ಸವಾಲಿನ ಮಧ್ಯೆ ಇಂದಿನಿಂದ ಬಸ್ ಸಂಚಾರ
ರಸ್ತೆಗಿಳಿಯಲಿವೆ ಸುಮಾರು 300ರಷ್ಟು ಖಾಸಗಿ ಬಸ್‌ಗಳು
Team Udayavani, Jun 1, 2020, 5:17 AM IST
ಮಂಗಳೂರು: ಲಾಕ್‌ಡೌನ್ ಹಿನ್ನೆಲೆಯಲ್ಲಿ ಸುಮಾರು 2 ತಿಂಗಳ ಬಳಿಕ ಸೋಮವಾರದಿಂದ ದ.ಕ. ಜಿಲ್ಲೆಯಲ್ಲಿ ಖಾಸಗಿ ಬಸ್ ಸಂಚಾರ ಆರಂಭಗೊಳ್ಳಲಿದೆ.
ನಗರದಿಂದ ಒಟ್ಟು 130ರಷ್ಟು ಸಿಟಿ ಬಸ್‌ಗಳು, ಸುಮಾರು 150ರಷ್ಟು ಖಾಸಗಿ ಬಸ್‌ಗಳು, ಸುಮಾರು 25 ರಷ್ಟು ಕಾಂಟ್ರಾಕ್ಟ್ ಕ್ಯಾರೇಜ್ ಬಸ್‌ಗಳು ಸಂಚಾರ ನಡೆಸುವ ಸಾಧ್ಯತೆ ಇದೆ. ಎಲ್ಲ ರೂಟ್‌ಗಳಲ್ಲಿ ಶೇ.50ರಷ್ಟು ಬಸ್ ಸಂಚರಿಸಲಿವೆ. ಮಂಗಳೂರಿನಿಂದ ಉಡುಪಿ, ಕೊಲ್ಲೂರು, ಕುಂದಾಪುರ ಸಹಿತ ವಿವಿಧ ಭಾಗಗಳಿಗೆ ಖಾಸಗಿ ಬಸ್‌ಗಳು ಮತ್ತು ಮಂಗಳೂರಿನಿಂದ ಉಪ್ಪಿನಂಗಡಿ, ಪುತ್ತೂರು, ವಿಟ್ಲಕ್ಕೆ ಕಾಂಟ್ರಾಕ್ಟ್ ಕ್ಯಾರೇಜ್ ಬಸ್‌ಗಳು ಸಂಚರಿಸಲಿವೆ.
ಎರಡು ತಿಂಗಳಿನಿಂದ ಮನೆಯಲ್ಲೇ ಬಾಕಿಯಾಗಿದ್ದ ಕರಾವಳಿಯ ಅನೇಕ ಮಂದಿ ಸೋಮವಾರ ಬಸ್‌ಗಳ ಮೂಲಕ ಉದ್ಯೋಗಕ್ಕೆ ತೆರಳುವ ಸಾಧ್ಯತೆ ಅಧಿಕ.
ಟಿಕೆಟ್ ದರ ಪರಿಷ್ಕರಣೆ
ಸಿಟಿಬಸ್‌ಗಳ ಕನಿಷ್ಠ ಪ್ರಯಾಣ ದರವನ್ನು 8ರಿಂದ 10 ರೂ.ಗೆ ಏರಿಸ ಲಾಗಿದೆ. ಅದಕ್ಕೆ ಹೊಂದಿಕೊಂಡು ಪ್ರತಿ ಸ್ಟೇಜ್‌ನ ಟಿಕೆಟ್ ದರವೂ ಏರಿಕೆಯಾಗಿದೆ.
130 ಸಿಟಿಬಸ್
ಮಂಗಳೂರು ನಗರದಲ್ಲಿ ಸುಮಾರು 130ರಷ್ಟು ಸಿಟಿ ಬಸ್‌ಗಳು ಸೋಮವಾರದಿಂದ ಸಂಚಾರ ನಡೆಸುತ್ತವೆ. ಚಾಲಕರು ಮತ್ತು ನಿರ್ವಾಹಕರಿಗೆ ಈಗಾಗಲೇ ಸೂಚನೆ ನೀಡಿದ್ದೇವೆ. ಮಂಗಳೂರು ನಗರದಲ್ಲಿ ಬೆಳಗ್ಗೆ 6 ಗಂಟೆಗೆ ಆರಂಭವಾದ ಬಸ್ ಸೇವೆ ರಾತ್ರಿ 7 ಗಂಟೆಯವರೆಗೂ ಇರುತ್ತದೆ. ಸಾರ್ವಜನಿಕರು ಕೆಲಸಕ್ಕೆಂದು ತೆರಳುವ ಸಮಯದಲ್ಲಿ ಆಯಾ ರೂಟ್‌ಗೆ ಹೆಚ್ಚಿನ ಬಸ್ ವ್ಯವಸ್ಥೆ ಕಲ್ಪಿಸುತ್ತೇವೆ ಎಂದು ಸಿಟಿ ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ ತಿಳಿಸಿದ್ದಾರೆ.
150 ಖಾಸಗಿ ಬಸ್
ಮೊದಲನೇ ಹಂತದಲ್ಲಿ ಸುಮಾರು 150ರಷ್ಟು ಖಾಸಗಿ ಬಸ್‌ಗಳು ಸಂಚರಿಸ ಲಿವೆ. ಚಾಲಕರು – ನಿರ್ವಾಹಕರಿಗೆ ಸೂಚನೆ ನೀಡಿದ್ದೇವೆ. ಬಸ್ ಮಾಲಕರು ಈಗಾಗಲೇ ಸಂಕಷ್ಟದಲ್ಲಿದ್ದು, ಉಭಯ ಜಿಲ್ಲೆಗಳಲ್ಲಿ ಖಾಸಗಿ ಮತ್ತು ಸಿಟಿ ಬಸ್‌ಗಳಿಗೆ ಶೇ.15ರಷ್ಟು ಬಸ್ ದರ ಹೆಚ್ಚಳ ಮಾಡಲಾಗಿದೆ. ಪ್ರಯಾಣಿಕರ ಸಹಕಾರವೂ ಮುಖ್ಯ ಎಂದು ರಾಜ್ಯ ಖಾಸಗಿ ಬಸ್ ಮಾಲಕರ ಒಕ್ಕೂಟದ ಅಧ್ಯಕ್ಷ ರಾಜವರ್ಮ ಬಲ್ಲಾಳ್ ತಿಳಿಸಿದ್ದಾರೆ.
25 ಕಾಂಟ್ರಾಕ್ಟ್ ಬಸ್
ಮಂಗಳೂರು ನಗರದಲ್ಲಿ ಸುಮಾರು 25ರಷ್ಟು ಕಾಂಟ್ರಾಕ್ಟ್ ಕ್ಯಾರೇಜ್ ಬಸ್‌ಗಳು ಉಪ್ಪಿನಂಗಡಿ, ವಿಟ್ಲ ಮತ್ತು ಪುತ್ತೂರು ಭಾಗಗಳಿಗೆ ಸಂಚರಿಸಲಿವೆ. ಒಂದು ವೇಳೆ ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದರೆ ಮತ್ತಷ್ಟು ಬಸ್‌ಗಳನ್ನು ರಸ್ತೆಗಿಳಿಸಲು ನಿರ್ಧರಿಸಿದ್ದೇವೆ. ರಾಜ್ಯ ಸರಕಾರದ ಮಾರ್ಗಸೂಚಿಯಂತೆ ಕಾರ್ಯನಿರ್ವಹಿಸುತ್ತೇವೆ ಎಂದು ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಮಾಲಕರ ಸಂಘದ ಅಧ್ಯಕ್ಷ ಜಯರಾಮ ಶೇಖ ತಿಳಿಸಿದ್ದಾರೆ.
ಎಂದಿನಂತೆ ನಿಗದಿತ ಪ್ರದೇಶದಲ್ಲಿ ಬಸ್ ನಿಲುಗಡೆ
ಬೆಳಗ್ಗೆ 7ರಿಂದ ರಾತ್ರಿ 7 ಗಂಟೆ ವರೆಗೆ ಬಸ್ ಸಂಚಾರ ಇರ ಲಿದೆ. ಚಾಲಕರು ಮತ್ತು ನಿರ್ವಾಹಕರು ಗ್ಲೌಸ್ ಮತ್ತು ಮಾಸ್ಕ್ ಧರಿಸಲಿದ್ದು, ಪ್ರಯಾಣಿಕರಿಗೂ ಮಾಸ್ಕ್ ಕಡ್ಡಾಯ. ಪ್ರತಿ ಬಸ್‌ನಲ್ಲಿ ಶೇ.50ರಷ್ಟು ಪ್ರಯಾಣಿಕರಿರ ಲಿದ್ದು, ಎರಡು ಮಂದಿಯ ಆಸನಗಳಲ್ಲಿ ಒಬ್ಬರು ಮತ್ತು 3 ಮಂದಿಯ ಆಸನಗಳಲ್ಲಿ ಇಬ್ಬರಿಗೆ ಅವಕಾಶವಿದೆ. ನಿಂತು ಪ್ರಯಾಣಕ್ಕೆ ಅವಕಾಶವಿಲ್ಲ.
ಪ್ರಯಾಣಿಕರಿಗೆ ಬಸ್ ಹತ್ತುವುದಕ್ಕೂ ಮುನ್ನ ಸ್ಯಾನಿಟೈಸರ್ ನೀಡಲಾಗುತ್ತದೆ. ಎಂದಿನಂತೆ ನಿಗದಿತ ಪ್ರದೇಶದಲ್ಲಿ ಬಸ್ ನಿಲುಗಡೆ ಇರಲಿದ್ದು, ದಾರಿಯಲ್ಲಿ ಇಳಿದ ವ್ಯಕ್ತಿಯ ಬದಲಾಗಿ ಮತ್ತೂಬ್ಬರಿಗೆ ಅವಕಾಶ ನೀಡಲಾಗುತ್ತದೆ. ಪ್ರತಿ ದಿನ ಸಂಚಾರ ಆರಂಭಕ್ಕೆ ಮೊದಲು ಬಸ್ಸನ್ನು ಸ್ಯಾನಿಟೈಸ್ ಮಾಡಲಾಗುತ್ತದೆ ಎನ್ನುತ್ತಾರೆ ಮಾಲಕರು.
ಮಾರ್ಗಸೂಚಿ ಪಾಲನೆ
ಸೋಮವಾರದಿಂದ ಖಾಸಗಿ ಮತ್ತು ಸಿಟಿ ಬಸ್ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದೇವೆ. ಬಸ್ ಕಾರ್ಯಾಚರಣೆಯ ವೇಳೆ ಅನುಸರಿಸಬೇಕಾದ ಮಾರ್ಗಸೂಚಿಯನ್ನು ಬಸ್ ಮಾಲಕರಿಗೆ ಈಗಾಗಲೇ ತಿಳಿಸಲಾಗಿದೆ. ಮಾರ್ಗಸೂಚಿ ಪಾಲನೆ ಕಡ್ಡಾಯ.
-ಆರ್.ಎಂ. ವರ್ಣೇಕರ್‌ಮಂಗಳೂರು ಆರ್‌ಟಿಒ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Gangolli: ಪಂಚಾಯತ್‌ನೊಳಗೆ ನಮಾಜ್; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
ನಾನು ಶೀಶಮಹಲ್ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.