ಒತ್ತುವರಿಯಾಗಿದ್ದ ಕೆರೆ ಜಾಗ ತೆರವು
Team Udayavani, Jun 4, 2020, 12:53 PM IST
ಆಲ್ದೂರು: ವಸ್ತಾರೆ ಗ್ರಾಮದಲ್ಲಿ ಒತ್ತುವರಿ ಮಾಡಲಾಗಿದ್ದ ಅಮ್ಮನವರ ಕೆರೆ ಜಾಗವನ್ನು ಉಪವಿಭಾಗಾಧಿಕಾರಿಗಳ ಸಮ್ಮುಖದಲ್ಲಿ ತೆರವು ಮಾಡಲಾಯಿತು
ಆಲ್ದೂರು: ವಸ್ತಾರೆ ಗ್ರಾಪಂ ವ್ಯಾಪ್ತಿಯಲ್ಲಿರುವ ಅಮ್ಮನವರ ಕೆರೆ ಜಾಗ ಒತ್ತುವರಿಯಾಗಿದ್ದು ಬುಧವಾರ ಒತ್ತುವರಿಯಾಗಿದ್ದ ಜಾಗವನ್ನು ಕಂದಾಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ತೆರವು ಮಾಡಲಾಗಿದೆ.
ವಸ್ತಾರೆ ಗ್ರಾಮದಲ್ಲಿರುವ ಅಮ್ಮನವರ ಕೆರೆ ಇತಿಹಾಸ ಪ್ರಸಿದ್ಧ ಕೆರೆಯಾಗಿದೆ. ವಸ್ತಾರೆ ಗ್ರಾಮದಲ್ಲಿ ಸಪ್ತ ಮಾತೃಕೆಯರ ದೇವಸ್ಥಾನವಿದ್ದು ಪದ್ಮಾವತಮ್ಮ ದೇವಿ ಇಲ್ಲಿನ ಪ್ರಮುಖ ದೇವತೆ. ದೇವಸ್ಥಾನಕ್ಕೂ ಕೆರೆಗೂ ಸಂಬಂಧವಿದ್ದು ದೇವಸ್ಥಾನದಲ್ಲಿ ಇದಕ್ಕೆ ಕುರುಹು ಇದೆ. ಉತ್ಸವದ ಸಂದರ್ಭದಲ್ಲಿ ಸಪ್ತಮಾತೃಕೆಯರು ಬಂದು ಈ ಕೆರೆಯಲ್ಲಿ ಸ್ನಾನ ಮಾಡುತ್ತಿದ್ದರು. ಇಲ್ಲಿರುವ ಕೆರೆಯಲ್ಲಿ ಅಮ್ಮನವರಿಗೆ ಸಂಭಂದಿಸಿದ ರಥವೊಂದು ಮುಳುಗಿದೆ ಎಂಬ ನಂಬಿಕೆ ಈ ಊರಿನ ಜನರಲ್ಲಿದ್ದು ಈ ಕೆರೆಯನ್ನು ಅಮ್ಮನವರ ಕೆರೆ ಎಂದೇ ಕರೆಯುತ್ತಾರೆ.
ಕೆರೆ 3.16 ಗುಂಟೆ ಜಾಗವಿದ್ದು ಅಕ್ಕ ಪಕ್ಕದವರು ಒತ್ತುವರಿ ಮಾಡಿಕೊಂಡಿದ್ದು ಈ ಬಗ್ಗೆ ಗ್ರಾಮಸ್ಥರಾದ ಶಿವಪ್ರಕಾಶ್ ಹಾಗೂ ರಂಗನಾಥ್ ಅವರು ವಸ್ತಾರೆ ಗ್ರಾಪಂ ಹಾಗೂ ಚಿಕ್ಕಮಗಳೂರು ಕಂದಾಯ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿದ್ದರು. ಈ ಸಂಭಂದ ಬುಧವಾರ ಸ್ಥಳಕ್ಕೆ ಆಗಮಿಸಿದ ಉಪ ವಿಭಾಗಾಧಿಕಾರಿ ಎಚ್.ಎಲ್. ನಾಗರಾಜು ಅವರ ನೇತೃತ್ವದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು, ಗ್ರಾಮಸ್ಥರ ಸಮ್ಮುಖದಲ್ಲಿ ಇಟಾಚಿ ಯಂತ್ರದ ಮೂಲಕ ಒತ್ತುವರಿ ಜಾಗವನ್ನು ತೆರವು ಮಾಡಿಸಿದ್ದಾರೆ. ಉಪ ವಿಭಾಗಾಧಿಕಾರಿ ಎಚ್.ಎಲ್. ನಾಗರಾಜು, ಉಪತಹಶೀಲ್ದಾರ್ ಪ್ರಸನ್ನ, ರಾಜಸ್ವ ನಿರೀಕ್ಷಕ ರವಿಕುಮಾರ್, ಗ್ರಾಮಸ್ಥರಾದ ಶಿವಪ್ರಕಾಶ್, ರಂಗನಾಥ್ ಮತ್ತಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Datta peeta; ಸರಕಾರ ನೇಮಕ ಮಾಡಿದ್ದ ಅರ್ಚಕ ರಾಜೀನಾಮೆ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
MUST WATCH
ಹೊಸ ಸೇರ್ಪಡೆ
Jharkhand Polls: ಬುಡಕಟ್ಟು ರಾಜ್ಯದಲ್ಲಿ ಅಧಿಕಾರದತ್ತ ಇಂಡಿಯಾ ಒಕ್ಕೂಟ; ಬಿಜೆಪಿಗೆ ಹಿನ್ನಡೆ
Maharashtra Results 2024: ಮಾಹಾಯುತಿಗೆ ಭರ್ಜರಿ ಜನಮನ್ನಣೆ, ಮಹಾವಿಕಾಸ್ ಅಘಾಡಿಗೆ ಮುಖಭಂಗ
Maharashtra: ಫಲಿತಾಂಶಕ್ಕೂ ಮೊದಲೇ ರಾರಾಜಿಸುತ್ತಿದೆ ಅಜಿತ್ ಪವಾರ್ ಗೆಲುವಿನ ಬ್ಯಾನರ್
Aaram Aravinda Swamy Movie Review: ಪಕ್ಕದ್ಮನೆ ಹುಡುಗನ ಫನ್‌ರೈಡ್
Karnataka By Poll Results: ಮತಎಣಿಕೆ-ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು “ಕೈ” ಮುನ್ನಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.