ಸ್ವ-ಇಚ್ಛೆಯಿಂದ ಪರಿಸರ ಉಳಿವಿಗೆ ಮುಂದಾಗಿ
Team Udayavani, Jun 5, 2020, 2:25 PM IST
ಹಸುರೇ ಉಸಿರು, ಜೀವಿಗಳು ಬದುಕಬೇಕಾದರೆ ಗಾಳಿ ಅತಿ ಮುಖ್ಯ. ವಸತಿ, ಗಾಳಿ, ಆಹಾರ.. ಹೀಗೆ ಪ್ರತಿಯೊಂದು ಹಂತದಲ್ಲೂ ನಾವು ಪ್ರಕೃತಿಯ ದಾಸರೇ. ನಮ್ಮ ಸ್ವಾರ್ಥಕ್ಕಾಗಿ ಪ್ರಕೃತಿಯನ್ನು ನಾನಾ ರೀತಿಯಲ್ಲಿ ಉಪಯೋಗಿಸಿಕೊಳ್ಳುತ್ತೇವೆ. ಪ್ರಕೃತಿ ಮಾತೆಯ ಮೇಲೆ ಮಿತಿ ಮೀರಿದ ಅನಾಚಾರಗಳನ್ನು ಎಸಗುತ್ತೇವೆ. ಒಂದೆಡೆ ಪ್ರಕೃತಿಯ ಸಂರಕ್ಷಣೆಯ ಜಪ, ಇನ್ನೊಂದೆಡೆ ಪ್ರಕೃತಿಯ ವಿನಾಶ ನಿರಂತರವಾಗಿ ನಮ್ಮಿಂದಲೇ ನಡೆಯುತ್ತಿದೆ.
ಬುದ್ಧಿವಂತ ಮಾನವರೇ ಪರಿಸರವನ್ನು ನಾಶಗೈಯ್ಯುತ್ತಿರುವುದು ವಿಷಾದನೀಯ. ವರ್ಷಕ್ಕೊಮ್ಮೆ ಬರುವ ವನಮಹೋತ್ಸವ ಕಾರ್ಯಕ್ರಮದಲ್ಲಿ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಪರಿಸರ ಪ್ರೇಮದ ಬಗೆಗೆ ಒಂದಷ್ಟು ಭಾಷಣಗಳನ್ನು ಬಿಗಿಯುವುದಕ್ಕಷ್ಟೇ ಸೀಮಿತಗೊಳಿಸಿ ಗಿಡಗಳನ್ನು ನೆಟ್ಟು ತೆರಳಿದರೆಂದರೆ ಮತ್ತೆ ಅದೇ ಸ್ಥಳದಲ್ಲಿ ಮುಂದಿನ ವರ್ಷ ಗಿಡ ನೆಡುತ್ತಾರೆ. ಇಲ್ಲಿಗೆ ನಮ್ಮ ಪರಿಸರ ಸಂರಕ್ಷಣೆ ಕಾರ್ಯ ಮುಗಿಯುತ್ತದೆ. ಭೂಕಂಪ, ಸುನಾಮಿ, ಪ್ರವಾಹ, ಜ್ವಾಲಾಮುಖೀ, ಕಾಳ್ಗಿಚ್ಚಿನಂಥ ಪ್ರಕೃತಿ ವಿಕೋಪಗಳು ಮಾತ್ರವಲ್ಲದೆ ಹೊಸ ಹೊಸ ರೋಗಗಳು ಮಾನವನ ಜೀವನಕ್ಕೆ ಮಾರಕವಾಗಿರುವುದು ಪರಿಸರದ ನಾಶದಿಂದಲೇ ಎಂಬುದನ್ನು ನಾವು ಮನಗಾಣಬೇಕು. ಪರಿಸರ ಪ್ರೀತಿ ತೋರಿಕೆಗೆ ಸೀಮಿತವಾಗಿರದೆ ಪ್ಲಾಸ್ಟಿಕ್ ಬಳಕೆ ಕಡಿಮೆಗೊಳಿಸುವ ಜತೆಯಲ್ಲಿ ಎಲ್ಲೆಂದರಲ್ಲಿ ಎಸೆಯದೆ ಪರಿಸರ ಮಾಲಿನ್ಯ ನಿಯಂತ್ರಿಸಬೇಕು.
ಕಾರ್ಖಾನೆಗಳಿಂದ ಬಿಡುವ ವಿಷಾನಿಲ, ವಿಷಯುಕ್ತ ತ್ಯಾಜ್ಯ ನಿರ್ವಹಣೆ, ವಾಯುಮಾಲಿನ್ಯ, ಜಲಮಾಲಿನ್ಯವನ್ನು ಕಡಿಮೆಗೊಳಿಸಬೇಕು. ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಗಿಡ, ಮರ, ಪ್ರಾಣಿ, ಪಕ್ಷಿಗಳ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ. ಸ್ವ ಇಚ್ಛೆಯಿಂದ ಪ್ರಕೃತಿಯ ಉಳಿವಿಗೆ ಹಾಗೂ ಮಾನವನ ಬದುಕಿಗೆ ಪರಿಸರ ರಕ್ಷಣೆ ಅತಿಮುಖ್ಯ.
-ಶರಣ್ಯ ಕೋಲ್ಚಾರ್
ಮಂಗಳೂರು ವಿವಿ, ಕೊಣಾಜೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್: ಫೋಟೋ ಸಾಕ್ಷ್ಯ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.