ರಾಯಚೂರು : ಪಶ್ಚಿಮ ಠಾಣೆಯ ಮೂರು ಪೇದೆಗಳಲ್ಲಿ ಸೋಂಕು ದೃಢ
Team Udayavani, Jun 4, 2020, 1:30 PM IST
ರಾಯಚೂರು: ನಗರದ ಪಶ್ಚಿಮ ಠಾಣಾ ಮೂವರು ಪೇದೆಗಳಿಗ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ.
25 ರಿಂದ 30 ವರ್ಷದ ಪೆದೆಗಳಲ್ಲಿ ಸೋಂಕು ದೃಢಪಟ್ಟಿದೆ , ರಾಯಚೂರು ಕೃಷಿ ವಿವಿ ಕ್ವಾರಂಟೈನ್ ಕೇಂದ್ರದ ಕರ್ತವ್ಯ ನಿರ್ವಹಿಸುವ ವೇಳೆ ಸೋಂಕು ತಗುಲಿರಬಹುದು ಎನ್ನಲಾಗುತ್ತಿದೆ. ಮಹಾರಾಷ್ಟ್ರ ದಿಂದ ಬಂದ ವಲಸಿಗರಿದ್ದ ಕ್ವಾರಂಟೈನ್ ಕೆಂದ್ರ ಇದಾಗಿತ್ತು.
ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮೂರು ಜನ ಕಾನಸ್ಟೆಬಲ್ ರವರಿಗೆ ಕೋವಿಡ್-19 ಸೋಂಕು ಧೃಡಪಟ್ಟಿರುವುದರಿಂದ ಅವರನ್ನು ರಾಯಚೂರು ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಗುವುದು. ಈ ಹಿನ್ನೆಲೆಯಲ್ಲಿ ಅವರೊಂದಿಗೆ ಪ್ರಾಥಮಿಕ ಮತ್ತು ದ್ವಿತೀಯ ಹಂತದಲ್ಲಿ ಸಂಪರ್ಕದಲ್ಲಿರುವವರಿಗಾಗಿ ಮಾಹಿತಿ ಪಡೆಯಲಾಗುತ್ತಿದೆ. ರಾಯಚೂರು ಪಶ್ಚಿಮ ಪೊಲೀಸ್ ಠಾಣೆಗೆ ಸ್ಯಾನಿಟೆಜ್ ಮಾಡಿಸಲು ಕ್ರಮಕೈಗೊಳ್ಳಲಾಗುವುದು. ಆದ್ದರಿಂದ ಪಶ್ಚಿಮ ಠಾಣೆಯ ಸರಹದ್ದಿನ ದೂರುದಾರರು ತಾತ್ಕಾಲಿಕವಾಗಿ ನಗರದ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರುಗಳನ್ನು ನೀಡಬೇಕು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ.ಸಿ.ಬಿ.ವೇದಮೂರ್ತಿತಿಳಿಸಿದ್ದಾರೆ.
ಪಶ್ಚಿಮ ಪೊಲೀಸ್ ಠಾಣೆ ಸೀಲ್ ಡೌನ್ ಮಾಡುವ ಸಾಧ್ಯತೆ ಇದೆ. ಈಗಾಗಲೇ ದೇವದುರ್ಗ ಪೊಲೀಸ್ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದೆ. ಈ ಘಟನೆಯಿಂದ ಜಿಲ್ಲೆಯ ಪೊಲೀಸರಲ್ಲಿ ಅವರ ಕುಟುಂಬಗಳ ಆತಂಕಕ್ಕೆ ಕಾರಣವಾಗಿದೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.