ಕಲ್ಯಾಣಪುರ ಕ್ವಾರಂಟೈನ್ ಮುಗಿಸಿ ಬಂದ ವ್ಯಕ್ತಿಗೆ ಸೋಂಕು ದೃಢ : ಅಪಾರ್ಟ್ ಮೆಂಟ್ ಸೀಲ್ ಡೌನ್
Team Udayavani, Jun 3, 2020, 11:36 AM IST
ಕಲ್ಯಾಣಪುರ : ದುಬಾಯಿಯಿಂದ ಆಗಮಿಸಿ ಕ್ವಾರಂಟೈನ್ ನಲ್ಲಿ ಇದ್ದು ಅವಧಿ ಮುಗಿದ ಬಳಿಕ ಮನೆಗೆ ಬಂದ ವ್ಯಕ್ತಿಯಲ್ಲಿ ಕೋವಿಡ್ ಸೋಂಕು ದೃಢ ಪಟ್ಟಿದ್ದು ಇದೀಗ ವ್ಯಕ್ತಿ ವಾಸವಾಗಿರುವ ಕಲ್ಯಾಣಪುರದ ಅಪಾರ್ಟ್ ಮೆಂಟನ್ನು ಸೀಲ್ ಡೌನ್ ಮಾಡಲಾಗಿದೆ.
ಹದಿನಾಲ್ಕು ದಿನಗಳ ಕ್ವಾರಂಟೈನ್ ಮುಗಿಸಿ ಬರುವ ಸಮಯದಲ್ಲಿ ಅವರ ಗಂಟಲು ದ್ರವ ಪರೀಕ್ಷೆಯ ವರದಿ ಬಂದಿರಲಿಲ್ಲ ಮನೆಗೆ ಬಂದ ನಂತರದಲ್ಲಿ ವರದಿ ಬಂದಿದ್ದು ಅದರಲ್ಲಿ ಸೋಂಕು ದೃಢಪಟ್ಟಿದೆ ಇದರಿಂದ ವ್ಯಕ್ತಿ ವಾಸವಾಗಿದ್ದ ಅಪಾರ್ಟ್ ಮೆಂಟನ್ನು ಸೀಲ್ ಡೌನ್ ಮಾಡಿದ್ದು ವ್ಯಕ್ತಿಯನ್ನು ಜಿಲ್ಲೆಯ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಳೆದ ಕೆಲವು ದಿನಗಳಿಂದ ಉಡುಪಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದ್ದು ಮಂಗಳವಾರ ಒಂದೇ ದಿನ ಮಹಾರಾಷ್ಟ್ರದಿಂದ ಬಂದ 150 ಮಂದಿಗೆ ಸೋಂಕು ದೃಢ ಪಟ್ಟಿತ್ತು ಇದರೊಂದಿಗೆ ಉಡುಪಿ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 410ಕ್ಕೆ ಏರಿಕೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಿ.ವೈ.ವಿಜಯೇಂದ್ರ ಕಲೆಕ್ಷನ್ ಮಾಸ್ಟರ್, ಧೀಮಂತ ತಂದೆಯ ಜೈಲಿಗೆ ಕಳಿಸಿದ ಮಹಾನಾಯಕ: ಯತ್ನಾಳ್
Dubai: ಬಹುಮುಖ ಪ್ರತಿಭೆಯ ದುಬಾೖಯ ಶ್ರೀಖಾ ಶೆಣೈ
Ban: ಏರ್ ಶೋ ವೇಳೆ ಕಟ್ಟಡ ನಿರ್ಮಾಣಕ್ಕಾಗಿ ಕ್ರೇನ್ ಬಳಕೆ ನಿಷೇಧ: ಪಾಲಿಕೆ ಆದೇಶ
ಅರಿವಿಲ್ಲ ಎಂಬುದು ಕೀಳರಿಮೆಯಲ್ಲ-“ಒಂದು ಹಲವಾಗುತ್ತೆ, ಹಲವು ಒಂದಾಗುತ್ತೆ’: ದೇವಲೋಕದ ಕಥೆಗಳು
EV: ಇವಿ ಬಳಕೆಗೆ ಉತ್ತೇಜನ: ದೇಶದಲ್ಲೇ ನಂಬರ್ 1 ಸ್ಥಾನ ಪಡೆದ ಕರ್ನಾಟಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.