ಪಾಲಿಕೆ ಒಡೆತನದ ಕಟ್ಟಡಗಳ ಮೇಲೆ ಶೀಘ್ರ ಸೌರ ಘಟಕ

ಯೋಜನೆಗಿದ್ದ "ದರ ಗೊಂದಲ' ತೊಡಕು ನಿವಾರಣೆ

Team Udayavani, Jun 1, 2020, 8:08 AM IST

ಪಾಲಿಕೆ ಒಡೆತನದ ಕಟ್ಟಡಗಳ ಮೇಲೆ ಶೀಘ್ರ ಸೌರ ಘಟಕ

ಸಾಂದರ್ಭಿಕ ಚಿತ್ರ

ಹುಬ್ಬಳ್ಳಿ: ಸ್ಮಾರ್ಟ್‌ಸಿಟಿ ಯೋಜನೆಯ ಸೋಲಾರ್‌ ಯೋಜನೆಗಿದ್ದ ತೊಡಕು ನಿವಾರಣೆಯಾಗಿದೆ. ಐದನೇ ಬಾರಿಗೆ ಕರೆದಿರುವ ಟೆಂಡರ್‌ ಬಹುತೇಕ ಪೂರ್ಣಗೊಳ್ಳುವ ಭರವಸೆ ಮೂಡಿದ್ದು, ಮಹಾನಗರ ಪಾಲಿಕೆ ಒಡೆತನದ ಪ್ರಮುಖ ಕಟ್ಟಡಗಳ ಮೇಲೆ ಸೋಲಾರ್‌ ಪ್ಯಾನಲ್‌ ಅಳವಡಿಕೆ ಕಾರ್ಯ ಆರಂಭಗೊಳ್ಳುವ ವಿಶ್ವಾಸ ಮೂಡಿಸಿದೆ.

ಆಯ್ದ ಸರಕಾರಿ ಕಟ್ಟಡಗಳ ಮೇಲೆ ಸೋಲಾರ್‌ ಪ್ಯಾನಲ್‌ ಅಳವಡಿಕೆಗೆ ಯೋಜನೆ ರೂಪಿಸಲಾಗಿದೆ. ಖಾಸಗಿ ಸಹಭಾಗಿತ್ವದಡಿ ಸೋಲಾರ್‌ ವಿದ್ಯುತ್‌ ಉತ್ಪಾದನೆಗೆ ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಒತ್ತು ನೀಡಲಾಗಿದೆ. ಆದರೆ ರಾಜ್ಯದ ಪ್ರತಿ ಯುನಿಟ್‌

ಖರೀದಿಯ ದರ ದೊಡ್ಡ ಕಗ್ಗಂಟಾಗಿ ಪರಿಣಿಮಿಸಿದ್ದರ ಪರಿಣಾಮ ಕಳೆದ ನಾಲ್ಕು ಬಾರಿ ಟೆಂಡರ್‌ ಕರೆದರೂ ಗುತ್ತಿಗೆದಾರರು ಮುಂದೆ ಬಂದಿರಲಿಲ್ಲ. ಕರ್ನಾಟಕ ಎಲೆಕ್ಟ್ರಿಕಲ್‌ ರೆಗ್ಯುಲೇಶನ್‌ ಕಾರ್ಪೊರೇಶನ್‌ ಪ್ರತಿ ಯುನಿಟ್‌ ಸೋಲಾರ್‌ ವಿದ್ಯುತ್‌ಗೆ 3.20 ರೂ. ನಿಗದಿ ಮಾಡಿದ್ದು, ಗುತ್ತಿಗೆದಾರರು ಕನಿಷ್ಠ 5-6 ರೂ. ನಿಗದಿಪಡಿಸಿದರೆ ಮಾತ್ರ ಸಾಧ್ಯ ಎಂದು ಪಟ್ಟು ಹಿಡಿದಿದ್ದರು.

ಕಂಪೆನಿಯಿಂದ ಭರಣ: ನಾಲ್ಕು ಬಾರಿ ಟೆಂಟರ್‌ ಕರೆದರೂ ಯಾವ ಗುತ್ತಿಗೆದಾರರು ಮನಸ್ಸು ಮಾಡಿರಲಿಲ್ಲ. ದರ ವ್ಯತ್ಯಾಸ ಸರಿದೂಗಿಸದಿದ್ದರೆ ಯೋಜನೆ ಸಾಕಾರಗೊಳ್ಳುವುದಿಲ್ಲ ಎಂಬುದರಿತು ರಾಜ್ಯಮಟ್ಟದಲ್ಲಿ ಕರ್ನಾಟಕ ಎಲೆಕ್ಟ್ರಿಕಲ್‌ ರೆಗ್ಯುಲೇಶನ್‌ ಕಾರ್ಪೊರೇಶನ್‌ ವಿಧಿಸಿರುವ ಪ್ರತಿ ಯುನಿಟ್‌ ದರ ಹಾಗೂ ಗುತ್ತಿದಾರರು ಬಯಸುವ ದರದಲ್ಲಿ ವ್ಯತ್ಯಾಸವನ್ನು ಸ್ಮಾರ್ಟ್‌ಸಿಟಿ ಕಂಪೆನಿ ಭರಿಸುವ ಆಧಾರದಲ್ಲಿ ಒಪ್ಪಿಗೆ ನೀಡಿದೆ. ನಿರ್ವಹಣಾ ಅವಧಿಯಲ್ಲಿ ಕೂಡ ಒಂದಿಷ್ಟು ಮಾರ್ಪಾಡು ಮಾಡಿ ಟೆಂಡರ್‌ ಮಾದರಿ ಬದಲಿಸಿ ಟೆಂಡರ್‌ ಕರೆದಿರುವುದರಿಂದ ಈ ಬಾರಿ ಗುತ್ತಿಗೆದಾರರು ಪಾಲ್ಗೊಳ್ಳುವ ನಿರೀಕ್ಷೆ ಮೂಡಿಸಿದೆ. ಈಗಾಗಲೇ ಮೂರು ಪ್ರತಿಷ್ಠಿತ ಗುತ್ತಿಗೆದಾರರು ಈ ಕುರಿತು ವಿಚಾರಣೆ ಮಾಡಿದ್ದಾರೆ. ಜೂ.30 ರೊಳಗೆ ಟೆಂಡರ್‌ ಪ್ರಕ್ರಿಯೆ ಬಹುತೇಕ ಪೂರ್ಣಗೊಳ್ಳಲಿದ್ದು, ಪಾಲಿಕೆ ಕಟ್ಟಡಗಳ ಮೇಲೆ ಸೋಲಾರ್‌ ಪ್ಯಾನಲ್‌ ಅಳವಡಿಕೆ ಆರಂಭವಾಗಲಿದೆ ಎನ್ನುವ ವಿಶ್ವಾಸ ಸ್ಮಾರ್ಟ್‌ಸಿಟಿ ಯೋಜನೆ ಅಧಿಕಾರಿಗಳಲ್ಲಿದೆ.

ಟೆಂಡರ್‌ ಮಾದರಿಯಲ್ಲಿ ಮಾತ್ರ ಮಾರ್ಪಾಡಾಗಿದ್ದು, ಸೋಲಾರ್‌ ಪ್ಯಾನೆಲ್‌ ಅಳವಡಿಸಲು ಆಯ್ಕೆ ಮಾಡಿದ ಕಟ್ಟಡಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಹಿಂದೆ ನಿರ್ಧರಿಸಿದಂತೆ ಪಾಲಿಕೆ ಒಡೆತನದಲ್ಲಿರುವ 180 ಕಟ್ಟಡಗಳ ಪೈಕಿ ಉತ್ತಮ ಹಾಗೂ ಹೆಚ್ಚು ವಿದ್ಯುತ್‌ ಬಳಸುವ 11 ಕಟ್ಟಡಗಳನ್ನು ಮೊದಲ ಹಂತದಲ್ಲಿ ಆಯ್ಕೆ ಮಾಡಲಾಗಿದೆ. ಮುಂದೆ ಎಲ್ಲಾ ಸರಕಾರಿ ಕಚೇರಿಗಳ ಕಟ್ಟಡಗಳ ಮೇಲೆ ಸೋಲಾರ್‌ ಪ್ಯಾನೆಲ್‌ ಅಳವಡಿಸಿ ವಿದ್ಯುತ್‌ ಸ್ವಾವಲಂಬಿ ಕಚೇರಿಗಳನ್ನಾಗಿ ಮಾಡುವ ಉದ್ದೇಶವಿದೆ.

ಐದು ಕೋಟಿ ಯೋಜನೆ :  11 ಕಟ್ಟಡಗಳು ಸೋಲಾರ್‌ ವಿದ್ಯುತ್‌ ಹೊಂದಲಿದ್ದು, ಒಟ್ಟು 340 ಕಿಲೋವ್ಯಾಟ್‌ ಸೋಲಾರ್‌ ವಿದ್ಯುತ್‌ ಉತ್ಪಾದನೆ ಗುರಿ ಹೊಂದಲಾಗಿದೆ. ಇದೀಗ ಮಹಾನಗರ ಪಾಲಿಕೆ ವಾಣಿಜ್ಯ ದರದಲ್ಲಿ ಹೆಸ್ಕಾಂಗೆ ವಿದ್ಯುತ್‌ ಬಳಕೆ ಪಾವತಿ ಮಾಡುತ್ತಿದ್ದು, ಸೋಲಾರ್‌ ವಿದ್ಯುತ್‌ ಪಡೆಯುವುದರಿಂದ ಖರ್ಚು ಕೂಡ ಕಡಿಮೆ ಆಗಲಿದೆ ಎನ್ನುವ ಅಭಿ ಪ್ರಾಯ ಅಧಿಕಾರಿಗಳಲ್ಲಿದೆ. ಸೋಲಾರ್‌ ಪ್ಯಾನಲ್‌ ಅವಳಡಿಕೆಗೆ ನೆಹರು ಮೈದಾನದ ಕಟ್ಟಡದ ತಾರಸಿ ಅಷ್ಟೊಂದು ಸಾಮರ್ಥ್ಯ ಹೊಂದಿಲ್ಲ ಎನ್ನುವ ಕಾರಣಕ್ಕೆ ಇದನ್ನು ಕೈಬಿಡಲಾಗಿದೆ.

ಎಲ್ಲೆಲ್ಲಿ ಎಷ್ಟು  ಉತ್ಪಾದನೆ? :  ಕರ್ನಾಟಕ ಒನ್‌ ಕೇಂದ್ರ-3 ಕಿಲೋ ವ್ಯಾಟ್‌, ಹಳೇ ಹುಬ್ಬಳ್ಳಿ ವಾಣಿಜ್ಯ ಕಟ್ಟಡ-3 ಕಿವ್ಯಾ, ಟೌನ್‌ ಹಾಲ್‌ -4.21 ಕಿವ್ಯಾ, ಈಜುಕೊಳ ಧಾರವಾಡ-10 ಕಿವ್ಯಾ, 4ನೇ ವಲಯ ಕಚೇರಿ-10 ಕಿವ್ಯಾ, ಪಾಲಿಕೆ ಕೇಂದ್ರ ಕಚೇರಿ-25 ಕಿವ್ಯಾ, ಗಾಜಿನಮನೆ-25 ಕಿವ್ಯಾ, ಚಿಟಗುಪ್ಪಿ ಆಸ್ಪತ್ರೆ(ಹೊಸ ಕಟ್ಟಡ)-35 ಕಿವ್ಯಾ, ಕನ್ನಡ ಭವನ-45 ಕಿವ್ಯಾ, ಕಲಾಭವನ ಧಾರವಾಡ-80 ಕಿವ್ಯಾ, ಸಾಂಸ್ಕೃತಿಕ ಭವನ-100 ಕಿವ್ಯಾ ವಿದ್ಯುತ್‌ ಉತ್ಪಾದನೆ ಗುರಿ ಹೊಂದಲಾಗಿದೆ. ಗುತ್ತಿಗೆದಾರರು ಇವುಗಳ ನಿರ್ವಹಣೆ ಹೊಣೆ ಹೊಂದಿದ್ದು, 10-25 ವರ್ಷಗಳ ಅವಧಿ ನಿಗದಿ ಮಾಡಲಾಗಿದೆ.

ಪ್ರತಿ ಯುನಿಟ್‌ ಸೋಲಾರ್‌ ವಿದ್ಯುತ್‌ಗೆ ನಿಗದಿಪಡಿಸಿದ ದರದ ಹಿನ್ನೆಲೆಯಲ್ಲಿ ಕಳೆದ ನಾಲ್ಕು ಬಾರಿ ಟೆಂಡರ್‌ ಕರೆದರೂ ಗುತ್ತಿಗೆದಾರರು ಪಾಲ್ಗೊಂಡಿರಲಿಲ್ಲ. ಇದೀಗ ವ್ಯತ್ಯಾಸದ ಹಣವನ್ನು ಸ್ಮಾರ್ಟ್‌ಸಿಟಿ ಕಂಪನಿ ಪಾವತಿ ಮಾಡುವುದು ಸೇರಿದಂತೆ ಮಾದರಿ ಬದಲಿಸಿ ಟೆಂಡರ್‌ ಕರೆಯಲಾಗಿದೆ. ಈಗಾಗಲೇ ಮೂವರು ಗುತ್ತಿಗೆದಾರರು ವಿಚಾರಣೆ ಮಾಡಿದ್ದು, ಈ ಬಾರಿ ಯೋಜನೆ ಅನುಷ್ಠಾನಗೊಳ್ಳುವ ಭರವಸೆಯಿದೆ. -ಎಸ್‌.ಎಚ್‌. ನರೇಗಲ್ಲ, ವಿಶೇಷಾಧಿಕಾರಿ, ಸ್ಮಾರ್ಟ್‌ಸಿಟಿ ಯೋಜನೆ

 

-ಹೇಮರಡ್ಡಿ ಸೈದಾಪುರ

ಟಾಪ್ ನ್ಯೂಸ್

ಹೊಸಪೇಟೆ: ಸ್ಕ್ಯಾನ್‌ ಮಾಡಿ, ಹಂಪಿ ಕಂಬಗಳ ಸಪ್ತ ಸ್ವರ ಕೇಳಿ

ಹೊಸಪೇಟೆ: ಸ್ಕ್ಯಾನ್‌ ಮಾಡಿ, ಹಂಪಿ ಕಂಬಗಳ ಸಪ್ತ ಸ್ವರ ಕೇಳಿ

6-uv-fusion

Opportunities: ಅವಕಾಶಗಳನ್ನು ಸೃಷ್ಟಿಸಿಕೊಳ್ಳುವ ಚತುರತೆ

Yadagiri: ಗ್ಯಾರಂಟಿಗಳಿಂದ ಹಿಂದೆ ಸರಿಯಲ್ಲ: ಸಚಿವ ದರ್ಶನಾಪುರ

Yadagiri: ಗ್ಯಾರಂಟಿಗಳಿಂದ ಹಿಂದೆ ಸರಿಯಲ್ಲ: ಸಚಿವ ದರ್ಶನಾಪುರ

7-gundlupete

Gundlupete:ಮರಿಯಾನೆ ಬೇಟೆಗೆ ಹೊಂಚುಹಾಕುತ್ತಿದ್ದ ಹುಲಿ ಮೇಲೆ ತಾಯಿಯಾನೆ ದಾಳಿ:ವಿಡಿಯೋ ವೈರಲ್

Pakistan: ಪಾಕ್‌ ಸೇನೆ ಮತ್ತು ಇಮ್ರಾನ್‌ ಸಂಘರ್ಷ- ಯುಎಇ ಮಧ್ಯಸ್ಥಿಕೆ ವಹಿಸಲಿ: ಐಎಸ್‌ ಐ

Pakistan: ಪಾಕ್‌ ಸೇನೆ ಮತ್ತು ಇಮ್ರಾನ್‌ ಸಂಘರ್ಷ- ಯುಎಇ ಮಧ್ಯಸ್ಥಿಕೆ ವಹಿಸಲಿ: ಐಎಸ್‌ ಐ

IPL 2025: Here’s what all ten teams look like after the mega auction

IPL 2025: ಮೆಗಾ ಹರಾಜಿನ ಬಳಿಕ ಎಲ್ಲಾ ಹತ್ತು ತಂಡಗಳು ಹೀಗಿವೆ ನೋಡಿ

Cabinet approves PAN 2.0: What is PAN 2.0? What are its features?

PAN 2.0 ಗೆ ಸಂಪುಟ ಅನುಮೋದನೆ: ಏನಿದು ಪ್ಯಾನ್‌ 2.0? ಇದರ ವೈಶಿಷ್ಟ್ಯವೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

11-kundagol’

Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ

vijayendra

Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್‌ ಕಾರ್ಡ್‌ ರದ್ದು: ವಿಜಯೇಂದ್ರ ಆರೋಪ

ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು

ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು

ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ

ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

ಹೊಸಪೇಟೆ: ಸ್ಕ್ಯಾನ್‌ ಮಾಡಿ, ಹಂಪಿ ಕಂಬಗಳ ಸಪ್ತ ಸ್ವರ ಕೇಳಿ

ಹೊಸಪೇಟೆ: ಸ್ಕ್ಯಾನ್‌ ಮಾಡಿ, ಹಂಪಿ ಕಂಬಗಳ ಸಪ್ತ ಸ್ವರ ಕೇಳಿ

6-uv-fusion

Opportunities: ಅವಕಾಶಗಳನ್ನು ಸೃಷ್ಟಿಸಿಕೊಳ್ಳುವ ಚತುರತೆ

Yadagiri: ಗ್ಯಾರಂಟಿಗಳಿಂದ ಹಿಂದೆ ಸರಿಯಲ್ಲ: ಸಚಿವ ದರ್ಶನಾಪುರ

Yadagiri: ಗ್ಯಾರಂಟಿಗಳಿಂದ ಹಿಂದೆ ಸರಿಯಲ್ಲ: ಸಚಿವ ದರ್ಶನಾಪುರ

7-gundlupete

Gundlupete:ಮರಿಯಾನೆ ಬೇಟೆಗೆ ಹೊಂಚುಹಾಕುತ್ತಿದ್ದ ಹುಲಿ ಮೇಲೆ ತಾಯಿಯಾನೆ ದಾಳಿ:ವಿಡಿಯೋ ವೈರಲ್

Pakistan: ಪಾಕ್‌ ಸೇನೆ ಮತ್ತು ಇಮ್ರಾನ್‌ ಸಂಘರ್ಷ- ಯುಎಇ ಮಧ್ಯಸ್ಥಿಕೆ ವಹಿಸಲಿ: ಐಎಸ್‌ ಐ

Pakistan: ಪಾಕ್‌ ಸೇನೆ ಮತ್ತು ಇಮ್ರಾನ್‌ ಸಂಘರ್ಷ- ಯುಎಇ ಮಧ್ಯಸ್ಥಿಕೆ ವಹಿಸಲಿ: ಐಎಸ್‌ ಐ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.