ಪರಿಸರ ಸಂರಕ್ಷಣೆ; ಮುಂಜಾಗ್ರತೆ ಕ್ರಮ ಅಗತ್ಯ

Team Udayavani, Jun 5, 2020, 11:31 AM IST

ಪರಿಸರ ಸಂರಕ್ಷಣೆ; ಮುಂಜಾಗ್ರತೆ ಕ್ರಮ ಅಗತ್ಯ

ಋಣವ ತೀರಿಸಬೇಕು ಋಣವ ತೀರಿಸಬೇಕು|
ಋಣವ ತೀರಿಸುತ ಜಗದಾದಿ ತತ್ತ್ವವನು
ಜನದಿ ಕಾಣುತ್ತಿದರೊಳ್‌ ಒಂದಗೂಡಲು ಬೇಕು|
ಮನೆಯೊಳಗೆ ಮಠ ನಿನಗೆ -ಮಂಕುತಿಮ್ಮ

ಇತ್ತೀಚಿನ ದಿನಗಳಲ್ಲಿ ಮಾನವನು ಪ್ರಕೃತಿ ಮತ್ತು ಪರಿಸರ ಸಂಬಂಧಗಳ ಎಲ್ಲ ತಂತುಗಳು ಕಳಚಿಕೊಂಡಿವೆ. ಇದರ ಪರಿಣಾಮವಾಗಿ ನಿಸರ್ಗದ ರೂಪ, ಸತ್ವ, ತತ್ತ್ವಗಳು ಸಮಗ್ರವಾಗಿ ಉತ್ಕಟ ಸ್ಥಿತಿಯನ್ನು ತಲುಪಿ ವಿರೂಪಗೊಳ್ಳುತ್ತಿವೆ. ಸೂಕ್ಷ್ಮವಾಗಿ ಅವಲೋಕಿಸಿದರೆ ಮಾನವನ ಇಂದಿನ ತತ್ತ್ವ ಪ್ರಣಾಳಿಕೆಗಳು, ವ್ಯವಸ್ಥಾಪನ ರೀತಿ-ನೀತಿಗಳು ಸಂಘ-ಸಂಸ್ಥೆಗಳು, ಸಾಧನೋದ್ದೇಶಗಳು ಮತ್ತು ಪ್ರಬಲ, ಪ್ರಚೋದನೆಗಳು ಆದ್ಯಂತವಾಗಿ ಪುನರ್‌ ವಿಮರ್ಶೆಗೊಳ್ಳುವುದು ತತ್‌ಕ್ಷಣದ ಕರ್ತವ್ಯವೆನಿಸುತ್ತದೆ. ಪ್ರಕೃತಿಯ ಗರ್ಭದಲ್ಲಿ ಬೆಳೆಯುತ್ತಿರುವ ಮಾನವನು ತನ್ನ ಕರುಳ ಬಳ್ಳಿಯನ್ನೇ ಕಡಿದುಕೊಳ್ಳಲು ಯತ್ನಿಸುತ್ತಿರುವಂತಿದೆ. ಈ ರೀತಿಯಾಗಿ ಪ್ರಕೃತಿಯಿಂದ ದೂರವಾಗುತ್ತಿರುವುದು ಪ್ರಕೃತಿಗಿಂತಲು ಮಿಗಿಲಾಗಿ ಮಾನವನಿಗೇ ಮಾರಕ ಎಂಬ ಸತ್ಯವನ್ನು ಮರೆತು ಬಿಟ್ಟಿದ್ದಾನೆ.

ಪರಿಸರ ಇಂದು ತನ್ನ ಮೂಲ ಸ್ವಾಭಾವಿಕ ನೈಜ ಸ್ಥಿತಿಯನ್ನು ಉಳಿಸಿಕೊಂಡಿಲ್ಲ, ಅಧುನಿಕತೆಯಿಂದಾಗಿ ಕೆಡುತ್ತಿದೆ. ಅಭಿವೃದ್ಧಿ ರಾಷ್ಟ್ರಗಳ ಸಂಸ್ಕೃತಿಯನ್ನು ನಾವು ವಿವೇಚನೆ ಇಲ್ಲದೆ ಆಮದು ಮಾಡಿಕೊಳ್ಳುತ್ತಿರುವುದರಿಂದಲೇ ಇಂದು ಪರಿಸರದ ಅಧೋಗತಿಗೆ ಕಾರಣವಾಗಿದೆ. ಇದರ ಪರಿಣಾಮವನ್ನು ನಾವೇ ಅನುಭವಿಸಬೇಕಾಗುತ್ತದೆ. ಕಾಡುಗಳು ನಾಶದಿಂದಾಗಿ ಮಳೆ ಕಡಿಮೆಯಾಗಿ ಕುಡಿಯಲು ನೀರು ಇಲ್ಲದಂತಾಗುತ್ತದೆ. ಹಾಗೆಯೇ ಶುದ್ಧ ಗಾಳಿಯೂ ಇಲ್ಲದಂತಾಗುತ್ತದೆ. ನೈರ್ಮಲ್ಯವನ್ನು ಹಾಳುಗೆಡವಿದರೆ ಕೊನೆಗೆ ಸಾಂಕ್ರಾಮಿಕ ರೋಗಗಳಿಗೆ ಬಲಿಯಾಗಬೇಕಾಗುತ್ತದೆ.

ಪ್ರತಿಯೊಬ್ಬರು ಆವಶ್ಯಕತೆಗೆ ಬೇಕಾದಷ್ಟನ್ನು ಪ್ರಕೃತಿ ಕರುಣಿಸಿದೆ; ಆದರೆ ಲೋಭವನ್ನು ಪೂರೈಸಲು ಪ್ರಕೃತಿಗೆ ಸಾಧ್ಯವಿಲ್ಲ. ಎಂದು ಗಾಂಧೀಜಿಯವರು ಹೇಳುತ್ತಾರೆ. ಈ ಪ್ರಕೃತಿ ತನ್ನ ಸರ್ವಸ್ವವನ್ನು ಮಾನವನಿಗೆ ಒಪ್ಪಿಸಿದೆ. ಆದರೆ ಮಾನವ ಅದನ್ನು ಬಳಸಿಕೊಂಡು ಹೋಗುವುದರಲ್ಲಿ ಏಲ್ಲೋ ಎಡುವುತ್ತಿದ್ದಾನೆ. ಈ ನಿಟ್ಟಿನಲ್ಲಿ ಸರ ಕಾರದ ಜತೆಗೆ ಸಾರ್ವಜನಿಕರು ಕೈ ಜೋಡಿಸುವ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಬೇಕಿದೆ. ಹೀಗಿ ಪ್ರತಿಯೊಬ್ಬರು ವೈಯಕ್ತಿಕ ಜವಾಬ್ದಾರಿಗಳನ್ನು ಕೂಡ ನಿರ್ವಹಿಸಬೇಕಿದೆ. ಅರಣ್ಯ ಸಂರಕ್ಷಣೆ, ಸೌರ ಶಕ್ತಿ ಬಳಕೆ, ಮಳೆ ನೀರು ಕೊಯ್ಲು ಅಳವಡಿಕೆ, ಹಸುರು ಮನೆ ನಿರ್ಮಾಣದಂತೆ ಫ‌ಲದ್ರಾಯಕ ಯೋಜನೆಗಳನ್ನು ವೈಯಕ್ತಿಕವಾಗಿ ಜಾರಿಗೊಳಿಸಬೇಕಿದೆ.

ಪರಿಸರ ಸಂರಕ್ಷಣೆ
ಮಾನವನಿಗೊ ಪ್ರಕೃತಿಗೂ ನಡುವೆ ಇರುವ ಅನೂಹ್ಯ ಸಂಬಂಧ ವನ್ನು ನಾವು ಹಾಗೆ ಉಳಿಸಿಕೊಳ್ಳಬೇ ಕಿದೆ. ನಾವು ಮಾಡಬೇಕಾಗಿರುವ ಕೆಲಸಗಳಿಷ್ಟೇ ನಮ್ಮ ನಮ್ಮ ಕೈಯಲ್ಲಿ ಆಗುವ ಚಿಕ್ಕ ಪುಟ್ಟ ಕೆಲಸವನ್ನು ಮಾಡಿಕೊಂಡು ಹೋಗುವುದು. ತ್ಯಾಜವಸ್ತುಗಳ ನಿರ್ವಹಣೆ,ಪ್ಲಾಸ್ಟಿಕ್‌ ನಿರ್ವಹಣೆ, ಗಾಳಿ, ನೀರು, ಬೆಳಕುಗಳನ್ನು ಶುದ್ದವಾಗಿಟ್ಟುಕೊಳ್ಳಬೇಕು. ಪ್ರಕೃತಿ ಮಾತೆಯ ಮಡಿಲಲ್ಲಿ ಅದರ ನೈಜ ಸ್ಥಿತಿಗೆ ಅದು ಪುನಃ ಮರುಕಳಿಸುವಂತೆ ಮಾಡುವುದು. ನಮ್ಮ ಪರಿಸರವನ್ನು ಕಾಪಾಡಿಕೊಳ್ಳುವುದು. ಇದಕ್ಕಾಗಿ ಮುಂಜಾಗ್ರತೆ ವಹಿಸಬೇಕಿದೆ.

ಮಧುರಾ ಎಲ್‌. ಭಟ್‌,
ಎಸ್. ಡಿ. ಎಂ ಕಾಲೇಜು, ಉಜಿರೆ

ಟಾಪ್ ನ್ಯೂಸ್

Toll: ವರ್ಷದಲ್ಲೇ 438 ಕೋ.ರೂ. ಟೋಲ್‌ ಶುಲ್ಕ ಸಂಗ್ರಹ

Toll: ವರ್ಷದಲ್ಲೇ 438 ಕೋ.ರೂ. ಟೋಲ್‌ ಶುಲ್ಕ ಸಂಗ್ರಹ

Electricity Price Hike: ಮೂರು ವರ್ಷದ ವಿದ್ಯುತ್‌ ದರ ಒಂದೇ ಬಾರಿ ಏರಿಕೆ?

Electricity Price Hike: ಮೂರು ವರ್ಷದ ವಿದ್ಯುತ್‌ ದರ ಒಂದೇ ಬಾರಿ ಏರಿಕೆ?

Puttur: ಎಪ್ರಿಲ್‌, ಮೇ ಬಿಸಿಲ ತಾಪ: ಹಲವೆಡೆ ಅಡಿಕೆ ಮರ ಖಾಲಿ!

Puttur: ಎಪ್ರಿಲ್‌, ಮೇ ಬಿಸಿಲ ತಾಪ: ಹಲವೆಡೆ ಅಡಿಕೆ ಮರ ಖಾಲಿ!

Karnataka: ರಾಜ್ಯದ ಎಲ್ಲ ವಿ.ವಿ.ಗಳಲ್ಲೂ ರಾಜ್ಯಪಾಲರ ಅಧಿಕಾರಕ್ಕೆ ಕತ್ತರಿ?

Karnataka: ರಾಜ್ಯದ ಎಲ್ಲ ವಿ.ವಿ.ಗಳಲ್ಲೂ ರಾಜ್ಯಪಾಲರ ಅಧಿಕಾರಕ್ಕೆ ಕತ್ತರಿ?

Mangaluru: ಜನಾಗ್ರಹವಿದ್ದರೂ ಇನ್ನೂ ದೊರೆಯದ ಪ್ರಾದೇಶಿಕ ಪಾಸ್‌ಪೋರ್ಟ್‌ ಕೇಂದ್ರ

Mangaluru: ಜನಾಗ್ರಹವಿದ್ದರೂ ಇನ್ನೂ ದೊರೆಯದ ಪ್ರಾದೇಶಿಕ ಪಾಸ್‌ಪೋರ್ಟ್‌ ಕೇಂದ್ರ

FOOD-DELIVERY

E-Commerce: ಆಹಾರ ಪದಾರ್ಥ ಪ್ರತ್ಯೇಕ ಪ್ಯಾಕ್‌ ಕಡ್ಡಾಯ: ಪ್ರಾಧಿಕಾರ

Asia-Cup-HOCKEY

Asia Cup Hockey: ಅರೈಜೀತ್‌ ಹ್ಯಾಟ್ರಿಕ್‌; ಪಾಕಿಸ್ಥಾನ ಸೋಲಿಸಿದ ಭಾರತಕ್ಕೆ ಕಿರೀಟ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-uv-fusion

UV Fusion: ಅವಕಾಶವು ಆಶಾದಾಯಕವಾಗಿರಲಿ

10-reels

Reels: ರೀಲ್ಸ್‌ ನ ರಿಯಲ್‌ ರಗಳೆಗಳು…

15-uv-fusion

UV Fusion: ಬಾಂಧವ್ಯ ಬೆಸೆಯುವ ಹಬ್ಬಗಳ ಆಚರಣೆ

14-uv-fusion

UV Fusion: ಮೊದಲು ನಾವು ಕನ್ನಡಿಗರಾಗೋಣ..!

13-tulsi

Tulsi Pooja: ತುಳಸಿ ಪೂಜೆ ಹಿನ್ನೆಲೆ ಏನು ಗೊತ್ತಾ?

MUST WATCH

udayavani youtube

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ

udayavani youtube

ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ

udayavani youtube

60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ

udayavani youtube

ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

ಹೊಸ ಸೇರ್ಪಡೆ

Toll: ವರ್ಷದಲ್ಲೇ 438 ಕೋ.ರೂ. ಟೋಲ್‌ ಶುಲ್ಕ ಸಂಗ್ರಹ

Toll: ವರ್ಷದಲ್ಲೇ 438 ಕೋ.ರೂ. ಟೋಲ್‌ ಶುಲ್ಕ ಸಂಗ್ರಹ

Electricity Price Hike: ಮೂರು ವರ್ಷದ ವಿದ್ಯುತ್‌ ದರ ಒಂದೇ ಬಾರಿ ಏರಿಕೆ?

Electricity Price Hike: ಮೂರು ವರ್ಷದ ವಿದ್ಯುತ್‌ ದರ ಒಂದೇ ಬಾರಿ ಏರಿಕೆ?

Puttur: ಎಪ್ರಿಲ್‌, ಮೇ ಬಿಸಿಲ ತಾಪ: ಹಲವೆಡೆ ಅಡಿಕೆ ಮರ ಖಾಲಿ!

Puttur: ಎಪ್ರಿಲ್‌, ಮೇ ಬಿಸಿಲ ತಾಪ: ಹಲವೆಡೆ ಅಡಿಕೆ ಮರ ಖಾಲಿ!

Karnataka: ರಾಜ್ಯದ ಎಲ್ಲ ವಿ.ವಿ.ಗಳಲ್ಲೂ ರಾಜ್ಯಪಾಲರ ಅಧಿಕಾರಕ್ಕೆ ಕತ್ತರಿ?

Karnataka: ರಾಜ್ಯದ ಎಲ್ಲ ವಿ.ವಿ.ಗಳಲ್ಲೂ ರಾಜ್ಯಪಾಲರ ಅಧಿಕಾರಕ್ಕೆ ಕತ್ತರಿ?

Mangaluru: ಜನಾಗ್ರಹವಿದ್ದರೂ ಇನ್ನೂ ದೊರೆಯದ ಪ್ರಾದೇಶಿಕ ಪಾಸ್‌ಪೋರ್ಟ್‌ ಕೇಂದ್ರ

Mangaluru: ಜನಾಗ್ರಹವಿದ್ದರೂ ಇನ್ನೂ ದೊರೆಯದ ಪ್ರಾದೇಶಿಕ ಪಾಸ್‌ಪೋರ್ಟ್‌ ಕೇಂದ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.