2 ಭಾರತೀಯ ಬೈಕ್ ಕಂಪನಿಗಳಿಗೆ ಮಂಡಿಯೂರಿದ ಚೀನಾ
Team Udayavani, Jun 3, 2020, 12:02 PM IST
ಸಾಂದರ್ಭಿಕ ಚಿತ್ರ
ನವದೆಹಲಿ: ಲಡಾಖ್ ಮತ್ತು ಸಿಕ್ಕಿಂ ಗಡಿಭಾಗದಲ್ಲಿ ಭಾರತ ಮತ್ತು ಚೀನಾ ನಡುವೆ ಸಂಘರ್ಷ ನಡೆಯುತ್ತಿದೆ. ಮತ್ತೂಂದು ಕಡೆ ಜಾಗತಿಕವಾಗಿ ಚೀನಾವನ್ನು ಎಲ್ಲ ರೀತಿಯಿಂದ ಮೀರಿ ಮುನ್ನುಗ್ಗುತ್ತಿದೆ. ಸದ್ಯ ಭಾರತ-ಚೀನಾ ನಡುವೆ ಆಫ್ರಿಕಾದಲ್ಲಿ ಕುತೂಹಲಕಾರಿ ಕದನವೊಂದು ಜಾರಿಯಲ್ಲಿದೆ. ಭಾರತ ಬಿಗಿಹಿಡಿತ ಸಾಧಿಸಿದೆ! ಅರ್ಥವಾಗಲಿಲ್ಲ ತಾನೇ? ಮುಂದೆ ಓದಿ. ಆಫ್ರಿಕಾ ಖಂಡದಲ್ಲಿನ ಬೈಕ್ ಉದ್ಯಮದಲ್ಲಿ ಈಗ ಎರಡು ಭಾರತೀಯ ಕಂಪನಿಗಳು ಸೇರಿ, ಚೀನಾದ 200 ಕಂಪನಿಗಳನ್ನು ಸೋಲಿಸಿವೆ.
ಬಜಾಜ್ ಆಟೊ, ಟಿವಿಎಸ್ ಆರ್ಭಟಕ್ಕೆ ಬೆಚ್ಚಿಬಿದ್ದ ಚೀನಿ ಕಂಪನಿಗಳು ಒಂದೊಂದಾಗಿ ಹಿಂದೆ ಸರಿಯುತ್ತಿವೆ. 10 ವರ್ಷಗಳ ಹಿಂದೆ ಇದ್ದ 200 ಕಂಪನಿಗಳು ಈಗ 40ಕ್ಕಿಳಿದಿವೆ. ಅಷ್ಟು ಮಾತ್ರವಲ್ಲ. ಈ ಎರಡು ಭಾರತೀಯ ಕಂಪನಿಗಳೇ ಮಾರುಕಟ್ಟೆಯಲ್ಲಿ ಶೇ.50ರಷ್ಟು ಪಾಲು ಹೊಂದಿವೆ! 10 ವರ್ಷಗಳ ಹಿಂದೆ ಚೀನೀ ಕಂಪನಿಗಳ ಪಾಲು ಶೇ.90-95ರಷ್ಟಿತ್ತು. ಅದರಲ್ಲೂ ಬಜಾಜ್ ಕಂಪನಿಯದ್ದು ಗರಿಷ್ಠ ಸಾಧನೆ, ಅದರ ಪಾಲೇ ಶೇ.40. 2020 ಮಾರ್ಚ್ಗೆ ಮುಕ್ತಾಯವಾದ ವಿತ್ತೀಯವರ್ಷದಲ್ಲಿ, ಮಾರುಕಟ್ಟೆಯಲ್ಲಿ ಮಾರಾಟವಾದ ಒಟ್ಟು 27 ಲಕ್ಷ ಬೈಕ್ಗಳ ಪೈಕಿ, ಬಜಾಜ್ ಹತ್ತಿರ ಹತ್ತಿರ 10 ಲಕ್ಷ ಬೈಕ್ ಮಾರಿದೆ. ಇನ್ನೊಂದು ಕಡೆ ಟಿವಿಎಸ್ ನಿಧಾನಕ್ಕೆ ಏರಿಕೆ ಸಾಧಿಸುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nirmala Sitharaman: ಬ್ಯಾಂಕುಗಳು ಬಡ್ಡಿದರ ಕೈಗೆಟಕುವಂತೆ ಕ್ರಮ ಕೈಗೊಳ್ಳಬೇಕು
Stock Market: ಷೇರುಪೇಟೆ ಸೂಚ್ಯಂಕ 500ಕ್ಕೂ ಅಧಿಕ ಅಂಕ ಕುಸಿತ; 23,400ಕ್ಕೆ ಇಳಿದ ನಿಫ್ಟಿ
Jio domain ಗಲಾಟೆ ನಡುವೆಯೇ “ಜಿಯೋಸ್ಟಾರ್’ ಹೊಸ ವೆಬ್ಸೈಟ್ ಪ್ರತ್ಯಕ್ಷ!
Haldiram ಭುಜಿಯಾವಾಲಾದಲ್ಲಿ ₹235 ಕೋಟಿ ಹೂಡಿಕೆ ಮಾಡಿದ ಭಾರತ್ ವ್ಯಾಲ್ಯು ಫಂಡ್
Gold Rates:ಡಾಲರ್ ಬೆಲೆ ಏರಿಕೆ-18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.