ಸ್ವಚ್ಛ, ಸಮೃದ್ಧ ಪರಿಸರ ಅರಣ್ಯ ಇಲಾಖೆ ಸಂಕಲ್ಪ

ಮಂಗಳೂರಿನಲ್ಲಿ ಹಸಿರು ಕ್ರಾಂತಿಯ ನಿರೀಕ್ಷೆ

Team Udayavani, Jun 5, 2020, 5:32 AM IST

ಸ್ವಚ್ಛ, ಸಮೃದ್ಧ ಪರಿಸರ ಅರಣ್ಯ ಇಲಾಖೆ ಸಂಕಲ್ಪ

ಮಂಗಳೂರು ನಗರದಲ್ಲಿ ಮರಗಳು ಹೆಚ್ಚಿನ ಪ್ರಮಾಣದಲ್ಲಿ ನಾಶವಾಗುತ್ತಿದೆ. ಕೆಲವೊಂದು ಬೆರಳೆಣಿಕೆಯ ಮರಗಳನ್ನು ಸ್ಥಳಾಂತರಗೊಳಿಸಿದ್ದು ಹೊರತುಪಡಿಸಿ, ಹೆಚ್ಚಿನ ಮರಗಳು ಅಭಿವೃದ್ಧಿ ದೃಷ್ಟಿಯಿಂದ ಧರಶಾಹಿಯಾಗಿವೆ. ಕಳೆದ ಕೆಲ ವರ್ಷಗಳ ಹಿಂದೆ ನಿಟ್ಟೆ ಡೀಮ್ಡ್ ಯುನಿವರ್ಸಿಟಿಯು 2011ರ ಜನಗಣತಿಗೆ ಅನುಗುಣವಾಗಿ 2016ರಲ್ಲಿ ಸರ್ವೆ ನಡೆಸಿತ್ತು. ಈ ವೇಳೆ ಮಂಗಳೂರಿನ ಬಂದರು ಮತ್ತು ಕುದ್ರೋಳಿ ವಾರ್ಡ್‌ಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಮರಗಳಿವೆ ಎಂಬ ವಿಷಯ ಬೆಳಕಿಗೆ ಬಂತು. ಮಂಗಳೂರು ನಗರ ಪಾಲಿಕೆ ವ್ಯಾಪ್ತಿಯು 2001ರಲ್ಲಿ ಶೇ.22ರಷ್ಟು ಹಸುರೀಕರಣವಾಗಿತ್ತು. 2011ರಲ್ಲಿ ಶೇ.20 ಮತ್ತು 2018ರಲ್ಲಿ ಶೇ.18ಕ್ಕೆ ಇಳಿದಿದೆ. 7 ರಿಂದ 8 ವರ್ಷದಲ್ಲಿ ಸುಮಾರು ಶೇ.2 ರಿಂದ 3ರಷ್ಟು ಹಸಿರು ಪ್ರದೇಶ ಕಡಿಮೆಯಾಗುತ್ತಿದೆ ಎಂದು ಅಧ್ಯಯನದಲ್ಲಿ ತಿಳಿಯಿತು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಅರಣ್ಯ ಇಲಾಖೆಯು ಇದೀಗ ಮಂಗಳೂರು ನಗರದ ಹಸುರೀಕರಣಕ್ಕೂ ಆದ್ಯತೆ ನೀಡಲು ತೀರ್ಮಾನಿಸಿದೆ. ನಗರ ಹಸುರೀಕರಣ ಯೋಜನೆಯಡಿ ಈಗಾಗಲೇ ಗುರುತಿಸಿದ ಸ್ಥಳಗಳಲ್ಲಿ ನೆಡಲು ಒಟ್ಟು 365 ಗಿಡ, ಸ್ಮಾರ್ಟ್‌ ಸಿಟಿ ಯೋಜನೆಯಡಿ ಮಂಗಳೂರು ಮಹಾನಗರ ಪಾಲಿಕೆಯಿಂದ ಸಾರ್ವಜನಿಕರಿಗೆ ವಿತರಿಸಲು 35 ಬಗೆಯ 10,000 ಗಿಡ ಸಿದ್ಧಪಡಿಸಲಾಗಿದೆ.

ಸಾರ್ವಜನಿಕರ ಗಮನಕ್ಕೆ
36ಕ್ಕೂ ಅಧಿಕ ವಿಧದ 13 ಲಕ್ಷ ಸಸಿಗಳು ಲಭ್ಯ

ಗಿಡ ನೆಡುವ ಉದ್ದೇಶದಿಂದ ಅರಣ್ಯ ಇಲಾಖೆಯ ಎಂಟು ವಲಯಗಳ ನರ್ಸರಿಯಲ್ಲಿ ಸುಮಾರು 13 ಲಕ್ಷದಷ್ಟು ಸಸಿಗಳನ್ನು ಬೆಳೆಸಲಾಗುತ್ತಿದೆ. 2020-21ನೇ ಸಾಲಿನಲ್ಲಿ ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ಸಸಿ ವಿತರಿಸಲು ಸಾಗುವಾನಿ, ನೆಲ್ಲಿ, ನುಗ್ಗೆ, ಪೇರಳೆ, ಬೀಟೆ, ಬಿಲ್ವಪತ್ರೆ, ಸೀತಾಫಲ, ಶಿವಣೆ, ಶ್ರೀಗಂಧ, ಹೂವಾಸಿ, ಹೆಬ್ಬೇವು, ಕರಿಬೇವು, ಸಂಪಿಗೆ, ಸುರಹೊನ್ನೆ, ನೇರಳೆ, ಪನ್ನೇರಳೆ ಸೇರಿದಂತೆ 36ಕ್ಕೂ ಅಧಿಕ ವಿಧದ ಸಾವಿರಾರು ಗಿಡಗಳು ಸಿದ್ಧವಿದೆ. ರಸ್ತೆ ಬದಿ ನೆಡು ತೋಪು ಬೆಳೆಸಲು ಗಿಡಗಳನ್ನು, ಇತರ ಪ್ರದೇಶಗಳಲ್ಲಿ ಅಗತ್ಯ ಕಾಮಗಾರಿಗಳಿಗಾಗಿ ಕಡಿದ ಮರದ ಬದಲಿಗೆ ಎರಡು ಸಸಿ ನೆಡಲು ವಿವಿಧ ಇಲಾಖೆಗಳಿಂದ ಪಾವತಿಸಿಕೊಂಡ ಹಣದಲ್ಲಿ ಸಸಿ ನಾಟಿ ಮಾಡಲು ಕೂಡ ಗಿಡಗಳಿವೆ. ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಸಸಿಗಳನ್ನು ನೀಡಲು ಹಾಗೂ ಸ್ಥಳಾವಕಾಶ ಇರುವ ಶಾಲೆಗಳಲ್ಲಿ ಶಾಲಾ ವನ ನಿರ್ಮಾಣಕ್ಕೂ ಅವಕಾಶವಿದೆ. ಹಸುರು ಕರ್ನಾಟಕ ಯೋಜನೆಯಡಿ ಸಂಘ ಸಂಸ್ಥೆಗಳಿಗೆ, ಶಾಲಾ ಕಾಲೇಜು ಮತ್ತು ಧಾರ್ಮಿಕ ಸಂಸ್ಥೆಗಳಿಗೆ ಉಚಿತವಾಗಿ ವಿತರಿಸಲು ಸಾಗುವಾನಿ, ಶ್ರೀಗಂಧ ಮತ್ತು ಮಹಾಗನಿ ಸೇರಿ ಸಾವಿರಾರು ಗಿಡಗಳಿವೆ.

ಅರಣ್ಯ ಇಲಾಖೆಯ ಮುಖ್ಯ ಜವಾಬ್ದಾರಿ
ಕಳ್ಳ ಸಾಗಾಣಿಕೆ ತಡೆ, ಬೇಟೆಯಾಡುವಿಕೆ ತಡೆ, ಬೆಂಕಿಯಿಂದ ಸಂರಕ್ಷಣೆ ಹಾಗೂ ಇತರ ಕಾರಣಗಳಿಂದ ಈಗ ಇರುವ ಸಸ್ಯ ಹಾಗೂ ವನ್ಯಜೀವಿಗಳ ಸಂರಕ್ಷಣೆ, ಸಿ ಹಾಗೂ ಡಿ ವರ್ಗ ಭೂಮಿಯಲ್ಲಿ, ಖಾಸಗಿ ಭೂಮಿ ಹಾಗೂ ಇತರ ಸರಕಾರಿ ನಿರುಪಯುಕ್ತ ಭೂಮಿಯಲ್ಲಿ ಸಸಿ ಬೆಳೆಸಿ ಅರಣ್ಯ ವಿಸ್ತೀರ್ಣ ಹೆಚ್ಚಿಸುವುದು, ಕ್ಷೀಣಿತ ಅರಣ್ಯದಲ್ಲಿ ಉತ್ಪನ್ನ ಹೆಚ್ಚು ಮಾಡುವುದು, ಜನರ ಬಳಕೆಗೆ ಅನುಗುಣವಾಗಿ ಅರಣ್ಯ ಉತ್ಪನ್ನಗಳ ಪದ್ಧತಿಗೆ ಅನುಸಾರವಾಗಿ ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸಿ ತೆಗೆಯುವುದು, ಕ್ಷೀಣಿತ ಅರಣ್ಯ ಪ್ರದೇಶದಲ್ಲಿ ಜಂಟಿ ಅರಣ್ಯ ಯೋಜನೆಯ ಮುಖಾಂತರ ಸ್ಥಳೀಯ ಸಮೂಹ, ಗ್ರಾಮಾಂತರ ಅರಣ್ಯ ಸಮೂಹ ಹಾಗೂ ಜೀವ ವೈವಿಧ್ಯ ಸಮೂಹಗಳ ಮುಖಾಂತರ ಅರಣ್ಯ ಸಂರಕ್ಷಣೆ ಹಾಗೂ ನಿರ್ವಹಣೆಯನ್ನು ನೆಡುತೋಪು ಬೆಳೆಸುವುದರೊಂದಿಗೆ ಮಾಡಬಹುದು, ವನ್ಯಜೀವಿ ಸಂರಕ್ಷಣೆ ಹಾಗೂ ನಿರ್ವಹಣೆ, ಪರಿಸರ ಸಮತೋಲನ ಕಾಯ್ದುಕೊಳ್ಳುವುದು, ನಿರುದ್ಯೋಗಿ ಗ್ರಾಮಾಂತರ ಜನರಿಗೆ ಉದ್ಯೋಗ ಕೊಡುವುದರೊಂದಿಗೆ ಅರಣ್ಯ ಚಟುವಟಿಕೆಗಳನ್ನು ಮಾಡುವುದು.

ಪಟ್ಟಾ ಸ್ಥಳಗಳಲ್ಲಿ ನೆಟ್ಟ ಸಸಿಗಳಿಗೆ ಪ್ರೋತ್ಸಾಹಧನವೂ ಇದೆ!
2013ನೇ ಸಾಲಿನಲ್ಲಿ ರೈತರ ಖಾಸಗಿ ಪಟ್ಟಾ ಸ್ಥಳಗಳಲ್ಲಿ ನೆಟ್ಟ ಸಸಿಗಳಿಗೆ ಈ ಮೊದಲು ಮೂರು ವರ್ಷಕ್ಕೆ 45ರೂ.ಗಳಂತೆ ಪ್ರೋತ್ಸಾಹಧನ ನೀಡಲಾಗಿದ್ದು, ಅನಂತರ 2018ರಿಂದ ಮೂರು ವರ್ಷಕ್ಕೆ 100ರೂ.ಗಳಂತೆ ಪ್ರೋತ್ಸಾಹಧನ ನೀಡಲಾಗಿರುತ್ತದೆ. ಪ್ರಸ್ತುತ 2020-21ನೇ ಸಾಲಿನಲ್ಲಿ ಸಸ್ಯಪಾಲನಾಲಯದಿಂದ ಸಸಿಗಳನ್ನು ಪಡೆದು ನೆಟ್ಟ ಸಸಿಗಳಿಗೆ ಮೊದಲನೇ ವರ್ಷ 35ರೂ. , ಎರಡನೇ ವರ್ಷ 40ರೂ., ಮತ್ತು ಮೂರನೇ ವರ್ಷ 50ರೂ.ಗಳಂತೆ 1 ಸಸಿಯ ನಿರ್ವಹಣೆಗಾಗಿ 3 ವರ್ಷಕ್ಕೆ ಒಟ್ಟು 125ರೂ. ಪ್ರೋತ್ಸಾಹಧನ ನೀಡಲಾಗುವುದು. 1 ಎಕ್ರೆಗೆ ಗರಿಷ್ಠ 140 ಸಸಿಗಳಿಗೆ ರೈತರು ಪ್ರೋತ್ಸಾಹಧನವನ್ನು ಪಡೆಯಬಹುದು. ಸಂಬಂಧಪಟ್ಟ ವಲಯ ಕಚೇರಿಯಲ್ಲಿ ಸಸಿ ನೆಡುವ ಸ್ಥಳದ ಆರ್‌.ಟಿ.ಸಿ.ಯ ಛಾಯಾ ಪ್ರತಿ, ಬ್ಯಾಂಕ್‌ ಪಾಸ್‌ಪುಸ್ತಕದ ಛಾಯಾಪ್ರತಿ, ಆಧಾರ್‌ ಕಾರ್ಡ್‌ನ ಛಾಯಾಪ್ರತಿ, 1 ಪಾಸ್‌ಪೋರ್ಟ್‌ ಸೈಜ್‌ ಪೊಟೋದೊಂದಿಗೆ ನಿಗದಿತಅರ್ಜಿ ಫಾರಂನಲ್ಲಿ ವಿವರಗಳನ್ನು ಭರ್ತಿಗೊಳಿಸಿ 10ರೂ.ನೋಂದಣಿ ಶುಲ್ಕದೊಂದಿಗೆ ನೀಡಿದಲ್ಲಿ ಈ ಯೋಜನೆಯಡಿ ಸಸಿ ಪಡೆಯಲು ಅರ್ಹರಾಗುತ್ತಾರೆ.

ಎಲ್ಲೆಲ್ಲೂ ವಿಶ್ವ ಪರಿಸರ ದಿನದ ಸಂಭ್ರಮ. ಪರಿಸರ ಸಂರಕ್ಷಣೆಯೇ ನಮ್ಮ ಆದ್ಯತೆ ಎಂಬ ನೆಲೆಯಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮಗಳ ಸಡಗರ. ಪರಿಸರ ಉಳಿದರೆ ಮಾತ್ರ ಮಾನವನ ಬದುಕು ಹಸನಾಗಲು ಸಾಧ್ಯ ಎಂಬ ತಾತ್ಪರ್ಯದಂತೆ ಅರಣ್ಯ ಇಲಾಖೆ ಹಾಗೂ ಪರಿಸರ ಪ್ರಿಯ ಮನಸ್ಸುಗಳು ನಿರಂತರ ಶ್ರಮಿಸುತ್ತಿದೆ. ಪರಿಸರದ ಉಳಿವಿಗಾಗಿ ಎಲ್ಲರೂ ಟೊಂಕಕಟ್ಟಿ ನಿಂತಿರುವುದನ್ನು ಈ ದಿನ ಜ್ಞಾಪಿಸಲೇಬೇಕಾಗಿದೆ.
ಪರಿಸರ ರಕ್ಷಣೆಯ ಮಹಾಕಾರ್ಯದಲ್ಲಿ ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯ ಸಮಸ್ತ ತಂಡ ವಿವಿಧ ನೆಲೆಯಲ್ಲಿ ಶ್ರಮಿಸುತ್ತಿದೆ. ಅದರಲ್ಲಿಯೂ ದಕ್ಷಿಣ ಕನ್ನಡ ಜಿಲ್ಲೆಯ ಅರಣ್ಯ ಇಲಾಖೆಯ ಎಲ್ಲ ವಲಯಗಳು ಈ ನಿಟ್ಟಿನಲ್ಲಿ ವಿಶೇಷ ಆದ್ಯತೆಯ ಕೆಲಸ ಕಾರ್ಯಗಳೊಂದಿಗೆ ಅರಣ್ಯ-ಪರಿಸರ ಸಂರಕ್ಷಣೆಯಲ್ಲಿ ಕೈ ಜೋಡಿಸುತ್ತಿದೆ.

ಬೆಳ್ತಂಗಡಿ, ಬಂಟ್ವಾಳ ಮತ್ತು ಮಂಗಳೂರು ತಾಲೂಕುಗಳಲ್ಲಿ ಬೆಸೆದುಕೊಂಡಿರುವ ಮಂಗಳೂರು ಅರಣ್ಯ ಇಲಾಖೆಯಲ್ಲಿ ಕುಂದಾಪುರ ವಲಯದ ಕೊಂಚ ಭಾಗವೂ ಸೇರಿಕೊಂಡಿದೆ. ಮಂಗಳೂರು ವಿಭಾಗವು ಮಂಗಳೂರು, ಪುತ್ತೂರು ಮತ್ತು ಸುಬ್ರಹ್ಮಣ್ಯ ಉಪವಿಭಾಗಗಳನ್ನು ಹೊಂದಿವೆ. ಮಂಗಳೂರು, ಬಂಟ್ವಾಳ, ಬೆಳ್ತಂಗಡಿ, ಉಪ್ಪಿನಂಗಡಿ, ಪುತ್ತೂರು, ಸುಳ್ಯ, ಪಂಜ ಮತ್ತು ಸುಬ್ರಹ್ಮಣ್ಯ ಸಹಿತ 8 ಶ್ರೇಣಿಗಳನ್ನು ಒಳಗೊಂಡಿದೆ.

8 ತಾಲೂಕುಗಳಲ್ಲಿ 
ಶೇ. 0.39 ಪ್ರದೇಶ ಅರಣ್ಯ
ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಪಟ್ಟಂತೆ ಮಂಗಳೂರು ಕರಾವಳಿ ತೀರದಿಂದ ಹಿಡಿದು ಪಶ್ಚಿಮ ಘಟ್ಟದ ಸಂಪಾಜೆ, ಸುಬ್ರಹ್ಮಣ್ಯ, ಶಿರಾಡಿ, ಚಾರ್ಮಾಡಿ ತಪ್ಪಲಿನವರೆಗೆ ಸುಮಾರು ಎಂಟು ತಾಲೂಕುಗಳ ಶೇ. 0.39 ಪ್ರದೇಶದಲ್ಲಿ ಅರಣ್ಯವಿದೆ. ಮಂಗಳೂರು ಭಾಗದ ಸಮುದ್ರತೀರದ ಕಾಂಡ್ಲಾ ಸಸಿಯಿಂದ ಹಿಡಿದು ಪಶ್ಚಿಮ ಘಟ್ಟದ ವಿವಿಧ ಜೀವ ವೈವಿಧ್ಯ ಸಸ್ಯ ಸಂಪತ್ತು ಮತ್ತು ವನ್ಯಪ್ರಾಣಿ ಸಂಪತ್ತುಗಳಿಗೆ ಅರಣ್ಯ ಇಲಾಖೆ ರಕ್ಷಣೆ ಒದಗಿಸಿಕೊಂಡು ಬರುತ್ತಿದೆ.

ಅರಣ್ಯ ಪ್ರದೇಶಗಳ ಸುಸ್ಥಿರತೆ ಮತ್ತು ಅಭಿವೃದ್ಧಿಗಾಗಿ ಪ್ರತೀ ವರ್ಷ ಸಾವಿರಾರು ಹೆಕ್ಟೇರ್‌ ಪ್ರದೇಶಗಳಲ್ಲಿ ಅರಣ್ಯ ಅಭಿವೃದ್ಧಿ ಕೈಗೊಳ್ಳಲಾಗುತ್ತಿದೆ. ಈ ವರ್ಷ ಮಂಗಳೂರು ವಿಭಾಗದಲ್ಲಿ 1,410.81 ಹೆಕ್ಟೇರ್‌ ಪ್ರದೇಶದಲ್ಲಿ ಅರಣ್ಯ ಅಭಿವೃದ್ಧಿಪಡಿಸಲು ಮತ್ತು ಸುಮಾರು 21 ಹೆಕ್ಟೇರ್‌ ರಸ್ತೆ ಬದಿ ನೆಡುತೋಪು ನಿರ್ಮಾಣಕ್ಕಾಗಿ ಒಟ್ಟು 7,93,500 ಸಸಿಗಳನ್ನು ಮಂಗಳೂರು ವಿಭಾಗಕ್ಕೆ ಸಂಬಂಧಪಟ್ಟ ಮಂಗಳೂರು ವಲಯದ ಪಡೀಲು ಸಸ್ಯಕ್ಷೇತ್ರ, ಬಂಟ್ವಾಳ ವಲಯದ ಶಂಭೂರು ಸಸ್ಯಕ್ಷೇತ್ರ, ಬೆಳ್ತಂಗಡಿ ವಲಯದ ನಿಡ್ಗಲ್‌ ಸಸ್ಯಕ್ಷೇತ್ರ, ಪುತ್ತೂರು ವಲಯದ ಕನಕಮಜಲು ಸಸ್ಯಕ್ಷೇತ್ರ, ಸುಳ್ಯ ವಲಯದ ಸುಳ್ಯ ಸಸ್ಯಕ್ಷೇತ್ರ, ಸುಬ್ರಹ್ಮಣ್ಯ ವಲಯದ ಏನೆಕಲ್‌ ಸಸ್ಯಕ್ಷೇತ್ರ ಮತ್ತು ಪಂಜ ವಲಯದ ಬಳ್ಪ ಸಸ್ಯಕ್ಷೇತ್ರಗಳಲ್ಲಿ ಉತ್ತಮ ಜಾತಿಯ ಸಸಿಗಳನ್ನು ಬೆಳೆಸಿ ನೆಡುತೋಪು ಕಾಮಗಾರಿ ಪ್ರಾರಂಭಿಸಲಾಗಿದೆ.

1, 3 ರೂ.ಗಳಿಗೆ ಗಿಡ
ಜಿಲ್ಲೆಯ ಎಂಟು ತಾಲೂಕುಗಳ ರೈತರ ಖಾಸಗಿ ಭೂಮಿಯಲ್ಲಿ, ಸಂಘ ಸಂಸ್ಥೆಗಳ ಸ್ಥಳಗಳಲ್ಲಿ, ಶಾಲಾ ಕಾಲೇಜುಗಳ ಸ್ಥಳಗಳಲ್ಲಿ, ಧಾರ್ಮಿಕ ಸಂಸ್ಥೆಗಳ ಸ್ಥಳಗಳಲ್ಲಿ ಸಸಿಗಳನ್ನು ನಾಟಿ ಮಾಡಲು ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ಸಸಿಗಳನ್ನು ವಿತರಿಸಲು ಮತ್ತು ಹಸುರು ಕರ್ನಾಟಕ ಯೋಜನೆಯಡಿ ಉಚಿತವಾಗಿ ಸಸಿಗಳನ್ನು ವಿತರಿಸಲು ಒಟ್ಟು 5,70,000 ಸಸಿಗಳನ್ನು ಎಂಟು ಸಸ್ಯಕ್ಷೇತ್ರಗಳಲ್ಲಿ ಬೆಳೆಸಲಾಗಿದೆ ಹಾಗೂ ರೈತರಿಗೆ ಮತ್ತು ಸಂಘ ಸಂಸ್ಥೆಗಳಿಗೆ 1 ರೂ. ಮತ್ತು 3 ರೂ. ದರದಲ್ಲಿ ಜೂನ್‌ 1ರಿಂದ ಸಸಿಗಳನ್ನು ವಿತರಿಸಲು ಪ್ರಾರಂಭಿಸಲಾಗಿದೆ.
ಮಂಗಳೂರು ಅರಣ್ಯ ವಿಭಾಗದಲ್ಲಿ ಅರಣ್ಯ ಭೂಮಿಯ ವಿಸ್ತೀರ್ಣ 1,21,462.08 ಹೆಕ್ಟೇರ್‌. ವಿಭಾಗದ ಕಾಡುಗಳು ಪ್ರಾಥಮಿಕವಾಗಿ ಅರೆ ನಿತ್ಯಹರಿದ್ವರ್ಣ ಮತ್ತು ದ್ವಿತೀಯಕ ತೇವಾಂಶವುಳ್ಳ ಪತನಶೀಲ ವಿಧಗಳಾಗಿವೆ. ಕೆಲವು ಆದ್ರì ನಿತ್ಯಹರಿದ್ವರ್ಣ ಕಾಡುಗಳು ಸುಳ್ಯ ಮತ್ತು ಸುಬ್ರಹ್ಮಣ್ಯ ಶ್ರೇಣಿಗಳಲ್ಲಿ ಕಂಡುಬರುತ್ತವೆ. ಕರಾವಳಿ ಪ್ರದೇಶಗಳಲ್ಲಿ ಕೆಲವು ಮ್ಯಾಂಗ್ರೋವ್‌ ಕಾಡುಗಳು ಕಂಡುಬರುತ್ತವೆ.

ಮೂರು ಹಂತಗಳಲ್ಲಿ
ಗಿಡ ನೆಡಲು ಅವಕಾಶ
ಅರಣ್ಯ, ಅರಣ್ಯೇತರ ಹಾಗೂ ಖಾಸಗಿ ಎಂಬ ನೆಲೆಯಲ್ಲಿ ಗಿಡಗಳನ್ನು ನೆಡಲು ಅರಣ್ಯ ಇಲಾಖೆ ಪ್ರೋತ್ಸಾಹ ನೀಡುತ್ತದೆ. ಅದರಂತೆ, ವಿವಿಧ ಹಂತಗಳಲ್ಲಿ ಅವನತಿ ಹೊಂದಿದ ಅರಣ್ಯಕ್ಕೆ ರಕ್ಷಣೆ ಒದಗಿಸಿ ಭೂಸಾರ ಸಂರಕ್ಷಣಾ ಕಾರ್ಯ ಕೈಗೊಂಡು ಅಲ್ಲಿ ಗಿಡಗಳನ್ನು ನೆಟ್ಟು ಪುನರ್‌ ನವೀಕರಣಗೊಳಿಸಲಾಗುತ್ತದೆ. ಜತೆಗೆ ಅರಣ್ಯದ ಮೇಲಿರುವ ಒತ್ತಡ ಕಡಿಮೆ ಮಾಡುವುದಕ್ಕೋಸ್ಕರ ಅರಣ್ಯೇತರ ಜಮೀನುಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಗಿಡ ನೆಡಲು ಅವಕಾಶವಿದೆ. ಖಾಲಿ ಇರುವ ಸಾಮೂಹಿಕ ಜಮೀನುಗಳಾದ ಗೋಮಾಳ, ಕೆರೆಯ ಅಂಗಳ, ಸಿ ಹಾಗೂ ಡಿ ದರ್ಜೆಯ ಜಮೀನುಗಳಲ್ಲಿ ಅರಣ್ಯೀಕರಣ ಕೈಗೊಳ್ಳಲಾಗುತ್ತದೆ. ಶಹರ ಹಾಗೂ ಪಟ್ಟಣ ಪ್ರದೇಶದಲ್ಲಿ ನಗರ ಪ್ರದೇಶಗಳ ಹಸುರೀಕರಣ ಯೋಜನೆಯಡಿ ಗಿಡಗಳನ್ನು ನೆಡಲು ಅವಕಾಶವಿದೆ. ಖಾಸಗಿ ಹಿಡುವಳಿ ಜಮೀನುಗಳಲ್ಲಿ ಗಿಡ ನೆಡುವುದು ಹಾಗೂ ಕೃಷಿ ಅರಣ್ಯ ಬೆಳೆಸುವುದೂ ಇದರಲ್ಲಿ ಸೇರಿದೆ. ಸಾರ್ವಜನಿಕ ವಿತರಣೆಗಾಗಿ ಸಸಿ ಬೆಳೆಸುವುದು, ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಲ್ಲಿ ಗಿಡಗಳನ್ನು ವಿತರಿಸಲಾಗುತ್ತದೆ.

ಕರ್ನಾಟಕ ಅರಣ್ಯ ಇಲಾಖೆ
ಅರಣ್ಯ ಸಂರಕ್ಷಣೆ ಹಾಗೂ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಕರ್ನಾಟಕ ಅರಣ್ಯ ಇಲಾಖೆಯು ಅತ್ಯಂತ ಮಹತ್ವದ ಜವಾಬ್ದಾರಿ ನಿರ್ವಹಿಸುತ್ತಿದೆ. ರಾಜ್ಯವು 1,91,791 ಚ.ಕಿ.ಮೀ ಭೌಗೋಳಿಕ ಪ್ರದೇಶವನ್ನು ಹೊಂದಿದ್ದು, ಇದರಲ್ಲಿ 43,427.85 ಚ.ಕಿ.ಮೀ ಅರಣ್ಯ ಪ್ರದೇಶ. ಇಲ್ಲಿನ ಮೀಸಲು ಅರಣ್ಯ, ರಕ್ಷಿತ ಅರಣ್ಯ, ಗ್ರಾಮ ಅರಣ್ಯ ಹಾಗೂ ಖಾಸಗಿ ಅರಣ್ಯ ಎಂದು ಕಾನೂನುಬದ್ಧ ವಿಂಗಡನೆ ಹೊಂದಿದೆ. ರಾಜ್ಯದಲ್ಲಿ ಭೌಗೋಳಿಕವಾಗಿ 22.64 ಶೇ. ಅರಣ್ಯ ವಿಸ್ತೀರ್ಣವಿದೆ. ಹಲವಾರು ವರ್ಷಗಳಿಂದ ಅರಣ್ಯ ಚಟುವಟಿಕೆಗಳಾದ ನೆಡುತೋಪುಗಳ ನಿರ್ಮಾಣ, ಅರಣ್ಯ ಕೃಷಿ, ನಗರ ಹಸರೀಕರಣ ಮುಂತಾದ ಕಾರ್ಯವನ್ನು ಮಾಡಲಾಗುತ್ತಿದೆ. ಅರಣ್ಯ ಅಧಿಕಾರಿಗಳು ಅರಣ್ಯ ವಿಜ್ಞಾನಿಗಳಂತೆ, ಸಂಪನ್ಮೂಲ ವ್ಯವಸ್ಥಾಪಕರಂತೆ, ಆರಕ್ಷಕ ದಳದವರಂತೆ ವಿಸ್ತೀರ್ಣ ಕಾರ್ಯಕರ್ತರಂತೆ ಕೆಲಸ ನಿರ್ವಹಿಸುತ್ತಾರೆ. ಅರಣ್ಯ ಸಂರಕ್ಷಣೆ ಹಾಗೂ ನಿರ್ವಹಣೆ ಕೆಲಸಗಳಿಲ್ಲದೆ ನೆಡುತೋಪು ಚಟುವಟಿಕೆಗಳನ್ನು ಮಾಡಲಾಗುತ್ತಿದೆ. ಇದರಿಂದ ಮಾನವ ಸೃಜನ ದಿನಗಳು ಸಾಕಷ್ಟು ಪ್ರಮಾಣದಲ್ಲಿ ನಿರ್ಮಾಣವಾಗುತ್ತವೆ.

ಕರ್ನಾಟಕ ಸರಕಾರ
ಅರಣ್ಯ ಇಲಾಖೆ
ಮಂಗಳೂರು ವಲಯ
ಡಾ| ಕರಿಕಲನ್‌, ವಿ., ಭಾ.ಅ.ಸೇ.
ಉಪ ಅರಣ್ಯ ಸಂರಕ್ಷಣಾಧಿಕಾರಿ
ಹಾಗೂ ಸಿಬಂದಿ ವರ್ಗ
ಮಂಗಳೂರು ವಿಭಾಗ, ಮಂಗಳೂರು
ಫೋನ್‌: 0824-2423913, 2411242

ಶಂಕರೇಗೌಡ
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಯವರ ತಾಂತ್ರಿಕ ಸಹಾಯಕರು, ಮಂಗಳೂರು ವಿಭಾಗ
ಹಾಗೂ ಸಿಬಂದಿ ವರ್ಗ
ಫೋನ್‌: 0824-2423913, 2411243

ಎನ್‌. ಸುಬ್ರಹ್ಮಣ್ಯರಾವ್‌
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ
ಹಾಗೂ ಸಿಬಂದಿ ವರ್ಗ
ಪುತ್ತೂರು ಉಪ ವಿಭಾಗ, ಪುತ್ತೂರು
ಮೊಬೈಲ್‌: 9448134012

ಆಸ್ಟಿನ್‌ ಪಿ. ಸೋನ್ಸ್‌
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ
ಹಾಗೂ ಸಿಬಂದಿ ವರ್ಗ
ಸುಳ್ಯ ಉಪ ವಿಭಾಗ, ಸುಳ್ಯ
ಫೋನ್‌: 08257-231054

ಪಿ. ಶ್ರೀಧರ್‌
ವಲಯ ಅರಣ್ಯಾಧಿಕಾರಿ
ಹಾಗೂ ಸಿಬಂದಿ ವರ್ಗ
ಮಂಗಳೂರು ವಲಯ, ಮಂಗಳೂರು
ಫೋನ್‌: 0824-2425167

ಪಿ. ಶ್ರೀಧರ್‌
ವಲಯ ಅರಣ್ಯಾಧಿಕಾರಿ, (ಹೆಚ್ಚುವರಿ ಪ್ರಭಾರ) ಹಾಗೂ ಸಿಬಂದಿ ವರ್ಗ
ಬಂಟ್ವಾಳ ವಲಯ, ಬಂಟ್ವಾಳ
ಫೋನ್‌: 08255-232300

ಸುಬ್ಬಯ್ಯ ನಾಯ್ಕ
ವಲಯ ಅರಣ್ಯಾಧಿಕಾರಿ
ಹಾಗೂ ಸಿಬಂದಿ ವರ್ಗ
ಬೆಳ್ತಂಗಡಿ ವಲಯ, ಬೆಳ್ತಂಗಡಿ
ಫೋನ್‌: 08256-232146

ಬಿ .ಜಿ. ಮೋಹನ್‌ಕುಮಾರ್‌
ವಲಯ ಅರಣ್ಯಾಧಿಕಾರಿ
ಹಾಗೂ ಸಿಬಂದಿ ವರ್ಗ
ಪುತ್ತೂರು ವಲಯ, ಪುತ್ತೂರು
ಫೋನ್‌: 08251-230704

ಎ. ಮಧುಸೂದನ್‌
ವಲಯ ಅರಣ್ಯಾಧಿಕಾರಿ
ಹಾಗೂ ಸಿಬಂದಿ ವರ್ಗ
ಉಪ್ಪಿನಂಗಡಿ ವಲಯ, ಉಪ್ಪಿನಂಗಡಿ
ಫೋನ್‌: 08251-251121

ತ್ಯಾಗರಾಜ್‌ ಎಚ್‌. ಎಸ್‌.
ವಲಯ ಅರಣ್ಯಾಧಿಕಾರಿ
ಹಾಗೂ ಸಿಬಂದಿ ವರ್ಗ
ಸುಬ್ರಹ್ಮಣ್ಯ ವಲಯ, ಸುಬ್ರಹ್ಮಣ್ಯ
ಫೋನ್‌: 08257-281259

ಮಂಜುನಾಥ ಎನ್‌.
ವಲಯ ಅರಣ್ಯಾಧಿಕಾರಿ
ಹಾಗೂ ಸಿಬಂದಿ ವರ್ಗ
ಸುಳ್ಯ ವಲಯ, ಸುಳ್ಯ
ಫೋನ್‌: 02857-230716

ಗಿರೀಶ ಆರ್‌.
ವಲಯ ಅರಣ್ಯಾಧಿಕಾರಿ
ಹಾಗೂ ಸಿಬಂದಿ ವರ್ಗ
ಪಂಜ ವಲಯ, ಪಂಜ
ಫೋನ್‌: 08257-278294

ವಿಶ್ವ ಪರಿಸರ ದಿನಾಚರಣೆಯ ಈ ಶುಭ ಸಂದರ್ಭದಲ್ಲಿ ರೈತರು, ಸಂಘ ಸಂಸ್ಥೆಗಳು, ಶಾಲಾ ಕಾಲೇಜುಗಳು, ವಿವಿಧಧಾರ್ಮಿಕ ಸಂಸ್ಥೆಗಳು ಕೇವಲ ಸಸಿಗಳನ್ನು ನೆಡುವುದಲ್ಲದೆ ಅದರ ಪೋಷಣೆ ಮಾಡಬೇಕು ಎಂಬುದು ನಮ್ಮ ಕಳಕಳಿಯ ಮನವಿ. ಸಸಿಗಳನ್ನು ಬೆಳೆಸಿ, ಉಳಿಸಿ ಬಳಸುವ ಸಂಸ್ಕೃತಿಯನ್ನು ಬೆಳೆಸೋಣ
-ಅರಣ್ಯ ಇಲಾಖೆ, ಮಂಗಳೂರು ವಲಯ

ಟಾಪ್ ನ್ಯೂಸ್

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Mangalore_Airport-NewTerminal

Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

BGV-CM-SS

Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ

Frud

Mangaluru: ಆನ್‌ಲೈನ್‌ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ

MCC-BankArrest

Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್‌ ಅಧ್ಯಕ್ಷನ ಬಂಧನ

Ashok-Vijayendra

Over Remarks: ʼಸಿದ್ದರಾಮೋತ್ಸವʼ ಮಾಡಿಸುವ ನೀವು ‘ಅಂಬೇಡ್ಕರ್‌ ಉತ್ಸವ’ ಮಾಡಲ್ಲ: ಬಿಜೆಪಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangalore_Airport-NewTerminal

Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ

Frud

Mangaluru: ಆನ್‌ಲೈನ್‌ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ

MCC-BankArrest

Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್‌ ಅಧ್ಯಕ್ಷನ ಬಂಧನ

Surthkal-Spota

Surathkal: ತಡಂಬೈಲ್‌ನಲ್ಲಿ ಅಡುಗೆ ಅನಿಲ ದುರಂತ; ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ

Traffic-UPI

Mangaluru: ಇನ್ನು ಯುಪಿಐ ಮೂಲಕವೂ ಟ್ರಾಫಿಕ್‌ ದಂಡ ಪಾವತಿ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Mangalore_Airport-NewTerminal

Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

BGV-CM-SS

Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ

Frud

Mangaluru: ಆನ್‌ಲೈನ್‌ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.