ಬೋಂಡಾ ಸವಿದು ಬೇಸರ ಮರೆಯಿರಿ!
Team Udayavani, Jun 3, 2020, 4:17 AM IST
ಬೋಂಡಾ, ಬಜ್ಜಿ, ಪಕೋಡದಂಥ ಕರಿದ ತಿನಿಸುಗಳು ಯಾರಿಗೆ ಇಷ್ಟವಿಲ್ಲ? ಸಣ್ಣ ಮಕ್ಕಳಿಂದ ಹಿಡಿದು, ಡಯಟ್ ಮಾಡುವ ಹುಡುಗಿಯರು ಕೂಡ ಬಜ್ಜಿ, ಬೋಂಡ ಅಂದರೆ ಬಾಯಲ್ಲಿ ನೀರು ಸುರಿಸುತ್ತಾರೆ. ಮತ್ಯಾಕೆ ತಡ, ಹೊಸ ಬಗೆಯಲ್ಲಿ ಬೋಂಡಾ ಮಾಡಿ ಸವಿಯಿರಿ.
ಮೆಂತೆ ಸೊಪ್ಪಿನ ಬೋಂಡಾ
ಬೇಕಾಗುವ ಸಾಮಗ್ರಿ: ಎಳೆ ಮೆಂತ್ಯೆ ಸೊಪ್ಪು, ಸಣ್ಣಗೆ ಹೆಚ್ಚಿದ ಈರುಳ್ಳಿ, ಕಡಲೆ ಹಿಟ್ಟು, ಖಾರದ ಪುಡಿ, ಉಪ್ಪು, ಅರಿಶಿನ, ಇಂಗು, ಓಮ ಕಾಳು, ಕರಿಯಲು ಎಣ್ಣೆ.
ಮಾಡುವ ವಿಧಾನ: ಮೆಂತ್ಯೆ ಸೊಪ್ಪನ್ನು ಸಣ್ಣಗೆ ಹೆಚ್ಚಿ, ಎಣ್ಣೆಯಲ್ಲಿ ಹುರಿದುಕೊಳ್ಳಿ. ಅದಕ್ಕೆ ಕಡಲೆ ಹಿಟ್ಟು, ಉಪ್ಪು, ಖಾರದ ಪುಡಿ, ಓಮ, ಚಿಟಿಕೆ ಸೋಡಾ, ಒಂದೆರಡು ಚಮಚ ಬಿಸಿ ಎಣ್ಣೆ ಹಾಕಿ ಗಟ್ಟಿಯಾಗಿ ಕಲಸಿಕೊಳ್ಳಿ (ಬೇಕಿದ್ದರೆ ಸ್ವಲ್ಪ ನೀರು ಬೆರೆಸಬಹುದು) ನಂತರ, ಕಾದ ಎಣ್ಣೆಯಲ್ಲಿ, ಹೊಂಬಣ್ಣ ಬರುವವರೆಗೆ ಕರಿಯಿರಿ.
ಮಿಶ್ರ ಸೊಪ್ಪಿನ ಬೋಂಡಾ
ಬೇಕಾಗುವ ಸಾಮಗ್ರಿ: ಮೂಲಂಗಿ ಎಲೆ, ನವಿಲುಕೋಸಿನ ಎಲೆ, ಪಾಲಕ್ ಸೊಪ್ಪು (ಸಮ ಪ್ರಮಾಣದಲ್ಲಿ), ಕಡಲೆ ಹಿಟ್ಟು, ಹುರಿದ ಎಳ್ಳು, ಉಪ್ಪು, ಖಾರ, ಅಡುಗೆ ಸೋಡಾ, ಹುರಿದ ಕೊಬ್ಬರಿ ತುರಿ, ಕಾಳು ಮೆಣಸು, ಹುಳಿ ಮಜ್ಜಿಗೆ, ಇಂಗು, ಕರಿಯಲು ಎಣ್ಣೆ. (ಮೇಲೆ ಬರೆದ ಸೊಪ್ಪನ್ನೆಲ್ಲ ಹಾಕಬೇಕೆಂದೇನೂ ಇಲ್ಲ. ಯಾವುದು ಸಿಗುತ್ತದೋ, ಅದನ್ನು ಬಳಸಿದರೆ ಆಯ್ತು.)
ಮಾಡುವ ವಿಧಾನ: ಮೇಲೆ ಹೇಳಿದ ಎಲ್ಲ ಸೊಪ್ಪುಗಳನ್ನು ಸಣ್ಣಗೆ ಹೆಚ್ಚಿಕೊಳ್ಳಿ. ಅದಕ್ಕೆ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಎಳ್ಳು, ಒಡೆದ ಕಾಳು ಮೆಣಸು, ಅಡುಗೆ ಸೋಡಾ, ಹುಳಿ ಮಜ್ಜಿಗೆ ಬೆರೆಸಿ ಕಲಸಿ (ನೀರು ಬೆರೆಸುವ ಅಗತ್ಯವಿಲ್ಲ) ಗಟ್ಟಿಯಾಗುವಷ್ಟು ಕಡಲೆ ಹಿಟ್ಟು ಬೆರೆಸಿ, ಬೋಂಡ ಕರಿಯಿರಿ.
ಮೈದಾ ಗೋಲಿ
ಬೇಕಾಗುವ ಸಾಮಗ್ರಿ: ಮೈದಾ ಹಿಟ್ಟು- ಎರಡು ಕಪ್, ತುಪ್ಪ- 2 ಚಮಚ, ಹಸಿಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು, ತುರಿದ ಕೊಬ್ಬರಿ, ಜೀರಿಗೆ, ಮೆಂತ್ಯೆ, ಉಪ್ಪು, ಸೋಡಾ, ಎಣ್ಣೆ.
ಮಾಡುವ ವಿಧಾನ: ಮೈದಾ ಹಿಟ್ಟಿಗೆ ತುಪ್ಪ ಹಾಕಿ, ಹಸಿ ಮೆಣಸಿನ ಚೂರು, ಉಪ್ಪು, ಸೋಡಾ, ಜೀರಿಗೆ ಮತ್ತು ಮೆಂತ್ಯೆ ಪುಡಿ ಸ್ವಲ್ಪ, ಕೊತ್ತಂಬರಿ ಸೊಪ್ಪು, ಹುರಿದ ಕೊಬ್ಬರಿ ತುರಿ ಹಾಕಿ ಚೆನ್ನಾಗಿ ಕಲಸಿ 5-6 ಗಂಟೆ ಹಾಗೆಯೇ ಬಿಡಿ. ನಂತರ, ಸಣ್ಣ ಸಣ್ಣ ಗೋಲಿ ಮಾಡಿ ಕರಿಯಿರಿ.
ಬನಾರಸಿ ಗೋಲಿ
ಬೇಕಾಗುವ ಸಾಮಗ್ರಿ: ಕಡಲೆಬೇಳೆ- 4 ಬಟ್ಟಲು, ಮೊಸರು- 1 ಬಟ್ಟಲು, ರುಚಿಗೆ ತಕ್ಕಷ್ಟು ಉಪ್ಪು, ಚಿಟಿಕೆ ಅಡುಗೆ ಸೋಡಾ, ಶುಂಠಿ, ಹಸಿಮೆಣಸು, ಕೊತ್ತಂಬರಿ ಸೊಪ್ಪು, ಇಂಗು, ಧನಿಯ, ಚಿಟಿಕೆ ಸಕ್ಕರೆ, ಕರಿಯಲು ಎಣ್ಣೆ.
ಮಾಡುವ ವಿಧಾನ: ಕಡಲೆ ಬೆಳೆಯನ್ನು ತರಿತರಿಯಾಗಿ ಬೀಸಿಕೊಳ್ಳಿ. ಅದಕ್ಕೆ ಮೊಸರು ಮತ್ತು ನಾಲ್ಕೈದು ಚಮಚ ಕಾದ ಎಣ್ಣೆ ಸೇರಿಸಿ. ಜೊತೆಗೆ, ಉಪ್ಪು, ಸಣ್ಣಗೆ ಹೆಚ್ಚಿದ ಹಸಿ ಮೆಣಸಿನಕಾಯಿ, ಇಂಗು, ಧನಿಯಾ ಪುಡಿ, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು, ಶುಂಠಿ ಪೇಸ್ಟ್ ಹಾಕಿ ಚೆನ್ನಾಗಿ ಕಲೆಸಿ, ಎರಡು ಗಂಟೆ ನೆನೆಸಿ ಇಡಿ. ಕರಿಯುವ ಹೊತ್ತಿಗೆ ಕಾಲು ಚಮಚ ಅಡುಗೆ ಸೋಡಾ ಹಾಕಿ, ಉಂಡೆ ಕಟ್ಟಿ ಬೋಂಡಾದಂತೆ ಕರಿಯಿರಿ.
* ಪರಿಮಳಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Megha Movie: ನಾನು ಎಂಟು ಸಾರಿ ಕೇಳಿದ ಕಥೆಯಿದು…: ಕಿರಣ್ ರಾಜ್
Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ
IPL Auction: ಕೇನ್, ಮಯಾಂಕ್, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ
Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ
Kundapura: ಮೋಜಿನ ತಾಣಗಳಾಗುತ್ತಿರುವ ಬೀಚ್ಗಳು-ಕಡಲಾಮೆಗೆ ಅಪಾಯ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.