ಪರಿಸರ ದಿನಾಚರಣೆಯ ವಿಧಾನ ಬದಲಾಗಬೇಕಿದೆ

Team Udayavani, Jun 5, 2020, 4:55 PM IST

ಪರಿಸರ ದಿನಾಚರಣೆಯ ವಿಧಾನ ಬದಲಾಗಬೇಕಿದೆ

ಸಾಂದರ್ಭಿಕ ಚಿತ್ರ

ವಿಶ್ವ ಪರಿಸರ ದಿನ ಎಂಬುದು ಹತ್ತಾರು ಗಿಡ ನೆಡುವುದಕ್ಕೆ ಮಾತ್ರ ಪ್ರತಿವರ್ಷ ಸೀಮಿತಗೊಂಡಿದೆ. ಇಷ್ಟು ಮಾತ್ರದಿಂದ ನಮ್ಮ ಪರಿಸರಕ್ಕೆ ಒಳಿತಾಗುತ್ತದೆ ಎಂದು ನಾವು ತಿಳಿದಿದ್ದೇವೆ. ನಮ್ಮ ಪರಿಸರ ಎಲ್ಲವನ್ನೂಒಳಗೊಂಡಿರಬೇಕಾದರೆ ಅವುಗಳ ಬಗ್ಗೆಯೂ ನಾವು ಅರಿವನ್ನು ಹೊಂದಿರಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಗಿಡ ನೆಡಲು ಬೇಕಾದ ಜಾಗವನ್ನೂ ನಮ್ಮಿಂದ ಉಳಿಸಿ ಕೊಳ್ಳಲಾಗುತ್ತಿಲ್ಲ. ದಿನ ನಿತ್ಯದ ನಮ್ಮ ಜೀವನ ಶೈಲಿಯಿಂದ ಪರಿಸರವನ್ನು ವಿನಾಶದ ಅಂಚಿಗೆ ಕೊಂಡೊಯ್ಯುತ್ತಿದ್ದೇವೆ.

ಪ್ರತಿಯೊಂದು ಜೀವಿಯೂ ಪರಿಸರದ ಮೇಲೆ ಅವಲಂಬಿತವಾಗಿದೆ. ಆದರೆ ಅಂಥ ಪರಿಸರಕ್ಕೆ ನಾವು ವಿಷವನ್ನು ಉಣಬಡಿಸುತ್ತಿದ್ದೇವೆ. ನಮ್ಮ ಹೊಣೆಗಾರಿಕೆ, ಜವಾಬ್ದಾರಿಯನ್ನು ಇನ್ನು ಮೇಲಾದರೂ ಅರಿತುಕೊಳ್ಳದಿದ್ದರೆ ನಮ್ಮ ಅವನತಿಗೆ ನಾವೇ ಕಾರಣೀಭೂತರಾಗುತ್ತೇವೆ. ನಮ್ಮ ಅವಶ್ಯಗಳಾದ ಗಾಳಿ, ನೀರು, ಆಹಾರ ವಿಷ ಮುಕ್ತವಾಗುವಲ್ಲಿ ನಾವು ಗಮನ ಹರಿಸಬೇಕಿದೆ. ಜನಸಂಖ್ಯೆಗಿಂತಲೂ ಹೆಚ್ಚು ವಾಹನಗಳನ್ನು ಹೊಂದಿರುವ ನಾವು ವಾಹನಗಳಿಗೆ ಕಡಿವಾಣ ಹಾಕಿ ಮಾಲಿನ್ಯವನ್ನು ತಡೆಯಬೇಕಿದೆ. ಕಸ, ಕೃಷಿ ತ್ಯಾಜ್ಯಗಳಿಗೆ ಬೆಂಕಿ ಇಡುವುದನ್ನು ನಿಲ್ಲಿಸಬೇಕಿದೆ. ಜೀವದಾಯಿನಿ ನದಿಗಳಿಗೆ ನಿತ್ಯ ಬಂದು ಸೇರುವ ಕೊಳಚೆ ನೀರು, ಕಾರ್ಖಾನೆಗಳ ತ್ಯಾಜ್ಯ, ರಾಸಾಯನಿಕಗಳಿಗೆ ತಡೆಯೊಡ್ಡಬೇಕಿದೆ.

ಕೃಷಿಯನ್ನೇ ನೆಚ್ಚಿಕೊಂಡಿರುವ ಶೇ. 60ರಿಂದ 70ರಷ್ಟು ರೈತರು ಕಡಿಮೆ ಅವಧಿಯಲ್ಲಿ ಹೆಚ್ಚು ಇಳುವರಿಯನ್ನು ಪಡೆಯುವ ಧಾವಂತದಲ್ಲಿ ಭೂಮಿಯ ಒಡಲಿಗೆ ವಿಷಯುಕ್ತ ರಾಸಾಯನಿಕಗಳನ್ನು ಸುರಿಯುತ್ತಿದ್ದಾರೆ. ಇದರಿಂದ ಭೂಮಿ ತನ್ನ ಫ‌ಲವತ್ತತೆಯನ್ನು ಕಳೆದುಕೊಳ್ಳುತ್ತ ಹೋಗಿ ಒಂದು ದಿನ ನಿರ್ಜೀವವಾಗುವುದರಲ್ಲಿ ಸಂಶಯವಿಲ್ಲ. ಹಣ್ಣು, ತರಕಾರಿಗಳಿಗೆ ಸಿಂಪಡಿಸುವ ಔಷಧಿಗಳು ಇಂದು ಆಹಾರ ರೂಪದಲ್ಲಿ ಮಾನವನ ದೇಹವನ್ನು ಸೇರುತ್ತಿವೆ. ಹೀಗಾಗಿ ರೈತರಿಗೆ ಸಾವಯವ ಕೃಷಿಯ ಅರಿವು ಮೂಡಿಸಬೇಕಿದೆ.

ಇನ್ನು ಈ ಶತಮಾನದ ವಿನಾಶಕಾರಿ ಆವಿಷ್ಕಾರವಾದ ಪ್ಲಾಸ್ಟಿಕ್‌ ಎಂಬ ಮಾರಿ ಪರಿಸರದ ಮೇಲೆ ತನ್ನ ಅಟ್ಟಹಾಸವನ್ನೇ ಮೆರೆದಿದೆ. ನಮ್ಮ ಜೀವನದ ಅನಿವಾರ್ಯವಾಗಿ ಬಿಟ್ಟಿದೆ ಪ್ಲಾಸ್ಟಿಕ್‌. ಹಿಂದೆ ನಮ್ಮ ಹಿರಿಯರು ಪ್ಲಾಸ್ಟಿಕ್‌ ಇಲ್ಲದೆಯೂ ಜೀವನವನ್ನು ನಡೆಸಿದ್ದಾರೆ ಎಂಬ ಅರಿವು ನಮಗಿರಬೇಕು. ದೃಢವಾದ ನಿರ್ಧಾರದಿಂದ ಪ್ಲಾಸ್ಟಿಕ್‌ ಮುಕ್ತ ಜೀವನವನ್ನು ನಡೆಸಲು ಸಾಧ್ಯವಿದೆ.

ನಮ್ಮ ಮುಂದಿನ ತಲೆಮಾರು ನಮ್ಮ ಮಕ್ಕಳು, ಅವರ ಮಕ್ಕಳು ಹೀಗೆ ನಮ್ಮವರನ್ನೇ ಒಳಗೊಂಡಿದೆ. ಅವರು ಬಾಳಿ ಬದುಕಲು ಬೇಕಾದ ಪರಿಸರವನ್ನು ಉಳಿಸಬೇಕಾದ್ದು ನಮ್ಮ ಕರ್ತವ್ಯ ಹಾಗೂ ಧರ್ಮ ಕೂಡ. ನಮ್ಮ ಸ್ವಾರ್ಥ ಮುಂದಿನ ಪೀಳಿಗೆಯ ವಿನಾಶಕ್ಕೆ ಕಾರಣವಾಗದಿರಲಿ. ಇನ್ನಾದರೂ ಎಚ್ಚೆತ್ತುಕೊಂಡು ನಿಜವಾದ “ಪರಿಸರ ದಿನ’ವನ್ನು ಆಚರಿಸುವಂತಾಗೋಣ ಹಾಗೂ ಉಳಿಸುವಂಥವರಾಗೋಣ.

ಗೌರಿ ಚಂದ್ರಕೇಸರಿ, ಶಿವಮೊಗ್ಗ

ಟಾಪ್ ನ್ಯೂಸ್

142

Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ

K L RAhul

KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್

Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ

Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ

Kantara Chapter 1: ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಪಿಕ್ಸ್

Kantara Chapter 1: ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಫಿಕ್ಸ್

1-wewrewre

The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ

BBK11: ಬಿಗ್‌ ಬಾಸ್‌ ಮನೆಗೆ ವೈಲ್ಡ್‌ ಕಾರ್ಡ್ ಸ್ಪರ್ಧಿ; ಅಬ್ಬರಿಸುತ್ತಲೇ ದೊಡ್ಮನೆಗೆ ಎಂಟ್ರಿ

BBK11: ಬಿಗ್‌ ಬಾಸ್‌ ಮನೆಗೆ ವೈಲ್ಡ್‌ ಕಾರ್ಡ್ ಸ್ಪರ್ಧಿ; ಅಬ್ಬರಿಸುತ್ತಲೇ ದೊಡ್ಮನೆಗೆ ಎಂಟ್ರಿ

Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ

Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-uv-fusion

Government School: ಅಳಿವಿನಂಚಿನಲ್ಲಿ ನನ್ನೂರ ಸರಕಾರಿ ಶಾಲೆ

12-uv-fusion

UV Fusion: ಹಬ್ಬ ಹರಿದಿನಗಳಲ್ಲಿ ಯುವಜನರ ಪಾತ್ರ

11-uv-fusion

UV Fusion: ಹುಲಿ ವೇಷವೆಂಬ ವಿಸ್ಮಯ

9-uv-fusion

Family: ನಾವು ನಮ್ಮವರೊಂದಿಗೆ ಕಳೆಯುವ ಸಮಯ ಅಮೂಲ್ಯ

8-uv-fusion

Ratan Tata: ಉದ್ಯಮ ಕ್ಷೇತ್ರದ ಅಜಾತಶತ್ರು ರತನ್‌ ಟಾಟಾ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

142

Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ

K L RAhul

KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್

Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ

Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ

Kantara Chapter 1: ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಪಿಕ್ಸ್

Kantara Chapter 1: ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಫಿಕ್ಸ್

1-wewrewre

The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.