ದಿಲ್ಲಿ ಕೋವಿಡ್ ರೋಗಿಗಳ ಶುಶ್ರೂಷೆಗೆ ಐಸೋಲೇಷನ್ ಕೋಚ್ ನಿಯೋಜನೆ
Team Udayavani, Jun 2, 2020, 7:10 PM IST
ಹೊಸದಿಲ್ಲಿ: ಕೋವಿಡ್-19 ಭೀತಿ ಹಿನ್ನೆಲೆಯಲ್ಲಿ ರೋಗಿಗಳಿಗಾಗಿ ರೈಲ್ವೇ ಈ ಮೊದಲೇ ಐಸೋಲೇಷನ್ ಕೋಚ್‌ಗಳನ್ನು ಸಿದ್ಧಪಡಿಸಿದ್ದು ಗೊತ್ತೇ ಇದೆ. ಆದರೆ ಅವುಗಳನ್ನು ಈವರೆಗೆ ಬಳಕೆ ಮಾಡುವ ಸಂದರ್ಭ ಬಂದಿರಲಿಲ್ಲ. ಇದೀಗ ಮೊದಲ ಬಾರಿಗೆ ದಿಲ್ಲಿಯಲ್ಲಿ ಇಂತಹ ಒಂದು ಕೋಚ್ ಅನ್ನು ನಿಯೋಜಿಸಲಾಗಿದೆ.
ದೇಶಾದ್ಯಂತ 215 ರೈಲ್ವೇ ಸ್ಟೇಷನ್‌ಗಳಲ್ಲಿ ಪ್ರತೇಕ ಕೋಚ್‌ಗಳನ್ನು ರೋಗಿಗಳ ಶುಶ್ರೂಷೆಗಾಗಿ ನಿಲ್ಲಿಸಲಾಗಿದ್ದು, ದಿಲ್ಲಿಯಲ್ಲೂ ಈ ಸೌಲಭ್ಯ ಇದೆ. ದಿಲ್ಲಿಯಲ್ಲಿ 10 ಕೋಚ್‌ಗಳಿದ್ದು ಇವುಗಳಲ್ಲಿ ಒಟ್ಟು 160 ಬೆಡ್‌ಗಳಿವೆ. ಸುಮಾರು ಎರಡು ತಿಂಗಳು ಕಾಲ ಇವುಗಳನ್ನು ಬಳಸಲಾಗುತ್ತದೆ. ಈ ಕೋಚ್‌ಗಳನ್ನು ಶಾಕೂರ್ ಬಸ್ತಿ ರೈಲ್ವೇ ಸ್ಟೇಷನ್‌ನ ನಿರ್ವಹಣೆ ವಿಭಾಗದಲ್ಲಿ ಇಡಲಾಗಿದೆ.
ಇನ್ನು ಮುಂದಿನ ದಿನಗಳಲ್ಲಿ ಹೆಚ್ಚುವರಿ 160 ಬೆಡ್‌ಗಳಿರುವ 10 ಕೋಚ್‌ಗಳನ್ನು ವೈದ್ಯಕೀಯ ಸಿಬಂದಿ ಮತ್ತು ವೈದ್ಯರೊಂದಿಗೆ ದಿಲ್ಲಿಯಲ್ಲಿ ನಿಯೋಜಿಸಲಾಗುತ್ತದೆ ಎಂದು ರೈಲ್ವೇ ಇಲಾಖೆ ಹೇಳಿದೆ. ಇವುಗಳನ್ನು ಹಜರತ್ ನಿಜಾಮುದ್ದೀನ್ ರೈಲ್ವೇ ಸ್ಟೇಷನ್‌ನಲ್ಲಿ ಇಡಲಾಗುತ್ತದೆ. ಇದುವರೆಗೆ ರೈಲ್ವೇ 5321 ಕೋಚ್‌ಗಳನ್ನು ಕೋವಿಡ್ ಸೋಂಕಿತರ ಶುಶ್ರೂಷೆಗೆ ಸಿದ್ಧಪಿಡಿಸಿದೆ. ಇದರಲ್ಲಿ ವೈದ್ಯಕೀಯ ಪರಿಕರಗಳು, ಆಮ್ಲಜನಕ ವ್ಯವಸ್ಥೆ, ಸ್ಯಾನಿಟೈಸೇಷನ್ ವ್ಯವಸ್ಥೆ, ಹೊದಿಕೆ, ಹಾಸಿಗೆಗಳು, ಅತ್ಯುತ್ತಮ ಶೌಚಾಲಯಗಳು ಇವೆ. ಪ್ರತಿ ಕೋಚ್‌ಗಳನ್ನು ಸಿದ್ಧಪಡಿಸಲು 2 ಲಕ್ಷ ರೂ. ವೆಚ್ಚ ತಗುಲಿದೆ ಎಂದು ರೈಲ್ವೇ ಇಲಾಖೆ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
MUST WATCH
ಹೊಸ ಸೇರ್ಪಡೆ
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.