ಆರ್ಥಿಕ ಹಿಂಜರಿತದ ದವಡೆಯಲ್ಲಿ ಆಸ್ಟ್ರೇಲಿಯ
Team Udayavani, Jun 4, 2020, 11:28 AM IST
ಕ್ಯಾನ್‌ಬೆರ: ಮೂರು ದಶಕಗಳ ಬಳಿಕ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯ ಆರ್ಥಿಕ ಹಿಂಜರಿತದ ದವಡೆಗೆ ಸಿಲುಗಿದೆ. ಇದಕ್ಕೆ ಕಾರಣವಾಗಿರುವುದು ಕೋವಿಡ್ ವೈರಸ್ ಮತ್ತು ಕಾಳ್ಗಿಚ್ಚು.
ಮಾರ್ಚ್‌ಗೆ ಅಂತ್ಯವಾದ ತ್ತೈಮಾಸಿಕದಲ್ಲಿ ಆಸ್ಟ್ರೇಲಿಯದ ಆರ್ಥಿಕತೆ ಶೇ. 0.3 ಹಿಂದಕ್ಕೆ ಚಲಿಸಿದೆ. ದೇಶದ ಆರ್ಥಿಕತೆಯ ನಾಗಾಲೋಟಕ್ಕೆ ಕೋವಿಡ್ ವೈರಸ್ ಭಾರೀ ದೊಡ್ಡ ತಡೆಯನ್ನು ಒಡ್ಡಿದೆ.
ಜಿಡಿಪಿ ಶೇ. 0.3 ಕುಸಿದಿದೆ ಎಂದು ಅಂಕಿಅಂಶ ವಿಭಾಗ ಹೇಳಿದ್ದು, ಇದು ಆರ್ಥಿಕ ಹಿಂಜರಿತದ ಮುನ್ಸೂಚನೆ. ಈ ಹಿಂಜರಿತದಿಂದ ತಪ್ಪಿಸಿಕೊಳ್ಳುವುದು ಅಸಾಧ್ಯ ಎಂದು ಹಣಕಾಸು ಸಚಿವ ಜೋಶ್ ಫ್ರೈಡೆನ್‌ಬರ್ಗ್ ಹೇಳಿದ್ದಾರೆ.
ಕಳೆದ ಒಂದು ವರ್ಷದ ಅವಧಿಯಲ್ಲಿ ಆಸ್ಟ್ರೇಲಿಯದ ಆರ್ಥಿಕತೆ ಶೇ. 1.4 ಮಾತ್ರ ಅಭಿವೃದ್ಧಿ ದಾಖಲಿಸಿದೆ. ಇದು ಜಾಗತಿಕ ಆರ್ಥಿಕ ಹಿಂಜರಿತದ ಬಳಿಕ ದಾಖಲಾಗಿರುವ ಅತಿ ಕನಿಷ್ಠ ಅಭಿವೃದ್ಧಿ ದರ.
ಕೋವಿಡ್ ವೈರಸ್ ಜತೆಗೆ ಹೋರಾಡುತ್ತಿರುವ ಇತರ ಕೆಲವು ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಲಿಸಿದರೆ ಆಸ್ಟ್ರೇಲಿಯದ ಆರ್ಥಿಕತೆಯ ಮೇಲಾಗಿರುವ ಪರಿಣಾಮ ಕಡಿಮೆಯೇ ಇದೆ. ಆದರೆ “ಕಷ್ಟದ ದಿನಗಳನ್ನು ಎದುರಿಸಲು’ ಸಿದ್ಧರಾಗಿರಬೇಕು. ಜೂನ್ ಅಂತ್ಯದ ತ್ತೈಮಾಸಿಕದಲ್ಲಿ ಜಿಡಿಪಿ ದರ ಇನ್ನಷ್ಟು ಕುಸಿಯುವ ಸಾಧ್ಯತೆಯಿದೆ ಎಂದು ಫ್ರೈಡೆನ್‌ಬರ್ಗ್ ಹೇಳಿದ್ದಾರೆ.
ಮೂರು ದಶಕಗಳಲ್ಲಿ ಆರ್ಥಿಕ ಹಿಂಜರಿತವನ್ನು ಎದುರಿಸಿದ ಮೊದಲ ಹಣಕಾಸು ಸಚಿವ ಎಂಬ ಅಪಖ್ಯಾತಿಗೆ ಸ್ವತಃ ಫ್ರೈಡೆನ್‌ಬರ್ಗ್ ಅವರೂ ಗುರಿಯಾಗಿದ್ದಾರೆ.
ಲಾಕ್‌ಡೌನ್ ಜಾರಿಗೊಳಿಸುವ ಮೂಲಕ ಆಸ್ಟ್ರೇಲಿಯ ಕೋವಿಡ್ ವೈರಸ್ ಪ್ರಸರಣವನ್ನು ಯಶಸ್ವಿಯಾಗಿ ನಿಭಾಯಿಸಿದೆ. ಆದಾಯದ ಬಹುಪಾಲು ಮೊತ್ತವನ್ನು ಆರೋಗ್ಯ ಕ್ಷೇತ್ರದ ಮೇಲೆ ವಿನಿಯೋಗಿಸಿರುವುದರಿಂದ “ಆರ್ಥಿಕ ತಜ್ಞರು ಹೇಳುವ ಅರ್ಮಗಡೆನ್’ ವಿಪತ್ತಿನಿಂದ ದೇಶ ಪಾರಾಗಿದೆ. ಜುಲೈಯಲ್ಲಿ ಸರಕಾರ ವಿಸ್ತೃತವಾದ ಆರ್ಥಿಕ ವರದಿಯನ್ನು ಬಹಿರಂಗಗೊಳಿಸಲಿದ್ದು, ಆಗ ಆರ್ಥಿಕತೆಯ ಸಮಗ್ರ ಚಿತ್ರಣ ಜನತೆಗೆ ಸಿಗಲಿದೆ ಎಂದಿದ್ದಾರೆ.
ಉದ್ಯೋಗ ಸಬ್ಸಿಡಿ ಕಡಿತ
ಆಸ್ಟ್ರೇಲಿಯದಲ್ಲಿ ನಿರುದ್ಯೋಗಿಗಳಿಗೆ ನೀಡುವ ಉದ್ಯೋಗ ಸಬ್ಸಿಡಿ ಕಡಿತವಾಗಲಿದೆ. ಉದ್ಯೋಗ ಸಬ್ಸಿಡಿ ಮೊತ್ತವನ್ನು 1,500 ಡಾಲರ್‌ಗೆ ಮಿತಿಗೊಳಿಸುವ ಸಾಧ್ಯತೆಯಿದೆ ಇಲ್ಲವೆ ನೌಕರರ ಆದಾಯವನ್ನು ಪರಿಗಣಿಸಿ ಬೇರೆ ಬೇರೆ ಸ್ತರವನ್ನು ನಿಗದಿಪಡಿಸುವ ಸಾಧ್ಯತೆಯಿದೆ.
ಕಾಳ್ಗಿಚ್ಚಿನ ಬೆನ್ನಿಗೆ ಕೋವಿಡ್
ಆಸ್ಟ್ರೇಲಿಯ ಸುಮಾರು ಮೂರು ತಿಂಗಳು ಭೀಕರ ಕಾಳಿYಚ್ಚಿನ ವಿರುದ್ಧ ಹೋರಾಡಿತ್ತು. ಕನಿಷ್ಠ ಮೂರು ರಾಜ್ಯಗಳು ಶತಮಾನದ ಭೀಕರ ಕಾಳ್ಗಿಚ್ಚಿನಿಂದ ಧಗಧಗಿಸಿದ್ದವು. ಬೆಂಕಿ ನಂದಿಸಿ ಮೂಲಸೌಕರ್ಯಗಳನ್ನು ಕಲ್ಪಿಸುವ ಕಾರ್ಯ ನಡೆಯುತ್ತಿರುವಂತೆಯೇ ಕೋವಿಡ್ ವಕ್ಕರಿಸಿತು. ಹೀಗಾಗಿ ಎರಡೆರಡು ಹೊಡೆತಗಳನ್ನು ಒಂದೇ ಸಲ ತಾಳಿಕೊಳ್ಳುವ ಅನಿವಾರ್ಯತೆ ದೇಶಕ್ಕೆ ಎದುರಾಗಿದೆ.
ಮನೆವಾರ್ತೆ ಬಳಕೆಯಲ್ಲಿ ಶೇ. 1.1 ಕುಸಿತವಾಗಿದೆ ಎಂದು ಅಂಕಿಅಂಶಗಳು ತಿಳಿಸುತ್ತಿವೆ. 2008ರಿಂದೀಚೆಗೆ ಗೃಹ ವಾರ್ತೆಯಲ್ಲಿ ಆಗಿರುವ ಮೊದಲ ಕುಸಿತವಿದು. 34 ವರ್ಷಗಳಲ್ಲಿ ತ್ತೈಮಾಸಿಕ ವೊಂದರಲ್ಲಿ ಇಷ್ಟು ದೊಡ್ಡ ಕುಸಿತವಾಗಿರುವುದು ಇದೇ ಮೊದಲು. ಲಾಕ್‌ಡೌನ್ ಜಾರಿ ಯಾಗುವ ಸಾಧ್ಯತೆ ಗ್ರಹಿಸಿ ಜನರು ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದಿದ್ದರು. ಆದರೆ ಇತರ ಸೇವಾ ವಲಯಗಳಲ್ಲಿ ಶೇ. 2.4 ಕುಸಿತ ದಾಖಲಾಗಿದೆ. ಸಾಮಾಜಿಕ ಅಂತರ ಪಾಲನೆ, ಪ್ರಯಾಣ ನಿರ್ಬಂಧ ಇತ್ಯಾದಿ ಕಾರಣಗಳಿಂದ ಸಾರಿಗೆ, ಹೋಟೆಲ್, ಕೆಫೆ, ರೆಸ್ಟೋರೆಂಟ್ ಇತ್ಯಾದಿಗಳಿಗಾಗಿ ಮಾಡುವ ಖರ್ಚಿ ನಲ್ಲಿ ಇಳಿಮುಖವಾಗಿದೆ. ಕೋವಿಡ್ ವೈರಸ್‌ನಿಂದಾಗಿ ಗೃಹ ಬಳಕೆಯ ವಸ್ತುಗಳ ಆಮದು ಶೇ. 3.9 ಕುಸಿದಿದೆ. ಇದೇ ವೇಳೆ ಸೇವೆಗಳ ಆಮದಿನಲ್ಲಿ ಶೇ. 13.6 ಕುಸಿತವಾಗಿದೆ. ಸರಕು ರಫ್ತಿನಲ್ಲಿ ಶೇ.0.7 ಮತ್ತು ಸೇವೆಗಳ ರಫ್ತಿನಲ್ಲಿ ಶೇ. 12.8 ಕುಸಿತ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Iran: ಹಿಜಾಬ್ ನಿರಾಕರಿಸಿದರೆ ವಿಶೇಷ ಕ್ಲಿನಿಕ್: ಇರಾನ್ ತೀರ್ಮಾನಕ್ಕೆ ಆಕ್ರೋಶ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
MUST WATCH
ಹೊಸ ಸೇರ್ಪಡೆ
ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್ ಪಡೆದು ಸಿನಿಮಾದಲ್ಲಿ ಫೇಮ್ ಆದ ಕಲಾವಿದರು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.