ತಂಬಾಕು ಮುಕ್ತ ಸಮಾಜದ ಆಶಯ ನಮ್ಮದಾಗಲಿ


Team Udayavani, May 31, 2020, 4:18 PM IST

ತಂಬಾಕುಮುಕ್ತ ಸಮಾಜದ ಆಶಯ ನಮ್ಮದಾಗಲಿ

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಇಂದು ತಂಬಾಕು ವಿರೋಧಿ ದಿನ. ಇದರ ಪ್ರಯುಕ್ತ ವಿದ್ಯಾರ್ಥಿಯೊಬ್ಬರು ತಂಬಾಕು ಮುಕ್ತ ಸಮಾಜದ ಆಶಯಕ್ಕಾಗಿ ತನ್ನ ಅಭಿಪ್ರಾಯವನ್ನು ಇಲ್ಲಿ ಹಂಚಿಕೊಂಡಿದ್ದಾರೆ.

ಮಹಾಮಾರಿ ಕೋವಿಡ್ ವೈರಸ್‌ನಿಂದಾಗಿ ಇಂದು ಜಗತ್ತು ಮಮ್ಮಲ ಮರಗಿದೆ. ಲಕ್ಷಾಂತರ ಸಾವು-ನೋವು ಕಣ್ಮುಂದೆ ಕಾಣುವಂತಾಗಿದೆ. ಇದಲ್ಲದೇ ಅಲ್ಲಲ್ಲಿ ಮಿಡಿತೆ ದಾಳಿ, ಪಾಕೃತಿಕ ಅಸಮತೋಲದ ನಡುವೆ ಸಮಾಜವೂ ತಂಬಾಕು ಎಂಬ ವಿಷವೂ ಇಂದು ನಾಗರಿಕ ಸಮಾಜವನ್ನು ಬಹುವಾಗಿ ಕಾಡುತ್ತಿದೆ.

ತಂಬಾಕು ಕೇವಲ ಮನುಷ್ಯನಿಗೆ ಕ್ಷಣಿಕ ತೃಪ್ತಿನೀಡಬಹುದು. ಆದರೆ ಕ್ರಮೇಣವಾಗಿ ಮನುಷ್ಯನ ಜೀವನವನ್ನೇ ತೆಗೆದುಕೊಳ್ಳುತ್ತದೆ. ಕ್ಷಣಿಕ ಸುಖಕ್ಕಾಗಿ ತಂಬಾಕು ವ್ಯಸನಕ್ಕೆ ಮೊರೆಹೋಗಿ ಇಡೀ ಅಮೂಲ್ಯ ಬದುಕನ್ನು ಹಾಳು ಮಾಡಿಕೊಳ್ಳುತ್ತಿರುವುದು ನೋವಿನ ಸಂಗತಿಯಾಗಿದೆ.

ಸುಖ, ನೆಮ್ಮದಿ, ಸಂತೋಷ ಎಂಬುವುದು ಮನುಷ್ಯನ ಅತ್ಮರಾತ್ಮದಲ್ಲಿದೆ ಹೊರತು, ಬಾಹ್ಯ ವಸ್ತುಗಳಾದ ತಂಬಾಕು, ಹೊಗೆ ಸೊಪ್ಪಿನಲ್ಲಿಲ್ಲ. ಹೀಗಾಗಿ ತಂಬಾಕು ವಿರೋಧಿಯಾದ ಜಾಗೃತಿ ಮೂಡಿಸುವ ಅವಶ್ಯವಿದೆ.

ಮಾದಕ ವ್ಯಸನದಿಂದ ನಮ್ಮನ್ನು ನಾವು ಮರೆತು ಬೇರೆ ಯಾವುದೋ ಅಮಲಿನ ಲೋಕಕ್ಕೆ ಜಾರುತ್ತೇವೆ. ಅಮಲಿಗೆ ಪೂರಕ ವಸ್ತು ನೀಡದಿದ್ದರೆ ಅದನ್ನು ಪಡೆಯಲು ಏನು ಮಾಡುತ್ತಾರೆ ಎಂಬುದರ ಅರಿವೆ ಇರುವುದಿಲ್ಲ. ಅಷ್ಟರ ಮಟ್ಟಿಗೆ ಜನತೆ ಮಾದಕ ವಸ್ತುಗಳಿಗೆ ಅಂಟಿಕೊಂಡಿದ್ದಾರೆ.

ಇಂದು ಬಹುತೇಕ ವಿದ್ಯಾವಂತರೆನಿಸಿಕೊಂಡವರೇ ತಂಬಾಕು ಸೇವೆನೆಗೆ ಮುಂದಾಗುತ್ತಿರುವುದು ವಿಪರ್ಯಾಸ. ಇದಕ್ಕೆಂದೇ ದುಡಿಮೆಯಲ್ಲಿ ಬಹುತೇಕ ಹಣವನ್ನು ವೃಥಾ ಖರ್ಚು ಮಾಡುತ್ತಿದ್ದು, ಕುಟುಂಬ ಜವಾಬ್ದಾರಿ ವಹಿಸುವ ಮಕ್ಕಳೇ ಹೀಗೆ ವ್ಯರ್ಥ ಹಣ ಪೋಲು ಮಾಡುವುದರಿಂದಾಗಿ ಮುಂದೆ ಕುಟುಂಬವೂ ಆರ್ಥಿಕ ಸಮಸ್ಯೆ ಎದುರಿಸಲು ಸಮಸ್ಯೆಯಾಗುತ್ತದೆ. ವ್ಯಸನವೊಂದು ಮುಂದೆ ಕೆಟ್ಟ ಹವ್ಯಾಸವಾಗಿ ಪರಿವರ್ತನೆಗೊಂಡು ಅದು ಮಾನಸಿಕ ಖಿನ್ನತೆ, ಕೀಳರಿಮೆ, ಕೌಟುಂಬಿಕ ಒತ್ತಡಗಳಿಗೆ ಸಿಲುಕಿಸುತ್ತದೆ. ಕೊನೆಗೆ ತಂಬಾಕು ಸಾವಿಗೆ ತಂದು ನಿಲ್ಲಿಸುತ್ತದೆ.

ಪ್ರತಿ ವರ್ಷ ತಂಬಾಕು ಸೇವನೆಯಿಂದ ಸುಮಾರು 9 ಲಕ್ಷದಿಂದ- 10 ಲಕ್ಷ ಜನ ಸಾಯುತ್ತಿದ್ದಾರೆ ಎಂಬ ವರದಿಯೂ ಅಪಾಯಕಾರಿ ಎನಿಸುತ್ತದೆ. ಹೀಗಾಗಿ ತಂಬಾಕು ವಿರೋಧಿಗೆ ಈ ದಿನವೂ ಮುಡುಪಾಗಿರಲಿ, ನಮ್ಮ ಯುವ ಜನತೆಗೆ ಈ ದಿನವೂ ಪಾಠವಾಗಲಿ ಎಂಬ ಆಶಯ ನನ್ನದು.

ಮನುಷ್ಯನ ಪ್ರತಿಯೊಂದು ಸಮಸ್ಯೆಗೂ ಒಂದಲ್ಲ ಒಂದು ರೀತಿಯಲ್ಲಿ ಪರಿಹಾರ ಇದ್ದೇ ಇರುತ್ತದೆ. ಅದನ್ನು ಕಂಡುಕೊಳ್ಳಲು, ಮಾನಸಿಕ ಹಾಗೂ ದೈಹಿಕವಾಗಿ ತನ್ನನ್ನು ತಾನು ನಿಯಂತ್ರಿಸಿಕೊಳ್ಳಬೇಕಾಗುವುದು. ಅಲ್ಲದೇ ಸರಕಾರದ ಮಟ್ಟದಲ್ಲಿ ಇದು ಚರ್ಚೆಯಾಗಿ, ತಂಬಾಕು ಉತ್ಪನ್ನಗಳನ್ನು ನಿಷೇಧಿಸಬೇಕಿದೆ.

ತಂಬಾಕು ವ್ಯಸನದ ವಿರುದ್ಧ ಗ್ರಾಮ ಪಂಚಾಯತ್‌ ಮಟ್ಟದಿಂದಲೂ ಜಾಗೃತಿ ಮೂಡಿಸಬೇಕಿದೆ. ಇವುಗಳೆಲ್ಲ ಮುಕ್ತವಾಗಿ ದಿನಂಪ್ರತಿ ಯೋಗ, ಧ್ಯಾನಗಳಿಗೆ ಯುವ ಸಮುದಾಯ ಮೊರೆಹೋದಾಗ, ಇದರಿಂದ ಸ್ವಾಸ್ಥ್ಯ ಸಮಾಜ ಕಟ್ಟಲು ಸಾಧ್ಯ.

ತಂಬಾಕು ಸೇವನೆಯ ದುಷ್ಪರಿಣಾಮಗಳು:

1. ತಂಬಾಕು ಉತ್ಪನ್ನಗಳಲ್ಲಿ ಸುಮಾರು 4,600 ಕ್ಯಾನ್ಸರ್‌ ಸಂಬಂಧಿ ರಾಸಾಯನಿಕಗಳಿರುವುದರಿಂದ, ಇದು ಕ್ಯಾನ್ಸರ್‌ಗೆ ತುತ್ತಾಗುವಂತೆ ಮಾಡುತ್ತದೆ.

2. ರಕ್ತದೊತ್ತಡದಲ್ಲಿ ಹೆಚ್ಚಳವಾಗಿ, ಹೃದಯಾಘಾತ ಸಂಭವಿಸುವ ಸಾಧ್ಯತೆ.

3. ತಂಬಾಕು ಸೇವನೆ ಶೇ.95ರಷ್ಟು ಬಾಯಿಯ ಕ್ಯಾನ್ಸರ್‌, ಗಂಟಲು ಕ್ಯಾನ್ಸರ್‌ನ ಮೂಲ.

4. ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

5. ಮಾನಸಿಕ ಕಿರಿಕಿರಿ, ಖಿನ್ನತೆ ಒಳಗಾಗಬೇಕಾಗುತ್ತದೆ.

6. ತಂಬಾಕಿನ ಉತ್ಪನ್ನಗಳನ್ನು ಬಳಸುವುದರಿಂದ ಚರ್ಮವು ಒಣಗಿ, ಸುಕ್ಕುಗಟ್ಟಿದಂತಾಗುತದೆ.

7. ಮೂಳೆ ಮಾಂಸಗಳ ಬೆಳವಣಿಗೆ ಆಮ್ಲಜನಕ ಸಿಗದೆ ದೇಹವು ಅಶಕ್ತತೆಗೆ ಒಳಗಾಗುತ್ತದೆ.


– ಶಿವರಾಜ ಕಮ್ಮಾರ್‌, ಮಾಚೇನಹಳ್ಳಿ

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

16

Uv Fusion: ಪೆನ್ನಿಗೊಂದು ಕಥೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.