ಮಿಡತೆ ಹಾನಿಕಾರಕವಲ್ಲ: ಕೃಷಿ ವಿಜ್ಞಾನ ಕೇಂದ್ರ ವರದಿ

ಜಿ.ಪಂ. ಸಿಇಒ ಡಾ| ಸೆಲ್ವಮಣಿ ಸ್ಥಳ ಭೇಟಿ; ಪರಿಶೀಲನೆ

Team Udayavani, Jun 4, 2020, 11:50 AM IST

ಮಿಡತೆ ಹಾನಿಕಾರಕವಲ್ಲ: ಕೃಷಿ ವಿಜ್ಞಾನ ಕೇಂದ್ರ ವರದಿ

ಜಿ.ಪಂ. ಸಿಇಒ ಡಾ| ಸೆಲ್ವಮಣಿ ಸ್ಥಳಕ್ಕೆ ಭೇಟಿ ನೀಡಿದರು.

ಬೆಳ್ತಂಗಡಿ: ತಾಲೂಕಿನ ಶಿರ್ಲಾಲು ಗ್ರಾಮದಲ್ಲಿ ಪ್ರತ್ಯಕ್ಷವಾದ ಮಿಡತೆಗಳು ಹಾನಿಕಾರಕವಲ್ಲ, ಇದೊಂದು ಅಳಿವಿನಂಚಿನಲ್ಲಿರುವ ಕೀಟವಾಗಿದ್ದು, ಸಂರಕ್ಷಣೆ ಅವಶ್ಯವಿರುತ್ತದೆ ಎಂದು ದ.ಕ. ಜಂಟಿ ಕೃಷಿ ನಿರ್ದೇಶಕರ ವರದಿಯಲ್ಲಿ ತಿಳಿಸಲಾಗಿದೆ. ಮೇ 30ರಂದು ಶಿರ್ಲಾಲು, ಕರಂಬಾರು ಪ್ರದೇಶದ ರಬ್ಬರ್‌ ತೋಟದಲ್ಲಿ ಮಿಡತೆಗಳು ಕಾಣಿಸಿಕೊಂಡಿದ್ದವು. ಮಿಡತೆಗಳನ್ನು ಸಂಗ್ರಹಿಸಿ ಸೆಂಟ್ರಲ್‌ ಪ್ಲಾಂಟೇಷನ್‌ ಕ್ರಾಪ್ಸ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ (ಸಿಪಿಸಿಆರ್‌ಐ) ಕಾಸರಗೋಡು, ನ್ಯಾಷನಲ್‌ ಬ್ಯುರೋ ಆಫ್‌ ಅಗ್ರಿಕಲ್ಚರ್‌ ಇನ್‌ಸೆಕ್ಟ್ ರಿಸೋರ್ಸಸ್‌, ಬೆಂಗಳೂರು (ಎನ್‌ಬಿಎಐಆರ್‌) ಹಾಗೂ ಗಾಂಧಿ ಕೃಷಿ ವಿಜ್ಞಾನ ಕೇಂದ್ರ, ಬೆಂಗಳೂರಿಗೆ (ಜಿಕೆವಿಕೆ) ಕಳುಹಿಸಲಾಗಿತ್ತು.

ಅಲ್ಲಿನ ಕೀಟಶಾಸ್ತ್ರಜ್ಞರಿಂದ ಬಂದಿರುವ ವರದಿಯ ಪ್ರಕಾರ ಕೀಟವು ಒಲಾರ್ಚಸ್‌ ಮಿಲಿಯಾರಿಸ್‌ ಮಿಲಿಯಾರಿಸ್‌ ಸ್ಪಾಟೆಡ್‌ ಕಾಫಿ ಮಿಡತೆ ಎಂದು ಗುರುತಿಸಲ್ಪಟ್ಟಿದೆ. ಈ ಮಿಡತೆಗಳು ದಕ್ಷಿಣ ಭಾರತದ ಪಶ್ಚಿಮ ಘಟ್ಟಗಳಲ್ಲಿ ಕಾಣಿಸಿಕೊಳ್ಳುತ್ತವೆ ಹಾಗೂ ಅಳಿವಿನಂಚಿನಲ್ಲಿರುವ ಕೀಟವಾಗಿರುತ್ತವೆ (ಇಂಟರ್‌ನ್ಯಾಷನಲ್‌ ಯೂನಿಯನ್‌ ಫಾರ್‌ ಕನ್ಸರ್‌ವೆಷನ್‌ ಆಫ್‌ ನೇಚರ್‌). ಈ ಕೀಟವು ಕಾಫಿ, ಬಾಳೆ, ಗೇರು, ಅಡಿಕೆ, ತೆಂಗು, ಏಲಕ್ಕಿ ಹಾಗೂ ಭತ್ತದ ಬೆಳೆಯ ಮೇಲೆ ಕಾಣಿಸುವ ಸಾಧ್ಯತೆಗಳಿದ್ದು, ಅಪಾಯಕಾರಿಯಾಗಿರುವುದಿಲ್ಲ. ಭೂಮಿಯ ಉಳುಮೆಯಿಂದ ಇವುಗಳು ಮೊಟ್ಟೆ ಹಂತದಲ್ಲಿ ನಿರ್ವಹಣೆ ಮಾಡಬಹುದಾಗಿರುತ್ತದೆ. ಕೀಟಬಾಧೆಯಿಂದ ಬೆಳೆ ನಾಶವಾದ ಸಂದರ್ಭ ಬೇವಿನ ಮೂಲದ ಕೀಟನಾಶಕಗಳನ್ನು ಅಥವಾ ಲ್ಯಾಂಬ್ಡಾ ಸೈಹಾಲೋಥ್ರಿನ್‌ 5 ಇಸಿ 1.5 ಮಿ.ಲೀ. ಪ್ರತಿ 1 ಲೀಟರ್‌ ನೀರಿನಲ್ಲಿ ಬೆರೆಸಿ ಸಿಂಪಡಣೆ ಮಾಡಬಹುದಾಗಿದೆ. ಇದೊಂದು ಅಳಿವಿನಂಚಿನಲ್ಲಿರುವ ಕೀಟವಾಗಿದ್ದು, ಸಂರಕ್ಷಣೆ ಅವಶ್ಯವಿದೆ ಎಂದು ದ.ಕ. ಜಂಟಿ ಕೃಷಿ ನಿರ್ದೇಶಕರ ವರದಿಯಲ್ಲಿ ತಿಳಿಸಲಾಗಿದೆ.

ವರದಿ ತಲುಪುತ್ತಿದ್ದಂತೆ ಜಿ.ಪಂ. ಸಿಇಒ ಡಾ| ಸೆಲ್ವಮಣಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಿಡತೆ ನಿಯಂತ್ರಣಕ್ಕೆ ದ್ರಾವಣ ಸಿಂಪಡಿಸಿದ್ದು, ಕೃಷಿ ನಿಯಂತ್ರಣಕ್ಕೆ ಬಂದರಷ್ಟೆ ಕೃಷಿ ಉಳಿಸಬಹುದು ಎಂದು ಕರಂಬಾರಿನ ಕೃಷಿಕ ಅನಿಶ್‌ ತಿಳಿಸಿದ್ದಾರೆ.

ಮಿಡತೆ ಸೇರಿರುವ ಶಿರ್ಲಾಲು ಕೃಷಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಮಿಡತೆ ಜಾತಿಗಳನ್ನು ಜಿಕೆವಿಕೆಗೆ ಕಳುಹಿಸಿದ್ದು, ವರದಿ ಬಂದಿದೆ. ಕೃಷಿಗೆ ಇದರಿಂದ ಯಾವುದೇ ಹಾನಿಯಾಗದು. ಬೇವಿನ ದ್ರಾವಣ ಸಿಂಪಡಿಸುವಂತೆ ತಿಳಿಸಲಾಗಿದೆ.
ಡಾ| ಸೆಲ್ವಮಣಿ, ಜಿ.ಪಂ. ಸಿಇಒ

ಟಾಪ್ ನ್ಯೂಸ್

horatti

C.T. Ravi; ಅವಾಚ್ಯ ಶಬ್ದಗಳಿಂದ ನಿಂದಿಸಿದ ದಾಖಲೆ ಇಲ್ಲ: ಮಹತ್ವ ಪಡೆದ ಸಭಾಪತಿ ಹೇಳಿಕೆ

TuluMovie; Middle Class Family is ready to hit the screens: Release date has arrived

TuluMovie; ತೆರೆಗೆ ಬರಲು ಸಿದ್ದವಾಯ್ತು ಮಿಡಲ್‌ ಕ್ಲಾಸ್‌ ಫ್ಯಾಮಿಲಿ: ರಿಲೀಸ್‌ ದಿನಾಂಕ ಬಂತು

kejriwal-2

BJP ಪೂರ್ವಾಂಚಲಿಗಳನ್ನು ರೋಹಿಂಗ್ಯಾಗಳೆಂದು ಮತಗಳನ್ನು ಅಳಿಸುತ್ತಿದೆ: ಕೇಜ್ರಿವಾಲ್ ಆರೋಪ

Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ

Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ

1-ewewqe

Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ

Mandya:ಹಲವು ರೋಗ ನಿವಾರಕ; ವೈದ್ಯನಾಥೇಶ್ವರ ಸ್ವಾಮಿ-ಚರ್ಮದ ರೋಗಕ್ಕೆ ಹುತ್ತದ ಮಣ್ಣು ರಾಮಬಾಣ

Mandya:ಹಲವು ರೋಗ ನಿವಾರಕ ವೈದ್ಯನಾಥೇಶ್ವರ ಸ್ವಾಮಿ-ಚರ್ಮದ ರೋಗಕ್ಕೆ ಹುತ್ತದ ಮಣ್ಣು ರಾಮಬಾಣ

ct rav

C.T. Ravi ಅವರನ್ನು ತತ್ ಕ್ಷಣ ಬಿಡುಗಡೆ ಮಾಡಿ: ಹೈಕೋರ್ಟ್ ಆದೇಶ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2

Bantwal: ಪುರಸಭೆ ಆಸ್ತಿ ರಕ್ಷಣೆಗೆ ಸದಸ್ಯರ ಆಗ್ರಹ

1(1

Sullia: ವಿಎಒ ಹೊಸ ಕಟ್ಟಡಕ್ಕೆ ಅನುದಾನವಿಲ್ಲ !

8-belthangady

Belthangady: ಬೈಕಿಗೆ ಕಾರು ಢಿಕ್ಕಿ, ಓಡಿಲ್ನಾಳದ ಯುವಕ ಸಾವು

4-train

Train; ಮಂಗಳೂರು-ಪುತ್ತೂರು ಪ್ಯಾಸೆಂಜರ್‌ ರೈಲು ಸುಬ್ರಹ್ಮಣ್ಯಕ್ಕೆ?

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

horatti

C.T. Ravi; ಅವಾಚ್ಯ ಶಬ್ದಗಳಿಂದ ನಿಂದಿಸಿದ ದಾಖಲೆ ಇಲ್ಲ: ಮಹತ್ವ ಪಡೆದ ಸಭಾಪತಿ ಹೇಳಿಕೆ

TuluMovie; Middle Class Family is ready to hit the screens: Release date has arrived

TuluMovie; ತೆರೆಗೆ ಬರಲು ಸಿದ್ದವಾಯ್ತು ಮಿಡಲ್‌ ಕ್ಲಾಸ್‌ ಫ್ಯಾಮಿಲಿ: ರಿಲೀಸ್‌ ದಿನಾಂಕ ಬಂತು

kejriwal-2

BJP ಪೂರ್ವಾಂಚಲಿಗಳನ್ನು ರೋಹಿಂಗ್ಯಾಗಳೆಂದು ಮತಗಳನ್ನು ಅಳಿಸುತ್ತಿದೆ: ಕೇಜ್ರಿವಾಲ್ ಆರೋಪ

Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ

Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ

1-ewewqe

Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.