ತತ್ವಪದಕಾರಗೆ ಎಸ್‌ಪಿಬಿ ನೆರವು
ಎನ್‌ಜಿಒ ಮೂಲಕ ಗೃಹೋಪಯೋಗಿ ಸಾಮಗ್ರಿ ರವಾನೆ
Team Udayavani, Jun 4, 2020, 1:23 PM IST
ರಾಯಚೂರು: ತತ್ವಪದ ಗಾಯಕ ದಾದಾಪೀರ್ ಮಂಜರ್ಲಾ ಅವರಿಗೆ ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಕಳುಹಿಸಿದ ವಸ್ತುಗಳು
ರಾಯಚೂರು: ಅನಾರೋಗ್ಯಕ್ಕೀಡಾಗಿ ಚಿಕಿತ್ಸೆಗೂ ಹಣವಿಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ತತ್ವಪದ ಗಾಯಕ ದಾದಾಪೀರ್ ಮಂಜರ್ಲಾ ಅವರಿಗೆ ಖ್ಯಾತ ಗಾಯಕ ಎಸ್.ಬಿ. ಬಾಲಸುಬ್ರಹ್ಮಣ್ಯಂ ಅಗತ್ಯ ವಸ್ತುಗಳನ್ನು ಕಳುಹಿಸುವ ಮೂಲಕ ನೆರವಾಗಿದ್ದಾರೆ.
ಎಸ್‌ಪಿಬಿ ಅವರು ನಡೆಸುತ್ತಿರುವ ಎನ್‌ಜಿಒ ಮೂಲಕ ದಿನಬಳಕೆಗೆ ಬೇಕಾದ ಪಾತ್ರೆಗಳನ್ನು ಚೈನ್ನೈನಿಂದ ದಾದಾಪೀರ್ ವಿಳಾಸಕ್ಕೆ ಕಳುಹಿಸಿದ್ದಾರೆ. ಆ ಮೂಲಕ ಸಂಕಷ್ಟದಲ್ಲಿರುವ ಗಾಯಕನ ಕುಟುಂಬಕ್ಕೆ ಅಲ್ಪ ನೆರವಿನ ಹಸ್ತ ಚಾಚಿದ್ದಾರೆ. ಅನಾರೋಗ್ಯಕ್ಕೀಡಾಗಿದ್ದ ದಾದಾಪೀರ್ ಮಂಜರ್ಲಾ ಅವರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆಗೆ ಹಣವಿಲ್ಲದ ಕಾರಣ ವೀಡಿಯೋ ಮಾಡಿ ನೆರವು ನೀಡುವಂತೆ ಸಂದೇಶ ಹರಿಬಿಟ್ಟಿದ್ದರು.
ನಗರ ಶಾಸಕ ಡಾ| ಶಿವರಾಜ ಪಾಟೀಲ ನೀಡಿದ ನೆರವಿನಿಂದ ಒಂದು ಹಂತದ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಇನ್ನೂ ಚಿಕಿತ್ಸೆ ಮುಂದುವರಿದಿದೆ. ಈ ವೀಡಿಯೋ ನೋಡಿದ ಎಸ್‌ಪಿಬಿ ತಮ್ಮ ಎನ್ ಜಿಒ ಮೂಲಕ ಏನಾದರೂ ನೆರವು ನೀಡಬೇಕು ಎಂಬ ಕಾರಣಕ್ಕೆ ಗೃಹೋಪಯೋಗಿ ಸಾಮಗ್ರಿಗಳನ್ನು ಕಳುಹಿಸಿದ್ದಾರೆ. ಈ ಬಗ್ಗೆ ಅತ್ಯಾನಂದ ವ್ಯಕ್ತಿಪಡಿಸುವ ಮಂಜರ್ಲಾ ಅವರು, ಈ ವಸ್ತುಗಳಿಗೆ ಬೆಲೆ ಕಟ್ಟಲಾಗುವುದಿಲ್ಲ. ನನ್ನ ಬಗ್ಗೆ ಅವರು ಇಟ್ಟಿರುವ ಪ್ರೀತಿಗೆ ನಾನು ಚಿರಋಣಿ. 15 ವರ್ಷಗಳ ಹಿಂದೆ ಎಸ್‌ಪಿಬಿ ಅವರ ಮಗನ ಮದುವೆಯಲ್ಲಿ ನಾನು ಸೇರಿದಂತೆ ಅನೇಕ ಗಾಯಕರು ಓಡಾಡಿದ್ದೆವು. ಕುಟುಂಬ ಸಮೇತರಾಗಿ ಪಾಲ್ಗೊಂಡಿದ್ದೆವು. ಅದನ್ನು ಮನದಲ್ಲಿಟ್ಟುಕೊಂಡು ಅವರು ಈ ನೆರವು ನೀಡಿರುವುದು ಖುಷಿ ಕೊಟ್ಟಿದೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ
ಸಿಂಧನೂರು: ಲಾರಿ ಪಲ್ಟಿಯಾಗಿ ರಸ್ತೆ ಬದಿ ನಿಂತಿದ್ದ ಇಬ್ಬರು ಇಂಜಿನಿಯರ್ ಸೇರಿ ಮೂವರ ದುರ್ಮರಣ
Raichur: ಪಿಡಿಒ ಪ್ರಶ್ನೆಪತ್ರಿಕೆ ವಿಳಂಬ ಗಲಾಟೆ; ಈಗ ವಿಡಿಯೋ ವೈರಲ್
Raichur; ಬೇಡಿಕೆ ಕುಸಿತ: ಆರ್‌ಟಿಪಿಎಸ್ 5 ವಿದ್ಯುತ್ ಘಟಕ ಸ್ಥಗಿತ
Sirwar: ಹಳೆ ದ್ವೇಷ-ಯುವಕನ ಕೊಲೆ; ಮೂವರ ಬಂಧನ
MUST WATCH
ಹೊಸ ಸೇರ್ಪಡೆ
Puttur: ಬಸ್ – ಬೈಕ್ ಅಪಘಾತ; ಸವಾರ ಸಾವು
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.