ಪ್ರಕೃತಿಯನ್ನು ಪ್ರೀತಿಸಿ, ಉಳಿಸಿ ಬೆಳೆಸೋಣ
Team Udayavani, Jun 5, 2020, 1:15 PM IST
ಸಾಂದರ್ಭಿಕ ಚಿತ್ರ
ಗಿಡ, ಮರ-ಬೆಳೆಸಿ-ಪರಿಸರ ಉಳಿಸಿ ಎಂಬ ಕೂಗು ಎಲ್ಲೆಡೆ ಕೇಳಿ ಬರುತ್ತಿದೆ. ಅದಕ್ಕೆ ಕಾರಣ ಇಂದಿನ ಬದಲಾದ ವಾತಾವರಣ ಮತ್ತು ದಿನೇದಿನೆ ಸಾಕಷ್ಟು ಏರಿಳಿಕೆಯಾಗುತ್ತಿರುವ ಹವಾಮಾನ. ಇನ್ನೊಂದೆಡೆ ಲಾಕ್‌ಡೌನ್ ಪರಿಣಾಮ ಪ್ರಕೃತಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆಯಾದರೂ ಇದು ನಿರಂತರವಲ್ಲ ಎಂಬುದೇ ಬೇಸರ.
ಜೂನ್ 5 ಬಂತೆಂದರೆ ಸಾಕು ಎಲ್ಲರ ಸ್ಟೇಟಸ್‌ಗಳಲ್ಲೂ ಪರಿಸರ ಸಂರಕ್ಷಣೆಯ ವಿಚಾರಗಳು ವಿಜೃಂಭಿಸುತ್ತವೆ. ಪರಿಸರ ಸಂರಕ್ಷಣೆ ಎಂಬುದು ಒಂದೇ ದಿನಕ್ಕೆ ಸೀಮಿತವಾಗಿರದೆ ಪ್ರತಿನಿತ್ಯದ ಕಾಯಕವಾದರೆ ಸಂಭವಿಸುವಂತಹ ವಿಕೋಪವನ್ನು ತಡೆಯಬಹುದು. ನಮ್ಮ ಸುತ್ತ ¤ಮುತ್ತಲಿನ ಪರಿಸರ ಆರೋಗ್ಯವಾಗಿದ್ದರೆ ನಾವು ಆರೋಗ್ಯವಾಗಿರುತ್ತೇವೆ. ಪರಿಸರಕ್ಕೆ ಹಾನಿಯಾದರೆ ನಮಗೆ ಹಾನಿಯಾದಂತೆ.
ಜೂನ್ 5 ರಂದು ವಿಶ್ವ ಪರಿಸರ ದಿನವನ್ನು ಕೊಂಡಾಡುವವರ ಪೈಕಿ ಯುವಕರೇ ಹೆಚ್ಚು! ಆದರೆ ಅದೇ ವಿದ್ಯಾವಂತರೇ ಇಂದು ಹೆಚ್ಚು ಪರಿಸರವನ್ನು ಹಾಳು ಮಾಡುತ್ತಿರುವುದು ಶೋಚನೀಯ. ನಮ್ಮ ಪೂರ್ವಜರು ಪ್ರಕೃತಿ ಜತೆಗೆ ಬದುಕಿದವರು. ಆದರೆ ನಾಗರಿಕತೆ ಬೆಳೆದಂತೆ ಪ್ರಕೃತಿಯ ಮಾರಣಹೋಮವೇ ನಡೆಯುತ್ತಿದೆ. ಪರಿಸರದ ಕಾಳಜಿ ಯಾರಿಗೂ ಇಲ್ಲವಾಗಿದೆ. ಪ್ರತಿ ವರ್ಷ ಜೂನ್ 5 ರಂದು ನಾವೆಷ್ಟು ಪರಿಸರವನ್ನು ಹಾನಿ ಮಾಡಿದ್ದೇವೆ ಎಂದು ಲೆಕ್ಕಾಚಾರ ಮಾಡುವಂತಾಗಿದೆ.
ಭೂಮಿಯ ಪ್ರತಿಯೊಂದು ಘಟಕವೂ ಸಹ ಭೌತಿಕ ಪರಿಸರದ ಮೇಲೆ ಅವಲಂಬಿತವಾಗಿದೆ. ಸಸ್ಯ, ಪ್ರಾಣಿ ಸೂಕ್ಷ್ಮಜೀವಿಗಳು ಮಳೆ, ಗಾಳಿ, ಮಣ್ಣು ಪ್ರತಿಯೊಂದು ಜತೆಗೂಡಿ ಒಂದು ಸುಂದರವಾದ ಪರಿಸರದ ನಿರ್ಮಾಣವಾಗಿತ್ತು. ಸ್ವಾತಂತ್ರ್ಯದ ಸಮಯದಲ್ಲಿ ದೇಶದಲ್ಲಿ ಶೇ. 75% ರಷ್ಟು ಜನರು ಪರಿಸರವನ್ನು ನಂಬಿಕೊಂಡಿದ್ದು ಮಳೆಯನ್ನೇ ಕೃಷಿಗೆ ನೆಚ್ಚಿಕೊಂಡಿದ್ದರು ಮಾತ್ರವಲ್ಲದೆ ಪ್ರಕೃತಿಯನ್ನು ಅನುಸರಿಸುತ್ತಿದ್ದರು. ಅದರಿಂದ ಆಗುವ ಪ್ರಯೋಜನ ಪ್ರಕೃತಿಯಲ್ಲಿ ಅಪಾರವಾಗಿತ್ತು. ಮಾನವರಲ್ಲಿ ಜಾತಿ-ಧರ್ಮ ಭೇದ-ಭಾವಗಳಿದ್ದರೆ ಗಿಡಮರಗಳು ಭೇದ-ಭಾವಗಳಿಲ್ಲದೆ ಬೆಳೆದು ಮಳೆ, ಗಾಳಿ, ಖನಿಜಗಳು ಈ ರೀತಿ ಅಪಾರವಾಗಿ ಉಳಿದಿತ್ತು.
ಕೆಲವರಿಗೆ ಸೂರ್ಯನಿಂದ ಬರುವ ಬಿಸಿಲು ಇರುವ ಸಂದರ್ಭದಲ್ಲಿ ಈ ಪರಿಸರವೇ ತಂದೆಯ ರೀತಿ ಪೋಷಣೆ ಮಾಡುತ್ತಿತ್ತು. ಆದರೆ ಇಂದು ಪರಿಸರವನೆಲ್ಲ ನಾಶಪಡಿಸುತ್ತಿದ್ದಾರೆ. ಸೊಗಸಾಗಿ ಬೆಳೆದುನಿಂತ ಪ್ರತಿಯೊಂದು ಮರವನ್ನು ಸಹ ಈ ದಿನಗಳಲ್ಲಿ ಜನರು ಕಡಿದು ಬಿಡುತ್ತಿದ್ದಾರೆ. ಎಷ್ಟೇ ಕಡಿದರೂ ಮತ್ತೂಮ್ಮೆ ಚಿಗುರುವ ಗಿಡಮರವದು. ನಾವೆಲ್ಲ ಪ್ರತಿದಿನ ಪ್ಲಾಸ್ಟಿಕ್ ಬಳಕೆ ಮಾಡಿ ಪರಿಸರವನ್ನೆಲ್ಲ ನಾಶಪಡಿಸುತ್ತಿದ್ದೇವೆ. ಜಲ, ವಾಯು ಮಾಲಿನ್ಯದಿಂದಾಗಿ ಅನೇಕ ಸಮಸ್ಯೆಗಳು ಸೃಷ್ಟಿಯಾಗುತ್ತಿವೆ. ಶುದ್ಧ ಗಾಳಿ, ನೀರನ್ನು ಹಣಕೊಟ್ಟು ಖರೀದಿಸುವ ಪರಿ ಸ್ಥಿತಿ ನಿರ್ಮಾ ಣ ವಾ ಗಿದೆ. ಮರಗಳ ನಾಶದಿಂದ ಪರಿಸರವನ್ನು ಸರ್ವನಾಶ ಮಾಡಿದಂತಾಗುತ್ತದೆ. ಈಗಲೇ ನಾವೆಲ್ಲ ಕೈಜೋಡಿಸಿ ಗಿಡ-ಮರಗಳನ್ನು ಬೆಳೆಸಿ ಭಾರತವನ್ನು ಒಂದು ಸುಂದರವಾದ ದೇಶವನ್ನಾಗಿ ನಿರ್ಮಿಸೋಣ.
– ಪ್ರಭಾಕರ ಪಿ., ಶ್ರೀ ಸಿದ್ಧಾರ್ಥ ಮಾಧ್ಯಮ
ಅಧ್ಯಯನ ಕೇಂದ್ರ, ತುಮಕೂರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.