ಕೋವಿಡ್‌ ವೈರಸ್ ನಿಂದ ಟರ್ಕಿ ಗೆಲುವು ಸಾಧಿಸಿದ್ದು ಹೇಗೆ?


Team Udayavani, Jun 4, 2020, 11:00 AM IST

ಕೋವಿಡ್‌ ವೈರಸ್ ನಿಂದ ಟರ್ಕಿ ಗೆಲುವು ಸಾಧಿಸಿದ್ದು ಹೇಗೆ?

ಅಂಕಾರ: ಇತರ ಕೆಲವು ದೇಶಗಳಿಗೆ ಹೋಲಿಸಿದರೆ ಕೋವಿಡ್‌ ವೈರಸ್‌ ಟರ್ಕಿಗೆ ಬಂದದ್ದು ತುಸು ತಡವಾಗಿಯೇ. ಆದರೆ ಮಾ.11ರಂದು ಬಂದ ವೈರಸ್‌ ಕೆಲವೇ ದಿನಗಳಲ್ಲಿ ದೇಶದ ಮೂಲೆಮೂಲೆಗೆ ಪಸರಿಸಿತು. ಒಂದೇ ತಿಂಗಳಲ್ಲಿ ಟರ್ಕಿಯ ಎಲ್ಲ 81 ಪ್ರಾಂತ್ಯಗಳಲ್ಲಿ ಕೋವಿಡ್‌ ಪೊಸಿಟಿವ್‌ ಪ್ರಕರಣಗಳಿದ್ದವು. ಚೀನ ಮತ್ತು ಯುಕೆಗಿಂತಲೂ ಕ್ಷಿಪ್ರವಾಗಿ ಟರ್ಕಿಯಲ್ಲಿ ಕೋವಿಡ್‌ ಹರಡಲು ತೊಡಗಿತ್ತು. ಸಾವಿನ ಪ್ರಮಾಣ ಅಂಕೆಮೀರಿ ಟರ್ಕಿ ಇನ್ನೊಂದು ಇಟಲಿ ಆಗಬಹುದು ಎಂಬ ಭೀತಿ ಸೃಷ್ಟಿಯಾಗಿತ್ತು. ಆದರೆ ಮೂರು ತಿಂಗಳು ಕಳೆದ ನೋಡಿದರೆ ಟರ್ಕಿಯಲ್ಲಿ ಎಣಿಸಿದಂಥ ಭಯಾನಕ ಪರಿಸ್ಥಿತಿಯೇನೂ ಉಂಟಾಗಿಲ್ಲ. ಅದೂ ಸಂಪೂರ್ಣ ಲಾಕ್‌ಡೌನ್‌ ಜಾರಿ ಮಾಡದೆಯೂ ಟರ್ಕಿ ಕೋವಿಡ್‌ ವೈರಸ್‌ ಮೇಲೆ ನಿಯಂತ್ರಣ ಸಾಧಿಸಿದ್ದು ಒಂದು ಅಚ್ಚರಿಯೇ ಸರಿ.

ವಿಚಿತ್ರ ಲಾಕ್‌ಡೌನ್‌
ಟರ್ಕಿಯ ಲಾಕ್‌ಡೌನ್‌ ಎಲ್ಲ ದೇಶಗಳಂತಿರಲಿಲ್ಲ. ಆದರೂ ಈ ದೇಶ ಕೋವಿಡ್‌ ವಿಪತ್ತನ್ನು ಸಮರ್ಥವಾಗಿ ನಿಭಾಯಿಸಿದೆ. ಟೆಸ್ಟಿಂಗ್‌, ಟ್ರೇಸಿಂಗ್‌, ಐಸೊಲೇಶನ್‌ ಆ್ಯಂಡ್‌ ಮೂವ್‌ಮೆಂಟ್‌ ಟ್ರೇಸಿಂಗ್‌ ಎಂಬ ನಾಲ್ಕು ವಿಧಾನಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ ಕೆಲವೇ ದೇಶಗಳ ಸಾಲಿಗೆ ಟರ್ಕಿಯೂ ಸೇರುತ್ತದೆ. ಇದೇ ಯಶಸ್ಸಿನ ಹಿಂದಿನ ರಹಸ್ಯ ಎಂದು ವಿಶ್ಲೇಷಿಸಿದ್ದಾರೆ ಕೆಂಟ್‌ ವಿವಿಯ ವೈರಾಣುಶಾಸ್ತ್ರ ವಿಭಾಗದ ಉಪನ್ಯಾಸಕ ಡಾ| ಜೆರೆಮಿ ರೋಸ್‌ಮ್ಯಾನ್‌. ವೈರಸ್‌ ಅನ್ನು ಇಷ್ಟು ಪರಿಣಾಮಕಾರಿಯಾಗಿ ನಿಭಾಯಿಸಿರುವುದು ಬೆರಳೆಣಿಕೆಯ ದೇಶಗಳು ಮಾತ್ರ.

ವೈರಸ್‌ ಹರಡಲು ತೊಡಗುತ್ತಿರುವಂತೆ ಸರಕಾರ ಜನರ ದೈನಂದಿನ ಬದುಕಿನ ಮೇಲೆ ಕಣ್ಣಿಟ್ಟಿತು. ಕಾಫಿ ಶಾಪ್‌ ಭೇಟಿ, ಶಾಪಿಂಗ್‌, ಮಾರುಕಟ್ಟೆ ಭೇಟಿ, ಸಾಮೂಹಿಕ ಪ್ರಾರ್ಥನೆ ಇತ್ಯಾದಿಗಳನ್ನು ನಿರ್ಬಂಧಿಸಲಾಯಿತು. 65 ವರ್ಷ ಮೇಲ್ಪಟ್ಟವರು ಮತ್ತು 20 ವರ್ಷಕ್ಕಿಂತ ಕೆಳಗಿನವರನ್ನು ಮನೆಯಿಂದ ಹೊರಗಿಳಿಯಲು ಬಿಡಲಿಲ್ಲ. ವಾರಾಂತ್ಯದಲ್ಲಿ ಕರ್ಫ್ಯೂ ಜಾರಿಗೊಳಿಸಲಾಯಿತು ಮತ್ತು ಪ್ರಮುಖ ನಗರಗಳನ್ನು ಸೀಲ್‌ಡೌನ್‌ ಮಾಡಲಾಯಿತು. ಹೀಗೆ ತುಸು ಭಿನ್ನ ದಾರಿ ಅನುಸರಿಸಿ ಟರ್ಕಿ ಕೋವಿಡ್‌ ವಿರುದ್ಧ ಗೆಲುವು ಸಾಧಿಸಿತು.

ಇಸ್ತಾಂಬುಲ್‌  ಕೇಂದ್ರ ಬಿಂದು
ಟರ್ಕಿಯಲ್ಲಿ ಇಸ್ತಾಂಬುಲ್‌ ನಗರ ಕೋವಿಡ್‌ನ‌ ಕೇಂದ್ರ ಬಿಂದುವಾಗಿತ್ತು. ಕೋವಿಡ್‌ನಿಂದಾಗಿ ಈ ನಗರ ತನ್ನ ಲಯವನ್ನು ಕಳೆದುಕೊಂಡಿದೆ. ಈಗ ಇದು ಎದೆಬಡಿತವಿಲ್ಲದ ದೇಹದಂತಿದೆ. ಆದರೂ ವೈರಸ್‌ ಪ್ರಸರಣ ಮಾತ್ರ ನಿಯಂತ್ರಣದಲ್ಲಿದೆ.

6 ಸಾವಿರ ತಂಡ
ಟರ್ಕಿಯಲ್ಲಿ ವೈರಸ್‌ ಪ್ರಸರಣ ನಿಯಂತ್ರಣದಲ್ಲಿದೆ. ಆದರೆ ಅಪಾಯದಿಂದ ಪೂರ್ತಿಯಾಗಿ ಪಾರಾಗಿಲ್ಲ. ದೇಶವನ್ನು ಈ ಮಹಾ ವಿಪತ್ತಿನಿಂದ ಪಾರು ಮಾಡಿದ ಶ್ರೇಯಸ್ಸು ಡಾ| ಮೆಲೆಕ್‌ ನೂರ್‌ ಅಸ್ಲಾನ್‌ ಅವರಿಗೆ ಸಲ್ಲಬೇಕು. ಇವರು ಸಾರ್ವಜನಿಕ ಆರೋಗ್ಯ ಇಲಾಖೆಯ ನಿರ್ದೇಶಕಿ. ಸಂಪರ್ಕಿತರ ಪತ್ತೆಗಾಗಿ ಡಾ | ಮೆಲೆಕ್‌ 6,000 ತಂಡಗಳನ್ನು ಜಿಲ್ಲಾ ಮಟ್ಟಗಳಲ್ಲಿ ರಚಿಸಿದ್ದಾರೆ. ಈ ತಂಡಗಳ ಶ್ರಮದಿಂದಾಗಿಯೇ ಸೋಂಕಿತರು ಕ್ಷಿಪ್ರವಾಗಿ ಪತ್ತೆಯಾಗುತ್ತಿದ್ದಾರೆ. 24 ತಾಸುಗಳಲ್ಲಿ ಪರೀಕ್ಷಾ ವರದಿ ಸಿಗುತ್ತದೆ. ಈ ವಿಚಾರದಲ್ಲಿ ಅಮೆರಿಕ ಮತ್ತು ಯುರೋಪ್‌ಗಿಂತಲೂ ಟರ್ಕಿ ಎಷ್ಟೋ ಮುಂದಿದೆ.

ನಾವು ಇತರ ದೇಶಗಳ ವಿದ್ಯಮಾನಗಳನ್ನು ಗಮನಿಸುತ್ತಿದ್ದೆವು. ಆರಂಭದಲ್ಲಿ ವೈರಸ್‌ನ ಅಬ್ಬರ ನೋಡಿದಾಗ ನಮಗೂ ಭಯವಾಗಿತ್ತು.

ಆದರೆ ಟರ್ಕಿ ನಾವು ಆಲೋಚಿಸಿದ್ದಕ್ಕಿಂತಲೂ ಕ್ಷಿಪ್ರವಾಗಿ ವೈದ್ಯಕೀಯ ತುರ್ತು ಪರಿಸ್ಥಿತಿಗೆ ಪ್ರತಿಸ್ಪಂದಿಸಿತು. ಉಳಿದ ದೇಶಗಳು ಹೈಡ್ರೋಕ್ಸಿಕ್ಲೊರೊಕ್ವಿನ್‌ ಬಗ್ಗೆ ಚರ್ಚೆ ನಡೆಸುತ್ತಿರುವಾಗಲೇ ಟರ್ಕಿಯಲ್ಲಿ ಅದರ ಬಳಕೆ ಆರಂಭವಾಗಿತ್ತು ಎಂದು ತನ್ನ ದೇಶ ಕೋವಿಡ್‌ ಗೆದ್ದ ರೀತಿಯನ್ನು ಡಾ| ಮೆಲೆಕ್‌ ವಿವರಿಸಿದ್ದಾರೆ.

ಟಾಪ್ ನ್ಯೂಸ್

Sagara-Autrity

Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು

1-ree

Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ec-aa

Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ

Gundlupet-Arrest

Gundlupet: ಜಿಂಕೆ ಮಾಂಸ ಸಾಗಾಣೆ: ಐವರ ಬಂಧಿಸಿದ ಅರಣ್ಯಾಧಿಕಾರಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

north

Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್‌ ಪರೀಕ್ಷೆ

Iran: ಹಿಜಾಬ್‌ ನಿರಾಕರಿಸಿದರೆ ವಿಶೇಷ ಕ್ಲಿನಿಕ್‌: ಇರಾನ್‌ ತೀರ್ಮಾನಕ್ಕೆ ಆಕ್ರೋಶ

Iran: ಹಿಜಾಬ್‌ ನಿರಾಕರಿಸಿದರೆ ವಿಶೇಷ ಕ್ಲಿನಿಕ್‌: ಇರಾನ್‌ ತೀರ್ಮಾನಕ್ಕೆ ಆಕ್ರೋಶ

ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್‌

Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್‌

1-wqewq

UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

3

Kasaragod: ಎಡನೀರು ಶ್ರೀ ವಿಷ್ಣುಮಂಗಲ ದೇವಸ್ಥಾನದಿಂದ ಕಳವು; ಆರೋಪಿಯ ಬಂಧನ

Kumble: ಕುಂಬಳೆ ಪೇಟೆಯಲ್ಲಿ ವಿದ್ಯಾರ್ಥಿಗಳ ಹೊಡೆದಾಟ

Kumble: ಕುಂಬಳೆ ಪೇಟೆಯಲ್ಲಿ ವಿದ್ಯಾರ್ಥಿಗಳ ಹೊಡೆದಾಟ

Road mishap: ರಿಕ್ಷಾಗೆ ಕಾರು ಢಿಕ್ಕಿ; ನಾಲ್ವರಿಗೆ ಗಾಯ

Road mishap: ರಿಕ್ಷಾಗೆ ಕಾರು ಢಿಕ್ಕಿ; ನಾಲ್ವರಿಗೆ ಗಾಯ

Sagara-Autrity

Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು

1-maralu

Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.