುವ ಮೂರು ದಿನಗಳ ಮೊದಲು.
ಈ ರೋಗಕ್ಕೆ ವೈದ್ಯರು ಚಿಕಿತ್ಸೆ ನೀಡಿದರಾದರೂ ಅದು ಪ್ರಯೋಜನವಾಗಿರಲಿಲ್ಲ. ಬಳಿಕ ಫೆ.14ರಂದು ವೈದ್ಯ ಮುಸ್ಸಿ ಅವರು ಚಿಕಿತ್ಸೆ ನೀಡಿದ ರೋಗಿ ಆಸ್ಪತ್ರೆಗೆ ದಾಖಲಾಗಿದ್ದರು.
ವೈದ್ಯ ಮುಸ್ಸಿ ಅವರು ಹೇಳುವಂತೆ ಲೊಂಬಾರ್ಡಿಯಲ್ಲಿ ಮೊದಲ ಕೋವಿಡ್ ಪ್ರಕರಣ ಪತ್ತೆಯಾಗುವ ಮೊದಲೇ ಅದು ಹಬ್ಬಿತ್ತು. ಆರಂಭದಲ್ಲಿ ಆ ನಗರವೊಂದರಲ್ಲೇ 16 ಸಾವಿರ ಮಂದಿಗೆ ತಗುಲಿತ್ತು. ಇದರಿಂದಾಗಿ ಸುಮಾರು 3,838 ಮಂದಿ ಮೃತಪಟ್ಟಿದ್ದು, ಕಳೆದ ಗುರುವಾರ ಸರ್ವಾಧಿಕ 1,898 ಮಂದಿ ಮೃತಪಟ್ಟಿದ್ದಾರಂತೆ. ಸದ್ಯ ಅಲ್ಲಿನ ಒಟ್ಟು ಪ್ರಕರಣಗಳ ಸಂಖ್ಯೆ 87 ಸಾವಿರ ದಾಟಿದೆ.
ಲೊಂಬಾರ್ಡಿಯಲ್ಲಿ ಕೇಸು ಇಷ್ಟೊಂದು ಪ್ರಮಾಣದಲ್ಲಿ ಏರಲು ಕಾರಣ ಅಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಚೀನೀಯರು ಭೇಟಿ ನೀಡುವುದು. ಉದ್ಯಮ ಸಂಬಂಧಿ, ಪ್ರವಾಸ ಎಂದು ಹೆಚ್ಚಿನ ಮಂದಿ ಚೀನೀಯರು ಲೊಂಬಾರ್ಡಿಗೆ ಭೇಟಿ ನೀಡುತ್ತಾರೆ. ಜತೆಗೆ ಚೀನದೊಂದಿಗೆ ಆ ನಗರಕ್ಕೆ ಹೆಚ್ಚಿನ ಸಂಪರ್ಕವಿದೆ. ಅಲ್ಲಿ ಜನ ಸಂಖ್ಯೆಯೂ ಹೆಚ್ಚು.
ಸ್ಥಳೀಯ ವೈದ್ಯರಾದ ಮಖೇಲ್ ಯೂಸ್ವೆಲ್ಲಿ ಎಂಬವರ ಪ್ರಕಾರ ಅಲ್ಲಿನ ರಾಜಕೀಯ ಮತ್ತು ಆರೋಗ್ಯ ಇಲಾಖೆಯ ತಪ್ಪು ಲೆಕ್ಕಾಚಾರಗಳಿಂದಾಗಿ ಪ್ರಕರಣಗಳ ಸಂಖ್ಯೆ ಏರಲು ಕಾರಣವಾಗಿದೆಯಂತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Appoint: ಲಾಕ್‌ಡೌನ್ ಟೀಕಿಸಿದ್ದ ಜಯ ಭಟ್ಟಾಚಾರ್ಯ ಅಮೆರಿಕ ಆರೋಗ್ಯ ಸಂಸ್ಥೆ ಮುಖ್ಯಸ್ಥ
Pakistan: ಪೊಲೀಸರ ಕಾರ್ಯಾಚರಣೆಗೆ ಪಿಟಿಐ ಪ್ರತಿಭಟನೆ ರದ್ದು!
Bangladeshದಲ್ಲಿ ಇಸ್ಕಾನ್ ನಿಷೇಧಿಸಬೇಕು: ಹೈಕೋರ್ಟ್ ಗೆ ಬಾಂಗ್ಲಾದೇಶ ಸರ್ಕಾರ ಅರ್ಜಿ!
Israel ಮತ್ತು ಲೆಬನಾನ್ ನಡುವೆ ಕದನ ವಿರಾಮ ಒಪ್ಪಂದ: ಅಮೆರಿಕ ಮಧ್ಯಸ್ಥಿಕೆಗೆ ಹಸಿರು ನಿಶಾನೆ
Bangladesh: ಚಿನ್ಮಯ್ ಕೃಷ್ಣದಾಸ್ ಬಂಧನ ಖಂಡಿಸಿ ಪ್ರತಿಭಟನೆ: ವಕೀಲನ ಹ*ತ್ಯೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ಇಸ್ಪೀಟ್ ಅಡ್ಡೆಯ ಮೇಲೆ ಡಿವೈಎಸ್ಪಿ ದಾಳಿ; ಮಾಜಿ ಅಧ್ಯಕ್ಷ-ಹಾಲಿ ಉಪಾಧ್ಯಕ್ಷ ಸೇರಿ 8 ಜನರ ಬಂಧನ
Anthyarambha: ನ.28ರಂದು ಕೊಂಕಣಿ ಚಲನಚಿತ್ರ “ಅಂತ್ಯಾರಂಭ’ ಪ್ರದರ್ಶನ
Belagavi Session: ರಾಜಕೀಯ ಕಿತ್ತಾಟ ಏನಿದ್ದರೂ ಸದನದ ಹೊರಗೆ ನಡೆಸಿ: ಯು.ಟಿ. ಖಾದರ್
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Kiccha Sudeepa: ಕ್ರಿಸ್ಮಸ್ ಗೆ ಬರುತ್ತಿದೆ ʼಮ್ಯಾಕ್ಸ್ʼ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.