ಖಾಸಗಿ ವಿಮಾನದಲ್ಲಿ ಆಗಮಿಸಲು ಕೇಂದ್ರ ಸೂಚನೆ?
Team Udayavani, Jun 5, 2020, 6:08 AM IST
ಬೆಂಗಳೂರು: ಕೋವಿಡ್ 19 ಸಂಕಷ್ಟಕ್ಕೆ ಸಿಲುಕಿರುವ ಅನಿವಾಸಿ ಕನ್ನಡಿಗರಿಗೆ ಕೇಂದ್ರ ಸರ್ಕಾರ ಶಾಕ್ ನೀಡಿದೆ. ರಾಜ್ಯಕ್ಕೆ ವಾಪಸ್ ಬರಬೇಕೆಂದರೆ ಚಾರ್ಟರ್ ಫ್ಲೈಟ್ (ಖಾಸಗಿ ವಿಮಾನ) ಮಾಡಿಕೊಂಡು ಬರುವಂತೆ ಸೂಚಿಸಿದ್ದು, ಅರಬ್ ರಾಷ್ಟ್ರಗಳಲ್ಲಿ ಸಿಲುಕಿಕೊಂಡಿರುವ ಅನಿವಾಸಿ ಕನ್ನಡಿಗರಲ್ಲಿ ಆತಂಕ ಮೂಡಿಸಿದೆ.ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರಲ್ಲಿ ಶೇ. 60 ರಷ್ಟು ಕನ್ನಡಿಗರು ಗಲ್ಫ್ ರಾಷ್ಟ್ರಗಳಲ್ಲಿ ನೆಲೆಸಿದ್ದಾರೆ.
ಈಗ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಒಂದೇ ಭಾರತ್ ಮಿಷನ್ ಅಡಿಯಲ್ಲಿ ದುಬೈ, ಕತಾರ್, ಸೌದಿ ಅರೇಬಿಯಾ, ಬಹರೇನ್, ಕುವೈತ್, ಮಸ್ಕತ್, ಶಾರ್ಜಾ, ಅಬು ದಾಭಿ ದೇಶಗಳಿಂದ ಅಗತ್ಯಕ್ಕೆ ತಕ್ಕಷ್ಟು ವಿಮಾನ ಸೇವೆ ಒದಗಿಸಿಲ್ಲ. ದುಬೈನಲ್ಲಿ 2500, ಕತಾರ್ ನಲ್ಲಿ 4000, ಸೌದಿ ಅರೇಬಿಯಾ, ಬಹರೇನ್ ಕುವೈತ್ ಸೇರಿದಂತೆ ಇತರ ಅರಬ್ ರಾಷ್ಟ್ರಗಲ್ಲಿ ಸುಮಾರು 5 ಸಾವಿರಕ್ಕೂ ಹೆಚ್ಚು ಕನ್ನಡಿಗರು ವಾಪಸ್ ಬರಲು ನೋಂದಣಿ ಮಾಡಿಕೊಂಡು ವಿಮಾನದ ಆಗಮನಕ್ಕಾಗಿ ಕಾಯುತ್ತಿದ್ದಾರೆ.
ಈಗಾಗಲೇ ಪ್ರವಾಸಕ್ಕೆ ತೆರಳಿ ಸಿಲುಕಿಕೊಂಡವರು, ಗರ್ಭಿಣಿಯರು ಹಾಗೂ ಹಿರಿಯ ನಾಗರಿಕರು ತುರ್ತಾಗಿ ವಾಪಸ್ ಬರುವವರ ಪಟ್ಟಿಯಲ್ಲಿ ನೋಂದಣಿ ಮಾಡಿಸಿಕೊಂಡಿದ್ದು, ಅವರಿಗೆ ತಕ್ಷಣಕ್ಕೆ ವಿಮಾನ ಸೇವೆ ಒದಗಿಸದೆ ಖಾಸಗಿ ವಿಮಾನ ವ್ಯವಸ್ಥೆ ಮಾಡಿಕೊಳ್ಳುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ ಎಂದು ಹೇಳಲಾಗಿದೆ. ದುಬೈ ಹಾಗೂ ಕತಾರ್ ನಲ್ಲಿರುವ ಕನ್ನಡ ಸಂಘಟನೆಗಳ ಪದಾಧಿಕಾರಿಗಳು ಕೇಂದ್ರ ಸಚಿವರಾದ ಸುರೇಶ್ ಅಂಗಡಿ ಹಾಗೂ ಡಿ.ವಿ.ಸದಾ ನಂದ ಗೌಡ ಅವರ ಮೂಲಕ ಕೇಂದ್ರ ವಿದೇಶಾಂಗ ಸಚಿವ ಜೈ ಶಂಕರ್ ಅವರ ಮೇಲೆ ಒತ್ತಡ ಹೇರುವ ಪ್ರಯತ್ನ ನಡೆಸುತ್ತಿದ್ದಾರೆ.
ಕೇಂದ್ರ, ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದ ಬೇಸತ್ತ ಕೆಲ ಉದ್ಯಮಿಗಳು ತಮ್ಮ ಸಂಸ್ಥೆಯ ನೌಕರರನ್ನು ರಾಜ್ಯಕ್ಕೆ ಕರೆತರಲು ಖಾಸಗಿ ವಿಮಾನ ಸೇವೆ ವ್ಯವಸ್ಥೆ ಮಾಡಿದ್ದು ದುಬೈ ಹಾಗೂ ಸೌದಿ ಅರೇಬಿಯಾದಿಂದ 2 ಖಾಸಗಿ ವಿಮಾನಗಳು ಮಂಗಳೂರಿಗೆ ಆಗಮಿಸಿವೆ. ಆದರೆ, ಯಾರಾದರೂ ಖಾಸಗಿ ವಿಮಾನ ಸೇವೆ ಒದಗಿಸಿದರೆ ಅವರಿಗೆ ಟಿಕೆಟ್ ಹಣ ಕೊಟ್ಟು ರಾಜ್ಯಕ್ಕೆ ವಾಪಸ್ ಬರಲು ಸಾಮಾನ್ಯ ಜನರೂ ಸಿದ್ದರಾಗಿದ್ದು, ಯಾರಾದರೂ ಖಾಸಗಿ ವಿಮಾನ ಸೇವೆಯನ್ನಾ ದರೂ ಒದಗಿಸಲಿ ಎಂದು ಕೇಳಿಕೊಳ್ಳುತ್ತಿದ್ದಾರೆ. ದುಬೈ ಅಥವಾ ಇತರೆ ಅರಬ್ ರಾಷ್ಟ್ರಗಳಿಂದ ಒಂದು ಖಾಸಗಿ ವಿಮಾನ ಸೇವೆ ಒದಗಿಸಲು ಸುಮಾರು 45 ರಿಂದ 50 ಲಕ್ಷ ರೂ. ಖರ್ಚಾಗುತ್ತದೆ.
ರಾಜ್ಯಕ್ಕೆ ಬರಲು ಉದ್ಯೋಗ ಕಳೆದುಕೊಂಡವರು, ಗರ್ಭಿಣಿಯರು, ಹಿರಿಯರು ಹೆಸರು ನೋಂದಾಯಿಸಿ ಕೊಂಡಿದ್ದಾರೆ. ಆದರೆ, ಕೇಂದ್ರ ಸರ್ಕಾರ ಖಾಸಗಿ ವಿಮಾನ ಮಾಡಿಕೊಂಡು ಬನ್ನಿ ಎನ್ನುತ್ತಿದೆ. ಸಂಕಷ್ಟದಲ್ಲಿರುವ ಜನರು ಹೇಗೆ ವಿಮಾನ ಮಾಡಿಕೊಂಡು ಬರಲು ಸಾಧ್ಯ? ರಾಜ್ಯ ಸರ್ಕಾರ ಕೇಂದ್ರದ ಮೇಲೆ ಒತ್ತಡ ಹೇರಬೇಕು.
-ಚಂದ್ರಶೇಖರ ಲಿಂಗದಳ್ಳಿ, ದುಬೈ ಬಸವ ಸಮಿತಿ ಸಂಚಾಲಕ
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಬ್ಬರ ಮೇಲೊಬ್ಬರು ಹಾಕುತ್ತ ಜಾರಿಕೊಳ್ಳುತ್ತಿದ್ದಾರೆ. ಮುಂಬೈನಿಂದ ಬಂದವರಿಂದ ಕರ್ನಾಟಕದಲ್ಲಿ ಕೋವಿಡ್ 19 ಹೆಚ್ಚಾಗಿದೆ ವಿನಹ ಗಲ#… ರಾಷ್ಟ್ರಗಳಿಂದ ಬಂದವರಿಂದಲ್ಲ.
-ಸುಬ್ರಮಣ್ಯ ಹೆಬ್ಟಾಗಿಲು, ಕತಾರ್ ಕನ್ನಡ ಸಂಘದ ಸದಸ್ಯ
* ಶಂಕರ ಪಾಗೋಜಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.