ಹಾರಿದ ಮೇಲ್ಛಾವಣಿ, ಧರೆಗುರುಳಿದ ಮರ, ಜಖಂಗೊಂಡ ಕಾರು: ‘ನಿಸರ್ಗ ಚಂಡಮಾರುತ’ದ ಫೋಟೋಗಳು !
ನಿಸರ್ಗ ಚಂಡಮಾರುತ ಬುಧವಾರ ಮಹಾರಾಷ್ಟ್ರ ಬಳಿಯ ಅಲಿಭಾಗ್ ಕರಾವಳಿಯಲ್ಲಿ ಗಂಟೆಗೆ 110 ಕಿ.ಮೀ ವೇಗದಲ್ಲಿ ಬಂದು ಅಪ್ಪಳಿಸಿದ್ದು ಭಾರೀ ಗಾಳಿ- ಮಳೆಯೊಂದಿಗೆ, ಮರಗಳು ಸೇರಿದಂತೆ ವಿದ್ಯುತ್ ಕಂಬಗಳು ಧರೆಗುರುಳಿವೆ.
ರಾಯಗಢದಿಂದ 87 ಕಿ. ಮೀ ದೂರದಲ್ಲಿರುವ ಶ್ರೀವರ್ಧನ್ ಬಳಿಯ ಏರಿಯಾವೊಂದರಲ್ಲೂ ಈ ಚಂಡಮಾರುತ ತನ್ನ ಪ್ರತಾಪ ತೋರ್ಪಡಿಸಿದೆ. ಇತ್ತೀಚಿಗೆ ಪಶ್ಚಿಮ ಬಂಗಾಳ, ಒಡಿಶಾ ಮತ್ತು ಬಾಂಗ್ಲಾದೇಶದಲ್ಲಿ ಅಟ್ಟಹಾಸ ಬೀರಿದ ಆಂಫಾನ್ ಚಂಡಮಾರುತದಂತೆ, ನಿಸರ್ಗ ಕೂಡ ಕೂಡ ಅಬ್ಬರಿಸುವ ಮುನ್ಸೂಚನೆ ಇದ್ದರೂ ಬುಧವಾರ ಅಪರಾಹ್ನ 2:30ರ ವೇಳೆಗೆ ಚಂಡಮಾರುತದ ಪ್ರಭಾವ ಇಳಿಯಿತು ಎಂದು ಹವಾಮಾನ ಇಲಾಖೆ ತಿಳಿಸಿದೆ.
ಚಂಡಮಾರುತದ ರಭಸಕ್ಕೆ ಪುಣೆಯಲ್ಲಿ ಇಬ್ಬರು, ರಾಯಭಾಗ್ನಲ್ಲಿ ಓರ್ವ ಸಾವನ್ನಪ್ಪಿದ್ದಾರೆ. ರಾಯ್ಭಾಗ್ ಭಾಗದಲ್ಲಿ ಸುಮಾರು 100 ಬೃಹತ್ ಗಾತ್ರದ ಮರಗಳು ಧರೆಗುರುಳಿವೆ. ಕೆಲವು ಮರಗಳು, ವಿದ್ಯುತ್ ಕಂಬಗಳು ಮನೆಗಳ ಮೇಲೆ ಬಿದ್ದಿವೆ. ಹಲವು ಕಡೆ ಮೇಲ್ಛಾವಣಿಗಳು ಹಾರಿ ಹೋಗಿವೆ. ಸಹಸ್ರಾರು ಮನೆಗಳ ವಿದ್ಯುತ್ ಸಂಪರ್ಕ ಕಡಿತವಾಗಿದೆ.