ಮೊದಲ ಸಲ ನೆಗೆಟಿವ್-2ನೇ ಸಲ ಪಾಸಿಟಿವ್!
Team Udayavani, Jun 3, 2020, 11:14 AM IST
ಧಾರವಾಡ: ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿತರಾಗಿರುವ ಪಿ-2807 ಮತ್ತು ಪಿ-2808 ಅವರ ಪ್ರಯಾಣ ವಿವರಗಳನ್ನು ಜಿಲ್ಲಾಡಳಿತ ಸಾರ್ವಜನಿಕ ಮಾಹಿತಿಗಾಗಿ ಪ್ರಕಟಿಸಿದೆ.
ಈ ಇಬ್ಬರು ವ್ಯಕ್ತಿಗಳನ್ನು ಸಂಪರ್ಕಿಸಿದ ಸಾರ್ವಜನಿಕರಿಗೆ ಕೋವಿಡ್-19 ಸೋಂಕು ತಗಲುವ ಸಾಧ್ಯತೆ ಇದೆ. ಅಂತಹ ಎಲ್ಲ ವ್ಯಕ್ತಿಗಳು ಕೂಡಲೇ ಕೋವಿಡ್-19 ಸಹಾಯವಾಣಿ 1077 ಕರೆಮಾಡಿ ತಮ್ಮ ವಿವರಗಳನ್ನು ನೀಡಬೇಕು ಹಾಗೂ ಕೂಡಲೇ ಸಮೀಪದ ಸರ್ಕಾರಿ ಆಸ್ಪತ್ರೆಗೆ ಹಾಜರಾಗಿ ಪರೀಕ್ಷೆಗೆ ಒಳಪಡಬೇಕು ಎಂದು ಮನವಿ ಮಾಡಿದೆ.
ಪಿ-2807 ಪ್ರಯಾಣ ವಿವರ: 26 ವರ್ಷದ ಮಹಿಳೆಯಾಗಿದ್ದು, ಇವರು ಹುಬ್ಬಳ್ಳಿಯ ನವ ಅಯೋಧ್ಯಾ ನಗರದ ನಿವಾಸಿ. ಪಿ -1123 ಅವರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದರು. ಮೇ 12ರಂದು ಪಿ-1123 ಅವರು ಸಹೋದರನ ಬೈಕ್‌ನಲ್ಲಿ ಹುಬ್ಬಳ್ಳಿ ಬೈಪಾಸ್‌ನಿಂದ ಹೊರಟು ಬೆಳಗಿನ ಜಾವ 2 ಗಂಟೆಗೆ ಹಳೇ ಹುಬ್ಬಳ್ಳಿಯ ನವ ಅಯೋಧ್ಯಾನಗರದಲ್ಲಿರುವ ಪಿ-2807 ಅವರ ಮನೆಗೆ ಬಂದಿದ್ದಾರೆ. ಮೇ 16ರಂದು ಪಿ-1123 ಕೋವಿಡ್-19 ಸೋಂಕಿತರೆಂದು ದೃಢಪಟ್ಟಿದ್ದರಿಂದ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿರುತ್ತದೆ. ಮೇ 17ರಂದು ಪಿ-1123 ಅವರ ಪ್ರಾಥಮಿಕ ಸಂಪರ್ಕಕ್ಕೆ ಬಂದ ಪಿ-2807 ಹಾಗೂ ಅವರ ಕುಟುಂಬ ಸದಸ್ಯರ ಗಂಟಲು ದ್ರವ ಮಾದರಿ ಪಡೆದು ಕ್ವಾರಂಟೈನ್ ನಲ್ಲಿ ಇರಿಸಲಾಗಿತ್ತು. ಮೊದಲ ಗಂಟಲು ದ್ರವ ಪರೀಕ್ಷೆ ನೆಗೆಟಿವ್ ಬಂದಿತ್ತು. ಮೇ 28ರಂದು ಎರಡನೇ ಸಾರಿ ಗಂಟಲು ದ್ರವ ಮಾದರಿ ಪಡೆದು ಪರೀಕ್ಷೆಗೆ ಒಳಪಡಿಸಲಾಗಿತ್ತು. ಮೇ 29ರಂದು ಪಿ-2807 ಅವರು ಕೋವಿಡ್-19 ಸೋಂಕಿತರೆಂದು ದೃಢಪಟ್ಟಿದ್ದರಿಂದ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಿ-2808 ಪ್ರಯಾಣ ವಿವರ: ಹುಬ್ಬಳ್ಳಿ ನಗರದ ಬೆಂಗೇರಿಯ 27 ವರ್ಷದ ಮಹಿಳೆಯಾಗಿದ್ದು, ಫೆಬ್ರವರಿ ತಿಂಗಳಿನಲ್ಲಿ ಪತಿ ಹಾಗೂ ಪತಿಯ ತಂದೆಯೊಂದಿಗೆ ಮುಂಬೈಗೆ ಹೋಗಿದ್ದರು. ಮೇ 26ರಂದು ಮಧ್ಯಾಹ್ನ 1:30 ಗಂಟೆಗೆ ಖಾಸಗಿ ಆಂಬ್ಯುಲೆನ್ಸ್ (ಎಂಹೆಚ್- 04 – ಎಫ್ ಕೆ -1480) ಮೂಲಕ ಕುಟುಂಬದ 6 ಸದಸ್ಯರು ಹಾಗೂ ಇಬ್ಬರು ವಾಹನ ಚಾಲಕರೊಂದಿಗೆ ಮುಂಬೈರಾಜವಾಡಿ ಆಸ್ಪತ್ರೆಯಿಂದ ಹೊರಟು ನಿಪ್ಪಾಣಿ ಚೆಕ್‌ಪೋಸ್ಟ್‌ನಲ್ಲಿ ಥರ್ಮಲ್ ಸ್ಕ್ರೀನಿಂಗ್ ತಪಾಸಣೆ ಮಾಡಿಸಿ ಮೇ 27ರಂದು ಬೆಳಗ್ಗೆ 7:30 ಗಂಟೆಗೆ ಹುಬ್ಬಳ್ಳಿಗೆ ಬಂದಿದ್ದರು. ಅಂದೇ ಇವರ ಗಂಟಲು ದ್ರವ ಪರೀಕ್ಷೆಗೊಳಪಡಿಸಲಾಗಿರುತ್ತದೆ. ಇಬ್ಬರು ವಾಹನ ಚಾಲಕರು ವಾಪಸ್ ಮುಂಬಯಿಗೆ ಹಿಂದಿರುಗಿರುತ್ತಾರೆ. ಮೇ 30ರಂದು ಪಿ-2808 ಕೋವಿಡ್-19 ಸೋಂಕಿತರೆಂದು ದೃಢಪಟ್ಟಿದ್ದರಿಂದ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿರುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.