ರೋಗ ನಿರೋಧಕ ಶಕ್ತಿ ಹೆಚ್ಚಿಸುವ “ಪಾಲಕ್” ಪನ್ನೀರ್ ಮಸಾಲ ರೆಸಿಪಿ
ಶ್ರೀರಾಮ್ ನಾಯಕ್, Jun 4, 2020, 8:12 PM IST
ಪಾಲಕ್ ಸೊಪ್ಪು ಹೆಚ್ಚು ಬಳಸುವುದರಿಂದ ಕ್ಯಾಲ್ಸಿಯಂನ ಕೊರತೆ ನಿವಾರಣೆಯಾಗಿರುವುದು. ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ನಮ್ಮ ದೇಹದ ಬೆಳವಣಿಗೆಗೆ ಇದು ಬಹಳ ಸಹಕಾರಿಯಾಗಿರುತ್ತದೆ.
ಪಾಲಕ್ ಸೊಪ್ಪು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು . ಪಾಲಕ್ ಸೊಪ್ಪಿನಿಂದ ಅನೇಕ ರೀತಿಯ ಅಡುಗೆಯನ್ನು ತಯಾರಿಸಬಹುದು ಅದರಲ್ಲಿ ಪಾಲಾಕ್ ಪನ್ನೀರ್ ಕೂಡ ಒಂದಾಗಿದೆ.
ಪಾಲಕ್ ಪನ್ನೀರ್ ಆಹಾರ ಪ್ರಿಯರ ಮೆಚ್ಚಿನ ತಿಂಡಿಯೂ ಹೌದು. ಸಮಪಾಕದಲ್ಲಿ ತಯಾರಿಸಿದ ಪಾಲಕ್ ಪನ್ನೀರ್ ಮಸಾಲ ಸವಿಯುವುದೇ ನಾಲಗೆಗೆ ಒಂದು ಹಬ್ಬ. ನೀವು ಸಹ ಮನೆಯಲ್ಲೇ ಸಿದ್ಧಪಡಿಸಿ ತಿನ್ನಬಹುದು. ಸಸ್ಯಾಹಾರಿಗಳೂ ಇಷ್ಟಪಡುವ ಮತ್ತು ಆರೋಗ್ಯಕಾರಕ ಪಾಲಕ್ ಪನ್ನೀರ್ ಮಸಾಲವನ್ನು ನೀವೂ ಒಮ್ಮೆ ಸವಿದು ನೋಡಿ.
ಬೇಕಾಗುವ ಸಾಮಗ್ರಿಗಳು
ಪಾಲಕ್ 1ಕಟ್ಟು , ಪನ್ನೀರ್ 1 ಕಪ್, ಈರುಳ್ಳಿ 2 , ಬೆಳ್ಳುಳ್ಳಿ 2 ಕಟ್ ಮಾಡಿದ ಎಳೆ, ಶುಂಠಿ ಸ್ವಲ್ಪ , ಗರಂ ಮಸಾಲ 1 ಚಮಚ, ಎಣ್ಣೆ 5 ರಿಂದ 6 ಚಮಚ, ತುಪ್ಪ 4 ಚಮಚ, ಖಾರದ ಪುಡಿ 2 ಚಮಚ, ರುಚಿಗೆ ತಕ್ಕಷ್ಟು ಉಪ್ಪು.
ತಯಾರಿಸುವ ವಿಧಾನ
ಮೊದಲಿಗೆ ಪಾಲಕ್ ಸೊಪ್ಪನ್ನು ಚೆನ್ನಾಗಿ ತೊಳೆದು ಒಂದು ಪಾತ್ರೆಯಲ್ಲಿ ಹಾಕಿ ಅದರಲ್ಲಿ ನೀರು ಸ್ವಲ್ಪ ಉಪ್ಪು ಹಾಕಿ ಸ್ವಲ್ಪ ಹೊತ್ತು ಬೇಯಿಸಿರಿ. ಪಾಲಕ್ ಬೆಂದ ಮೇಲೆ ಅದನ್ನು ಪಾತ್ರೆಗೆ ಹಾಕಿ. ತಣ್ಣಗೆ ಅಗಲು ಬಿಡಿ. ಪಾಲಕ್ ತಣ್ಣಗಾದ ಮೇಲೆ ಅದನ್ನು ಮಿಕ್ಸ್‌ರ್ ನಲ್ಲಿ ಹಾಕಿ, ಸ್ವಲ್ಪ ಹೊತ್ತು ರುಬ್ಬಿರಿ. ಒಂದು ಬಾಣಲೆಗೆ ಎಣ್ಣೆ ಹಾಕಿ ಕಾದ ಮೇಲೆ ಸ್ವಲ್ಪ ಶುಂಠಿ ಮತ್ತು ಬೆಳ್ಳುಳ್ಳಿಯನ್ನು ಹಾಕಿ ಮಿಕ್ಸ್ ಮಾಡಿ. ನಂತರ ಈರುಳ್ಳಿ ಹಾಕಿ ಸ್ವಲ್ಪ ಕೆಂಪಾಗಲು ಬಿಡಿ. ನಂತರ ಅದಕ್ಕೆ ಒಂದೆರಡು ಚಮಚ ಗರಂ ಮಸಾಲ ಪುಡಿಯನ್ನು ಹಾಕಿ ಸ್ವಲ್ಪ ಕುದಿಸಿ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ. ನಂತರ ಮಿಕ್ಸ್‌ರ್ ನಲ್ಲಿ ರುಬ್ಬಿದ ಪಾಲಕ್ ಅನ್ನು ಇದರಲ್ಲಿ ಸೇರಿಸಿರಿ. ತದನಂತರ ಬೇರೆ ಪಾತ್ರೆಯನ್ನು ಗ್ಯಾಸ್ ಮೇಲೆ ಇಟ್ಟು ಅದಕ್ಕೆ ತುಪ್ಪ ಹಾಕಿ ಆಮೇಲೆ ಖಾರದ ಪುಡಿಯನ್ನು ಬೆರೆಸಿರಿ. ಅದು ಕಾದ ನಂತರ ಅದನ್ನು ಪಾಲಕ್ ನಲ್ಲಿ ಬೆರೆಸಿ, ಚೆನ್ನಾಗಿ ಮಿಕ್ಸ್ ಮಾಡಿ. ಇದೆಲ್ಲವನ್ನು ಚೆನ್ನಾಗಿ ಬೇಯಿಸಿದ ನಂತರ ಸ್ವಲ್ಪ ತಣ್ಣಗಾದ ಮೇಲೆ ಅದಕ್ಕೆ ಕಟ್ ಮಾಡಿಟ್ಟ ಪಾನ್ನೀರ್ ನ್ನು ಬೆರೆಸಿ, 5 ನಿಮಿಷಗಳ ಕಾಲ ಹಾಗೇ ಬಿಡಿ. ಬಿಸಿ-ಬಿಸಿಯಾದ ರುಚಿಕರವಾದ ಪಾಲಕ್ ಪನ್ನೀರ್ ಮಸಾಲ ಸವಿಯಲು ಸಿದ್ಧ. ಇದು ಚಪಾತಿ ಹಾಗೂ ರೋಟಿ ಜೊತೆ ತಿನ್ನಲು ಬಹಳ ರುಚಿಯಾಗಿರುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ
JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?
“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…
ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!
ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್ ಬಾಟಲಿ ಸದ್ದು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.