ಖಿನ್ನತೆಯಿಂದ ದೂರವಾಗಲು ಗಿಡಮೂಲಿಕೆ ಔಷಧ
Team Udayavani, Jun 1, 2020, 3:30 PM IST
ನಮ್ಮಲ್ಲಿ ಅನೇಕರು ಆತಂಕ, ಒತ್ತಡ ಮತ್ತು ನಿದ್ರಾಹೀನತೆಯಂತಹ ರೋಗಲಕ್ಷಗಳಿಂದ ಬಳಲುತ್ತಿರುವ ಖಿನ್ನತೆಯು ಸಾಮಾನ್ಯ ಜೀವನಶೈಲಿಯ ಸಮಸ್ಯೆಯಾಗುತ್ತಿದೆ ಆದರೆ ಇದು ಕೇವಲ ದಿನನಿತ್ಯದ ಸಮಸ್ಯೆಯಂತೆ ಕಾಣಿಸಿದರು ಕೂಡ ಅದು ದೀರ್ಘಾವಧಿಯಲ್ಲಿ ಕಾಳಜಿಯ ವಿಷಯವಾಗಿ ಬದಲಾಗಬಹುದು. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ವಿಶ್ವಾದ್ಯಂತ ಅನಾರೋಗ್ಯ ಮತ್ತು ಅಂಗವೈಕಲ್ಯಕ್ಕೆ ಖಿನ್ನತೆಯೇ ಪ್ರಮುಖ ಕಾರಣವೆಂದು ತಿಳಿದು ಬಂದಿದೆ. ಮಾನಸಿಕ ಖಿನ್ನತೆಗೆ ಖಚಿತವಾದ ಚಿಕಿತ್ಸೆ ಇಲ್ಲದಿರಬಹುದು ಆದರೆ ಅದನ್ನು ನಿಧಾನಗೊಳಿಸಲು ಮತ್ತು ತೊಂದರೆಗೊಳಗಾದ ನಿಮ್ಮ ಮನಸ್ಸನ್ನು ಶಾಂತಗೊಳಿಸುವ ಸಾಧ್ಯತೆ ಇದೆ. ಆಯುರ್ವೇದ ಗಿಡಮೂಲಿಕೆಗಳು ನಿಮ್ಮ ದೇಹವನ್ನು ಒಂದಕ್ಕಿಂತ ಹೆಚ್ಚು ರೀತಿಯಲ್ಲಿ ಗುಣಪಡಿಸಲು ಸಹಾಯ ಮಾಡುತ್ತದೆ. ಖಿನ್ನತೆಯ ಸಮಯದಲ್ಲಿ ನಿಮ್ಮ ಹಾರ್ಮೋನುಗಳು ಉತ್ತಮ ಭಾವನೆಗಳನ್ನು ಅಥವಾ ಅನೇಕ ಸಂದರ್ಭಗಳನ್ನು ನಿಭಾಯಿಸಲು ಸಮರ್ಥವಾಗಿರುವುದಿಲ್ಲ ಆದ್ದರಿಂದ ನಿಮ್ಮನ್ನು ಬೇರೊಂದು ಮನಸ್ಥಿಗೆ ತರುತ್ತದೆ .ಕೆಲವು ಗಿಡಮೂಲಿಕೆಗಳು ಖಿನ್ನತೆಯ ಸಮಸ್ಯೆಯಿಂದ ಹೊರಬರಲು ಸಹಾಯ ಮಾಡುತ್ತವೆ.
ಅಶ್ವಗಂಧ:
ಖಿನ್ನತೆ ಶಮನಕಾರಿ, ಉರಿಯೂತದ ಮತ್ತು ಆತಂಕ ನಿರೋಧಕ ಗುಣಗಳನ್ನು ಒದಗಿಸುತ್ತದೆ. ಇದರಲ್ಲಿ ಸ್ಟಿರಾಯ್ಡ್ ಲ್ಯಾಕ್ಟೋನ್‌ಗಳು , ಸಪೋನಿನ್, ಆಲ್ಕಲಾಯ್ಡ್ಗಳಂತಹ ಸಕ್ರೀಯ ಸಂಯುಕ್ತಗಳು ಇರುವುದರಿಂದ ಇದು ಒತ್ತಡ ಮತ್ತು ಆತಂಕವನ್ನು ನಿವಾರಿಸುತ್ತದೆ. ಭಾವನಾತ್ಮಕ ಮತ್ತು ದೈಹಿಕ ಆಯಾಸದಿಂದ ಉಂಟಾಗುವ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ನಿರಂತರ ಮನಸ್ಥಿತಿ ಬದಲಾವಣೆಗಳನ್ನು ಸಮತೋಲನಗೊಳಿಸುತ್ತದೆ. ಗಮನ ಮತ್ತು ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಜತೆಗೆ ದೈಹಿಕ ಕಾರ್ಯವನ್ನು ಮರುಸ್ಥಾಪಿಸಲು ಸಹಾಯ ಮಾಡುತ್ತದೆ.
ಬ್ರಾಹ್ಮಿ:
ಬ್ರಾಹ್ಮಿ ಒಂದು ಸಣ್ಣ ದೀರ್ಘಕಾಲಿಕ ಮೂಲಿಕೆ, ಇದು ಒತ್ತಡವನ್ನು ಗುಣಪಡಿಸುವ ಗುಣವನ್ನು ಹೊಂದಿದೆ. ಬ್ರಾಹ್ಮಿ ಅಡಾಪ್ಟೋಜೆನ್ ಆಗಿ ಕಾರ್ಯನಿರ್ವಹಿಸುತ್ತದೆ. ಅಂದರೆ ದೇಹವು ಹೊಸ ಅಥವಾ ಒತ್ತಡದ ಸಂದರ್ಭಗಳಿಗೆ ಹೊಂದಿಕೊಳ್ಳಲು ಸಹಾಯ ಮಾಡುತ್ತದೆ. ಇದನ್ನು ಸೇವಿಸುವುದರಿಂದ ಮೆದುಳಿನಲ್ಲಿ ಸಿರೊಟೋನಿನ್ ಮಟ್ಟವನ್ನು ಹೆಚ್ಚಿಸುತ್ತದೆ ಎನ್ನಲಾಗಿದೆ. ಮನಸ್ಸನ್ನು ಶಾಂತವಾಗಿಡಲು ಮತ್ತು ಆತಂಕದಿಂದ ಪರಿಹಾರವನ್ನು ನೀಡುತ್ತದೆ.
ಆಟಮಾನ್ಸಿ:
ಇದೊಂದು ದೀರ್ಘಕಾಲಿಕ ಸಸ್ಯವಾಗಿದ್ದು ನಿದ್ರಾಹೀನತೆ ಮತ್ತು ಇತರ ಮಲಗುವ ಕಾಯಿಲೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಹಾಗೆಯೇ ಇದು ಖಿನ್ನತೆ ಶಮನಕಾರಿ , ಒತ್ತಡ ವಿರೋಧಿ ಮತ್ತು ಆಯಾಸ ವಿರೋಧಿ ಗುಣ ಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಇದನ್ನು ಔಷಧೀಯ ಉದ್ದೇಶಗಳಿಗೆ ಬಳಸಲಾಗುತ್ತದೆ. ಮನಸ್ಥಿತಿ ಬದಲಾವಣೆ ಮತ್ತು ಒತ್ತಡ ಕಾಯಿಲೆಗಳಿಗೆ ಚಿಕಿತ್ಸಕ ಪರಿಣಾಮವನ್ನು ನೀಡುತ್ತದೆ.
ಪುದೀನಾ:
ಮೆಂಡಾಲ್ ಇರುವಿಕೆಯಿಂದಾಗಿ ನರಮಂಡಲದ ಕಾಯಿಲೆಗಳನ್ನು ಗುಣಪಡಿಸಲು ಪುದಿನಾವನ್ನು ಬಳಸಲಾಗುತ್ತದೆ. ಇದು ನರಗಳನ್ನು ಶಾಂತಗೊಳಿಸಿ, ತಂಪಾಗಿಸುತ್ತದೆ. ಇದು ವಿಟಮಿನ್ ಎ ಮತ್ತು ಸಿ, ಮೆಗ್ನೆಷಿಯಂ, ಮ್ಯಾಂಗನೀಸ್, ಕ್ಯಾಲ್ಸಿಯಂ, ಕಬ್ಬಿಣಾಂಶಗಳನ್ನು ಹೊಂದಿದೆ.
ಮಕಾ( ಪೆರುವಿಯನ್ ಜಿನ್ಸೆಂಗ್)
ಇದು ಪೋಷಕಾಂಶಯುಕ್ತ ಸಸ್ಯವಾಗಿದೆ. ಜೀವಸತ್ವಗಳು, ಅಮೈನೊ ಆಮ್ಲಗಳು , ವಿವಿಧ ಖನಿಜ ಮತ್ತು ಫೈಟೊನ್ಯೂಟ್ರಿಯಂಟ್‌ಗಳ ಸಮೃದ್ಧ ಮೂಲವಾಗಿದ್ದು, ತ್ರಾಣವನ್ನು ಹೆಚ್ಚಿಸುತ್ತದೆ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ. ಮೂಲಂಗಿ ಜಾತಿಗೆ ಸೇರಿದ ಪೆರುವಿಯನ್ ಸಸ್ಯ ನೈಸರ್ಗಿಕ ವೈದ್ಯ ಎಂದು ಸಾಬೀತಾಗಿದೆ. ಇದರಲ್ಲಿ ಅಡಾಪ್ಟೋಜೆನ್ ಇರುವಿಕೆಯಿಂದ ಹಾರ್ಮೊನ್ ಉತ್ಪಾದನೆಗೆ ಸಹಾಯ ಮಾಡುತ್ತದೆ.
ಯಾವುದೇ ಗಿಡಮೂಲಿಕೆ ಔಷಧಿಗಳಿಗೆ ಬದಲಾಯಿಸುವ ಮೊದಲು ವೈದ್ಯರನ್ನು ಭೇಟಿಯಾಗುವುದು ಉತ್ತಮ. ಏಕೆಂದರೆ ಇದರ ಫಲಿತಾಂಶ ಮುಖ್ಯವಾಗಿ ಡೋಸೆಜ್ ಮತ್ತು ಅವುಗಳನ್ನು ಸೇವಿಸುವ ರೂಪವನ್ನು ಅವಲಂಬಿಸಿರುತ್ತದೆ. ಆದುದರಿಂದ ವೈದ್ಯರ ಸಲಹೆ ಅಗತ್ಯವಾಗಿದೆ. ಗಿಡಮೂಲಿಕೆಯಲ್ಲಿರುವ ಆರೋಗ್ಯಯುಕ್ತ ಅಂಶಗಳು ನಮ್ಮಲ್ಲಿನ ಮಾನಸಿಕ ಖಿನ್ನತೆಗೆ ಮತ್ತು ಆತಂಕವನ್ನು ದೂರವಾಗಿಸಲು ಸಹಕರಿಸುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.