ಮಿಡತೆ ಹಾವಳಿ ನಿಯಂತ್ರಣಕ್ಕೆ ಸಿದ್ಧತೆ
Team Udayavani, Jun 1, 2020, 8:02 AM IST
ರಾಮನಗರ: ದೇಶದ ಗಡಿ ರಾಜ್ಯಗಳಲ್ಲಿ ಮರುಭೂಮಿ ಮಿಡತೆಗಳ ಹಾವಳಿ ಉಂಟಾಗಿದೆ. ರಾಜ್ಯದಲ್ಲಿಯೂ ಮಿಡತೆ ದಾಳಿ ಎದುರಾಗಿ ಜಿಲ್ಲೆಯನ್ನು ಕಾಡಿದರೆ, ನಿಯಂತ್ರಣಕ್ಕೆ ಜಿಲ್ಲಾಡಳಿತ ಸಿದ್ಧತೆ ಆರಂಭಿಸಿದೆ. ಜಿಲ್ಲಾಧಿಕಾರಿ ಗಳು ಈಗಾಗಲೇ ಸಂಭವನೀಯ ಮಿಡತೆ ದಾಳಿ ನಿಯಂತ್ರಣದ ಮೇಲುಸ್ತುವಾರಿಗೆ ಜಿಲ್ಲಾ ಮಟ್ಟದ ಸಮಿತಿ ರಚಿಸಿದ್ದಾರೆ.
ಇದೇ ವಿಚಾರದಲ್ಲಿ ಡೀಸಿ ನೇತೃತ್ವದಲ್ಲಿ ಜಿಲ್ಲಾ ಸರ್ಕಾರಿ ಕಚೇರಿಗಳ ಸಂಕಿರ್ಣದಲ್ಲಿ ಅಧಿಕಾರಿಗಳ ಸಭೆ ನಡೆಯಿತು. ಮಾಗಡಿಯ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಿಂದ ಮರುಭೂಮಿ ಮಿಡತೆಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದರು. ಜಿಲ್ಲೆಯಲ್ಲಿಯೂ ದಾಳಿ ಉಂಟಾದರೆ ಸರ್ಕಾರ ನೀಡಿರುವ ನಿರ್ದೇಶನ ದಂತೆ ನಿರ್ವಹಣೆ ಕ್ರಮ ವಹಿಸಲು ಬೇಕಿರುವ ಕೀಟನಾಶಕ ಸಂಗ್ರಹಿಸಿಟ್ಟುಕೊಳ್ಳಲು ಸಭೆ ನಿರ್ಧರಿಸಿದೆ.
ಕೀಟನಾಶಕ ಸಿಂಪರಣೆಗೆ ಟ್ರ್ಯಾಕ್ಟರ್ ಮೌಂಟೆಡ್ ಸ್ಪ್ರೆಯರ್ ಹಾಗೂ ಅಗ್ನಿಶಾಮಕ ಸಲಕರಣೆ ಸಿದ್ಧಪಡಿಸಿಕೊಳ್ಳಬೇಕು. ಕೃಷಿ, ತೋಟಗಾರಿಕೆ, ರೇಷ್ಮೆ ಹಾಗೂ ಅರಣ್ಯ ಇಲಾಖೆಯವರು ಸಭೆ ನಡೆಸಿ ಸಿಬ್ಬಂದಿಗೆ ಮರುಭೂಮಿ ಮಿಡತೆಗಳು ಕಂಡರೆ ತಕ್ಷಣ ಮೇಲಾಧಿಕಾರಿಗಳಿಗೆ ಮಾಹಿತಿ ನೀಡುವಂತೆ ನಿರ್ದೇಶನ ಕೊಡಬೇಕು ಎಂದರು. ಮರುಭೂಮಿ ಮಿಡತೆ ವೈಜ್ಞಾನಿಕವಾಗಿ ಸಿಸ್ಟೋಸೆರಾ ಗ್ರಿಗೇರಿಯಾ ಎಂದು ಹೆಸರು. ಈ ಕೀಟ ಆಥೋಪ್ಟೆರಾ ಗಣ ಹಾಗೂ ಅಕ್ರೀಡಿಡೆ ಕುಟುಂಬಕ್ಕೆ ಸೇರಿದೆ.
ಇದು ಆಫ್ರಿಕಾದಿಂದ ಬಂದಿದ್ದು, ವಿವಿಧ ದೇಶಗಳಲ್ಲಿ ಅನೇಕ ಬೆಳೆ ಬಾಧಿಸಿ ಆಹಾರ ಕ್ಷಾಮ ಸೃಷ್ಟಿ ಮಾಡಿದ ಉಲ್ಲೇಖದೆ. ಮಿಡತೆಯು ಎರಡು ವಲಸೆ ಹಂತ ಹೊಂದಿರುತ್ತದೆ. ಒಬ್ಬಂಟಿ ಹಂತ ಮತ್ತು ಸಮೂಹ (ವಲಸೆ) ಹಂತ. ಮಿಡತೆಯೂ ಒಬ್ಬಂಟಿ ಹಂತದಲ್ಲಿ ಮರಿ (ಅಪ್ಸರೆ) ಕೀಟ ಹಸಿರು ಬಣ್ಣದ್ದು ಪ್ರೌಢ ಕೀಟ ಕಂದು ಅಥವಾ ಕಪ್ಪು ಬಣ್ಣ ಹೊಂದಿರುತ್ತದೆ. ಸಮೂಹ ಹಂತದಲ್ಲಿ ಮಿಡತೆಯೂ ಹಳದಿ ಬಣ್ಣವನ್ನು ಹೊಂದಿದ್ದು, ಗುಂಪು ಗುಂಪಾಗಿ 5 ರಿಂದ 10 ಬಾರಿ ವಲಸೆ ಹೋಗುತ್ತವೆ. ಈ ಹಂತ ದಲ್ಲಿ ಮಿಡತೆಯ ಹಾನಿ ತಡೆಯಬಹು ದಾಗಿದೆ ಎಂದು ವಿಜ್ಞಾನಿಗಳು ಮಾಹಿತಿ ಕೊಟ್ಟರು.
ನಿರ್ವಹಣೆ ಕ್ರಮಗಳು: ಕೀಟ ಬೆಳೆಗಳಲ್ಲಿ ಕಂಡರೆ, ಡ್ರಮ್, ಪಾತ್ರೆ ಅಥವಾ ಫಲಕ ಬಡಿದು ಹೆಚ್ಚು ಶಬ್ದ ಮಾಡಿ, ಮಿಡತೆ ಸಮೂಹ ಓಡಿಸುವುದು. ಬೇವಿನ ಮೂಲದ ಕೀಟನಾಶಕಗಳನ್ನು (1500 ಪಿಪಿಎಂ 3 ಮಿ. ಲೀ./ಲೀ.) ಬೆಳೆಗಳಲ್ಲಿ ಸಿಂಪಡಿಸುವುದರಿಂದ ಕೀಟವು ಬೆಳೆ ಹಾನಿ ಮಾಡುವುದು ಕಡಿಮೆಯಾಗುತ್ತದೆ. ಕೀಟ ಬಾಧಿತ ಪ್ರದೇಶದಲ್ಲಿ ಹೊಗೆ ಮತ್ತು ಬೆಂಕಿ ಹಾಕುವುದರಿಂದ ಕೀಟವನ್ನು ಬೇರೆಡೆಗೆ ಓಡಿಸಬಹುದು.
ಕೀಟ ಹುಳುಗಳಾಗಿದ್ದಲ್ಲಿ ಬಾಧಿತ ಪ್ರದೇಶ ಕನಿಷ್ಠ 2 ಅಡಿ ಆಳ ಮತ್ತು 3 ಅಡಿ ಅಗಲದ ಗುಂಡಿ ನಿರ್ಮಿಸಿ ಮರಿಹುಳುಗಳನ್ನು ಸೆರೆ ಹಿಡಿದು ನಾಶಪಡಿಸಬೇಕು. ಬೆಳೆಯ ಅಥವಾ ಮರಗಳ ಮೇಲೆ ಮರುಭೂಮಿ ಮಿಡತೆ ಕಂಡುಬಂದಲ್ಲಿ ಕೆಳಕಂಡ ಕೀಟನಾಶಕ ಬಳಸಿ ಹತೋಟಿ ಮಾಡಲು ಕ್ರಮವಹಿಸಬಹುದು ಎಂದು ವಿಜ್ಞಾನಿಗಳು ಸಲಹೆ ಕೊಟ್ಟಿದ್ದಾರೆ.
ಮರುಭಮಿ ಮಿಡತೆ ಹಗಲಿನಲ್ಲಿ ಸಂಚರಿಸಿ, ರಾತ್ರಿ ವೇಳೆ ಮರಗಿಡಗಳ ಮೇಲೆ ವಿಶ್ರಾಂತಿ ಪಡೆಯುವುದರಿಂದ ಟ್ರಾಕ್ಟರ್ ಮೌಂಟೆಡ್ ಜೆಟ್ ಸ್ಪ್ರೆಯರ್ ಬಳಸಿ ಕೀಟನಾಶಕವನ್ನು ಸಾಯಂಕಾಲ ಅಥವಾ ರಾತ್ರಿ ವೇಳೆ ಸಿಂಪಡಿಸು ವಂತೆ ವಿಜ್ಞಾನಿಗಳು ಸೂಚಿಸಿದ್ದಾರೆ. ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕರ ಸೇರಿದಂತೆ ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.