ಶ್ರೀಮಂತನಷ್ಟೇ ಅಲ್ಲ ಉದಾರಿ ಬಿಲ್‌ಗೇಟ್ಸ್‌ ; ಅರ್ಧದಲ್ಲೇ ಶಾಲೆ ಬಿಟ್ಟವ, ಸಾಧಕನಾದ


Team Udayavani, Jun 1, 2020, 3:30 AM IST

ಶ್ರೀಮಂತನಷ್ಟೇ ಅಲ್ಲ ಉದಾರಿ ಬಿಲ್‌ಗೇಟ್ಸ್‌ ; ಅರ್ಧದಲ್ಲೇ ಶಾಲೆ ಬಿಟ್ಟವ, ಸಾಧಕನಾದ

ಎಷ್ಟೋ ಬಾರಿ ಬೆಳಕಿನಂತೆ ಪ್ರಜ್ವಲಿಸಿದವರು ತಮ್ಮದೇ ಆದ ಕತ್ತಲೆಯೊಳಗೆ ಕರಗಿ ಹೋಗುವ ಸಂದರ್ಭಗಳೇ ಹೆಚ್ಚು, ಬೆಳಕು ಬೆಳಕಾಗಿಯೇ ಇರುವುದು ವಿರಳ.

ಸಾಧನೆ ಎಂಬುದು ಸೋಮಾರಿಯ ಸ್ವತ್ತಲ್ಲ, ಅದು ಸಾಧಕನೂ ಸ್ವತ್ತು ಎಂಬ ಮಾತಿಗೆ ಅನ್ವರ್ಥವಾಗಿ ಅದೆಷ್ಟೂ ಸಾಧಕರನ್ನು ನಾವು ಗುರುತಿಸಬಹುದಾಗಿದೆ.

ಅವರೂ ತಮ್ಮ ಬಡತನ ಹಾಗೂ ಸಂಕಷ್ಟಗಳ ಮಧ್ಯೆ ಬೆಂಕಿಯಲ್ಲಿ ಅರಳಿದ ಹೂವಿನಂತೆ, ತಮ್ಮ ಸಾಧನೆಯ ಮೂಲಕ ಅರಳಿದ್ದಾರೆ. ಅಂತಹವರಲ್ಲಿ ದೈತ್ಯ ಮೈಕ್ರೋಸಾಫ್ಟ್ ಸಾಫ್ಟ್ ವೇರ್‌ ಕಂಪೆನಿಯ ಹರಿಕಾರ ಹಾಗೂ ಸಹ ಸಂಸ್ಥಾಪಕ ಬಿಲ್‌ ಗೇಟ್ಸ್‌ ಕೂಡ ಒಬ್ಬರು.

ಮೈಕ್ರೋಸಾಫ್ಟ್ ಕಂಪೆನಿಯನ್ನು ತಮ್ಮ 33 ವಯಸ್ಸಿನಲ್ಲಿ ಸ್ಥಾಪಿಸಿ, ಕೇಲವೇ ವರ್ಷಗಳಲ್ಲಿ ಅದನ್ನು ಉತ್ತುಂಗದ ಸ್ಥಾನಕ್ಕೆ ಒಯ್ದು, ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದವರು ಬಿಲ್‌ ಗೇಟ್ಸ್‌ . ಅವರ ಬದುಕು, ಸಾಧನೆಯ ಹಾದಿ ನಮ್ಮೆಲ್ಲರಿಗೂ ಸ್ಫೂರ್ತಿಯಾಗುವುದಂತೂ ಸತ್ಯ.

ವಿಲಿಯಂ ಬಿಲ್‌ ಗೇಟ್ಸ್‌ ಹುಟ್ಟುತ್ತಲೇನೂ ಶ್ರೀಮಂತ ಮನೆತನದಲ್ಲಿ ಹುಟ್ಟಿದವರಲ್ಲ, ಅವರೂ ಸಾಮಾನ್ಯ ಮನೆತನದ ವಿಲಿಯಂ ಗೇಟ್ಸ್‌ ಹಾಗೂ ಮೇರಿ ಮ್ಯಾಕ್ಸವೇಲ್‌ ಗೇಟ್ಸ್‌ ದಂಪತಿ ಯ ಉದರದಲ್ಲಿ 1955ರ ಅಕ್ಟೋಬರ್‌, 28 ರಂದು ಜನಿಸಿದರು.

ಬಡತನ ಎಂಬುದು ಶಾಪವಲ್ಲ, ವರ
ಬಿಲ್‌ಗೇಟ್ಸ್‌ ಪ್ರಕಾರ ಬಡತನ ಎಂಬುದು ಶಾಪವಲ್ಲ, ಅದು ವರ. ಅವರೇ ಹೇಳುವಂತೆ, ಯಾವುದೇ ವ್ಯಕ್ತಿಯೂ ಬಡತನದಲ್ಲಿ ಹುಟ್ಟಿರುವುದೂ ನಮ್ಮ ತಪ್ಪಲ್ಲ, ಆದರೆ, ಬಡತನದಲ್ಲಿ ಸಾಯುವುದು ನಮ್ಮ ತಪ್ಪು ಎಂದು ಹೇಳುವ ಬಿಲ್‌ ಗೇಟ್ಸ್‌ ಅವರೂ, ಬಡತನವೂ ಸಾಧನೆಗೆ ಎಂದೂ ಅಡ್ಡಿಯಲ್ಲ, ಸಾಧಿಸುವ ಛಲ ಹಾಗೂ ಛಾತಿ ಈ ಎರಡೂ ಇದ್ದರೇ ಸಾಕು.

ತಾಳ್ಮೆಯೇ ಸಾಧನೆಯ ಮೆಟ್ಟಿಲು
ಜೀವನದಲ್ಲಿ ನಾವು ತಾಳ್ಮೆ ಕಳೆದುಕೊಳ್ಳವುದು ಸಹಜ. ಏಕೆಂದರೆ ಸಂದರ್ಭ ಹಾಗಿರುತ್ತದೆ. ಬಿಲ್‌ಗೇಟ್ಸ್‌ ಹೇಳುವಂತೆ ಸಾಧಕನೂ ಯಾವಾಗಲೂ ತಾಳ್ಮೆಯಿಂದಿರಬೇಕು. ಎಡವುದು ಸಹಜ. ಅನಂತರ ತಾಳ್ಮೆಯ ಔಷಧಿ ಹಚ್ಚಿದರೆ, ಮುಂದೆ ಅವಕಾಶಗಳು ಒದಗಿಬರುತ್ತವೆ. ಇದೇ ಸಾಧನೆಯ ಮೊದಲ ಮೆಟ್ಟಿಲು ಆಗುವುದಂತೂ ಖಚಿತ.

ಸಾಮರ್ಥ್ಯವನ್ನು ನಿರ್ಲಕ್ಷಿಸದಿರು
ನಮ್ಮಲ್ಲಿರುವ ಕೊರತೆಗಳನ್ನು ಇನ್ನೊಬ್ಬರು ಅಳವಡಿಸಿಕೊಳ್ಳುವುದು ಸಹಜ. ಆದರೆ ಇದು ತಪ್ಪು, ಅವರಿಗಿಂತ ಭಿನ್ನ ಆಲೋಚನೆ ಹಾಗೂ ಪ್ರತಿಭೆ ನಮ್ಮಲ್ಲಿರುತ್ತದೆ. ಅದು ಹೊರ ತೆಗೆದು ಮುನ್ನಡೆದಾಗ ನಾವು ಸಾಧನೆಗೆ ಮುಂದಾಗಬಹುದು.

ಶ್ರೀಮಂತ ಅಷ್ಟೇ ಅಲ್ಲ, ಉದಾರಿ
ಬಿಲ್‌ಗೇಟ್ಸ್‌ ಜಗತ್ತಿನ ಮೊದಲ ಶ್ರೀಮಂತ ಅಷ್ಟೇ ಅಲ್ಲ, ಆತ ಅಷ್ಟೇ ಉದಾರಿಯೂ ಕೂಡ ಹೌದು. 1994ರಲ್ಲಿ ಪತ್ನಿ ಮಿಲಿಂದಾ ಜತೆಗೂಡಿ, ಗೇಟ್ಸ್‌ ಹಾಗೂ ಮಿಲಿಂದಾ ಫೌಂಡೇಶನ್‌ ಆರಂಭಿಸಿ, ಆರೋಗ್ಯ ಮತ್ತು ಶಿಕ್ಷಣದಲ್ಲಿ ಸುಧಾರಿಸಿ, 2030ರಷ್ಟರಲ್ಲೇ, ಬಡತನ ನಿರ್ಮೂಲನೆ ಮಾಡಬೇಕೆಂಬ ಸಂಕಲ್ಪದೊಂದಿಗೆ ಮಿಲಿಯನ್‌ ಡಾಲರ್‌ ಹಣವನ್ನು ಉದಾರವಾಗಿ ದಾನ ಮಾಡಿದ್ದಾನೆ. 2000ರಲ್ಲಿ ಸುಮಾರು 29,900 ಕೋ. ರೂ. ಹಣವನ್ನು ದಾನ ಮಾಡಿದ್ದಾನೆ.

ಪಕ್ಕ ಲೆಕ್ಕಾಚಾರ ಮನುಷ್ಯ
ಬಿಲ್‌ಗೇಟ್ಸ್‌ ಪಕ್ಕಾ ಲೆಕ್ಕಾಚಾರದ ಮನುಷ್ಯ. ಆತ ಒಂದು ರೂಪಾಯಿ ಬಂಡವಾಳ ಹೂಡಿದರೆ, 100 ರೂ. ಲಾಭ ಗಳಿಸಬೇಕು ಎಂಬಷ್ಟು ಲೆಕ್ಕಾಚಾರದ ಮನುಷ್ಯ. ಅದಕ್ಕೆ ಸಾಕ್ಷಿ ಎಂಬಂತೆ ಸಂದರ್ಶನದಲ್ಲಿ ನೀವು ನನಗೆ ನೂರು ಕೊಡಿ, ಒಂದು ವರ್ಷದಲ್ಲಿ, ಒಂದು ಕೋಳಿ ಮೂಲಕ ಲಕ್ಷಾಧಿಪತಿಯಾಗುತ್ತೇನೆ ಎಂಬ ಮಾತೇ ಆತನ ಸಾಧನೆ ಬದುಕಿಗೆ ಹಿಡಿದ ಕೈಗನ್ನಡಿ.

ಬಿಲ್‌ಗೇಟ್ಸ್‌ ಅವರೇನೂ ಓದಿನಲ್ಲಿ ಮುಂದಿರಲಿಲ್ಲ, ಆದರೆ ಆತನ ಮಾರ್ಕ್‌ ಕಾರ್ಡ್‌ನಲ್ಲಿ ಎಲ್ಲ ವಿಷಯಗಳಲ್ಲಿ ಫೇಲ್‌ ಆದರೆ, ಕಂಪ್ಯೂಟರ್‌ ಸೈನ್ಸ್‌ ಮಾತ್ರ ಆತನ ಅಂಕ ಮೊದಲಿನ ಸ್ಥಾನದಲ್ಲಿರುತ್ತಿತ್ತು. ಮುಂದೆ ಹಾರ್ವರ್ಡ್‌ ವಿವಿಯಲ್ಲಿ ಓದು ಆರಂಭಿಸಿದ ಬಿಲ್‌ಗೇಟ್ಸ್ , ಯಾವಾಗಲೂ ಕಂಪ್ಯೂಟರ್‌ ಮುಂದೇ ಇರುತ್ತಿದ್ದ.

ಮುಂದೆ ಯೋಚನೆಯಂತೆ, ಅರ್ಧದಲ್ಲಿ ಹಾರ್ವರ್ಡ್‌ ವಿವಿಯನ್ನು ಬಿಟ್ಟು 1973ರಲ್ಲಿ ಪಾಲ್‌ ಅಲೇನ್‌ ಜತೆಗೂಡಿ ಮೈಕ್ರೋಸಾಫ್ಟ್ ಎಂಬ ಸಾಫ್ಟ್ವೇರ್‌ ಕಂಪೆನಿಯನ್ನು ಸ್ಥಾಪಿಸುತ್ತಾನೆ. ಆಗ ಆತನಿಗೆ ಕೇವಲ 30 ವರ್ಷ. ಚಿಕ್ಕ ವಯಸ್ಸಿನಲ್ಲಿ ಇಂತಹ ಸಾಹಸಕ್ಕೆ ಕೈ ಹಾಕಿ, ಗೆಲ್ಲುತ್ತಾನೆ. ಆದರೆ ಅವರ ಗೆಲುವಿನ ಬಗ್ಗೆ ಅವರ ಅಭಿಪ್ರಾಯ ಏನು? ಈ ಸಾಧನೆಗೆ ಅವರು ಅನುಸರಿಸಿದ ಮಾರ್ಗದರ್ಶನಗಳೇನು ಎಂಬ ಮಾತುಗಳನ್ನು ಹಂಚಿಕೊಳ್ಳುವುದು ಸೂಕ್ತ.

– ಶಿವ, ರಾಯಚೂರು

ಟಾಪ್ ನ್ಯೂಸ್

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ

ಅಗ್ಗಕ್ಕೆ ಸೇಲಾದ ಪಾಂಡೆ, ಬೆಂಗಳೂರಿಗೆ ಬಂದ ಆಸೀಸ್‌ ಆಟಗಾರ

IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್‌ ಗೆ ಬಂಪರ್‌, ಬೆಂಗಳೂರಿಗೆ ಬಂದ ಡೇವಿಡ್

1-Chamundeshwari

Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ

chetah

Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ

1-adani

Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ

K.-J.-George

ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು

Waqf; Donated property is different, writing the property to the Waqf Board is different: C.T. Ravi

Waqf; ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್‌ ಬೋರ್ಡ್‌ ಗೆ ಬರೆಯುವುದು ಬೇರೆ: ಸಿ.ಟಿ ರವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20-uv-fusion

UV Fusion: ಜೀವಂತಿಕೆ

19-uv-fusion

Garbage Disposal: ಕಸದ ಸೂಕ್ತ ವಿಲೇವಾರಿ ನಮ್ಮದೇ ಜವಾಬ್ದಾರಿ

18-uv-fusion

UV Fusion: ನಿಸ್ವಾರ್ಥ ಜೀವ

16-pongal

Pongal: ಹೀಗೊಂದು ಪೊಂಗಲ್‌ ಪ್ರಯೋಗ

15-uv-fusion

Pendulum Wall Clock: ನಮ್ಮ ಮನೆಯಲ್ಲಿ ಒಂದು ಅದ್ಭುತ ಇದೆ ಗೊತ್ತಾ?

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

4

Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್‌ ಬಾಟಲಿ ಸದ್ದು  

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ

ಅಗ್ಗಕ್ಕೆ ಸೇಲಾದ ಪಾಂಡೆ, ಬೆಂಗಳೂರಿಗೆ ಬಂದ ಆಸೀಸ್‌ ಆಟಗಾರ

IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್‌ ಗೆ ಬಂಪರ್‌, ಬೆಂಗಳೂರಿಗೆ ಬಂದ ಡೇವಿಡ್

1-Chamundeshwari

Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ

chetah

Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.