ದಂತ ಚಿಕಿತ್ಸೆ: ನಾವೇನು ಮುನ್ನೆಚ್ಚರಿಕೆ ವಹಿಸಬೇಕು?
ಬದುಕು ಬದಲಾಗಿದೆ ನಾವೂ ಬದಲಾಗೋಣ
Team Udayavani, Jun 4, 2020, 5:43 AM IST
ಸಾಂದರ್ಭಿಕ ಚಿತ್ರ...
ಹಲ್ಲಿನ ಸಮಸ್ಯೆಯನ್ನು ದೀರ್ಘ ಸಮಯ ತಡೆದಿಟ್ಟುಕೊಳ್ಳುವುದು ಕಷ್ಟಸಾಧ್ಯ. ಕೆಲವು ದಿನಗಳ ಕಾಲ ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಂಡರೂ ಅನಂತರ ಅದಕ್ಕೊಂದು ಶಾಶ್ವತ ಪರಿಹಾರ ಅಗತ್ಯವೇ ಆಗಿರುತ್ತದೆ.
ಕೋವಿಡ್ -19 ದಿಂದಾಗಿ ಸುದೀರ್ಘ ಸಮಯ ಬಂದ್ ಆಗಿದ್ದ ದಂತ ಚಿಕಿತ್ಸಾಲಯಗಳು ಈಗ ಬಾಗಿಲು ತೆರೆದಿವೆ. ಸರಕಾರ ಸೂಚಿಸಿದ ನಿರ್ದಿಷ್ಟ ಮಾರ್ಗಸೂಚಿಯಂತೆ ಇಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ವಿವಿಧ ರೀತಿಯ ನಿಬಂಧನೆಗಳನ್ನು ಪಾಲಿಸುವುದು ನಮ್ಮ ಕರ್ತವ್ಯವೂ ಆಗಿದೆ.
ಚಿಕಿತ್ಸಾಲಯಗಳಲ್ಲಿ ಜನಸಂದಣಿ ಆಗದಂತೆ ನಾವು ಯಾವ ರೀತಿಯಲ್ಲಿ ನಡೆದುಕೊಳ್ಳಬೇಕು. ಯಾವ ಯಾವ ರೀತಿಯ ಮುಂಜಾಗ್ರತೆಗಳನ್ನು ನಾವು ತೆಗೆದುಕೊಳ್ಳಬೇಕು. ತುರ್ತಾಗಿ ಯಾವ ರೀತಿಯ ಸಮಸ್ಯೆಗಳಿಗೆ ಆದ್ಯತೆ ನೀಡಿ ಚಿಕಿತ್ಸೆಗೆ ತೆರಳಬೇಕು ಎಂಬೆಲ್ಲ ಮಾಹಿತಿಗಳು ಇಲ್ಲಿವೆ.
ಹಲ್ಲಿಗೆ ಸಂಬಂಧಿಸಿದ ಸಮಸ್ಯೆಗಳು ಆಗಾಗ ಕಾಣಿಸುವುದು ಸಾಮಾನ್ಯ. ಅದನ್ನು ಹಾಗೇ ಬಿಟ್ಟುಬಿಡುವುದು ಅಸಾಧ್ಯ. ಕೋವಿಡ್ -19 ಸಂದರ್ಭದಲ್ಲಿ ದಂತ ಚಿಕಿತ್ಸಾ ಕೇಂದ್ರಕ್ಕೆ ಹೋಗುವಾಗ ಯಾವೆಲ್ಲ ಮುನ್ನೆಚ್ಚರಿಕೆಗಳನ್ನು ನಾವು ತೆಗೆದುಕೊಳ್ಳಬೇಕು ಎಂದು ನೋಡೋಣ ಬನ್ನಿ.
ಹಲ್ಲು ನೋವಿದ್ದರೆ ಔಷಧ ಪಡೆಯಲು ಅಥವಾ ಹಲ್ಲು ಕೀಳಿಸಲು ದಂತ ವೈದ್ಯಕೀಯ ಆಸ್ಪತ್ರೆಗೆ ಹೋದಾಗ ಮಾಸ್ಕ್, ಗ್ಲೌಸ್ ಧರಿಸುವುದು, ಸ್ಯಾನಿಟೈಸರ್ ಬಳಸುವುದು, ಸಾಮಾಜಿಕ ಅಂತರವನ್ನು ಕಾಪಾಡುವುದನ್ನು ಕಿಂಚಿತ್ತೂ ಮರೆಯದಿರಿ.
ದಂತ ವೈದ್ಯರಲ್ಲಿಗೆ ತೆರಳುವ ಮೊದಲೇ ಫೋನ್ ಮಾಡಿ ಸಮಯ ನಿಗದಿಪಡಿಸಿ. ಯಾಕೆಂದರೆ ಒಬ್ಬರಿಗೆ ಚಿಕಿತ್ಸೆ ನೀಡಿದ ಬಳಿಕ ಚಿಕಿತ್ಸಾ ಕೊಠಡಿಯನ್ನು ಸ್ಯಾನಿಟೈಸರ್ ಮತ್ತು ಇತರ ಸ್ವತ್ಛತಾ ದ್ರಾವಣ ಬಳಸಿ ಶುಚಿಗೊಳಿಸಲು ಸಮಯ ಬೇಕಾಗುವುದು. ಇದರಿಂದ ಹೊರಗಡೆ ತುಂಬಾ ಹೊತ್ತು ಕಾಯುವುದನ್ನು ತಪ್ಪಿಸಬಹುದು.
ದಂತ ವೈದ್ಯರು ತಿಳಿಸುವ ಮುನ್ನೆಚ್ಚರಿಕೆ, ಸಲಹೆ, ಮಾರ್ಗದರ್ಶನಗಳನ್ನು ತಪ್ಪದೆ ಪಾಲಿಸಿ. ವೈದ್ಯರು ತಿಳಿಸಿದಂತೆ ಒಂದೇ ಭೇಟಿಯಲ್ಲಿ ಚಿಕಿತ್ಸೆಗೆ ಸಂಬಂಧಿಸಿ ಸಾಧ್ಯವಾದಷ್ಟು ಕೆಲಸಗಳನ್ನು ಮುಗಿಸಿ. ಸಮಯ ಇಲ್ಲ. ಮತ್ತೂಮ್ಮೆ ಬರುತ್ತೇನೆ ಎಂಬುದಕ್ಕೆ ಇದು ಸರಿಯಾದ ಸಮಯವಲ್ಲ.
“ಟೆಲಿಮೆಡಿಸಿನ್’ ಮೂಲಕವೂ ಸಣ್ಣಪುಟ್ಟ ಸಮಸ್ಯೆಗಳಿಗೆ ಮಾಹಿತಿ ಪಡೆಯಬಹುದು. ರೋಗಿಗಳು ವೈದ್ಯರಿಗೆ ಫೋನ್ ಕಾಲ್, ಇ-ಮೇಲ್, ವಾಟ್ಸ್‌ಆ್ಯಪ್ ಇತ್ಯಾದಿಗಳ ಮೂಲಕ ಸಮಸ್ಯೆ ತಿಳಿಸಿದರೆ ಔಷಧಗಳ ಹೆಸರನ್ನು ಸೂಚಿಸುತ್ತಾರೆ. ಹಲ್ಲು ಅಂದಗೊಳಿಸುವುದು ಸಹಿತ ಯಾವುದಕ್ಕೂ ಸ್ವಯಂ ಚಿಕಿತ್ಸೆ ಸರಿಯಾದ ಕ್ರಮವಲ್ಲ.
ಹಲ್ಲು ಕಟ್ಟಿಸುವುದು, ಸರಿಗೆ ಹಾಕುವುದು ಇತ್ಯಾದಿ ಚಿಕಿತ್ಸೆಗಳನ್ನೂ ಸ್ವಲ್ಪ ಸಮಯ ಮುಂದೂಡುವುದು ಉತ್ತಮ. 6 ತಿಂಗಳುಗಳಿಗೊಮ್ಮೆ ನಡೆಸುವ ದಂತ ತಪಾಸಣೆ (ರುಟೀನ್ ಚೆಕಪ್) ಇತ್ಯಾದಿಗಳ ಬಗ್ಗೆ ವೈದ್ಯರನ್ನು ಫೋನ್ ಮೂಲಕ ಸಂಪರ್ಕಿಸಿ ಮಾಹಿತಿ ಪಡೆದು ಮುಂದುವರಿಯುವುದು ಉತ್ತಮ.
ದಂತ ಚಿಕಿತ್ಸಾಲಯಕ್ಕೆ ಭೇಟಿ ನೀಡಿದ ಬಳಿಕ ಅಂಗಡಿ, ಮಾರುಕಟ್ಟೆಗೆ ತೆರಳದೆ ನೇರವಾಗಿ ಮನೆಗೆ ಬಂದು ಸ್ಯಾನಿಟೈಸರ್ ಅಥವಾ ಸೋಪ್ ಬಳಸಿ ಚೆನ್ನಾಗಿ ಕೈಯನ್ನು ಸ್ವತ್ಛಗೊಳಿಸಿ. ಬಟ್ಟೆಯನ್ನು ಡಿಟರ್ಜೆಂಟ್ ಬಳಸಿ ವಾಶ್ ಮಾಡಿ. ಬಿಸಿ ನೀರಿನಲ್ಲಿ ಸ್ನಾನ ಮಾಡುವುದು ಉತ್ತಮ.
ನಿಮಗೆ ಏನಾದರೂ ಸಂಶಯ, ಪ್ರಶ್ನೆಗಳಿದ್ದರೆ ಈ ನಂಬರಿಗೆ ವಾಟ್ಸಪ್ ಮಾಡಿ.- 9148594259
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.