ದ.ಕ.: 14 ಮಂದಿಗೆ ಕೋವಿಡ್ ದೃಢ : 2 ಮಂದಿ ಗುಣಮುಖರಾಗಿ ಬಿಡುಗಡೆ
Team Udayavani, Jun 1, 2020, 9:40 AM IST
ಮಂಗಳೂರು: ದ.ಕ. ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ರವಿವಾರ ಮತ್ತೆ 14 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಇದರೊಂದಿಗೆ ದ.ಕ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 133ಕ್ಕೆ ಏರಿಕೆಯಾಗಿದೆ. ಮೇ 22ರಂದು ಕತಾರ್‌ನಿಂದ ಬೆಂಗಳೂರಿಗೆ ಆಗ ಮಿಸಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿದ್ದ 50 ವರ್ಷಪ್ರಾಯದ ವ್ಯಕ್ತಿ ಮೇ 30ರಂದು ಮಂಗಳೂರಿಗೆ ಆಗಮಿಸಿದ್ದರು. ಮೇ 31ರಂದು ಅವರ ಗಂಟಲು ದ್ರವ ಮಾದರಿ ಸ್ವೀಕೃತವಾಗಿದ್ದು, ಕೋವಿಡ್ ದೃಢಪಟ್ಟಿದೆ. ಮೇ 22ರಂದು ಮಲೇಷಿಯಾದಿಂದ ಬೆಂಗಳೂರಿಗೆ ಆಗಮಿಸಿದ್ದ 38 ವರ್ಷ ಪ್ರಾಯದ ವ್ಯಕ್ತಿ 7 ದಿನಗಳ ಕ್ವಾರಂಟೈನ್ ಮುಗಿಸಿ ಮೇ 30ರಂದು ಮಂಗಳೂರಿಗೆ ಆಗಮಿಸಿದ್ದರು. ಮೇ 31ರಂದು ಗಂಟಲು ದ್ರವ ಮಾದರಿ ವರದಿ ಬಂದಿದ್ದು, ಕೋವಿಡ್ ಸೋಂಕು ದೃಢಪಟ್ಟಿದೆ.
ಮೇ 18ರಂದು ಮುಂಬಯಿಯಿಂದ ಆಗಮಿಸಿದ 22 ವರ್ಷ ಪ್ರಾಯದ ವ್ಯಕ್ತಿ, 52 ವರ್ಷ ಪ್ರಾಯದ ವ್ಯಕ್ತಿ, 50 ವರ್ಷ ಪ್ರಾಯದ ವ್ಯಕ್ತಿಯಲ್ಲಿ ಕೊರೊನಾ ದೃಢಪಟ್ಟಿದೆ. ಮೇ 18ರಂದು ಮಹಾರಾಷ್ಟ್ರದಿಂದ ಆಗಮಿಸಿದ 44 ವರ್ಷ ಪ್ರಾಯದ ವ್ಯಕ್ತಿ, 30 ವರ್ಷ ಪ್ರಾಯದ ವ್ಯಕ್ತಿಗೆ ಕೋವಿಡ್ ಸೋಂಕು ತಗಲಿದೆ. ಮಹಾರಾಷ್ಟ್ರದಿಂದ ಇತ್ತೀಚೆಗೆ ಬಂದ ಮಂಗಳೂರಿನ ಕೆಂಜಾರು ಗ್ರಾಮದ ವ್ಯಕ್ತಿಯ ಸಂಪರ್ಕದಿಂದ ಒಂದೇ ಕುಟುಂಬದ 17 ವರ್ಷ ಪ್ರಾಯದ ಬಾಲಕ, 31 ವರ್ಷ ಪ್ರಾಯದ ವ್ಯಕ್ತಿ ಮತ್ತು 51 ವರ್ಷ ಪ್ರಾಯದ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ. ಅದೇ ರೀತಿ ಮೇ 20ರಂದು ಮುಂಬಯಿಯಿಂದ ಆಗಮಿಸಿದ 45 ವರ್ಷ ಪ್ರಾಯದ ಮಹಿಳೆ ಮತ್ತು 43 ವರ್ಷ ಪ್ರಾಯದ ಮಹಿಳೆಯಲ್ಲಿ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡಿದೆ. ಮೇ 18ರಂದು ಮುಂಬಯಿಯಿಂದ ಆಗಮಿಸಿದ ಒಂದೇ ಕುಟುಂಬದ 40 ವರ್ಷ ಪ್ರಾಯದ ವ್ಯಕ್ತಿ ಮತ್ತು 38 ವರ್ಷ ಪ್ರಾಯದ ಮಹಿಳೆಗೆ ಸೋಂಕು ದೃಢಪಟ್ಟಿದೆ.
76ರ ವೃದ್ಧ ಸಹಿತ 12 ಮಂದಿ ಬಿಡುಗಡೆ ದ.ಕ. ಜಿಲ್ಲೆಯಲ್ಲಿ ರವಿವಾರ 76 ವರ್ಷ ಪ್ರಾಯದ ವೃದ್ಧ ಸಹಿತ ಒಟ್ಟು 12 ಮಂದಿ ಜಿಲ್ಲಾ ವೆನ್ಲಾಕ್ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಮೇ 12ರಂದು ದುಬಾೖಯಿಂದ ಮಂಗಳೂರಿಗೆ ಆಗಮಿಸಿದ್ದ 76 ವರ್ಷ ಪ್ರಾಯದ ವ್ಯಕ್ತಿ ಮಧುಮೇಹ, ಅಧಿಕ ರಕ್ತದೊತ್ತಡ, ಕಾಲಿನ ತೊಂದರೆ ಮತ್ತು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಮೇ 15ರಂದು ಇವರಲ್ಲಿ ಕೋವಿಡ್ ಸೋಂಕು ದೃಢಪಟ್ಟಿತ್ತು. ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿದ್ದು, ಮೇ 30ರಂದು ಬಂದ ವರದಿಯಲ್ಲಿ ಕೋವಿಡ್ ನೆಗೆಟಿವ್ ಬಂದಿದೆ. ಇದೇ ಕಾರಣಕ್ಕೆ ಮೇ 31ರಂದು ಅವರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ. ಅದೇ ರೀತಿ 39 ವರ್ಷ ಪ್ರಾಯದ ವ್ಯಕ್ತಿ, 40 ವರ್ಷ ಪ್ರಾಯದ ವ್ಯಕ್ತಿ, 69 ವರ್ಷ ಪ್ರಾಯದ ಮಹಿಳೆ, 44 ವರ್ಷ ಪ್ರಾಯದ ವ್ಯಕ್ತಿ, 41 ವರ್ಷ ಪ್ರಾಯದ ಮಹಿಳೆ, 42 ವರ್ಷ ಪ್ರಾಯದ ವ್ಯಕ್ತಿ, 36 ವರ್ಷ ಪ್ರಾಯದ ವ್ಯಕ್ತಿ, 11 ವರ್ಷ ಪ್ರಾಯದ ಬಾಲಕಿ, 3 ವರ್ಷ ಪ್ರಾಯದ ಮಗು, 50 ವರ್ಷ ಪ್ರಾಯದ ವ್ಯಕ್ತಿ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಿಂದ ರವಿವಾರ ಬಿಡುಗಡೆಗೊಂಡಿದ್ದಾರೆ.
ರವಿವಾರ ಒಟ್ಟು 120 ಮಂದಿಯ ಗಂಟಲು ದ್ರವ ಮಾದರಿಯ ವರದಿ ಬಂದಿದ್ದು, 14 ಮಂದಿಗೆ ಕೋವಿಡ್ ದೃಢಪಟ್ಟಿದೆ. ರವಿವಾರ 37 ಮಂದಿಯ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದ್ದು, ಒಟ್ಟು 231 ವರದಿ ಬರಲು ಬಾಕಿ ಇದೆ. ಎನ್‌ಐಟಿಕೆಯಲ್ಲಿ ಒಟ್ಟು 3 ಮಂದಿ, ಇಎಸ್‌ಐ ಆಸ್ಪತ್ರೆಯಲ್ಲಿ 17 ಮಂದಿ ಕ್ವಾರಂಟೈನ್‌ನಲ್ಲಿದ್ದಾರೆ. 40 ವರ್ಷ ಪ್ರಾಯದ ಮಹಿಳೆ ಮಧುಮೇಹ, ಮೂತ್ರದ ಸೋಂಕು, ಉಸಿರಾಟ ತೊಂದರೆಯಿಂದ ಬಳಲುತ್ತಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಬೋಳಿಯಾರು ಗ್ರಾಮದ ಕಾಪಿಕಾಡು ಸೀಲ್‌ಡೌನ್
ಬೋಳಿಯಾರು ಪ್ರದೇಶದ ವ್ಯಕ್ತಿಗೆ ಕೋವಿಡ್ ದೃಢಪಟ್ಟ ಹಿನ್ನೆಲೆಯಲ್ಲಿ ಬೋಳಿಯಾರು ಗ್ರಾಮದ ಕಾಪಿಕಾಡು ವ್ಯಾಪ್ತಿಯನ್ನು ಸೀಲ್‌ಡೌನ್ ಎಂದು ದ.ಕ. ಜಿಲ್ಲಾಡಳಿತ ಆದೇಶಿಸಿದೆ. ಅದರಂತೆ ಪೂರ್ವಭಾಗದಿಂದ ಓಪನ್ ಏರಿಯಾ, ಪಶ್ಚಿಮದಿಂದ ಉಮರ್ ಫಾರೂಕ್, ಕಲೀದ್ ಅಬ್ದುಲ್ ಶಕೂರ್ ಮನೆ, ಉತ್ತರಕ್ಕೆ ಕಿನ್ನಿಮನೆ ದೇವಸ್ಥಾನದ ಓಪನ್ ಏರಿಯಾ, ದಕ್ಷಿಣಕ್ಕೆ ಯಾಕುಬ್, ರಿಯಾಝ್, ಇಬ್ರಾಹಿಂ, ಸಾಫಿಯಾ ಅವರ ಮನೆ ವ್ಯಾಪ್ತಿಯನ್ನು ಜಿಲ್ಲಾಡಳಿತ ಕಂಟೈನ್ಮೆಂಟ್ ಝೋನ್ ಎಂದು ಗುರುತಿಸಿದೆ. ಪೂರ್ವಕ್ಕೆ ಬಶೀರ್ ಮನೆ, ಪಶ್ಚಿಮಕ್ಕೆ ಓಪನ್ ಏರಿಯಾ, ಉತ್ತರಕ್ಕೆ ಪಿಡಬ್ಲ್ಯೂಡಿ ರಸ್ತೆ, ದಕ್ಷಿಣಕ್ಕೆ ಅಬ್ದುಲ್ ಖಾದರ್ ಮನೆಯನ್ನು ಬಫರ್ ಝೋನ್ ಎಂದು ಘೋಷಣೆ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಎಸ್‌ಟಿಪಿಗಳಲ್ಲಿ ಸಂಸ್ಕರಣೆ ಆಗದೆ ಕೊಳಚೆ ನೀರು ನೇರ ನದಿ, ಕೆರೆಗೆ!
Bajpe ಪ.ಪಂ.ನಿಂದ ಕುಡಿಯುವ ನೀರು ಪೂರೈಕೆಗೆ ಹೊಸ ಚಿಂತನೆ; ಹೊಸ ಬೋರ್‌ವೆಲ್‌ಗೆ ಸೌರ ಪಂಪ್
Mannagudda: ಗಡ್ಡೆ ಗೆಣಸು ಸೊಪ್ಪುಗಳಿಗೆ ರಾಜ ಮರ್ಯಾದೆ!
ಉಮ್ರಾ ಯಾತ್ರೆಗೆ ತೆರಳಿ ವಂಚನೆ : ಸಂತ್ರಸ್ತರನ್ನು ಊರಿಗೆ ಕರೆಸಿಕೊಂಡ ಮೊಯ್ದಿನ್ ಬಾವ
ಜ.6- 9: ಜೋಕಟ್ಟೆ ಲೆವೆಲ್‌ಕ್ರಾಸ್ ಬಂದ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.