ಬಸಲಿಂಗಯ್ಯ ಹಿರೇಮಠಗೆ ಬೀಳ್ಕೊಡುಗೆ
Team Udayavani, Jun 4, 2020, 3:39 PM IST
ಕಲಬುರಗಿ: ಸೇವಾ ನಿವೃತ್ತಿ ಹೊಂದಿದ ಬಸಲಿಂಗಯ್ಯ ಹಿರೇಮಠ ದಂಪತಿಯನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.
ಕಲಬುರಗಿ: ಕಾಯಕವೇ ಕೈಲಾಸವೆಂದು ಸೇವೆಯುದ್ದಕ್ಕೂ ಉತ್ತಮ ಸೇವೆ ಸಲ್ಲಿಸಿದ್ದ ಪಿಎಸ್‌ಐ ಹುದ್ದೆಯೊಂದಿಗೆ ನಿವೃತ್ತಿಯಾಗಿರುವ ಬಸಲಿಂಗಯ್ಯ ಹಿರೇಮಠ ಬಸವಣ್ಣನವರ ಕರ್ಮಭೂಮಿಯಲ್ಲಿ ಪದೋನ್ನತ್ತಿ ಪಡೆದು ನಿವೃತ್ತಿಯಾಗುತ್ತಿರುವುದು ಸಂತಸ ತಂದಿದೆ ಎಂದು ಅಬಕಾರಿ ಇಲಾಖೆ ಜಂಟಿ ಆಯುಕ್ತ ಎಸ್.ಕೆ. ಕುಮಾರ ಹೇಳಿದರು.
ನಗರದ ಅಬಕಾರಿ ಉಪ ಆಯುಕ್ತರ ಕಚೇರಿಯಲ್ಲಿ ಆಯೋಜಿಸಿದ ಸೇವಾ ನಿವೃತ್ತಿ ಮತ್ತು ಪದೋನ್ನತಿ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸದಾ ಹಸನ್ಮುಖೀ ಬಸಲಿಂಗಯ್ಯನವರಿಗೆ ಇನ್ನೇನು ಹಿರಿಯ ರಕ್ಷಕ ಹುದ್ದೆಯಿಂದ ನಿವೃತ್ತಿ ಹೊಂದುತ್ತಾರೆ ಎನ್ನುವ ಕೆಲವೇ ಕ್ಷಣದಲ್ಲಿ ಸರಕಾರ ಪಿಎಸ್‌ಐ ಹುದ್ದೆಗೆ ಪದೋನ್ನತ್ತಿ ನೀಡಿ ಆದೇಶಿಸಿರುವುದು ಅವರಿಗೆ ನೀಡಿದ ಪದೋನ್ನತಿ ಉಡುಗೊರೆಯೆಂತಲೇ ಹೇಳಬೇಕು ಎಂದು ಪ್ರಶಂಸಿಸಿದರು.
ಅಧೀಕ್ಷಕರ ಹುದ್ದೆಗೆ ಪದೋನ್ನತಿ ಹೊಂದಿರುವ ಸಂಜಯಕುಮಾರ ಗ್ಲ್ಯಾಡಸನ್, ಇಂದೂಮತಿ ಹಾಗೂ ಅದೇ ಹುದ್ದೆಗೆ ಪದೋನ್ನತಿ ಹೊಂದಿದ್ದರೂ ಅದನ್ನು ನಿರಾಕರಿಸಿರುವ ಮಹ್ಮದ್ ಇಸ್ಲಾಯಿಲ್ ಇನಾಮದಾರಗೆ ಸತ್ಕಾರ ನೀಡಿ ಬೀಳ್ಕೊಡಲಾಯಿತು. ಅಬಕಾರಿ ಅಧೀಕ್ಷಕ ಸಂಗನಗೌಡ ಪಾಟೀಲ ಮಾತನಾಡಿದರು. ಅಬಕಾರಿ ನಿರೀಕ್ಷಕರಾದ ಬಾಲಕೃಷ್ಣ ಮದುಕಣ್ಣ, ಗೋಪಾಲ ಪಂಡಿತ, ವನಿತಾ ಸಿತಾಳೆ, ಕಚೇರಿ ಅಧೀಕ್ಷಕ ಸಂಜಯಸಿಂಗ್, ಸೈಯ್ಯದ್ ನಜರೊದ್ದೀನ್, ಉಮೇಶ್ ಷನ್ಮುಖ, ಸಂತೋಷ ಕಡಿಮನಿ, ಶರಣು ಮೋತಕಪಲ್ಲಿ ಸೇರಿದಂತೆ ಹಲವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಅಬಕಾರಿ ನಿರೀಕ್ಷಕ ವಿಠಲ ವಾಲಿ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ
Kalaburagi: ವಿದ್ಯುತ್ ತಂತಿ ತಗುಲಿ 6 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿ
Kalaburagi: ಜಮೀನು ವ್ಯಾಜ್ಯ; ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ
Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.