“ಫ್ರೆಂಚ್ ಓಪನ್ ಈ ವರ್ಷ ನಡೆಯಲಿದೆ’
Team Udayavani, Jun 4, 2020, 6:20 AM IST
ಪ್ಯಾರಿಸ್: ಕೋವಿಡ್-19 ಕಾರಣದಿಂದ ಮುಂದೂಡಲ್ಪಟ್ಟ ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಮ್ ಪಂದ್ಯಾವಳಿ ಈ ವರ್ಷ ನಡೆಯುತ್ತದೆ ಎಂಬ ಖಾತ್ರಿಯೊಂದು ಲಭಿಸಿದೆ. ಫ್ರೆಂಚ್ ಓಪನ್ ಟೆನಿಸ್ ಫೆಡರೇಶನ್ ಅಧ್ಯಕ್ಷ ಬರ್ನಾರ್ಡ್ ಗಿಡಿಸೆಲ್ಲಿ ಇಂಥದೊಂದು ಭರವಸೆ ನೀಡಿದ್ದಾರೆ.
ಆವೆ ಅಂಗಳದಲ್ಲಿ ಸಾಗುವ ವರ್ಷದ ಈ ದ್ವಿತೀಯ ಗ್ರ್ಯಾನ್‌ಸ್ಲಾಮ್ ಪಂದ್ಯಾವಳಿ ಮೇ 24ರಿಂದ ಜೂ. 7ರ ತನಕ ನಡೆಯಬೇಕಿತ್ತು. ಆದರೀಗ ಸೆ. 20ರ ತನಕ ಮುಂದೂಡಲ್ಪಟ್ಟಿದೆ.
“ಫ್ರೆಂಚ್ ಓಪನ್ ರದ್ದಾಗುವುದಿಲ್ಲ, ಈ ವರ್ಷ ನಡೆಯುತ್ತದೆ ಎಂಬುದಾಗಿ ನಾನು ಟೆನಿಸಿಗ ಗೇಲ್ ಮಾನ್‌ಫಿಲ್ಸ್‌ಗೆ ಖಾತ್ರಿಪಡಿಸಿದ್ದೇನೆ’ ಎಂದು ಕಾರ್ಯಕ್ರಮವೊಂದರಲ್ಲಿ ಗಿಡಿಸೆಲ್ಲಿ ಹೇಳಿದ್ದಾರೆ. “ಈ ಪಂದ್ಯಾವಳಿಯನ್ನು ಗರಿಷ್ಠ ಪ್ರೇಕ್ಷಕರ ಸಮ್ಮುಖದಲ್ಲಿ ನಡೆಸುವುದು ನಮ್ಮ ಯೋಜನೆ. ಆದರೆ ಈ ಸಂದರ್ಭದಲ್ಲಿ ಸರಕಾರ ಹಾಗೂ ಆರೋಗ್ಯ ವಿಭಾಗದ ಸುರಕ್ಷಾ ವಿಧಾನವನ್ನು ಪಾಲಿಸಬೇಕಾಗುತ್ತದೆ’ ಎಂದು ಗಿಡಿಸೆಲ್ಲಿ ಹೇಳಿದರು. ಕೋವಿಡ್-19 ಹಾವಳಿಯಿಂದ ಸದ್ಯ ರದ್ದುಗೊಂಡ ಏಕೈಕ ಗ್ರ್ಯಾನ್‌ಸ್ಲಾಮ್ ಕೂಟವೆಂದರೆ ವಿಂಬಲ್ಡನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Horoscope: ಈ ರಾಶಿಯವರಿಗೆ ಧೈರ್ಯ ಮತ್ತು ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ
Priority: ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಅವಕಾಶ ವಂಚಿತ ಯಕ್ಷಗಾನ
Ambedkar Row: ಕಾಂಗ್ರೆಸ್ ಎಂದರೆ ಫೇಕ್ ಗಾಂಧಿಗಳ ಪಕ್ಷ: ಛಲವಾದಿ ನಾರಾಯಣಸ್ವಾಮಿ
Delhi bom*b ಬೆದರಿಕೆ; ಮಕ್ಕಳಿಗೆ ರಜೆ ಬೇಕಾಗಿತ್ತು: ಕಾರಣ ಬಿಚ್ಚಿಟ್ಟ ಪೊಲೀಸರು!
ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.