ಎಚ್ಚರ! ರಾಜ್ಯದಲ್ಲಿ ಅಪರಾಧ ಪ್ರಕರಣ ಹೆಚ್ಚುವ ಸಾಧ್ಯತೆಯಿದೆ : ಭಾಸ್ಕರ್ ರಾವ್
Team Udayavani, Jun 1, 2020, 11:05 PM IST
ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ನಿಂದಾಗಿ ಅಪರಾಧ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಜನತೆಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಇದರಿಂದ ತಮ್ಮ ಮತ್ತು ತಮ್ಮವರ ರಕ್ಷಣೆ ತಾವೇ ಮಾಡಿಕೊಳ್ಳಬೇಕಾಗಿದೆ ಸಾಕಷ್ಟು ಮಂದಿಗೆ ಕೆಲಸವಿಲ್ಲದೇ ಆದಾಯವೇ ಇಲ್ಲದಂತಾಗಿದೆ. ಪರಿಣಾಮ ಯಾವ ಕೃತ್ಯಕ್ಕಾದರೂ ಪ್ರಚೋದನೆ ಸಂಭವಿಸುವ ಸಾಧ್ಯತೆ ಇದೆ ಎಂದು ಭಾಸ್ಕರ್ ರಾವ್ ಹೇಳಿದ್ದಾರೆ. ಹೀಗಾಗಿ ಕೆಲವೊಂದು ಅಗತ್ಯ ಅಂಶಗಳನ್ನು ಮನದಲ್ಲಿಟ್ಟುಕೊಂಡಿರಲು ಅವರು ಮನವಿ ಮಾಡಿದ್ದಾರೆ .
1. ಜನರು ತುಂಬಾ ಜಾಗರೂಕರಾಗಿರಬೇಕು ಮತ್ತು ಮನೆಯಲ್ಲಿರುವವರು, ಸ್ಕೂಲ್ಗೆ ಹೋಗುವ ಮಕ್ಕಳು, ಕಾಲೇಜಿಗೆ ಹೋಗುವ ಹುಡುಗ ಅಥವಾ ಹುಡುಗಿಯರು, ಕೆಲಸಕ್ಕೆ ಹೋಗುವ ಹೆಂಗಸರು ಅಥವಾ ಗಂಡಸರು ಜಾಗ್ರತೆಯಿಂದಿರಬೇಕು .
2. ಯಾರೂ ಸಹ ದುಬಾರಿ ವಾಚ್ ಧರಿಸಬೇಡಿ .
3. ದುಬಾರಿ ಬೆಲೆಯ ಸರಗಳು, ಬಳೆಗಳು, ಕಿವಿಯೋಲೆ ಧರಿಸಬೇಡಿ ಮತ್ತು ನಿಮ್ಮ ಕೈಚೀಲದ ಬಗ್ಗೆ ಜೋಪಾನವಿರಲಿ .
4. ಗಂಡಸರೇ ಅದಷ್ಟೂ ದುಬಾರಿ, ವಾಚ್, ಬ್ರಾಸ್ಲೈಟ್ ಮತ್ತು ಚೈನ್ ಧರಿಸುವುದರಿಂದ ದೂರವಿರಿ .
5. ಸಾರ್ವಜನಿಕವಾಗಿ ಹೆಚ್ಚು ಮೊಬೈಲ್ ಪೋನ್ ಬಳಕೆ ಮಾಡಬೇಡಿ. ಅದಷ್ಟೂ ಕಡಿಮೆ ಬಳಸಿ .
6. ಯಾವುದೇ ಅಪರಿಚಿತರಿಗೆ ತಮ್ಮ ವಾಹನದಲ್ಲಿ ಡ್ರಾಪ್ ನೀಡಬೇಡಿ .
7. ಅಗತ್ಯಕ್ಕಿಂತ ಹೆಚ್ಚು ಹಣವನ್ನು ಜೊತೆಯಲ್ಲಿಟ್ಟುಕೊಂಡು ಓಡಾಡಬೇಡಿ .
8. ಚಾಲನೆಯ ವೇಳೆ ನಿಮ್ಮ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಬಗ್ಗೆ ಎಚ್ಚರವಹಿಸಿ .
9. ಆಗಾಗ ಮನೆಗೆ ಕರೆ ಮಾಡಿ ನಿಮ್ಮ ಕುಟುಂಬದವರ ಜೊತೆ ಮಾತನಾಡಿ, ಹಿರಿಯರು, ಮಕ್ಕಳ ಬಗ್ಗೆ ತಿಳಿದುಕೊಳ್ಳಿ .
10. ನಿಮ್ಮ ಮನೆಯವರಿಗೆ ತಿಳಿಸಿ, ಹಿರಿಯರು ಮಹಿಳೆಯರು ಬಾಗಿಲು ತೆಗೆಯುವ ವೇಳೆ ಸುರಕ್ಷತೆ ವಹಿಸಲು ತಿಳಿಸಿ, ಗೇಟ್ ಅಥವಾ ಗ್ರಿಲ್ ಲಾಕ್ ಮಾಡಿರಿ . ಯಾವುದೇ ಪಾರ್ಸಲ್ ತೆಗೆದುಕೊಳ್ಳುವ ವೇಳೆ ಗೇಟ್ ಅಥವಾ ಗ್ರಿಲ್ ಬಳಿ ತುಂಬಾ ಹತ್ತಿರ ಹೋಗಬೇಡಿ .
11. ಮನೆಯಾಚೆ ಹೋಗುವ ಮಕ್ಕಳಿಗೆ ಅದಷ್ಟೂ ಬೇಗ ಮನೆಗೆ ವಾಪಸ್ ಆಗಲು ತಿಳಿಸಿ .
12. ಮನೆಗೆ ಹೋಗುವಾಗ ಯಾವುದೇ ಶಾರ್ಟ್ಕಟ್ ರಸ್ತೆಗಳನ್ನ ಬಳಸಬೇಡಿ, ಅದಷ್ಟೂ ಪ್ರಮುಖ ರಸ್ತೆಗಳನ್ನೇ ಬಳಸಿ .
13. ಯುವಕರು ಮನೆಯಾಚೆ ಇರುವ ವೇಳೆ ಆದಷ್ಟೂ ನಿಮ್ಮ ಸುತ್ತಮುತ್ತಲಿನ ಘಟನೆಗಳ ಬಗ್ಗೆ ಗಮನವಿಡಿ .
14. ಆದಷ್ಟೂ ಮೊಬೈಲ್ನಲ್ಲಿ ಎಮರ್ಜೆನ್ಸಿ ನಂಬರ್ ಇಟ್ಟುಕೊಂಡಿರಿ .
15. ಆದಷ್ಟೂ ಜನರ ನಡುವೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ. ಅಲ್ಲದೇ ಸಾರ್ವಜನಿಕರು ಆದಷ್ಟೂ ಮಾಸ್ಕ್ ಧರಿಸಿರಬೇಕು .
16. ಕ್ಯಾಬ್ ಸರ್ವೀಸ್ ಪಡೆಯುವವರು ಆದಷ್ಟೂ ನಿಮ್ಮ ಟ್ರಾವೆಲ್ ಡಿಟೇಲ್ಸ್ ಅನ್ನು ನಿಮ್ಮ ಪೋಷಕರಿಗೆ, ಸಂಬಂಧಿಕರಿಗೆ, ಒಡಹುಟ್ಟಿದವರಿಗೆ, ಸ್ನೇಹಿತರಿಗೆ, ಕೇರ್ ಟೇಕರ್ಸ್ ಜೊತೆ ಹಂಚಿಕೊಂಡು ಓಡಾಡಿ .
17. ಸರ್ಕಾರಿ ವಾಹನದ ಸರ್ವೀಸ್ ಹೆಚ್ಚು ಬಳಸಲು ಯತ್ನಿಸಿ. ಅದರಲ್ಲೂ ಹೆಚ್ಚು ರಷ್ ಇರುವ ಬಸ್ಗಳನ್ನು ಸಹ ಅವೈಡ್ ಮಾಡಿ.
18. ಆದಷ್ಟೂ ಬೆಳಗ್ಗೆ 6 ಗಂಟೆಯ ನಂತರ ವಾಕ್ಗೆ ಹೋಗಿ, ಸಂಜೆ 8ರ ಒಳಗೆ ವಾಕ್ ಮುಗಿಸಿ ಮನೆ ಸೇರಿಕೊಳ್ಳಿ, ಅದಷ್ಟೂ ಮುಖ್ಯ ರಸ್ತೆಯ ಅಕ್ಕ-ಪಕ್ಕದಲ್ಲೇ ವಾಕ್ ಮಾಡಿ .
20. ಮಾಲ್, ಬೀಚ್, ಪಾರ್ಕ್ಗಳಲ್ಲಿ ಹೆಚ್ಚು ಸಮಯ ಕಳೆಯಬೇಡಿ .
21. ಚಿಕ್ಕ ಮಕ್ಕಳನ್ನು ಟ್ಯೂಷನ್ಗೆ ದೊಡ್ಡವರೇ ಕರೆದುಕೊಂಡು ಹೋಗಿ ಕರೆದುಕೊಂಡು ಬನ್ನಿ.
22. ಬೆಲೆಬಾಳುವ ವಸ್ತುಗಳನ್ನ ವಾಹನದಲ್ಲಿ ಇಡಬೇಡಿ .
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?
ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
Ambedkar Row: ಕಾಂಗ್ರೆಸ್ ಎಂದರೆ ಫೇಕ್ ಗಾಂಧಿಗಳ ಪಕ್ಷ: ಛಲವಾದಿ ನಾರಾಯಣಸ್ವಾಮಿ
Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.