ಅಮ್ಮನಾದ ಖುಷಿಯಲ್ಲಿ
Team Udayavani, Jun 3, 2020, 4:21 AM IST
ಭಾರತದ ಕೋಟಿ ಕೋಟಿ ಜನ, ಕೊರೊನಾ ವಿರುದ್ಧ ದೀಪ ಬೆಳಗಿದಂದು ನನ್ನ ಕಂದ ಹುಟ್ಟಿದ. ಅವತ್ತು ನಾನು ತಾಯಿಯಾದೆ. ಹಲವರಿಗೆ ದಿಗ್ಬಂಧನದಂತೆ ಕಾಡಿದ ಈ ಲಾಕ್ ಡೌನ್, ನನ್ನ ಪಾಲಿಗೆ ತಾಯ್ತನವನ್ನು ಸಂಪೂರ್ಣವಾಗಿ ಅನುಭವಿಸಲು ಅವಕಾಶ ನೀಡಿತು. ಈ ಸಮಯದಲ್ಲಿ ಮನೆಯವರೆಲ್ಲರೂ ನನ್ನ ಜೊತೆಗೆ ಇರುವ ಸದವಕಾಶವೂ ದೊರೆಯಿತು.
ಕಂದಮ್ಮನ ನಗು, ಅಳು, ನಿದ್ದೆ, ಹಠ ಎಲ್ಲದಕ್ಕೂ ಮನೆಯವರೆಲ್ಲರೂ ಸಾಕ್ಷಿಯಾದರು. ಅವನು ಹುಟ್ಟುವ ಮುಂಚಿನ ಜೀವನ ಒಂದು ವಿಧವಾದರೆ, ಅವನು ಹುಟ್ಟಿದ ಮೇಲೆ ಎಲ್ಲವೂ ಬದಲು. ಇತರ ಜವಾಬ್ದಾರಿಗಳನ್ನು ಸಲೀಸಾಗಿ ನಿಭಾಯಿಸಬಹುದೇನೋ, ಆದರೆ ತಾಯಿಯ ಕರ್ತವ್ಯಗಳು ಸುಲಭವಲ್ಲ ಎಂಬುದನ್ನು ಅರಿತೆ. ಲಾಕ್‌ಡೌನ್ ಅವಧಿಯಲ್ಲಿ ಇತರರು ದಿನಕ್ಕೊಂದು ಬಗೆಯ ತಿಂಡಿ ಮಾಡಿ ತಿನ್ನುತ್ತಿದ್ದರೆ, ನನಗೋ ಬಾಣಂತಿ ಊಟ. ತಿಂಡಿಪೋತಿಯಾದ ನಾನು ನಾಲಿಗೆಯ ಆಸೆಗಳಿಗೆ ಕಡಿವಾಣ ಹಾಕಲೇಬೇಕಾಯ್ತು.
ಗಂಡ, ಅಮ್ಮ-ಅಪ್ಪನ ಸಹಕಾರದೊಂದಿಗೆ ಬಾಣಂತಿಯ ದಿನಗಳನ್ನು ಯಶಸ್ವಿಯಾಗಿ ಕಳೆದೆ. ಜೀವನದ ಮರೆಯಲಾಗದ ಕ್ಷಣವನ್ನು, ಇಂಥ ಸಂದಿಗ್ದ ಪರಿಸ್ಥಿಯಲ್ಲಿ ಕಳೆಯುವಂತಾದರೂ, ಈ ಲಾಕ್ ಡೌನ್ ನನ್ನನ್ನು ಡೌನ್ ಮಾಡಲಿಲ್ಲ ಎಂಬುದು ಸಮಾಧಾನದ ಸಂಗತಿ.
* ಸುಪ್ರೀತಾ ವೆಂಕಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Gangolli: ಬೈಕ್‌ಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ
Udupi: ಪಿಕಪ್ ವಾಹನ ಢಿಕ್ಕಿ ಹೊಡೆದು ವ್ಯಕ್ತಿ ಗಾಯ
Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.