ಮುಳಸಾವಳಗಿಯಲ್ಲಿ 6 ಜನರಿಗೆ ಸೋಂಕು-ಡಿಸಿ ಭೇಟಿ
Team Udayavani, Jun 3, 2020, 11:41 AM IST
ದೇವರಹಿಪ್ಪರಗಿ: ಮುಳಸಾವಳಗಿ ಗ್ರಾಮಕ್ಕೆ ಡಿಸಿ ವೈ.ಎಸ್. ಪಾಟೀಲ ಭೇಟಿ ನೀಡಿ ಕೋವಿಡ್ ಸೋಂಕಿತರ ಮಾಹಿತಿ ಪಡೆದರು.
ದೇವರಹಿಪ್ಪರಗಿ: ಮುಳಸಾವಳಗಿ ಗ್ರಾಮದಲ್ಲಿ ಆರು ಕೋವಿಡ್ ಪ್ರಕರಣಗಳು ದಾಖಲಾದ ಹಿನ್ನೆಲೆ ಮಂಗಳವಾರ ಗ್ರಾಮಕ್ಕೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ, ಎಸ್ಪಿ ಅನುಪಮ ಅಗರವಾಲ್, ಜಿಪಂ ಸಿಇಒ ಗೋವಿಂದರೆಡ್ಡಿ ಸೇರಿದಂತೆ ಹಿರಿಯ ಅಧಿಕಾರಿಗಳು ಮಂಗಳವಾರ ಭೇಟಿ ನೀಡಿ ಕೋವಿಡ್ ಸೋಂಕಿತರ ಪ್ರಕರಣ ಕುರಿತು ಪರಿಶೀಲನೆ ನಡೆಸಿದರು.
ಗ್ರಾಮದಲ್ಲಿ ಪ್ರಕರಣ ಕಂಡು ಬರುತ್ತಿದ್ದಂತೆಯೇ ಗ್ರಾಮಸ್ಥರು ಸ್ವಯಂ ಪ್ರೇರಿತರಾಗಿ ತಮ್ಮ ಜಮೀನಿನ ಮನೆಗಳಿಗೆ ಸ್ಥಳಾಂತರಗೊಂಡ ಮಾಹಿತಿ ಪಡೆದರು. ಜೊತೆಗೆ ಗ್ರಾಪಂ ಹಾಗೂ ತಾಲೂಕಾಡಳಿತ ಕಂಟೇನ್ಮೆಂಟ್ ಝೋನ್ನಿಂದ 100 ಮೀ.ವರೆಗಿನ ಪ್ರದೇಶ ನಿರ್ಬಂಧಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ತಹಶೀಲ್ದಾರ್ ಗಳಾದ ಸಂಜೀವಕುಮಾರ ದಾಸರ, ವೈ.ಬಿ. ನಾಗಠಾಣ, ಸಿಂದಗಿ ತಾಲೂಕು ಆರೋಗ್ಯಾಧಿಕಾರಿ ಡಾ| ಆರ್.ಎಸ್. ಇಂಗಳೆ, ಇಂಡಿ ಡಿವೈಎಸ್ಪಿ ಎಂ.ಬಿ. ಸಂಕದ, ಸಿಪಿಐ ಸತೀಶ ಕಾಂಬ್ಳೆ, ಪಿಎಸೈ ಸುರೇಶ ಗಡ್ಡಿ, ಪಿಡಿಒ ಶಿವಾನಂದ ಮೂಲಿಮನಿ, ದೇವರಹಿಪ್ಪರಗಿ ಪಪಂ ಸಿಒ ಎಲ್.ಡಿ. ಮುಲ್ಲಾ ಸೇರಿದಂತೆ ಇನ್ನಿತರ ಅಧಿಕಾರಿಗಳು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು
Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
Waqf Notice: ಒಂದಿಂಚು ಜಮೀನು ವಕ್ಫ್ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.