ನೀರಿಗೆ ಮೈಲುಗಟ್ಟಲೇ ಅಲೆದಾಟ
ಭೀಮಾ ನದಿ ದಡದ ಹಲವು ಹಳ್ಳಿ ಗಳಲ್ಲೂ ನೀರಿಗೆ ಹಾಹಾಕಾರ
Team Udayavani, Jun 5, 2020, 6:53 AM IST
ಅಫಜಲಪುರ: ತಾಲೂಕಿನಲ್ಲಿ ಕಳೆದ ಮಳೆಗಾಲದಿಂದ ಹಿಡಿದು ಇಲ್ಲಿಯವರೆಗೆ ಕುಡಿಯುವ ನೀರಿನ ಅಭಾವ ಕಾಡುತ್ತಿದೆ. ಹಳ್ಳಿ ಜನ ನಿತ್ಯ ನೀರಿಗಾಗಿ ಪರದಾಡುವ ಪರಿಸ್ಥಿತಿ ಹಾಗೆಯೇ ಇದೆ.
ತಾಲೂಕಿನ ರೇವೂರ(ಕೆ), ರೇವೂರ(ಬಿ), ಬಳೂರ್ಗಿ, ಬಡದಾಳ, ಮಲ್ಲಾಬಾದ, ಸ್ಟೇಷನ್ ಗಾಣಗಾಪುರ, ಕೋಗನೂರ, ಅಂಕಲಗಿ, ಗೊಬ್ಬೂರ(ಬಿ), ಕರ್ಜಗಿ, ಮಾಶಾಳ,ಚಿಣಮಗೇರಾ, ಹೊಸೂರ ಸೇರಿದಂತೆ ತಾಲೂಕಿನ ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಅಭಾವವಿದೆ. ಈ ಗ್ರಾಮಗಳ ಜನ ನಿತ್ಯ ಮೈಲಿಗಟ್ಟಲೇ ಕೊಡ, ಬಿಂದಿಗೆ ಹಿಡಿದು ಬಿಸಿಲಲ್ಲಿ ಅಲೆದಾಡಿದರು ನೀರು ಸಿಗೋದಿಲ್ಲ. ಇಷ್ಟು ಮಾತ್ರವಲ್ಲದೆ ತಾಲೂಕಿನಲ್ಲಿರುವ ಭೀಮಾ ನದಿ ದಡದ ಹಳ್ಳಿಗಳಲ್ಲೂ ನೀರಿನ ಸಮಸ್ಯೆ ಉದ್ಭವವಾಗಿದೆ.
ನದಿ ಇದ್ದರೂ ನೀರಿಲ್ಲದಂತಾಗಿ ಜನ ಕಂಗಾಲಾಗಿದ್ದಾರೆ. ನದಿ ಇಲ್ಲದ ಕಡೆಯಂತು ಜನಸಾಮಾನ್ಯರ ಪಾಡು ದೇವರಿಗೆ ಪ್ರೀತಿ ಎಂಬಂತಾಗಿದೆ. ತಾಲೂಕಿನಲ್ಲಿ ಇಷ್ಟೆಲ್ಲ ಕುಡಿಯುವ ನೀರಿನ ಸಮಸ್ಯೆ ಉದ್ಭವವಾಗಿದ್ದರೂ ಕೂಡ ತಾಲೂಕಿನ ಜನಪ್ರತಿನಿ ಧಿಗಳು, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ, ತಾಪಂ, ಗ್ರಾಪಂ ಸಂಬಂಧಿಸಿದವರು ಸಮಸ್ಯೆ ಬಗ್ಗೆ ಚಿಂತಿಸುತ್ತಿಲ್ಲ. ಜನಸಾಮಾನ್ಯರ ಕಷ್ಟ ಕೇಳಲು ಮನಸ್ಸು ಮಾಡುತ್ತಿಲ್ಲ. ಹೀಗಾಗಿ ತಾಲೂಕಿನಾದ್ಯಂತ ಕುಡಿಯುವ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಈ ಬಾರಿಯ ಮಳೆಗಾಲ ಉತ್ತಮವಾಗಿ ಆಗದಿದ್ದರೆ ಬರುವ ವರ್ಷ ಭೀಕರ ಬರಗಾಲ ಆವರಿಸೋದು ಪಕ್ಕಾ.
ನಾವು ದಿನಾ ತಳ್ಳು ಬಂಡಿಯೊಳಗ್ 10 ಕೊಡಗೊಳ್ ಇಟಗೊಂಡು 4 ಕಿಲೋ ಮಿಟರ್ ದೂರದಿಂದ ನೀರ್ ತರಬೇಕ್ರಿ, ಇಲ್ಲಾಂದ್ರ ನಾವು ಬಾಯಿ ಒಣಗಸ್ಕೊಂಡು ಕುಂದರಬೇಕಾತದ್ರಿ. -ಗೊಬ್ಬೂರ(ಬಿ) ಗ್ರಾಮಸ್ಥರು.
-ಮಲ್ಲಿಕಾರ್ಜುನ ಹಿರೇಮಠ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
MUST WATCH
ಹೊಸ ಸೇರ್ಪಡೆ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Actor Darshan Bail Case: ಹತ್ಯೆ ಸ್ಥಳದಲ್ಲಿ ದರ್ಶನ್ ಇದ್ರು: ಫೋಟೋ ಸಾಕ್ಷ್ಯ ಲಭ್ಯ!
Dharmasthala: ನ.26-30: ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
Siruguppa: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.