ದೇಶದ ಮಾಹಿತಿ ಕದಿಯಲು ಐಫೋನ್‌ ಆಮಿಷ

ದಿಲ್ಲಿಯ ಪಾಕ್‌ ಹೈಕಮಿಷನ್‌ನ ಇಬ್ಬರು ಅಧಿಕಾರಿಗಳ ಕರಾಳ ಚರಿತ್ರೆ

Team Udayavani, Jun 2, 2020, 5:40 AM IST

ದೇಶದ ಮಾಹಿತಿ ಕದಿಯಲು ಐಫೋನ್‌ ಆಮಿಷ

ಹೊಸದಿಲ್ಲಿ: ಭಾರತದ ಮಾಹಿತಿ ಒದಗಿಸಿದರೆ ಉಚಿತ ಐಫೋನ್‌,ಕೈತುಂಬಾ ಹಣ…
-ಇದು ಹೊಸದಿಲ್ಲಿಯಲ್ಲಿದ್ದ ಪಾಕ್‌ ಹೈಕಮಿಷನ್‌ನ ಇಬ್ಬರು ಅಧಿಕಾರಿಗಳ ಗೂಢಚಾರಿಕೆಯ ಕುತಂತ್ರ. ಈ ಆರೋಪದ ಹಿನ್ನೆಲೆಯಲ್ಲಿ ಅಬೀದ್‌ ಹುಸೇನ್‌ (42) ಮತ್ತು ಮೊಹಮ್ಮದ್‌ ತಾಹಿರ್‌ ಖಾನ್‌ (44) ಎಂಬ ಈ ಇಬ್ಬರನ್ನು ದೇಶದಿಂದ ಹೊರಹಾಕಲಾಗಿದೆ. ಇವರಿಬ್ಬರು ಪಾಕ್‌ ಗುಪ್ತಚರ ಸಂಸ್ಥೆ ಐಎಸ್‌ಐ ಬೆಂಬಲದಡಿ ಕೆಲಸ ಮಾಡುತ್ತಿದ್ದರು.

ಈ ಇಬ್ಬರೂ ಸೇನೆಗೆ ಸಂಬಂಧಿಸಿದ ರಹಸ್ಯ ದಾಖಲೆಗಳನ್ನು ಕಲೆಹಾಕುತ್ತಿರುವ ಬಗ್ಗೆ ಸೇನೆಯ ಗುಪ್ತಚರ ಇಲಾಖೆ ವಾರದ ಹಿಂದೆಯೇ ಮಾಹಿತಿ ಸಂಗ್ರಹಿಸಿತ್ತು. ತಮ್ಮ ಕಾರ್ಯಕ್ಕೆ ಸೇನೆಯ ಸಿಬಂದಿಯನ್ನೇ ಇವರು ಬಳಸಿಕೊಳ್ಳುತ್ತಿದ್ದರು. ಅವರನ್ನು ಸಂಪರ್ಕಿಸಿ, ಭಾರತೀಯರೆಂದು ಪರಿಚಯಿಸಿಕೊಂಡು ಬಳಿಕ ಅವರಿಂದ ಸೇನೆಗೆ ಸಂಬಂಧಿಸಿದ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದರು. ಅವರು ಯಾರನ್ನು ಸ್ನೇಹಿತರನ್ನಾಗಿಸಿಕೊಳ್ಳಬೇಕು ಎಂಬುದನ್ನು  ಐಎಸ್‌ಐ ನಿರ್ಧರಿಸುತ್ತಿತ್ತು!

ತೋರಿಸಿದ್ದು ನಕಲಿ ಆಧಾರ್‌!
ವಶಕ್ಕೆ ಒಳಗಾದ ಅನಂತರವೂ ಈ ಇಬ್ಬರೂ ತಾವು ದಿಲ್ಲಿ ನಿವಾಸಿಗಳು ಎಂದಿದ್ದಾರೆ. ಪೂರಕ ದಾಖಲೆಯಾಗಿ ಆಧಾರ್‌ ಕಾರ್ಡ್‌ ನೀàಡಿದ್ದ! ಅದರಲ್ಲಿ ಆತನ ಹೆಸರು ತಪ್ಪಾಗಿ ಮುದ್ರಿತವಾಗಿದ್ದು, ಅದೂ ನಕಲಿ ಎಂಬುದು ಪತ್ತೆಯಾಗಿದೆ.

ಸಾಕ್ಷ್ಯ ಸಹಿತ ಹಿಡಿದರು!
ಇವರಿಬ್ಬರ ಮೇಲೆ ಕೆಲವು ದಿನಗಳಿಂದ ನಿಗಾ ಇಡಲಾಗಿತ್ತಲ್ಲದೆ, ಸಾಕ್ಷ್ಯಸಹಿತ ಹಿಡಿದುಹಾಕಲು ವಿಶೇಷ ತಂಡ ರಚಿಸಲಾಗಿತ್ತು. ಇತ್ತೀಚೆಗೆ ಸೇನೆಯ ರಹಸ್ಯ ದಾಖಲೆಗಳನ್ನು ತರುವುದಾಗಿ ಹೇಳಿದ್ದ ಭಾರತೀಯನೊಬ್ಬನನ್ನು ಭೇಟಿ ಮಾಡಲು ಇವರು ತೆರಳಿದ್ದರು. ಆ ವ್ಯಕ್ತಿಯಿಂದ ದಾಖಲೆ ಪಡೆದು ಹಣ ಮತ್ತು ಐಫೋನ್‌ ಉಡುಗೊರೆಯಾಗಿ ನೀಡಿದರು. ತತ್‌ಕ್ಷಣವೇ ಮರೆಯಲ್ಲಿ ಅವಿತಿದ್ದ ಸೇನಾ ಗುಪ್ತಚರ ಇಲಾಖೆ ಅಧಿಕಾರಿಗಳು ಮಿಂಚಿನ ದಾಳಿ ನಡೆಸಿ ಮೂವರನ್ನು ಮತ್ತು ಆ ಅಧಿಕಾರಿಗಳನ್ನು ಕರೆದೊಯ್ದಿದ್ದ ಜಾವೇದ್‌ ಹುಸೇನ್‌ (36) ಎಂಬ ಕಾರು ಚಾಲಕನನ್ನು ವಶಕ್ಕೆ ಪಡೆದರು. ಜಾವೇದ್‌ ಹುಸೇನ್‌ ಪಾಕಿಸ್ಥಾನದ ಭಕ್ಕಾರ್‌ ಎಂಬ ಊರಿನವನಾಗಿದ್ದು , ಇಂಥ ಕೆಲಸಗಳಿದ್ದಾಗ ಈ ಅಧಿಕಾರಿಗಳನ್ನು ನಿಗದಿತ ಸ್ಥಳಕ್ಕೆ ಕರೆದೊಯ್ದು ಮತ್ತೆ ಅವರನ್ನು ಹೈಕಮಿಷನ್‌ ಕಚೇರಿಗೆ ತಲುಪಿಸುತ್ತಿದ್ದ.

ಟಾಪ್ ನ್ಯೂಸ್

Test Team; ಆಸ್ಟ್ರೇಲಿಯಾ ಪ್ರಕಟಿಸಿದ ವರ್ಷದ ಟೆಸ್ಟ್‌ ತಂಡಕ್ಕೆ ಭಾರತೀಯ ನಾಯಕ; ರೋಹಿತ್‌ ಅಲ್ಲ

TestTeam; ಆಸ್ಟ್ರೇಲಿಯಾ ಪ್ರಕಟಿಸಿದ ವರ್ಷದ ಟೆಸ್ಟ್‌ ತಂಡಕ್ಕೆ ಭಾರತೀಯ ನಾಯಕ; ರೋಹಿತ್‌ ಅಲ್ಲ

10-koratagere

Koratagere: ರಸ್ತೆಯಲ್ಲಿ ಚರಂಡಿ ನೀರು; ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಗ್ರಾಮಸ್ಥರು

9-rabakavi

Rabakavi: ಬ್ರಹ್ಮಾನಂದ ಉತ್ಸವ; ಗಮನ ಸೆಳೆದ ರೊಟ್ಟಿ ಜಾತ್ರೆ

8-

Panaji: ಕಲಂಗುಟ್ ಬೀಚ್ ನಲ್ಲಿ ಪ್ರವಾಸಿ ಕೊಲೆ

Glass Bridge: India’s first glass bridge inaugurated at Kanyakumari

Glass Bridge: ಕನ್ಯಾಕುಮಾರಿಯಲ್ಲಿ ಭಾರತದ ಮೊದಲ ಗಾಜಿನ ಸೇತುವೆ ಉದ್ಘಾಟನೆ

Rane-Kerala-Cm

Rane’s Remark: ಕೇರಳ ʼಮಿನಿ ಪಾಕಿಸ್ಥಾನʼವೆಂದ ಸಚಿವ ನಿತೇಶ್ ರಾಣೆ; ಸಿಎಂ ಪಿಣರಾಯಿ ಖಂಡನೆ

Team India;  key players to miss England series; young batsman takes on leadership role

Team India: ಇಂಗ್ಲೆಂಡ್‌ ಸರಣಿಗಿಲ್ಲ ಪ್ರಮುಖ ಆಟಗಾರರು; ಯುವ ಬ್ಯಾಟರ್‌ ಗೆ ನಾಯಕತ್ವದ ಹೊಣೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8-

Panaji: ಕಲಂಗುಟ್ ಬೀಚ್ ನಲ್ಲಿ ಪ್ರವಾಸಿ ಕೊಲೆ

Glass Bridge: India’s first glass bridge inaugurated at Kanyakumari

Glass Bridge: ಕನ್ಯಾಕುಮಾರಿಯಲ್ಲಿ ಭಾರತದ ಮೊದಲ ಗಾಜಿನ ಸೇತುವೆ ಉದ್ಘಾಟನೆ

Rane-Kerala-Cm

Rane’s Remark: ಕೇರಳ ʼಮಿನಿ ಪಾಕಿಸ್ಥಾನʼವೆಂದ ಸಚಿವ ನಿತೇಶ್ ರಾಣೆ; ಸಿಎಂ ಪಿಣರಾಯಿ ಖಂಡನೆ

ರಾಜ್ಯದ ಜನರಲ್ಲಿ ಕ್ಷಮೆಯಾಚಿಸುತ್ತೇನೆ… ಮಣಿಪುರ ಹಿಂಸಾಚಾರದ ಕುರಿತು ಸಿಎಂ ಬಿರೇನ್ ಸಿಂಗ್

ರಾಜ್ಯದ ಜನರಲ್ಲಿ ಕ್ಷಮೆಯಾಚಿಸುತ್ತೇನೆ… ಮಣಿಪುರ ಹಿಂಸಾಚಾರದ ಕುರಿತು ಸಿಎಂ ಬಿರೇನ್ ಸಿಂಗ್

Mumbai-Nagpur ಹೆದ್ದಾರಿಯಲ್ಲಿ ಒಂದೇ ದಿನ 50 ಕ್ಕೂ ಹೆಚ್ಚು ವಾಹನಗಳು ಪಂಕ್ಚರ್…

Mumbai-Nagpur: ಸಮೃದ್ಧಿ ಹೆದ್ದಾರಿಯಲ್ಲಿ ಏಕಾಏಕಿ 50 ಕ್ಕೂ ಹೆಚ್ಚು ವಾಹನಗಳು ಪಂಕ್ಚರ್…

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

11-

Kottigehara:ಸಿಲಿಂಡರ್ ಸ್ಫೋಟ, ಮನೆ ಸಂಪೂರ್ಣ ನೆಲಸಮ,ಕೆಲಸಕ್ಕೆ ಹೋಗಿದ್ದರಿಂದ ಮನೆಮಂದಿ ಪಾರು

Test Team; ಆಸ್ಟ್ರೇಲಿಯಾ ಪ್ರಕಟಿಸಿದ ವರ್ಷದ ಟೆಸ್ಟ್‌ ತಂಡಕ್ಕೆ ಭಾರತೀಯ ನಾಯಕ; ರೋಹಿತ್‌ ಅಲ್ಲ

TestTeam; ಆಸ್ಟ್ರೇಲಿಯಾ ಪ್ರಕಟಿಸಿದ ವರ್ಷದ ಟೆಸ್ಟ್‌ ತಂಡಕ್ಕೆ ಭಾರತೀಯ ನಾಯಕ; ರೋಹಿತ್‌ ಅಲ್ಲ

10-koratagere

Koratagere: ರಸ್ತೆಯಲ್ಲಿ ಚರಂಡಿ ನೀರು; ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಗ್ರಾಮಸ್ಥರು

ಸಂಸ್ಕೃತ ಕಾಲೇಜಿನ 120ರ ಸಂಭ್ರಮದಲ್ಲಿ ಹಳೆ ವಿದ್ಯಾರ್ಥಿಗಳು ಒಟ್ಟಾಗಲಿ: ವಿ| ಪ್ರಸನ್ನಾಚಾರ್ಯ

ಸಂಸ್ಕೃತ ಕಾಲೇಜಿನ 120ರ ಸಂಭ್ರಮದಲ್ಲಿ ಹಳೆ ವಿದ್ಯಾರ್ಥಿಗಳು ಒಟ್ಟಾಗಲಿ: ವಿ| ಪ್ರಸನ್ನಾಚಾರ್ಯ

9-rabakavi

Rabakavi: ಬ್ರಹ್ಮಾನಂದ ಉತ್ಸವ; ಗಮನ ಸೆಳೆದ ರೊಟ್ಟಿ ಜಾತ್ರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.