ಎಗ್ಗಿಲ್ಲದೆ ಸಾಗಿದೆ ಅಕ್ರಮ ಮರಳುಗಾರಿಕೆ
ಕಾನೂನು ನಿಯಮ ಲೆಕ್ಕಕ್ಕಿಲ್ಲ-ಕಣ್ಮುಚ್ಚಿ ಕುಳಿತಿರುವ ಅಧಿಕಾರಿಗಳು
Team Udayavani, Jun 2, 2020, 12:17 PM IST
ಸಾಂದರ್ಭಿಕ ಚಿತ್ರ
ಹರಿಹರ: ತಾಲೂಕಿನ ತುಂಗಭದ್ರಾ ನದಿ ಪಾತ್ರದಲ್ಲಿ ಅವ್ಯಾಹತವಾಗಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದರೂ ಅಧಿಕಾರಿಗಳು ಮಾತ್ರ ತಮಗೆ ಸಂಬಂಧವೇ ಇಲ್ಲವೆಂಬಂತೆ ವರ್ತಿಸುತ್ತಿದ್ದಾರೆ ಎಂಬ ಆರೋಪಗಳು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ. ಮರಳು ಸಾಗಿಸುವ ವಾಹನಕ್ಕೆ ಜಿಪಿಎಸ್ ಅಳವಡಿಕೆ, ಪರ್ಮಿಟ್ ಕಡ್ಡಾಯ, ಬೋಟ್ -ಜೆಸಿಬಿ ಬಳಸುವುದು ಹಾಗೂ ರಾತ್ರಿ ವೇಳೆ ಮರಳುಗಾರಿಕೆ ನಿಷೇಧ ಇತ್ಯಾದಿ ಅಕ್ರಮ ತಡೆಗಟ್ಟಲು ಸರ್ಕಾರ ಕೈಗೊಂಡಿರುವ ನಿಯಮಗಳೆನ್ನೆಲ್ಲ ಗಾಳಿಗೆ ತೂರಿ ಮರಳು ಗಣಿಗಾರಿಕೆ ನಡೆಯುತ್ತಿದ್ದರೂ ತಡೆಯುವವರಿಲ್ಲದಾಗಿದೆ.
ಎಲ್ಲೆಲ್ಲಿ ಅಕ್ರಮ: ನಗರದ ಹೊಸ ಭರಂಪುರ, ಮೆಟ್ಟಿಲು ಹೊಳೆ ರಸ್ತೆ, ದಾವಣಗೆರೆ ವಾಟರ್ ವಕ್ಸì ಹಿಂಭಾಗ, ನಾರಾಯಣಾಶ್ರಮ ಮುಂತಾದ ನದಿ ದಡದಲ್ಲಿ ರಾತ್ರಿಯಾಗುತ್ತಿದ್ದಂತೆ ಸೀಮೆಂಟ್ ಚೀಲಗಳಲ್ಲಿ ಮರಳು ತುಂಬಿ ಸಾಗಿಸಲಾಗುತ್ತಿದೆ. ಕೆಲ ಪ್ರಭಾವಿಗಳು ಕೈಲಾಸ ನಗರದ ನದಿ ಪಾತ್ರದಲ್ಲೆ ಟ್ರ್ಯಾಕ್ಟರ್, ಮಜಾಡಾ
ಲಾರಿ ನಿಲ್ಲಿಸಿಕೊಂಡು ಮರಳು ತುಂಬುತ್ತಾರೆ ಎಂದು ಸ್ಥಳೀಯರು ದೂರುತ್ತಾರೆ. ಗ್ರಾಮೀಣ ಭಾಗದ ಹಳೇಹರ್ಲಾಪುರ, ಗುತ್ತೂರು, ಮಾದಾಪುರಹಳ್ಳ, ದೀಟೂರು
ಮುಂತಾದ ಹಲವು ಗ್ರಾಮಗಳಲ್ಲಿ ಸಂಜೆಯಾಗುತ್ತಲೆ ತೆಪ್ಪ ಮತ್ತು ರಬ್ಬರ್ ಟೂಬ್ ಗಳ ಸಹಾಯದಿಂದ ಮರಳು ತಂಬಲಾಗುತ್ತಿದೆ. ನೀರು ಕಡಿಮೆ ಇರುವುದರಿಂದ ನದಿ ಆಚೆಯ ರಾಣಿಬೆನ್ನೂರು ತಾಲೂಕಿನ ನಲವಾಗಲು, ಹಿರೇಬಿದರಿ, ಐರಣಿ, ಮಾಕನೂರು ಗ್ರಾಮ ವ್ಯಾಪ್ತಿಗೆ ಸೇರಿರುವ ಮರಳನ್ನೂ ಸಹ ಇತ್ತ ತಂದು ಸಾಗಿಸಲಾಗುತ್ತಿದೆ.
ಹೆಸರಿಗಷ್ಟೆ ಟಾಸ್ಕ್ ಪೋರ್ಸ್ : ಅಕ್ರಮ ಮರಳುಗಾರಿಕೆ ತಡೆಗಟ್ಟಲು ತಾಲೂಕಿನಲ್ಲಿರುವ 7 ಅಧಿಕಾರಿಗಳ ಪ್ರತ್ಯೇಕ 7 ತಂಡಗಳು, ಇವುಗಳ ಮೇಲುಸ್ತುವಾರಿಗೆ ತಹಶೀಲ್ದಾರರ ನೇತೃತ್ವದಲ್ಲಿರುವ ಟಾಸ್ಕ್ ಪೋರ್ಸ್ ಸಮಿತಿ ಹೆಸರಿಗಷ್ಟೆ ಎಂಬಂತಾಗಿದೆ. ನೂತನ ಗ್ರಾಮಾಂತರ ಡಿವೈಎಸ್‌ಪಿ ಇತ್ತೀಚೆಗೆ ರಾತ್ರಿ ವೇಳೆ ಏಕಾಏಕಿ ಹರ್ಲಾಪುರ ಸಮೀಪದ ನದಿ ದಡಕ್ಕೆ ಬಂದು ಆಕ್ರಮ ಸಾಗಣೆಯಲ್ಲಿ ತೊಡಗಿದ ಲಾರಿಗಳನ್ನು ಹಿಡಿದು ಪ್ರಕರಣ ದಾಖಲಿಸಿದ್ದು ಹೊರತುಪಡಿಸಿದರೆ ಅಕ್ರಮ ತಡೆಯು ಯಾವುದೇ ಪ್ರಯತ್ನಗಳು ನಡೆಯುತ್ತಿಲ್ಲ. ಕಟ್ಟಡ ಕಾಮಗಾರಿ ಕೈಗೊಂಡಿರುವ ಸ್ಥಳೀಯರು ಮರಳಿಗಾಗಿ ಪರದಾಡುತ್ತಿದ್ದಾರೆ,
ಪ್ರಭಾವಿಗಳು ಮಾತ್ರ ಅಕ್ಕಪಕ್ಕದ ಜಿಲ್ಲೆಗಳಿಗೆ ಹಗಲಿರುಳು ಮರಳು ಸಾಗಿಸಿ, ದುರ್ಲಾಭ ಪಡೆಯುತ್ತಿದ್ದಾರೆ. ಮೇಲಾಧಿಕಾರಿಗಳು ತಮ್ಮ ಅಧೀನ ಅಧಿಕಾರಿಗಳಿಂದ ವರದಿ ಸಂಗ್ರಹಿಸದೇ, ಖುದ್ದಾಗಿ ನದಿಪಾತ್ರಗಳಿಗೆ ಭೇಟಿ ನೀಡಿ ವಸ್ತುಸ್ಥಿತಿ ಗಮನಿಸಬೇಕು. ಅಕ್ರಮ ಮರಳುಗಾರಿಕೆ ತಡೆಗಟ್ಟಲು ಕಟ್ಟುನಿಟ್ಟಾದ ಕ್ರಮಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ರಾತ್ರಿ ವೇಳೆ ಲಾರಿಗಳಲ್ಲಿ ಸಾಗಾಟ
ತಾಲೂಕಿನಲ್ಲಿ ರಾತ್ರಿಯಿಡಿ ಬೃಹತ್ ಲಾರಿಗಳಲ್ಲಿ ಮರಳು ಸಾಗಿಸಲಾಗುತ್ತಿದೆ. ಪ್ರಸ್ತುತ ಲಾಕ್‌ಡೌನ್ ನಿಯಮಗಳಲ್ಲೂ ರಾತ್ರಿ ವೇಳೆ ಇಂತಹ ಚಟುವಟಿಕೆ ನಿಷೇಧಿಸಲ್ಪಟ್ಟಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ರಾತ್ರಿಯಿಡೀ ಪೈಪೋಟಿಗೆ ಬಿದ್ದರಂತೆ ಓಡುವ ಲಾರಿಗಳ ಸದ್ದಿಗೆ ಗ್ರಾಮಸ್ಥರು ನಿದ್ದೆಯಿಲ್ಲದೆ ಜಾಗರಣೆ ಮಾಡಬೇಕಾಗಿದೆ. ರಸ್ತೆ ಅಕ್ಕಪಕ್ಕದ ವಾಸದ ಮನೆಗಳು, ಜಮೀನಿನ ಬೆಳೆಗಳು ಧೂಳುಮಯವಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಗೆಳೆಯನನ್ನೇ ಕೊಲೆ ಮಾಡಿದ ಪ್ರಕರಣ… ಆರೋಪಿಗೆ ಜೀವಾವಧಿ ಶಿಕ್ಷೆ
ಮೀಸಲಾತಿಗೆ ಒತ್ತಾಯಿಸಿ ಡಿ.10ರಂದು ಸುವರ್ಣ ಸೌಧಕ್ಕೆ ಮುತ್ತಿಗೆ: ಬಸವ ಜಯಮೃತ್ಯುಂಜಯ ಸ್ವಾಮೀಜಿ
Politics: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ: ಬಿಎಸ್ ಯಡಿಯೂರಪ್ಪ
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
Davanagere: ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ರಚನೆಯಾದ 3 ತಂಡಗಳೇ ಅಧಿಕೃತ: ರೇಣುಕಾಚಾರ್ಯ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.