ತಿಂಗಳಲ್ಲಿ ಕೈಕೊಟ್ಟ ಪೊಲೀಸ್ ಕಿಯೋಸ್ಕ್
Team Udayavani, Jun 5, 2020, 5:55 AM IST
ಬೆಂಗಳೂರು: ನಗರದಲ್ಲಿ ಸಂಚಾರ ಪೊಲೀಸರಿಗೆ ನೆರವಾಗುವ ಉದ್ದೇಶದಿಂದ ಬಿಬಿಎಂಪಿಯು ಖಾಸಗಿ ಸಹಭಾಗಿತ್ವದಲ್ಲಿ ನಗರದ 23 ಜಂಕ್ಷನ್ಗಳಲ್ಲಿ ಪೊಲೀಸ್ ಕಿಯೋಸ್ಕ್ (ಅತ್ಯಾಧುನಿಕ ಪೊಲೀಸ್ ಚೌಕಿ)ಗಳನ್ನು ಮೇ 8ಕ್ಕೆ ಉದ್ಘಾಟಿಸಿತ್ತು. ಆದರೆ ತಿಂಗಳು ಕಳೆಯುವ ಮುನ್ನವೇ ಚೌಕಿಗಳು ಅವ್ಯವಸ್ಥೆಯ ತಾಣವಾಗುತ್ತಿವೆ.
ಹಡ್ಸನ್ ವೃತ್ತದಲ್ಲಿ ಸಾಂಕೇತಿಕವಾಗಿ ಕಿಯೋಸ್ಕ್ ಅನ್ನು ಮೇಯರ್ ಎಂ.ಗೌತಮ್ಕುಮಾರ್ ಉದ್ಘಾಟಿಸಿದ್ದರು. ಸದ್ಯ ಈ ಚೌಕಿಯಲ್ಲಿ ಕುರ್ಚಿ ಮುರಿದು ಹೋಗಿದ್ದು, ಫ್ಯಾನ್, ವಾಯು ನಿಯಂತ್ರಣ ವ್ಯವಸ್ಥೆ ಯಾವುದು ಕೆಲಸ ಮಾಡುತ್ತಿಲ್ಲ. ಇದಕ್ಕೆ ವಿದ್ಯುತ್ ಸಂಪರ್ಕ ಇನ್ನು ನೀಡಿಲ್ಲ. ಹೀಗಾಗಿ, ಅತ್ಯಾಧುನಿಕ ಚೌಕಿ ಇದ್ದರೂ ಸಂಚಾರ ಪೊಲೀಸರು ಬಿಸಿಲು, ಮಳೆಯಲ್ಲಿ ನಿಲ್ಲುವಂತಾಗಿದೆ.
ಸೈನ್ಪೋಸ್ಟ್ ಸಂಸ್ಥೆ ಮತ್ತು ಬಿಬಿಎಂಪಿ 8 ಲಕ್ಷ ರೂ. ವೆಚ್ಚದಲ್ಲಿ ಇದನ್ನು ನಿರ್ಮಾಣ ಮಾಡಿತ್ತು. ಕಿಯೋಸ್ಕ್ ನಿರ್ಮಾಣದ ಹಿನ್ನೆಲೆಯಲ್ಲಿ ಸೈನ್ಪೋಸ್ಟ್ ಸಂಸ್ಥೆಗೆ 20 ವರ್ಷಗಳ ಜಾಹೀರಾತು ಅವಕಾಶವನ್ನೂ ನೀಡಲಾಗಿದೆ. ಅಲ್ಲದೆ, ನಗರದಲ್ಲಿ ಇನ್ನೂ 400 ಕಡೆಗಳಲ್ಲಿ ಕಿಯೋಸ್ಕ್ ನಿರ್ಮಾಣ ಮಾಡುವುದಕ್ಕೆ ಬಿಬಿಎಂಪಿ ಮುಂದಾಗಿದೆ. ಮೊದಲ ಹಂತದ ಕಿಯೋಸ್ಕ್ಗಳೇ ಕಳಪೆ ವ್ಯವಸ್ಥೆಯಿಂದ ಕೂಡಿರುವುದಕ್ಕೆ ಸಂಚಾರ ಪೊಲೀಸರಿಂದ ಆಕ್ಷೇಪ ವ್ಯಕ್ತವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಪ್ರಿಯಕರನಿಂದಲೇ ಪ್ರೇಯಸಿ ಎದೆಗೆ ಇರಿದು ಹ*ತ್ಯೆ!
Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ
Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು
Drunk and Drive: ಮದ್ಯ ಸೇವಿಸಿ ಚಾಲನೆ: ವಾರದಲ್ಲಿ 71 ಲಕ್ಷ ದಂಡ
CCB Police: ವಕೀಲೆ ಜೀವಾ ಆತ್ಮಹತ್ಯೆ ಕೇಸ್ ಸಿಸಿಬಿಗೆ ವರ್ಗಾವಣೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.