ಶಂಕರನಾರಾಯಣ ಪೊಲೀಸ್‌ಗೆ ಕೋವಿಡ್, 18 ಸಿಬಂದಿಗೆ ಕ್ವಾರಂಟೈನ್; ಠಾಣೆ ಸ್ಥಳಾಂತರ
Team Udayavani, Jun 2, 2020, 5:03 AM IST
ಸಿದ್ದಾಪುರ: ಶಂಕರನಾರಾಯಣ ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್‌ಗೆ ಕೋವಿಡ್ ದೃಢವಾದ ಕಾರಣ ಮುಂಜಾಗ್ರತಾ ಕ್ರಮವಾಗಿ ಸೋಮವಾರ ಪೊಲೀಸ್ ಠಾಣೆಯನ್ನು ಶಂಕರನಾರಾಯಣ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸ್ಥಳಾಂತರಿಸಲಾಗಿದೆ. ಜತೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 18 ಸಿಬಂದಿಯನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ.
ಕೋಟತಟ್ಟು ಸೀಲ್‌ಡೌನ್
ಕೋಟ: ಸಮೀಪ ಕೋಟತಟ್ಟುವಿನ ನಿವಾಸಿ ಮಹಿಳಾ ಕಾನ್‌ಸ್ಟೆಬಲ್‌ಗೆ ಕೋವಿಡ್ ಬಾಧಿಸಿರುವ ಹಿನ್ನೆಲೆಯಲ್ಲಿ ಅವರ ಮನೆಯ ಪರಿಸರದ 50 ಮೀಟರ್ ವ್ಯಾಪ್ತಿಯ ಮನೆಗಳನ್ನು ಸೀಲ್‌ಡೌನ್ ಮಾಡಲಾಗಿದೆ ಹಾಗೂ ಸ್ಥಳೀಯರಿಗೆ ಮುನ್ನೆಚ್ಚರಿಕೆ ವಹಿಸುವಂತೆ ತಿಳಿಸಲಾಗಿದೆ.
ಕುಂದಾಪುರ, ಬೈಂದೂರು: ವಿವಿಧೆಡೆ ಸೀಲ್‌ಡೌನ್
ಕುಂದಾಪುರ: ಕ್ವಾರಂಟೈನ್ ಅವಧಿ ಮುಗಿದು ಗಂಟಲ ದ್ರವ ಪರೀಕ್ಷಾ ವರದಿ ಬರುವ ಮುನ್ನವೇ ಮನೆಗೆ ಮರಳಿದ ಕೆಲವರಲ್ಲಿ ಕೋವಿಡ್ ಪಾಸಿಟಿವ್ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಆ ಮನೆಗಳ ಸುಮಾರು 200 ಮೀ. ಪ್ರದೇಶವನ್ನು ಸೀಲ್‌ಡೌನ್ ಮಾಡುವ ಕ್ರಮ ಸೋಮವಾರವೂ ಮುಂದುವರಿದಿದೆ.
ನಾಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಚುಂಗಿಗುಡ್ಡೆ, ಆಲೂರು ಪಂಚಾ ಯತ್ ವ್ಯಾಪ್ತಿಯ ಸೆಳಕೋಡು, ಹರ್ಕೂರು, ದೊಂಬೆ ಶಿರೂರು, ಯಡ್ತರೆ, ಕೆರ್ಗಾಲ್ ಗ್ರಾಮಗಳಲ್ಲಿನ ಒಟ್ಟು 6 ಕಡೆಗಳಲ್ಲಿ ಒಟ್ಟು 15 ಪ್ರಕರಣಗಳು ಕಂಡು ಬಂದಿದ್ದು ಕಂಟೈನ್ಮೆಂಟ್ ಝೋನ್ ಎಂದು ಸೀಲ್‌ಡೌನ್ ಮಾಡಲಾಗಿದೆ. ಶಂಕರನಾರಾಯಣ ಠಾಣೆಗೆ ಸೋಂಕಿತರೊಬ್ಬರು ಭೇಟಿ ನೀಡಿದ್ದಾರೆ ಎಂಬ ಸಂಶಯದ ಹಿನ್ನೆಲೆಯಲ್ಲಿ ಠಾಣೆಯನ್ನು ಸ್ಯಾನಿಟೈಸೇಶನ್ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಜಾಗ ಖರೀದಿಗೆ ಕರಾರು ಮಾಡಿಸಿ ವಂಚನೆ: ಪ್ರಕರಣ ದಾಖಲು
Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ
Violation of the Code of Conduct; ಕೋಟ, ಗುರ್ಮೆ ವಿರುದ್ಧದ ಪ್ರಕರಣ ರದ್ದು
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
MUST WATCH
ಹೊಸ ಸೇರ್ಪಡೆ
Daily Horoscope: ಅವಿವಾಹಿತರಿಗೆ ಸಂಬಂಧ ಕೂಡಿಬರುವ ಸೂಚನೆ, ಆರೋಗ್ಯದ ಕಡೆಗೆ ಗಮನ ಇರಲಿ
Election Results: ಝಾರ್ಖಂಡ್, ಮಹಾರಾಷ್ಟ್ರದಲ್ಲಿ ಪಟ್ಟ ಯಾರಿಗೆ?
Udupi: ಜಾಗ ಖರೀದಿಗೆ ಕರಾರು ಮಾಡಿಸಿ ವಂಚನೆ: ಪ್ರಕರಣ ದಾಖಲು
Adani ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್?
Bangaluru; ವ್ಯಕ್ತಿ ಹೊಟ್ಟೆಯಿಂದ 50 ಟೂತ್‌ಬ್ರೆಷ್ ಹೊರತೆಗೆದ ವೈದ್ಯರು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.