ಪ್ರಕೃತಿ ಉಳಿದರೆ ಮಾತ್ರ ಕುವೆಂಪು ಹುಟ್ಟಲು ಸಾಧ್ಯ


Team Udayavani, Jun 5, 2020, 11:11 AM IST

ಪ್ರಕೃತಿ ಉಳಿದರೆ ಮಾತ್ರ ಕುವೆಂಪು ಹುಟ್ಟಲು ಸಾಧ್ಯ

ಸಾಂದರ್ಭಿಕ ಚಿತ್ರ

ಕೋವಿಡ್ ದಿಂದ ಜನರಿಗೆ ಆಗಿರುವ ಅನಾಹುತವೇ ಹೆಚ್ಚು. ಆದರೆ ಪರಿಸರಕ್ಕೆ ಆದ ಉಪಕಾರವನ್ನು ನಾವು ಮರೆಯುವಂತಿಲ್ಲ. ಕಾರಣ ಇಷ್ಟೇ ಕೋವಿಡ್ ಸಂಕಷ್ಟದಿಂದ ದೇಶವೇ ಲಾಕ್‌ಡೌನ್‌ನಿಂದ ಕೈಗಾರಿಕೆಗಳನ್ನೆಲ್ಲ ಮುಚ್ಚಲಾಯಿತು. ಜನರ ಸಂಚಾರಕ್ಕೆ, ವಾಹನ ಓಡಾಟಕ್ಕೂ ಬ್ರೇಕ್‌ಬಿತ್ತು. ಇದರಿಂದ ಸ್ವಾರ್ಥಿ ಮನುಷ್ಯ ಮನೆ ಬಿಟ್ಟು ಹೊರ ಬರದ ಪರಿಸ್ಥಿತಿ ನಿರ್ಮಾಣವಾಗಿತ್ತು. ಅದರಿಂದ ಪರಿಸರ ಸ್ವಲ್ಪ ಮಟ್ಟಿಗೆ ಪ್ರಶಾಂತವಾಗಿರಲು ಸಾಧ್ಯವಾಗಿದೆ. ಪ್ರತಿ ವರ್ಷವೂ ಪರಿಸರ ದಿನವನ್ನು ಆಚರಿಸುತಿದ್ದೇವೆ. ಆದರೆ ಈ ವರ್ಷದ ಪರಿಸರ ದಿನಾಚರಣೆಗೆ ಕೋವಿಡ್ ಜೀವ ತುಂಬಿದೆ.  ಸರಕಾರ ಗಂಗಾ ನದಿಯ ಶುದ್ಧೀಕರಣಕ್ಕೆ ಸಾಕಷ್ಟು ಅನುದಾನ ಮೀಸಲಾಗಿರಿಸಿದ್ದರೂ ಶುದ್ಧವಾಗದ ನೀರು ಲಾಕ್ ಡೌನ್‌ ನಿಂದಾಗಿ ನದಿಯಲ್ಲಿ ಶುದ್ಧ ನೀರಿನ ಹರಿವು ಕಾಣಲು ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ಗಂಗಾ ನದಿಯನ್ನು ಹೀಗೆ ಸ್ವಚ್ಛವಾಗಿಟ್ಟುಕೊಳ್ಳುವ ಜವಾಬ್ದಾರಿ ನದಿ ತಟದ ಜನರ ಮೇಲಿದೆ.

ಪರಿಸರವನ್ನು ರಕ್ಷಿಸಲು ಕೆಲವೊಂದು ವಿನೂತನ ಪ್ರಯತ್ನಗಳನ್ನು ಮಾಡಬೇಕಿದೆ. ಸಾವಯವ ಕೃಷಿ ಪ್ರಸ್ತುತ ದಿನಗಳಲ್ಲಿ ರೈತರಿಗೆ ಕಷ್ಟವಾಗಬಹುದಾದರೂ ಸರಕಾರ ರೈತರಿಗೆ ಬೆನ್ನೆಲುಬಾಗಿ ನಿಂತು ಪ್ರೋತ್ಸಾಹ ನೀಡಬೇಕಿದೆ. ಮನುಷ್ಯನ ದುರಾ ಸೆ ಎಂಬ ಕೊಚ್ಚೆಯಲ್ಲಿ ಬಿದ್ದು ಹಣದ ಆಸೆಗೆ ಮರಗಿಡಗಳನ್ನು ನಾಶ ಮಾಡಿ ಮಾಲಿನ್ಯಗಳನ್ನು ಸೃಷ್ಟಿಸಿ ಇಡೀ ಮನುಷ್ಯ ಕುಲವನ್ನೇ ಅಳಿವಿನ ಅಂಚಿಗೆ ತಳ್ಳುತ್ತಿದ್ದಾನೆ. ಅಂತಹ ವ್ಯಕ್ತಿಗಳಿಗೆ ಸಾಮಾನ್ಯ ತಿಳಿವಳಿಕೆಯನ್ನು ನೀಡಬೇಕಿದೆ. ಗಿಡಮರಗಳಿಲ್ಲದೆ ಮನುಷ್ಯ ಸಂಕುಲವೇ ಇರುವುದಿಲ್ಲ ಎಂಬ ವಿಷಯವನ್ನು ಮನವರಿಕೆ ಮಾಡಿ ನಮ್ಮ ಸುತ್ತಮುತ್ತಲಿನ ಪರಿಸರದ ಜತೆ ಅವಿನಾಭಾವ ಸಂಬಂಧವನ್ನು ಇಟ್ಟುಕೊಳ್ಳುವಂತೆ ಪರಿವರ್ತಿಸಬೇಕು.

ಮಾಲಿನ್ಯದ ಕಾರಣದಿಂದ ಪ್ರಪಂಚದ ಏಳು ಅದ್ಭುತಗಳಲ್ಲಿ ಒಂದಾದ ತಾಜ್‌ ಮಹಲ್‌ ಹಳದಿ ಮತ್ತು ಹಸುರು ಬಣ್ಣಕ್ಕೆ ತಿರುಗಿದೆ. ಅಂದರೆ ಮಾನವ ಕುಲ ಐತಿಹಾಸಿಕ ಸ್ಮಾರಕಗಳಿಗೂ ಕುತ್ತು ತಂದಿದೆ ಎಂದಾಯಿತು. ಪರಿಸರ ಮಾಲಿನ್ಯವಾಗದಂತೆ ಎಚ್ಚರಿಕೆ ವಹಿಸುವ ಮೂಲಕ ಇಂತಹ ಅನಾಹುತಗಳಾಗದಂತೆ ತಡೆಗಟ್ಟಬೇಕಿದೆ.

ನಮ್ಮ ದಿನನಿತ್ಯದ ಜೀವನದಲ್ಲಿ ಪ್ಲಾಸ್ಟಿಕ್‌ ಆವಶ್ಯಕ ವಸ್ತುವಾಗಿದೆ. ಪ್ಲಾಸ್ಟಿಕ್‌ ನಿಂದಲೂ ನಮಗೆ ಆಪತ್ತು ಕಾದಿದೆ. ಆದಷ್ಟು ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಬಟ್ಟೆ ಬ್ಯಾಗ್‌ಗಳನ್ನು ಬಳಸುವುದು ಅನಿವಾರ್ಯ. ಕುವೆಂಪು ಹುಟ್ಟಿದ ನಾಡಿನವರು ನಾವು ಪ್ರಕೃತಿ ಮಡಿಲಿನಲ್ಲಿ ಬರೆದ ಕಥೆ, ಕವನ, ಕಾದಂಬರಿಗಳನ್ನು ಓದುತ್ತಾ ಬೆಳೆದವರು. ಪ್ರಕೃತಿ ಉಳಿದರೆ ಮಾತ್ರ ಭವಿಷ್ಯದಲ್ಲಿ ಮತ್ತೂಮ್ಮೆ ಕುವೆಂಪು ಹುಟ್ಟಲು ಸಾಧ್ಯ.

-ಅನಿಲ್‌ ಗುಮ್ಮಘಟ್ಟ
ವಿಶ್ವವಿದ್ಯಾನಿಲಯ ಕಲಾ ಕಾಲೇಜು, ತುಮಕೂರು

ಟಾಪ್ ನ್ಯೂಸ್

BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್

BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್

ncp

NCP Vs NCP: ಶರದ್‌ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್‌ ಬಣ

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ

Bisanala-Dairy

Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!

PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ

PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ

Bantwala-Crime

Bantwala: ತುಂಬೆ ದೇವಸ್ಥಾನ ಕಳ್ಳತನ ಪ್ರಕರಣ: ಮೂವರು ಖದೀಮರ ಸೆರೆ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20-uv-fusion

UV Fusion: ಜೀವಂತಿಕೆ

19-uv-fusion

Garbage Disposal: ಕಸದ ಸೂಕ್ತ ವಿಲೇವಾರಿ ನಮ್ಮದೇ ಜವಾಬ್ದಾರಿ

18-uv-fusion

UV Fusion: ನಿಸ್ವಾರ್ಥ ಜೀವ

16-pongal

Pongal: ಹೀಗೊಂದು ಪೊಂಗಲ್‌ ಪ್ರಯೋಗ

15-uv-fusion

Pendulum Wall Clock: ನಮ್ಮ ಮನೆಯಲ್ಲಿ ಒಂದು ಅದ್ಭುತ ಇದೆ ಗೊತ್ತಾ?

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

voter

RSS ಕಚೇರಿ ಟೆಕ್ಕಿಗಳ ಬಳಸಿ ಇವಿಎಂ ಹ್ಯಾಕ್‌: ವಸಂತ

drowned

Honnavar;ಸಮುದ್ರದಲ್ಲಿ ಮುಳುಗುತ್ತಿದ್ದ ಮೂವರು ಯುವತಿಯರ ರಕ್ಷಣೆ

BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್

BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್

ncp

NCP Vs NCP: ಶರದ್‌ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್‌ ಬಣ

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.