ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಿ
Team Udayavani, Jun 4, 2020, 7:52 AM IST
ಮಾಲೂರು: ತಾಲೂಕಿನ ಭಾವನಹಳ್ಳಿ ಯಲ್ಲಿ ಸರ್ಕಾರಿ ಕಟ್ಟಡಗಳ ನಡುವಿನ ಖಾಲಿ ನಿವೇಶನ ಪ್ರಭಾವಿಗಳು ಅತಿಕ್ರಮಿ ಸಲು ಮುಂದಾಗಿದ್ದರಿಂದ ಶಾಸಕ ಕೆ. ವೈ.ನಂಜೇಗೌಡ ಅಧಿಕಾರ ಜೊತೆ ಸ್ಥಳ ಪರಿಶೀಲಿಸಿದರು.
ಈ ವೇಳೆ ಮಾತನಾಡಿದ ಶಾಸಕರು, ಗ್ರಾಮದಲ್ಲಿನ 1.05 ಎಕರೆ ಸರ್ಕಾರಿ ಭೂಮಿಯನ್ನು ಗ್ರಾಮದ ಉಪಯೋಗಕ್ಕೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಶಾಂತಿಯುತ ಮಾತುಕತೆ ನಡೆಸಿ, ಸಮಸ್ಯೆ ಬಗೆಹರಿಸಿ ಕೊಳ್ಳುವಂತೆ ಗ್ರಾಮಸ್ಥರಿಗೆ ತಿಳಿಸಿದರು. ಗ್ರಾಮ ಠಾಣೆಗೆ ಸೇರಿದ 1.05 ಎಕರೆ ಯಲ್ಲಿ ಅಂಗನವಾಡಿ, ಕೃಷಿ ಇಲಾಖೆ ಕಟ್ಟಡ ನಿರ್ಮಿಸಿದ್ದು, ಉಳಿದ ಜಾಗದಲ್ಲಿ ಗ್ರಾಮದ ಕೆಲವು ಪ್ರಭಾವಿಗಳು ಅಕ್ರಮ ವಾಗಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಸ್ವಾಧೀನಕ್ಕೆ ಮುಂದಾಗಿದ್ದರು.
ಈ ಹಿನ್ನೆಲೆ ಯಲ್ಲಿ ಗ್ರಾಮಸ್ಥರ ದೂರಿನ ಮೇರೆಗೆ ಶಾಸಕರು ಪರಿಶೀಲನೆ ನಡೆಸಿದರು. ಭಾವನಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಕೈಗಾರಿಕೆಗಳು ಪ್ರಾರಂಭ ವಾಗಿರುವ ಕಾರಣ ಈ ಭಾಗದ ಭೂಮಿಗೆ ಬಂದಿದೆ. ಸರ್ಕಾರಿ ಭೂಮಿ ಕಬಳಿಕೆಯೂ ಹೆಚ್ಚಾಗಿದೆ. ಸರ್ಕಾರದ ದಾಖಲೆಗಳು, ಗ್ರಾಮಸ್ಥರ ಹೇಳಿಕೆಯಂತೆ ಸ್ಥಳದಲ್ಲಿ ಎರಡು ಸರ್ಕಾರಿ ಕಟ್ಟಡಗಳು ಇದ್ದು, ಉಳಿಕೆ ಜಾಗದಲ್ಲಿ ಖಾಸಗಿ ವ್ಯಕ್ತಿಗಳು ಮನೆ ನಿರ್ಮಿಸಿಕೊಂಡಿದ್ದಾರೆ.
ಹೀಗಾಗಿ ಗ್ರಾಮದ ಮುಖಂಡರ ಸಮ್ಮುಖದಲ್ಲಿ ಶಾಂತಿಯುತವಾಗಿ ಸಮಸ್ಯೆ ಬಗೆ ಹರಿಸಿಕೊಳ್ಳುವಂತೆ ಶಾಸಕರು ಸೂಚಿಸಿದರು. ತಾಪಂ ಇಒ ವಿ.ಕೃಷ್ಣಪ್ಪ, ಗ್ರಾಮಸ್ಥರಾದ ಬಿ.ಎಂ.ಮುನಿಯಪ್ಪ, ಗಣೇಶ್ ಸಿಂಗ್, ಸೂರ್ಯ ಪ್ರತಾಪ್, ಪ್ರೇಮ್‌ಸಾಗರ್, ಗ್ರಾಪಂ ಸದಸ್ಯ ಬಾಲಾಜಿ ಸಿಂಗ್, ದೇವೇಂದ್ರ, ಚಂದ್ರೇಗೌಡ, ರಾಮನಾರಾ ಯಣಸ್ವಾಮಿ, ರಮೇಶ್, ಕೃಷ್ಣಸಿಂಗ್, ಗಜೇಂದ್ರ ಸಿಂಗ್, ವೆಂಕಟೇಶರೆಡ್ಡಿ, ಮುನಿವೆಂಕಟಪ್ಪ, ಶಿವಾರಪಟ್ಟಣದ ಗ್ರಾಪಂ ಕಾರ್ಯದರ್ಶಿ ಮುನೇಗೌಡ, ಹನು ಮಂತರೆಡ್ಡಿ, ಮಂಜುನಾಥ್, ಬಿ.ಕೆ. ಶ್ರೀನಿವಾಸ್ ಮತ್ತಿತರರು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.