ಕೋವಿಡ್ 19 : ತಪ್ಪಿದ ಟ್ರಂಪ್ ಲೆಕ್ಕಾಚಾರ
Team Udayavani, Jun 1, 2020, 2:20 PM IST
ಸಾಂದರ್ಭಿಕ ಚಿತ್ರ
ವಾಷಿಂಗ್ಟನ್ : ಅಮೆರಿಕದಲ್ಲಿ ಮೊದಲ ಕೋವಿಡ್ ಸಾವು ಸಂಭವಿಸಿದಾಗ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪರಿಸ್ಥಿತಿ “ಸಂಪೂರ್ಣವಾಗಿ ನಿಯಂತ್ರಣದಲ್ಲಿ, ಜನರು ಗಾಬರಿಯಾಗುವ ಅಗತ್ಯವಿಲ್ಲ’ ಎಂದು ಭರವಸೆ ನೀಡಿದರು. ನಾಲ್ಕು ತಿಂಗಳ ಬಳಿಕ ನೋಡಿದಾಗ ಅಮೆರಿಕದ ಎಲ್ಲ 50 ರಾಜ್ಯಗಳಿಗೂ ಕೋವಿಡ್ ವೈರಸ್ ಹರಡಿತು, ಸಾವಿನ ಸಂಖ್ಯೆ 1 ಲಕ್ಷ ದಾಟಿತು ಮತ್ತು ಸೋಂಕಿತರ ಸಂಖ್ಯೆ 17 ಲಕ್ಷದ ಸನಿಹದಲ್ಲಿದೆ. ಅಮೆರಿಕ ಮಾತ್ರವಲ್ಲ ಆರಂಭದಲ್ಲಿ ಕೋವಿಡ್ ವೈರಸ್ ಅನ್ನು ಲಘುವಾಗಿ ಪರಿಗಣಿಸಿದ ದೇಶಗಳು ಈಗ ಪಶ್ಚಾತ್ತಾಪ ಪಡುತ್ತಿವೆ.
ಅಮೆರಿಕವನ್ನೇ ಆಧಾರವಾಗಿಟ್ಟುಕೊಂಡು ಉಳಿದ ದೇಶಗಳ ಪರಿಸ್ಥಿತಿಯನ್ನು ಅವಲೋಕಿಸಿದಾಗ ಏಕೆ ಅತ್ಯುತ್ತಮ ಆರೋಗ್ಯ ವ್ಯವಸ್ಥೆಯ ಹೊಂದಿರುವ ದೇಶಗಳಿಗೂ ಕೋವಿಡ್ ವೈರಸ್ ಅನ್ನು ಮಣಿಸಲು ಸಾಧ್ಯವಾಗಿಲ್ಲ ಎಂಬ ಒಂದು ಕಲ್ಪನೆ ಸಿಗುತ್ತದೆ. ಈ ದೇಶಗಳೆಲ್ಲ ಕೋವಿಡ್‌ನ ತೀವ್ರತೆಯನ್ನು ಲಘುವಾಗಿ ಪರಿಗಣಿಸಿದ್ದವು ಮತ್ತು ತಮ್ಮಲ್ಲಿರುವ ವೈದ್ಯಕೀಯ ಸೌಲಭ್ಯಗಳ ಬಗ್ಗೆ ಅತಿಯಾದ ಆತ್ಮವಿಶ್ವಾಸ ಹೊಂದಿದ್ದವು.
ಟ್ರಂಪ್ ಆರಂಭದಲ್ಲಿ 50ರಿಂದ 60 ಸಾವಿರ ಜನರು ಮರಣಿಸಬಹುದು ಎಂದಿದ್ದರು. ಆದರೆ ಸಾವಿನ ಸಂಖ್ಯೆ 1 ಲಕ್ಷ ದಾಟಿದೆ. ಈಗಲೂ ಸರಾಸರಿಯಾಗಿ ದಿನಕ್ಕೆ 1 ಸಾವಿರ ಮಂದಿ ಬಲಿಯಾಗುತ್ತಿದ್ದಾರೆ. ಆದರೆ ಟ್ರಂಪ್ ಒಟ್ಟು ಸಾವಿನ ಲೆಕ್ಕದ ಬದಲು ಜನ ಸಂಖ್ಯೆಯ ಆಧಾರದಲ್ಲಿ ಸಾವಿನ ಪ್ರಮಾಣದ ಲೆಕ್ಕ ಹಿಡಿದುಕೊಂಡು ವಾದಿಸುತ್ತಿದ್ದಾರೆ. ಈ ಲೆಕ್ಕದಲ್ಲಿ ಉಳಿದ ದೇಶಗಳಿಗಿಂತ ಅಮೆರಿಕ ವೈರಸ್ ಹಾವಳಿಯನ್ನು ಸಮರ್ಪಕವಾಗಿ ನಿಭಾ ಯಿಸಿದೆ ಎನ್ನುವುದು ಟ್ರಂಪ್ ತರ್ಕ.
1.15 ಕೋಟಿ ಜನಸಂಖ್ಯೆಯಿರುವ ಬೆಲ್ಜಿಯಂನಲ್ಲಿ 1 ಲಕ್ಷ ಮಂದಿಗೆ 82 ಮಂದಿಯಂತೆ ಸಾವಿಗೀಡಾಗಿದ್ದಾರೆ. 33 ಕೋಟಿ ಜನಸಂಖ್ಯೆಯಿರುವ ಅಮೆರಿಕದಲ್ಲಿ 1 ಲಕ್ಷಕ್ಕೆ 30 ಮಂದಿ ಮಾತ್ರ ಸಾವಿಗೀಡಾಗಿದ್ದಾರೆ ಎನ್ನುವುದು ಟ್ರಂಪ್ ಲೆಕ್ಕ. ಆದರೆ ನ್ಯೂಯಾರ್ಕ್ ನಗರದಲ್ಲಿ ಪ್ರತಿ 1 ಲಕ್ಷ ಮಂದಿಗೆ 150 ಮಂದಿಯಂತೆ ಕೋವಿಡ್‌ಗೆ ಬಲಿಯಾಗಿದ್ದಾರೆ. ಅಮೆ ರಿಕದ ಪ್ರತಿ ರಾಜ್ಯದಲ್ಲೂ ಹೀಗೆ ಸಾವಿನ ಪ್ರಮಾಣದಲ್ಲಿ ವ್ಯತ್ಯಾಸಗಳಿವೆ. ಅಲ್ಲದೆ ದೇಶಗಳು ಸಾವನ್ನು ಲೆಕ್ಕ ಹಾಕುವ ರೀತಿಯೂ ಭಿನ್ನವಾಗಿದೆ. ಬೆಲ್ಜಿಯಂನಲ್ಲಿ ಕೋವಿಡ್ ಸೋಂಕು ದೃಢಪಡದೆ ಸತ್ತರೂ ಅದನ್ನು ಕೋವಿಡ್ ಶಂಕಿತ ಸಾವು ಎಂದು ವರ್ಗೀಕರಿಸಲಾಗಿತ್ತು. ಆದರೆ ಅಮೆರಿಕದಲ್ಲಿ ಕೆಲವೆಡೆ ಈ ರೀತಿ ಲೆಕ್ಕಾಚಾರ ಮಾಡಲಾಗುತ್ತಿತ್ತು ಹಾಗೂ ಕೆಲವೆಡೆ ದೃಢವಾದ ಪ್ರಕರಣಗಳನ್ನು ಮಾತ್ರ ಲೆಕ್ಕಕ್ಕೆ ಹಿಡಿಯಲಾಗಿದೆ. ಕೋವಿಡ್ ಸಂದರ್ಭದಲ್ಲಿ ಸಂಭವಿಸಿದ ಎಲ್ಲ ಸಾವುಗಳನ್ನು ಲೆಕ್ಕಕ್ಕೆ ಹಿಡಿದರೆ ಅಮೆರಿಕದಲ್ಲಿ ಸಾವಿನ ಪ್ರಮಾಣ ಇನ್ನೂ ಹೆಚ್ಚಿದೆ.
ಕೆಲವು ದೇಶಗಳು ಬಿಡುಗಡೆಗೊಳಿಸಿರುವ ಅಧಿಕೃತ ಲೆಕ್ಕವನ್ನು ನಂಬಬಹುದೇ ಎಂಬ ಪ್ರಶ್ನೆಯೂ ಇದೆ. ಉದಾಹರಣೆಗೆ ಹೇಳುವುದಾದರೆ ಚೀನದಲ್ಲಿ ಸಂಭವಿಸಿರುವ ಸಾವು ಮತ್ತು ಸೋಂಕಿನ ಲೆಕ್ಕದ ಬಗ್ಗೆ ಆರಂಭದಿಂದಲೂ ಅನುಮಾನಗಳಿವೆ. ಅದೇ ರೀತಿ ರಷ್ಯಾದ ಲೆಕ್ಕಾಚಾರವೂ ಅನೇಕ ಅನುಮಾನಗಳಿಗೆಡೆಮಾಡಿಕೊಟ್ಟಿದೆ. ಯುರೋಪ್ ದೇಶಗಳಲ್ಲಿ ಏಕಕಾಲದಲ್ಲಿ ಕೋವಿಡ್ ಹಾವಳಿ ಗರಿಷ್ಠ ಮಟ್ಟಕ್ಕೆ ತಲುಪಿ ಬಳಿಕ ಇಳಿಮುಖವಾಯಿತು. ಆದರೆ ಅಮೆರಿಕದಲ್ಲಿ ಎಪ್ರಿಲ್-ಮೇ ತಿಂಗಳಲ್ಲಿ ಪರಾಕಾಷ್ಠೆಯಲ್ಲೇ ಇತ್ತು. ಅದರಲ್ಲೂ ಕೇಂದ್ರಬಿಂದುವಾದ ನ್ಯೂಯಾರ್ಕ್‌ನಲ್ಲಿ ಇನ್ನೂ ಪರಿಸ್ಥಿತಿ ಸಂಪೂರ್ಣ ನಿಯಂತ್ರಣಕ್ಕೆ ಬಂದಿಲ್ಲ. ಅಮೆರಿಕದ ವಿಶಾಲ ಭೂಪ್ರದೇಶ ಹಾಗೂ ಹಲವಾರು ಕೋವಿಡ್ ಕೇಂದ್ರ ಬಿಂದುಗಳಿದ್ದುದೇ ಇದಕ್ಕೆ ಕಾರಣ. ನ್ಯೂಯಾರ್ಕ್‌ಗೆ ಉಳಿದೆಡೆಗಳಿಂತ ಮೊದಲೇ ವೈರಸ್ ಅಪ್ಪಳಿಸಿತು, ಎಪ್ರಿಲ್‌ನಲ್ಲಿ ಗರಿಷ್ಠ ಪ್ರಮಾಣಕ್ಕೇರಿತು. ಆದರೆ ಅಮೆರಿಕದ ಇತರೆಡೆಗಳಲ್ಲಿ ಆ ಬಳಿಕ ಕೋವಿಡ್ ಸಾವುಗಳು ವರದಿಯಾಗಲಾರಂಭಿಸಿದವು. ಲೂಸಿಯಾನ ಮತ್ತು ಮಿಶಿಗನ್ ರಾಜ್ಯಗಳು ತಕ್ಕಮಟ್ಟಿಗೆ ಕೋವಿಡ್ ನಿಯಂತ್ರಿಸುವಲ್ಲಿ ಸಫಲವಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ
Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ
ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ
ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ
ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ
MUST WATCH
ಹೊಸ ಸೇರ್ಪಡೆ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.